ಹಿಂದೆಲ್ಲ ಹಬ್ಬ ಆಚರಿಸುವಾಗ, ಬಗೆಬಗೆಯ ರಸಗವಳ ತಯಾರಿಸಿ ಬಂಧುಬಾಂಧವರ ಜೊತೆ ಕುಳಿತು ಹರಟುತ್ತಾ ಸವಿದಂತೆ, ಈಗಿನ ಕೊರೋನಾ ಕಾಲದಲ್ಲಿ ಸುಲಭವಲ್ಲ. ಕೋವಿಡ್‌-19 ಎಲ್ಲರನ್ನೂ ಭಯಪಡಿಸಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ನೀವು ನಿಮ್ಮ ಇಮ್ಯುನಿಟಿ ಕಡೆ ಹೆಚ್ಚು ಗಮನ ಕೊಡಲೇಬೇಕು. ಈ ಹಬ್ಬದಲ್ಲಿ ಇಮ್ಯುನಿಟಿ ಹೆಚ್ಚಿಸುವಂಥ ಒಂದಿಷ್ಟು ಮಿಠಾಯಿಗಳ ಬಗ್ಗೆ ತಿಳಿಯೋಣವೇ?

ಒಣಶುಂಠಿ : ನೀವು ಯಾವುದೇ ಸಿಹಿ ತಯಾರಿಸಿದರೂ ಅದಕ್ಕೆ ಅಗತ್ಯ ತುಸು ಒಣಶುಂಠಿ ಪುಡಿ ಸೇರಿಸಿ. ಥೆರಪಿಸ್ಟ್ ಗುಣಾಂಶ ಹೊಂದಿರುವ ಇದು ಔಷಧಿಯಾಗಿ ಕೆಲಸ ಮಾಡುತ್ತದೆ. ಆ್ಯಂಟಿ ಆಕ್ಸಿಡೆಂಟ್‌ ಆ್ಯಂಟಿ ಇನ್‌ ಫ್ಲಮೆಟರಿ ಗುಣಗಳನ್ನೂ ಹೊಂದಿದ್ದು ಬೀಟಾ ಕೆರಾಟಿನ್‌, ಮೈಗ್ರೇನ್‌, ಹೃದ್ರೋಗ, ಮಂಡಿ ನೋವು, ಆರ್ಥ್‌ ರೈಟಿಸ್‌, ಮೆಟಬಾಲಿಸಂ ಇತ್ಯಾದಿಗಳನ್ನು ಬ್ಯಾಲೆನ್ಸ್ ಆಗಿಡುತ್ತದೆ. ಉಷ್ಣ ಗುಣ ಪ್ರಧಾನವಾದ ಒಣಶುಂಠಿ ರಕ್ತಸ್ರಾವ ವಿಕಾರ, ಅನೀಮಿಯಾ, ಅಲ್ಸರ್‌ ಇತ್ಯಾದಿಗೆ ರಾಮಬಾಣ.  ಬೇಸಿಗೆಯಲ್ಲಿ ಇದರ ಸೇವನೆ ಬೇಡ.

ಖರ್ಜೂರ : ಬಿಳಿ ಸಕ್ಕರೆ ಅವಾಯ್ಡ್ ಮಾಡಲು ಖರ್ಜೂರ ಬಳಸಿ. ಸಕ್ಕರೆಯಿಂದ ಬೊಜ್ಜು, ಸ್ಥೂಲತೆಯ ರೋಗ ತಪ್ಪಿದ್ದಲ್ಲ. ಆದರೆ ಖರ್ಜೂರದಲ್ಲಿ ದೇಹವನ್ನು ಸದಾ ಆರೋಗ್ಯವಾಗಿಡಬಲ್ಲ ಅಗತ್ಯದ ಕಾರ್ಬೋಹೈಡ್ರೇಟ್‌, ಮಿನರಲ್ಸ್, ಫೈಬರ್‌, ವಿಟಮಿನ್‌ ಗಳ ಗಣಿಯಾಗಿಡಿ. ಇಮ್ಯುನಿಟಿ ಹೆಚ್ಚಿಸಿ, ಇದು ಕ್ಯಾನ್ಸರ್‌ ಕೋಶಗಳ ವಿರುದ್ಧ ಹೋರಾಡಬಲ್ಲದು.

ಎಳ್ಳು : ಇದು ದೇಹದಲ್ಲಿ ಕ್ಯಾಲ್ಶಿಯಂ ಹೆಚ್ಚಿಸಬಲ್ಲದು, ಅದು ಹೆಂಗಸರಿಗೆ ಅತ್ಯಗತ್ಯ ಬೇಕೇ ಬೇಕು. ಇದು ಮೂಳೆ ಸದೃಢಗೊಳಿಸಿ, ಲಿವರ್‌ ನ್ನೂ ಸ್ವಸ್ಥವಾಗಿಡುತ್ತದೆ. ದೇಹ ತೂಕ ನಿಯಂತ್ರಿಸಿ, ಚರ್ಮಕ್ಕೆ ಸ್ನಿಗ್ಧತೆ ನೀಡಿ, ಮಸಲ್ಸ್ ಸ್ಟ್ರಾಂಗ್‌ಆಗಿಸುತ್ತದೆ. ಇಮ್ಯುನಿಟಿ ಬೂಸ್ಟ್ ಮಾಡುತ್ತಾ, ಮಧುಮೇಹ ನಿಯಂತ್ರಣದಲ್ಲೂ ನೆರವಾಗುತ್ತದೆ. ಇದರಲ್ಲಿ ಝಿಂಕ್‌, ಐರನ್‌, ವಿಟಮಿನ್‌ಮೆಗ್ನೀಶಿಯಂ ಧಾರಾಳ ಅಡಗಿವೆ.

ಕೋಕೋನಟ್‌ : ಇದು ಮುಟ್ಟಿನ ದಿನಗಳ ನೋವು, ಯೂರಿನ್‌ ಪ್ರಾಬ್ಲಮ್ಸ್, ಹಾರ್ಟ್‌ ಬರ್ನ್‌, ಆ್ಯಕ್ನೆ ಮೊಡವೆ, ಸ್ಕಿನ್‌ ರಾಶೆಸ್‌, ಓವೇರಿಯನ್‌ ಸಿಸ್ಟ್ ನಂತಹ ಸಮಸ್ಯೆಗಳನ್ನೂ ಸುಲಭವಾಗಿ ನಿವಾರಿಸಬಲ್ಲದು. ಶೀತ ಪ್ರಕೃತಿ ಹೊಂದಿರುವ ತೆಂಗು, ಪಿತ್ತ ದೋಷ ನಿವಾರಣೆಗೆ ಪೂರಕ.

ತುಪ್ಪ : ದೈನಂದಿನ ಆಹಾರದಲ್ಲಿ ಇದರ ಬಳಕೆ ಹೆಚ್ಚು ಲಾಭಕಾರಿ. ಇದು ದೇಹದ ಟಾಕ್ಸಿನ್ಸ್ ನಿವಾರಿಸಿ, ರೋಗ ನಿವಾರಣೆಗೆ ಪೂರಕ. ತುಪ್ಪದಲ್ಲಿನ ವಿಟಮಿನ್‌, ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಸಹಕಾರಿ. ಆರ್ಥ್‌ ರೈಟಿಸ್‌, ವಾತ ದೋಷ, ತೂಕ ತಗ್ಗಿಸಲು ತುಪ್ಪ ಪೂರಕ. ರೀಫೈಂಡ್‌ ಆಯಿಲ್‌ ಬ್ಯಾಡ್‌ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ, ಆದರೆ ತುಪ್ಪ ಗುಡ್‌ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇಮ್ಯುನಿಟಿ ಹೆಚ್ಚಿಸುವ ಇದು ನೆನಪಿನ ಶಕ್ತಿ ವರ್ಧಿಸಿ, ದೇಹವನ್ನು ಸದೃಢಗೊಳಿಸುತ್ತದೆ.

ಅಖರೋಟ್‌ : ಇದು ಮೆದುಳಿನ ಗೊಂದಲ ನಿವಾರಿಸಿ, ಏಕಾಗ್ರತೆ ಹೆಚ್ಚಿಸುತ್ತದೆ. ಮೆಟಬಾಲಿಸಂ ಚುರುಕುಗೊಳಿಸಿ, ತೂಕ ತಗ್ಗಿಸಲು ನೆರವಾಗುತ್ತದೆ. ಇದರಲ್ಲಿನ ಒಮೇಗಾ-3 ಯಿಂದಾಗಿ ದೇಹಕ್ಕೆ ಧಾರಾಳ ಆ್ಯಂಟಿ ಆಕ್ಸಿಡೆಂಟ್ಸ್ ನೀಡಬಲ್ಲದು.

ಬೆಲ್ಲ : ಇದು ನೈಸರ್ಗಿಕ ಸಿಹಿ ಹೊಂದಿದ್ದು, ಸಕ್ಕರೆಗೆ ಹೋಲಿಸಿದಲ್ಲಿ ಎಷ್ಟೋ ಪಾಲು ಉತ್ತಮ. ಇದರಲ್ಲಿ ಫೈಬರ್‌, ಕ್ಯಾಲ್ಶಿಯಂ, ಐರನ್‌, ವಿಟಮಿನ್‌ ಅಡಗಿವೆ. ನಿತ್ಯ ಬೆಲ್ಲದ ಸೇವನೆಯಿಂದ ಅನೀಮಿಯಾ ದೂರವಾಗುತ್ತದೆ. ಇದು ಅಜೀರ್ಣಕ್ಕೆ ಸಹ ಬಲು ಉಪಕಾರಿ. ಇದರ ಹಾಗೆಯೇ ಒಣದ್ರಾಕ್ಷಿ, ಜೇನು ಸಹ ಬಳಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ