ಎಂದಾದರೂ ಯಾರಾದರೂ ಪ್ರೀತಿಪಾತ್ರರ ಸ್ನೇಹಕ್ಕೆ ಧಕ್ಕೆ ಉಂಟಾದಾಗ ಹೃದಯ ಒಡೆಯುತ್ತದೆ. ಕೆಲವೊಮ್ಮೆ ಯಾರದಾದರೂ ನಂಬಿಕೆ ದ್ರೋಹಕ್ಕೆ ಹೃದಯ ಚೂರುಚೂರಾಗುತ್ತದೆ. ಯಾರಾದರೂ ಆತ್ಮೀಯರು ಇದ್ದಕ್ಕಿದ್ದಂತೆ ತೀರಿಹೋದಾಗಲೂ ಹೃದಯ ಒಡೆಯುತ್ತದೆ.

ಹೃದಯಕ್ಕೆ ಸಂಬಂಧಿಸಿದ ಯಾವುದಾದರೂ ಕೆಟ್ಟ ಸುದ್ದಿ ಇದ್ದಕ್ಕಿದ್ದಂತೆ ಬಂದಾಗ ಹೃದಯದ ಮಾಂಸಖಂಡಗಳು ಸ್ವಲ್ಪಕಾಲ ಶಿಥಿಲಗೊಳ್ಳುತ್ತವೆ. ದಿಢೀರನೇ ಯಾವುದಾದರೂ ಸಂತೋಷದ ಸಮಾಚಾರ ಸಿಕ್ಕಾಗಲೂ ಹೀಗೇ ಆಗುತ್ತದೆ. ಇದರ ಲಕ್ಷಣಗಳು ಸುಮಾರಾಗಿ ಹಾರ್ಟ್‌ ಅಟ್ಯಾಕ್‌ನಂತೆಯೇ ಇರುತ್ತವೆ. ಇದನ್ನು ಮೆಡಿಕಲ್ ಭಾಷೆಯಲ್ಲಿ `ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್' ಎನ್ನುತ್ತಾರೆ. ಎದೆ, ಕುತ್ತಿಗೆ ಮತ್ತು ಎಡಗೈನಲ್ಲಿ ನೋವು, ಉಸಿರೆಳೆದಂತಾಗುವುದು ಇದರ ಲಕ್ಷಣ. ಆದರೆ ಎಷ್ಟೋ ಬಾರಿ ಸಮಸ್ಯೆ ಏನೆಂಬುದನ್ನೇ ತಿಳಿಯುವುದು ಕಷ್ಟ.

ವೈದ್ಯರ ಪ್ರಕಾರ, ಅನೇಕ ಬಾರಿ ಪೇಶೆಂಟ್‌ನ್ನು ಹಾರ್ಟ್‌ ಅಟ್ಯಾಕ್‌ ಕೇಸ್‌ ಎಂದು ಕರೆತರಲಾಗುತ್ತದೆ. ಆದರೆ ಇಸಿಜಿ ಮತ್ತು ಅಲ್ಟ್ರಾಸೌಂಡ್‌ ಮಾಡಿದ ನಂತರ ಹೃದಯದ ಎಡಭಾಗ ಕೆಲಸ ಮಾಡುತ್ತಿಲ್ಲವೆಂದು ತಿಳಿಯುತ್ತದೆ. ಹೃದಯದ ಧಮನಿಗಳಲ್ಲಿ ಯಾವುದೇ ತಡೆ ಇಲ್ಲ, ಬ್ಲಡ್‌ ಸರ್ಕ್ಯುಲೇಶನ್‌ನಲ್ಲಿ ಪ್ರಾಬ್ಲಂ ಇಲ್ಲ. ಬರೀ ಎಡಭಾಗದ ಮಾಂಸಖಂಡಗಳು ಶಿಥಿಲವಾಗಿವೆ. ಇದಕ್ಕೆ ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್ ಕಾರಣ.

ಹೃದಯ ಒಡೆಯುವುದು ಎಂದರೆ ಫಿಲ್ಮ್ ಸಂಭಾಷಣೆಯಂತಿದೆ. ಆದರೆ ಮೆಡಿಕಲ್ ಸೈನ್ಸ್ ಸಹ ಹೃದಯ ಒಡೆಯುವುದನ್ನು ಒಪ್ಪುತ್ತದೆ. ಇದನ್ನು `ತಾಕೋತ್ಸುಬೋ ಕಾರ್ಡಿಯೋಪಥಿ' ಎನ್ನುತ್ತಾರೆ.

ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್ ಗೆ ಬಲಿಯಾದ ಶೇ.90ರಷ್ಟು ಮಹಿಳೆಯರು 50 ರಿಂದ 70 ವರ್ಷದ ಒಳಗಿದ್ದಾರೆ. ವೈದ್ಯರ ಪ್ರಕಾರ ಮಹಿಳೆಯರಲ್ಲಿ ರಜೋನಿವೃತ್ತಿಯ ನಂತರ ಈಸ್ಟ್ರೋಜನ್‌ ಹಾರ್ಮೋನ್‌ ಮಟ್ಟದಲ್ಲಿ ಕುಸಿತ ಉಂಟಾಗುತ್ತದೆ. ಆಗ ಅತ್ಯಂತ ದುಃಖದ ಅಥವಾ ಸಂತೋಷದ ಘಟನೆ ನಡೆದಾಗ ಅವರ ಆಟೋನಮಸ್‌ ನರ್ಸ್‌ ಸಿಸ್ಟಂ ಹೆಚ್ಚು ಸಕ್ರಿಯವಾಗುತ್ತದೆ. ಇದರಿಂದ ಶರೀರದಲ್ಲಿ ಹೆಚ್ಚು ಪ್ರಮಾಣದಲ್ಲಿ ಸ್ಟ್ರೆಸ್‌ ಹಾರ್ಮೋನ್‌ ಸ್ರಾವವುಂಟಾಗುತ್ತದೆ. ಇದರಿಂದಾಗಿ ಹೃದಯದ ಮಾಂಸಖಂಡಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಆದರೆ ಇದರರ್ಥ ಪುರುಷರ ಹೃದಯ ಕಲ್ಲಿನದು ಎಂದಲ್ಲ. ಈಗ ವೈಜ್ಞಾನಿಕವಾಗಿ ಪುರುಷರಲ್ಲೂ ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್ ಇರುವುದು ಸಾಬೀತಾಗಿದೆ. ಈ ಸಿಂಡ್ರೋಮ್ ಇರುವುದರಿಂದ ಅವರ ಹೃದಯ ಒಡೆಯುವುದನ್ನು ಸಂಭಾಳಿಸಲಾಗುವುದಿಲ್ಲ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಈ ಅಪಾಯ 6 ಪಟ್ಟು ಹೆಚ್ಚು.

ಸಂಶೋಧಕರು ಏನು ಹೇಳುತ್ತಾರೆ?

ಬ್ರಿಟಿಷ್‌ ಸಂಶೋಧಕರ ಪ್ರಕಾರ, ಪತಿ ಅಥವಾ ಪತ್ನಿ ತೀರಿ ಹೋದಾಗ 1 ವರ್ಷದೊಳಗೆ ಅವರ ಸಂಗಾತಿಯೂ ಸತ್ತು ಹೋಗುವ ಸಂಭವ ಇರುತ್ತದೆ. ಏಕೆಂದರೆ ಅವರ ಹೃದಯ ಒಡೆದಿರುತ್ತದೆ. ಮದುವೆಯಾಗಿ ಬಹಳ ವರ್ಷ ಆದರ ಮೇಲೆ ಇದರ ಪರಿಣಾಮ ಹೆಚ್ಚಾಗಿ ಇರುತ್ತದೆ. ಆದರೆ ಒಳ್ಳೆಯ ವಿಷಯವೆಂದರೆ ವಿಯೋಗವಾಗಿ 1 ವರ್ಷದ ನಂತರ ಸಾವಿನ ಭಯ ಕರಗಿಹೋಗುತ್ತದೆ.

ಜಪಾನ್‌ ಸಂಶೋಧಕರು ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್ ಬಗ್ಗೆ ಎಲ್ಲರಿಗಿಂತ ಮೊದಲು 1990ರ ಆರಂಭದಲ್ಲಿ ಉಲ್ಲೇಖಿಸಿದ್ದರು. ಪ್ರಮುಖ ಸಂಶೋಧಕ ಡಾಕ್ಟರ್‌ ರಿಚರ್ಡ್‌ ರೆಗನಾಂಟೆ ಹೀಗೆ ಹೇಳಿದ್ದಾರೆ, ಏಟು ಬಿದ್ದ ಜನರನ್ನು ಸಂಭಾಳಿಸುವುದು ಹೃದಯರೋಗ ತಜ್ಞರಿಗೆ ಮತ್ತು ವೈದ್ಯರಿಗೆ ಕಷ್ಟವಾಗುತ್ತದೆ. ಅಮೆರಿಕಾದ ಜರ್ನಲ್ ಆಫ್‌ ಕಾರ್ಡಿಯಾಲಜಿಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದೆ. ಅದರಲ್ಲಿ ಇನ್ನೂ ಹೇಳಿರುವುದೇನೆಂದರೆ, ಹೃದಯ ಒಡೆಯುವ ಲಕ್ಷಣಗಳು ಬೇಸಿಗೆ ಹಾಗೂ ವಸಂತ ಋತುವಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೃದಯಾಘಾತ ಸಾಮಾನ್ಯವಾಗಿ ಚಳಿಗಾಲದಲ್ಲಿ ಉಂಟಾಗುತ್ತದೆ. ಈ ಅವಸ್ಥೆಯಲ್ಲಿ ರೋಗಿಯನ್ನು ಐಸಿಯೂನಲ್ಲಿ ಅಬ್ಸರ್‌ವೇಶನ್‌ನಲ್ಲಿ ಇಡಲಾಗುತ್ತದೆ. ಅತ್ಯಂತ ಮಹತ್ವಪೂರ್ಣವೆಂದರೆ ಡಾಕ್ಟರ್‌ಗೆ ಇದು ಬ್ರೋಕನ್‌ಹಾರ್ಟ್‌ ಸಿಂಡ್ರೋಮ್ ಎಂದು ತಿಳಿಯಬೇಕು. ಏಕೆಂದರೆ ಅವರು ಹೃದಯಾಘಾತಕ್ಕೆ ಚಿಕಿತ್ಸೆ ಶುರು ಮಾಡಬಾರದು. ಹಾಗೆ ಮಾಡುವುದು ಅಪಾಯಕಾರಿ. ಹೃದಯದ ಎಡಭಾಗದ ಮಾಂಸಖಂಡಗಳಲ್ಲಿ ಉಂಟಾಗಿರುವ ಶಿಥಿಲತೆ ಕೆಲವು ದಿನಗಳಲ್ಲಿ ಅಥವಾ ಕೆಲವು ವಾರಗಳಲ್ಲಿ ನಿಧಾನವಾಗಿ ದೂರವಾಗುತ್ತದೆ. ಅದರಿಂದಾಗಿ ಮಾಂಸಖಂಡಗಳಲ್ಲಿ ಯಾವುದೇ ಶಾಶ್ವತ ಹಾನಿ ಉಂಟಾಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ