ಎ ಫಾರ್‌ ಆ್ಯಪಲ್ (ಸೇಬು) : ದಿನ 1 ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದು ಹೇಳುತ್ತಾರೆ. ಸೇಬನ್ನು ಕತ್ತರಿಸಿ ಅಗಿದು ತಿನ್ನುವುದರಿಂದ ಬಾಯಿಯಲ್ಲಿ ಜೊಲ್ಲು ಸುರಿಯುವುದು ಚೆನ್ನಾಗಿರುತ್ತದೆ. ಇದು ಆಲ್ಜೈಮರ್‌ ರೋಗ ಮತ್ತು ಕ್ಯಾನ್ಸರ್‌ನಿಂದ ರಕ್ಷಿಸುವುದಲ್ಲದೆ, ಮಧುಮೇಹದ ಅಪಾಯವನ್ನು ಕರಗಿಸುತ್ತದೆ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಭೇದಿ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ.

ಸಿ ಫಾರ್‌ ಕ್ಯಾರೆಟ್‌ : ಕ್ಯಾರೆಟ್‌ ವಿಟಮಿನ್‌ `ಎ'ನ ಒಳ್ಳೆಯ ಸ್ರೋತವಾಗಿದೆ. ಇದರಲ್ಲಿ ತ್ವಚೆಯನ್ನು ಸುಂದರಗೊಳಿಸುವ ಹಾಗೂ ಕ್ಯಾನ್ಸರ್‌ ತಡೆಗಟ್ಟುವ ಗುಣಗಳಿವೆ. ಇದು ಕಣ್ಣುಗಳ ದೃಷ್ಟಿಯಲ್ಲಿ ಸುಧಾರಣೆ ತರುತ್ತದೆ. ಇದರಲ್ಲಿ ದೊರಕುವ ಆ್ಯಂಟಿ ಆಕ್ಸಿಡೆಂಟ್ಸ್ ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ತ್ವಚೆಯನ್ನು ರಕ್ಷಿಸುತ್ತವೆ. ಇದನ್ನು ಫೇಸ್‌ ಮಾಸ್ಕ್ ರೂಪದಲ್ಲೂ ಉಪಯೋಗಿಸಲಾಗುತ್ತದೆ.

ಇ ಫಾರ್‌ ಎಗ್‌ಪ್ಯ್ಲಾಂಟ್‌ (ಬದನೆ) : ಬದನೆಯಲ್ಲಿ ಕೆಲವು ಪೌಷ್ಟಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅವು ರಕ್ತ ಸಂಚಾರವನ್ನು ಸುಗಮಗೊಳಿಸುತ್ತವೆ. ಮೆದುಳಿಗೆ ಪೋಷಣೆ ನೀಡುತ್ತವೆ. ಬದನೆಯಲ್ಲಿ ಬಹಳ ಕಡಿಮೆ ಪ್ರಮಾಣದ ಕ್ಯಾಲರಿಗಳಿವೆ. ಆದ್ದರಿಂದಲೇ ಇದರ ಸೇವನೆಯಿಂದ ತೂಕ ಹೆಚ್ಚುವುದಿಲ್ಲ. ಇದರಲ್ಲಿ ಹೇರಳವಾಗಿ ಫೈಬರ್‌ ಇರುವುದರಿಂದ ಯಾವಾಗಲೂ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ. ಬದನೆಕಾಯಿ ಮಧುಮೇಹವನ್ನು ನಿಯಂತ್ರಿಸುವಲ್ಲಿ ಮತ್ತು ಹೃದಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.

falo-or-sabziyo-ki

ಬಿ ಫಾರ್‌ ಬೀಟ್‌ರೂಟ್‌ : ಬೀಟ್‌ರೂಟ್‌ ಪೊಟ್ಯಾಶಿಯಂ, ಮೆಗ್ನೀಶಿಯಂ, ಐರನ್‌, ವಿಟಮಿನ್‌ ಬಿ6, ಎ, ಸಿ, ನೈಟ್ರೇಟ್‌ ಇತ್ಯಾದಿಗಳ ಒಳ್ಳೆಯ ಸ್ರೋತವಾಗಿದೆ. ಇದು ಹಾರ್ಟ್‌ ಅಟ್ಯಾಕ್‌, ಹಾರ್ಟ್‌ ಸ್ಟ್ರೋಕ್‌ ಮತ್ತು ರಕ್ತದೊತ್ತಡದ ಅಪಾಯವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಇದು ಒಳ್ಳೆಯ ಆ್ಯಂಟಿ ಆಕ್ಸಿಡೆಂಟ್‌ ಕೂಡ ಆಗಿದೆ. ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಡಿ ಫಾರ್‌ ಡೇಟ್ಸ್ (ಖರ್ಜೂರ) : ಐರನ್‌ ಮತ್ತು ಫ್ಲೋರಿನ್‌ನಿಂದ ತುಂಬಿರುವ ಖರ್ಜೂರ ವಿಟಮಿನ್‌ಗಳು ಮತ್ತು ಖನಿಜಗಳ ಒಳ್ಳೆಯ ಸ್ರೋತವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಲೆವೆಲ್‌ ಕಡಿಮೆಯಾಗುವುದಲ್ಲದೆ, ಅನೇಕ ಆರೋಗ್ಯ ದೋಷಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಪ್ರಾಕೃತಿಕ ಸಕ್ಕರೆ ಹೆಚ್ಚಾಗಿದ್ದು ಎನರ್ಜಿ ಕೊಡುತ್ತದೆ. ಅಲ್ಲದೆ, ಇದರಲ್ಲಿ ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಸೋಡಿಯಂ ಕಡಿಮೆ ಇರುತ್ತದೆ. ಈ ಪ್ರಾಕೃತಿಕ ಅಂಶಗಳಿಂದ ತುಂಬಿರುವ ಖರ್ಜೂರ ಒಂದು ಸ್ವಸ್ಥ ನರ್ವ್ ಸಿಸ್ಟಮನ್ನು ವ್ಯವಸ್ಥಿತವಾಗಿಡಲು ಹಾಗೂ ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಎಫ್‌ ಫಾರ್‌ ಫಿಗ್ಸ್ (ಅಂಜೂರ) : ಅಂಜೂರ ಪೊಟ್ಯಾಶಿಯಂನ ಬಹಳ ಒಳ್ಳೆಯ ಸ್ರೋತವಾಗಿದೆ. ಇದರ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಅಂಜೂರ ಫೈಬರ್‌ನ ಆಹಾರದ ಬಹಳ ಒಳ್ಳೆಯ ಸ್ರೋತವಾಗಿದೆ. ಅದರಿಂದಲೇ ವೇಟ್‌ ಕಂಟ್ರೋಲ್ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೃದಯದ ಮೇಲೂ ಸಹ ಒಳ್ಳೆಯ ಪ್ರಭಾವ ಬೀರುತ್ತದೆ. ಅದು ತ್ವಚೆಯ ಮೇಲೆ ಉಂಟಾಗುವ ಕಲೆಗಳಿಂದಲೂ ರಕ್ಷಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ