ಕೆಲವ ವಿಷಯಗಳ ಬಗ್ಗೆ ಗಮನಹರಿಸಿದರೆ ಇನ್‌ಫರ್ಟಿಲಿಟಿ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಜಗತ್ತಿನಾದ್ಯಂತ ಇನ್‌ಫರ್ಟಿಲಿಟಿ ಅರ್ಥಾತ್‌ ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೊರಟಿದೆ. ಭಾರತದಲ್ಲಿ 10-15% ದಂಪತಿಗಳು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿಳಿದಿರಬೇಕಾದ ಸಂಗತಿಯೇನೆಂದರೆ, ಭಾರತದಲ್ಲಿ ಪ್ರತಿವರ್ಷ 30 ದಶಲಕ್ಷ ಇನ್‌ಫರ್ಟಿಲೈಸ್‌ ದಂಪತಿಗಳಲ್ಲಿ 3 ದಶಲಕ್ಷ ದಂಪತಿಗಳು ಇನ್‌ಫರ್ಟಿಲಿಟಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಇಂಥವರ ಪ್ರಮಾಣ ಹೆಚ್ಚು. ಅಲ್ಲಿ ಪ್ರತಿ 6 ದಂಪತಿಗಳಲ್ಲಿ ಒಂದು ಜೋಡಿ ಇನ್‌ಫರ್ಟಿಲಿಟಿ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಈ ಚಿಕಿತ್ಸೆಗೆ ಸಂಬಂಧಪಟ್ಟಂತೆ ಬಹಳಷ್ಟು ಜಾಗರೂಕರಾಗಿದ್ದಾರೆ. ನಿಮಗೆ ಗೊತ್ತಿರಬೇಕಾದ ಒಂದು ವಿಚಾರವೆಂದರೆ ಪ್ರತಿಯೊಂದು ಸಮಸ್ಯೆಗೂ ಚಿಕಿತ್ಸೆ ಸಾಧ್ಯವಿದೆ. ಹಾಗೆಂದೇ ಭರವಸೆ ಕಳೆದುಕೊಂಡಿದ್ದ ದಂಪತಿಗಳು ಈಗ ಪೋಷಕರಾಗುತ್ತಿದ್ದಾರೆ.

ಇನ್‌ಫರ್ಟಿಲಿಟಿ ಅಂದರೇನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬಂಜೆತನ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ದಂಪತಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ 1 ಅಥವಾ ಅದಕ್ಕೂ ಹೆಚ್ಚು ಸಮಯದಿಂದ ಯೋಜನೆ ಮಾಡುತ್ತಿದ್ದರೂ, ಗರ್ಭ ಧರಿಸದೇ ಇದ್ದರೆ ಅದನ್ನು `ಇನ್‌ಫರ್ಟಿಲಿಟಿ' ಎಂದು ಹೇಳಲಾಗುತ್ತದೆ.

ಇನ್‌ಫರ್ಟಿಲಿಟಿ ಸಮಸ್ಯೆಗೆ ಕೇವಲ ಮಹಿಳೆಯರಷ್ಟೇ ಕಾರಣರಲ್ಲ. ಪುರುಷರೂ ಅದಕ್ಕೆ ಕಾರಣವಾಗಿರಬಹುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಈ ಸಮಸ್ಯೆಗೆ ಫೆಲೋಪಿಯನ್‌ ಟ್ಯೂಬ್‌ ಬ್ಲಾಕ್‌ ಆಗಿರುವುದು, ಅಂಡ ಉತ್ಪತ್ತಿ ಆಗದಿರುವುದು, ಥೈರಾಯ್ಡ್, ಪ್ರೆಗ್ನೆನ್ಸಿ ಹಾರ್ಮೋನುಗಳ ಸಮತೋಲನ ಬಿಗಡಾಯಿಸಿರುವುದು, ಪಿಸಿಓಡಿ ಅಂದರೆ ಪಾಲಿಸಿಸ್ಟಿಕ್ ಓವೇರಿಯನ್‌ ಸಿಂಡ್ರೋಮ್ ಮುಂತಾದವುಗಳು ಕಾರಣವಾಗುತ್ತವೆ. ಅದರಿಂದಾಗಿ ಗರ್ಭ ಧರಿಸಲು ಸಮಸ್ಯೆಯಾಗುತ್ತದೆ.

ಪುರುಷರಲ್ಲಿ ಈ ಸಮಸ್ಯೆ ಸ್ಪರ್ಮ್ ಕೌಂಟ್‌ ಕಡಿಮೆಯಾಗಿರುವುದು, ಅವುಗಳ ಗುಣಮಟ್ಟ ಸರಿಯಾಗಿ ಇಲ್ಲದಿರುವುದು, ಚಲನೆ ಸರಿಯಾಗಿ ಇರದೇ ಇರುವುದರಿಂದ ಉಂಟಾಗುತ್ತದೆ. ಆದರೆ ನೀವು ಇದರಿಂದ ಚಿಂತಿಸಬೇಕಾದ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಸಮಸ್ಯೆಗೆ ಪರಿಹಾರವೇನು?

ಮುಟ್ಟನ್ನು ಸಾಮಾನ್ಯಗೊಳಿಸುವುದು : ಸಾಮಾನ್ಯ ವಿಧಾನದಲ್ಲಿ ಅಥವಾ ಯಾವುದಾದರೂ ಚಿಕಿತ್ಸೆಯ ಮೂಲಕ ವೈದ್ಯರು ನಿಮ್ಮ ಮುಟ್ಟನ್ನು ಸಮರ್ಪಕಗೊಳಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ನಿಮ್ಮ ಹಾರ್ಮೋನುಗಳು ನಾರ್ಮಲ್ ಆಗಬೇಕು ಮತ್ತು ನಿಮಗೆ ಗರ್ಭ ಧರಿಸಲು ಯಾವುದೇ ಸಮಸ್ಯೆ ಉಂಟಾಗಬಾರದು. ಇದರ ಜೊತೆ ಜೊತೆಗೆ ಅಂಡಾಣು ಬಿಡುಗಡೆ ಚಕ್ರವನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸಗಳು ಹಾಗೂ ಔಷಧಿಗಳ ಮೂಲಕ ಅದನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುತ್ತಾರೆ.

ಹಾರ್ಮೋನು ಸಮತೋಲನ ಸರಿಪಡಿಸುವುದು : ಗರ್ಭ ಧರಿಸಲು ಅತ್ಯಗತ್ಯ ಹಾರ್ಮೋನು ಎಂದರೆ ಅದು ಎಫ್‌.ಎಸ್‌.ಎಚ್‌ಹಾರ್ಮೋನು. ಅದು ಅಂಡಕೋಶದಲ್ಲಿ ಅಂಡಾಣು ಬೆಳವಣಿಗೆಯಾಗಲು ನೆರವಾಗುತ್ತದೆ. ಅದರಿಂದಾಗಿ ಈಸ್ಟ್ರೋಜೆನ್‌ನ ಉತ್ಪಾದನೆ ಹೆಚ್ಚುತ್ತದೆ. ಅದು ದೇಹದಲ್ಲಿ ಎಲ್.ಎಚ್‌ ಹಾರ್ಮೋನಿನ ಬೆಳವಣಿಗೆಯ ಸಂಕೇತವಾಗಿದೆ. ಅದರಿಂದಾಗಿ ಅಂಡಾಣು ಬಿಡುಗಡೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದು ಗರ್ಭ ಧರಿಸುವ ಪ್ರಕ್ರಿಯೆ ಸುಲಭವಾಗಿ ನೆರವೇರುತ್ತದೆ. ಇಂತಹ ಸ್ಥಿತಿಯಲ್ಲಿ ನಾವು ಐಯುಐ ಅಂದರೆ ಇಂಟ್ರಾಯುಟಿರೈನ್‌ ಇನ್‌ ಸೆಮಿನೇಶನ್‌ ಮಾಡಿಸಿಕೊಳ್ಳಬಹುದು ಅಥವಾ ಇನ್‌ವಿಟ್ರೊ ಫರ್ಟಿಲೈಜೇಶನ್ ಔಷಧಿಗಳ ಮೂಲಕ ಅದನ್ನು ಸರಿಪಡಿಸಬಹುದು. ಇದರಲ್ಲಿ ಹೆಲ್ದೀ ಈಟಿಂಗ್‌ ಹ್ಯಾಬಿಟ್‌ ಕೂಡ ಅತ್ಯಂತ ಉಪಯುಕ್ತ ಎಂದು ಸಾಬೀತಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ