ಮಳೆಗಾಲದಲ್ಲಿ ಮಾಮೂಲಿಗಿಂತ ಹೆಚ್ಚಾಗಿ ಬ್ಯಾಕ್ಟೀರಿಯಾ ಎಲ್ಲೆಲ್ಲೂ ಹರಡುತ್ತದೆ. ಇವು ಹೆಚ್ಚಾಗಿ ಹರಡದಂತೆ ತಡೆಯಲು ನಿಮಗೆ ಈ ಸಲಹೆಗಳು ನೆರವಾಗುತ್ತವೆ.

ನಿಮ್ಮ ಮೇನ್‌ ಹಾಲ್‌ನ ಲಿವಿಂಗ್‌ ಏರಿಯಾದ ಶೋಭೆ ಹೆಚ್ಚಿಸುವ ಕಾರ್ಪೆಟ್‌, ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳ ತವರಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕಾರ್ಪೆಟ್‌ ದೂರವಿರಿಸಿ ಅಥವಾ ವ್ಯಾಕ್ಯೂಂ ಕ್ಲೀನರ್‌ನಿಂದ ನಿತ್ಯ ಶುಚಿಗೊಳಿಸಿ.

ಮನೆಯ ಶುಚಿತ್ವ ಶುಭ್ರತೆ ಕಾಪಾಡುವಲ್ಲಿ ಬ್ಲೀಚ್‌ ಪ್ರಧಾನ ಪಾತ್ರ ವಹಿಸುತ್ತದೆ. ಎಲ್ಲೆಲ್ಲೂ ಕೊರೋನಾ ಹೆಮ್ಮಾರಿಯ ಕಾಟವಿರುವ ಈ ಕಾಲದಲ್ಲಿ ಮನೆಯ ನೆಲ ಮತ್ತು ಬಾತ್‌ ರೂಂ ಟೈಲ್ಸ್ ಸ್ವಚ್ಛಗೊಳಿಸಲು ಈ ಅಗ್ಗದ ಸಾಧನ ಬಳಸಿಕೊಳ್ಳಿ.

ಭಾರಿ ಪರದೆಗಳನ್ನು ಬದಿಗಿರಿಸಿ, ಲೈಟ್‌ಪಾರದರ್ಶಿ ಪರದೆ ಬಳಸಿರಿ. ಆಗ ಮನೆ ತುಂಬಾ ಗಾಳಿ, ಬೆಳಕು ತುಂಬಿಕೊಳ್ಳಲು ಅವಕಾಶವಾಗಿ, ತೇವಾಂಶ ತಂತಾನೇ ಒಣಗುತ್ತದೆ.

ವಾರದಲ್ಲಿ 1 ಸಲ ಅಗತ್ಯವಾಗಿ ಫ್ರಿಜ್‌ ಕ್ಲೀನ್‌ ಮಾಡಿ. ಹೆಚ್ಚಿದ ಹಣ್ಣು, ಕೊಳೆತ ತಂಗಳು ಆಹಾರ ಅದರಲ್ಲಿ ಇಡಬೇಡಿ.

ಬೆಡ್‌ ಶೀಟ್‌ ಪಿಲ್ಲೋ ಕವರ್‌ಗಳನ್ನು 10-12 ದಿನಗಳಿಗೊಮ್ಮೆ ಅಗತ್ಯ ಬದಲಿಸಿ. ಹ್ಯುಮಿಡಿಟಿ ಕಾರಣ ಇವುಗಳಲ್ಲಿ ಬೆವರು ಹೆಚ್ಚು ಹೀರಲ್ಪಡುತ್ತವೆ. ಹೀಗಾಗಿ ವಾತಾವರಣ ತೇವಾಂಶ ಕೂಡಿ, ಅಲ್ಲಿ ಬೇಗ ಬ್ಯಾಕ್ಟೀರಿಯಾ ಮನೆ ಮಾಡುತ್ತದೆ. ಅದು ಚರ್ಮಕ್ಕೆ ಅನೇಕ ಸಮಸ್ಯೆ ಒಡ್ಡುವುದರಿಂದ ಬೆಡ್‌ ಶೀಟ್‌ ಬದಲಿಸಲು ಸೋಮಾರಿತನ ಬೇಡ.

ಪ್ರತಿದಿನ ಕಿಚನ್‌ ಸಿಂಕ್‌ ಅಗತ್ಯ ಶುಚಿಗೊಳಿಸಿ. ಇದಕ್ಕಾಗಿ ನಿಂಬೆರಸ, ಬ್ಲೀಚ್‌ ಬಳಸಿಕೊಳ್ಳಿ. ಉತ್ತಮ ಗುಣಮಟ್ಟದ ಫ್ಲೋರ್‌ ಕ್ಲೀನರ್ಸ್‌ನ್ನೂ ಬಳಸಿಕೊಳ್ಳಿ.

ಮಕ್ಕಳ ಬಟ್ಟೆ ಒಗೆದ ನಂತರ, ಅಗತ್ಯ ಅವನ್ನು ಡೆಟಾ‌ಲ್‌ನಂಥ ಉತ್ತಮ ಗುಣಮಟ್ಟದ ಡಿಸ್‌ ಇನ್‌ಫೆಕ್ಟೆಂಟ್‌ ಬೆರೆತ ನೀರಿನಲ್ಲಿ ಅದ್ದಿ ಹಿಂಡಿ ಬಿಸಿಲಲ್ಲಿ ಒಣಗಿಸಿ. ಈ ರೀತಿ ಸಣ್ಣ ಮಕ್ಕಳನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸಿಕೊಳ್ಳಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ