ನೀವು ಜಿಮ್ ಗೆ ಸೇರಿಕೊಂಡು, ಅಲ್ಲಿ ಬೇರೆಯವರ ಜೊತೆ ಸ್ಥಳ ಮತ್ತು ಸಾಧನಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಲ್ಲಿ ಈ ಕೆಳಕಂಡ ಸಂಗತಿಗಳನ್ನು ಅವಶ್ಯವಾಗಿ ಗಮನಿಸಿ.

ಅಗತ್ಯಕ್ಕಿಂತ ಹೆಚ್ಚು ಬಿಗಿ ಅಥವಾ ಹೆಚ್ಚು ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ. ನೀವು ಧರಿಸುವ ಬಟ್ಟೆ ಆರಾಮದಾಯಕವಾಗಿರಬೇಕು.

ನೀವು ಜಿಮ್ ನಲ್ಲಿದ್ದಾಗ ಬೆವರು ಬರುವುದು ಸಹಜ. ಹೀಗಾಗಿ ವ್ಯಾಯಾಮ ಮಾಡಿ ಮುಗಿಸಿದ ಬಳಿಕ ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತ ಎಲ್ಲ ಸಾಧನಗಳನ್ನೂ ಚೆನ್ನಾಗಿ ಒರೆಸಿಡಿ. ಬಹಳಷ್ಟು ಜಿಮ್ ಗಳಲ್ಲಿ ಇದೇ ಉದ್ದೇಶಕ್ಕೆಂದು ಟವೆಲ್‌ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಸ್ಪ್ರೇ ಕೊಟ್ಟಿರುತ್ತಾರೆ. ಒಂದು ವೇಳೆ ನಿಮ್ಮ ಜಿಮ್ ನಲ್ಲಿ ಈ ವ್ಯವಸ್ಥೆ ಇರದೇ ಇದ್ದರೆ ಆ ವಸ್ತುಗಳನ್ನು ನಿಮ್ಮ ಜೊತೆಯಲ್ಲಿಯೇ ಇರಿಸಿಕೊಳ್ಳಿ. ನೀವು ಕೊಲೋನ್‌ ಉಪಯೋಗಿಸದೇ ಇದ್ದಲ್ಲಿ ಪಕ್ಕದ ವ್ಯಕ್ತಿಗೆ ನಿಮ್ಮ ಬೆವರಿನ ವಾಸನೆ ಬಂದೇ ಬರುತ್ತೆ. ಆದರೆ ನೀವು ಕೊಲೋನ್‌ ಉಪಯೋಗಿಸಿಕೊಂಡು ಜಿಮ್ ಗೆ ಹೋದರೆ ಎಲ್ಲರಿಗೂ ಅದು ಹಾನಿಕಾರಕವಾಗಿ ಪರಿಣಮಿಸಬಹುದು.

ನಿಮ್ಮ ವರ್ಕ್‌ಔಟ್‌ ಮುಗಿದ ಬಳಿಕ ಎಲ್ಲ ಸಲಕರಣೆಗಳನ್ನೂ ನಿಗದಿತ ಸ್ಥಳದಲ್ಲಿ ಇರಿಸಿ. ಜಿಮ್ ನಲ್ಲಿ ಸಾಕಷ್ಟು ಸಲಕರಣೆಗಳು ಇರುತ್ತವೆ. ಅವು ನಿಗದಿತ ಸ್ಥಳದಲ್ಲಿ ಇದ್ದರೆ ಇತರರ ಸಮಯ ವ್ಯರ್ಥ ಆಗುವುದಿಲ್ಲ. ಸಲಕರಣೆಗಳು ಅಸ್ತವ್ಯಸ್ತವಾಗಿ ಬಿದ್ದಿದ್ದಲ್ಲಿ ಇತರರಿಗೆ ಏಟು ತಗುಲುವ ಸಾಧ್ಯತೆ ಇರುತ್ತದೆ.

ಜಿಮ್ ನ ಪೀಕ್‌ ಅವರ್ಸ್‌ನಲ್ಲಿ 60 ಕಿಲೋ ಲಿಫ್ಟರ್ಸ್‌ ಮತ್ತು ಕನ್ನಡಿಯ ಮಧ್ಯೆ ಬರಬೇಡಿ. ಏಕೆಂದರೆ ಈ ಕನ್ನಡಿಗಳು ಅವರ ಸೂಕ್ತ ಪೊಜಿಶನ್‌ಗೆ ಉಪಯುಕ್ತವಾಗಿರುತ್ತವೆ.

ನೀವು ಯಾವುದಾದರೊಂದು ವ್ಯಾಯಾಮವನ್ನು ಒಂದಕ್ಕಿಂತ ಹೆಚ್ಚು ಕಾಲ ಮಾಡುತ್ತಿದ್ದರೆ ಆಗಾಗ ಆ ಮೆಶಿನ್‌ ಅಥವಾ ಬೆಂಚ್‌ನಿಂದ ಹೊರಗೆ ಬರಬೇಕು. ಎಷ್ಟೋ ಸಲ ನಾವು ಯಾವುದಾದರೊಂದು ವರ್ಕ್‌ಔಟ್‌ಗೆ ಕಾಯುತ್ತಿದ್ದೇವೆಂದು ನಮಗೆ ಮರೆತೇ ಹೋಗುತ್ತದೆ. ಸಮನ್ವಯತೆ ಕಾಪಾಡಿ. 1 ಸಲ ಮಾಡಿದ ಬಳಿಕ ಅದನ್ನು ಬೇರೆಯವರಿಗೂ ಬಳಸಲು ಕೊಡಿ. ಪುನಃ ಅಲ್ಲಿಯೇ ಮುಂದುವರಿಸಬಹುದು.

– ಕೆ. ಪೂರ್ಣಿಮಾ

ಕೆಟ್ಟ ಅಭ್ಯಾಸಗಳು

ಫಿಟ್‌ನೆಸ್‌ ಬಗೆಗಿನ ನಿಮ್ಮ ಆಸಕ್ತಿ ಗಮ್ಯ ಬೇರೆಯವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದು. ಅಂತಹ ಕೆಲವು ಕೆಟ್ಟ ಅಭ್ಯಾಸಗಳಿಗೆ ಗುಡ್‌ಬೈ ಹೇಳಿ.

ಬೇರೆಯರ ಟವೆಲ್‌, ಎನರ್ಜಿ ಡ್ರಿಂಕ್‌, ಪರ್ಸನಲ್ ಕೇರ್‌ ಸಾಮಗ್ರಿಗಳನ್ನು ಬಳಸಬೇಡಿ.

ನಿಮಗೆ ಕೋಲ್ಡ್, ಫ್ಲೂ ಅಥವಾ ಯಾವುದಾದರೂ ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ ಇದ್ದಲ್ಲಿ ಅದು ಸರಿ ಹೋಗುವತನಕ ಜಿಮ್ ಗೆ ಹೋಗಬೇಡಿ. ಹೀಗೆ ಮಾಡುವುದರಿಂದ ಇತರೆ ಸದಸ್ಯರು ಸೋಂಕಿಗೀಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಎಕ್ಸರ್‌ಸೈಜ್‌ ಮಾಡುವಾಗ ಮೇಲಿಂದ ಮೇಲೆ ಜನರ ಕೈ ಕುಲುಕುವುದು ಹಾಗೂ ಮುಖ ಒರೆಸಿಕೊಳ್ಳುವುದು ಮಾಡಬೇಡಿ.

ಯಂತ್ರವನ್ನು ಬಳಸಿದ ಬಳಿಕ ಬಟ್ಟೆಯಿಂದ ಸ್ವಚ್ಛಗೊಳಿಸಿ.

Tags:
COMMENT