ಚಳಿಗಾಲದ ಮಜಾ ಅಂದ್ರೆ ಕೇವಲ ಬೆಚ್ಚಗಿನ ಉಡುಗೆ ಧರಿಸಿ, ಬಿಸಿ ಬಿಸಿ ಪಕೋಡ ತಿನ್ನುತ್ತಾ ಕಾಫಿ ಹೀರುವುದಷ್ಟೇ ಅಲ್ಲ ಅಥವಾ ಎಳೆ ಬಿಸಿಲಿನಲ್ಲಿ ತಿರುಗಾಡುತ್ತಾ ಟೈಂಪಾಸ್‌ ಮಾಡುವುದಲ್ಲ. ಮುಖ್ಯವಾಗಿ ಈ ಚಳಿಗಾಲದಲ್ಲಿ ಡ್ರೈಸ್ಕಿನ್‌, ಒಡೆದ ತುಟಿಗಳು, ಶುಷ್ಕ ಕೈಗಳು ಹಾಗೂ ನಿರ್ಜೀವ ಕೂದಲಿನ ಸಮಸ್ಯೆಗಳನ್ನೆದುರಿಸಿ ಗೆಲ್ಲಬೇಕಿರುವುದು ಅತಿ ಮುಖ್ಯ. ಹೆಣ್ಣು ಗೃಹಿಣಿ ಅಥವಾ ಉದ್ಯೋಗಸ್ಥ ವನಿತೆಯಾಗಿರಲಿ, ಇಬ್ಬರ ಬಳಿಯೂ ತಮ್ಮ ಚರ್ಮದ ಸೌಂದರ್ಯ ಸಂರಕ್ಷಣೆಗೆ ಸಮಯವೇ ಇರುವುದಿಲ್ಲ.

ಚಳಿಗಾಲದಲ್ಲಿ ಬಿಸಿಲಿನ ತಾಪ ತುಸು ಕಡಿಮೆ ಆಗಿರುತ್ತದೆ, ಹೀಗಾಗಿ ಹೆಚ್ಚಿನ ಮಹಿಳೆಯರು ಮಾಯಿಶ್ಚರೈಸರ್‌ ಮತ್ತು ಸನ್‌ ಸ್ಕ್ರೀನ್‌ ಲೋಶನ್‌ ಹಚ್ಚುವುದನ್ನೇ ಬಿಟ್ಟುಬಿಡುತ್ತಾರೆ. ಆದರೆ ಚಳಿಗಾಲದಲ್ಲೂ ಚರ್ಮವನ್ನು ಹಾನಿಕಾರಕ UV ಕಿರಣಗಳಿಂದ ರಕ್ಷಿಸಬೇಕಾದುದು ಅನಿವಾರ್ಯ. ಇದರೊಂದಿಗೆ ತಿಳಿದುಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಚಾರವೆಂದರೆ, ನಿಮ್ಮ ಚರ್ಮ ಯಾವ ಪ್ರಕಾರದ್ದು ಮತ್ತು ಅದರ ಸಂರಕ್ಷಣೆ ಮಾಡುವ ವಿಧಾನ ಯಾವುದೆಂಬುದು.

ಸಾಮಾನ್ಯವಾಗಿ ಚಳಿಗಾಲದ ಶುಷ್ಕ ಹವೆ ಅಥವಾ ರೂಂ ಹೀಟರ್ಸ್‌ನ ಬಿಸಿ ಹವೆ ನಮ್ಮ ಚರ್ಮದ ಮೇಲಿನ ಪದರದ ಎಲ್ಲಾ ನೈಸರ್ಗಿಕ ತೈಲಾಂಶನ್ನೂ ಒಣಗಿಸಿಬಿಡುತ್ತವೆ. ಅಸಲಿಗೆ ತ್ವಚೆಯ ಈ ನೈಸರ್ಗಿಕ ತೈಲಾಂಶ ಅದರ ನ್ಯಾಚುರಲ್ ವಾಟರ್‌ ಬ್ಯಾಲೆನ್ಸ್ ನ್ನು ಕಾಪಾಡಲು ರೋಧಕದಂತೆ ಕೆಲಸ ಮಾಡುತ್ತದೆ.

ಹೀಗಿರುವಾಗ ಚರ್ಮ ಹೆಚ್ಚು ಟೈಟ್‌ ಆದಷ್ಟೂ, ನಿಮಗೆ ನಿಮ್ಮ ಚರ್ಮದ ಡ್ರೈನೆಸ್‌ ಅರಿವಾಗುತ್ತಾ ಹೋಗುತ್ತದೆ. ಆಗ ಅದು ನಿಸ್ತೇಜವಾಗಿ ಕಾಣುತ್ತದೆ. ಈ ಡ್ರೈನೆಸ್‌ ಕಾರಣದಿಂದಲೇ ನಮಗೆ ಆಗಾಗ ಉರಿ ಅಥವಾ ನವೆ ಅನಿಸುತ್ತದೆ.

ಹೀಗಾಗಿ ಹೆಚ್ಚಿನ ಹೆಂಗಸರು ಈ ಡ್ರೈನೆಸ್‌ ನಿಂದ ಮುಕ್ತರಾಗಲು ಮಾಯಿಶ್ಚರೈಸರ್‌ ಅಷ್ಟೇ ಬಳಸಿದರೆ ಸಾಕೆಂದುಕೊಳ್ಳುತ್ತಾರೆ, ಆದರೆ ಖಂಡಿತಾ ಅಷ್ಟು ಮಾತ್ರ ಸಾಲದು. ನಿಮ್ಮ ಸ್ಕಿನ್‌ ಕೇರ್‌ ರೊಟೀನ್‌ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು, ನೀವು ಚಳಿಗಾಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಡ್ರೈ ಸ್ಕಿನ್‌ ಅಧಿಕ ಡಾರ್ಕ್‌ ಮತ್ತು ಟ್ಯಾನ್‌ ಆಗುತ್ತದೆ, ಹೀಗಾಗಿ ಚಳಿಗಾಲದಲ್ಲಿ ಅದನ್ನು ಹೆಚ್ಚು ಗಮನಿಸಿಕೊಳ್ಳಬೇಕಾದುದು ಅನಿವಾರ್ಯ.

ಚಳಿಗಾಲದಲ್ಲಿ ತ್ವಚೆಯ ತೈಲಗ್ರಂಥಿಗಳು ಸಕ್ರಿಯವಾಗಿ ಇರುವುದಿಲ್ಲ. ಹೀಗಾಗಿ ಅದರಿಂದ ತಯಾರಾಗುವ ನೈಸರ್ಗಿಕ ತೈಲಾಂಶ ಸಾಕಷ್ಟು ಪ್ರಮಾಣದಲ್ಲಿ ಚರ್ಮದ ಮೇಲ್ಪದರಕ್ಕೆ ತಲುಪುದಿಲ್ಲ. ಡ್ರೈನೆಸ್‌ ಕಾರಣ ಚರ್ಮದ ಸೌಂದರ್ಯ ಹಾಳಾಗುತ್ತದೆ. ಹೀಗಾಗಿ ಅದಕ್ಕೆ ಕೃತಕವಾಗಿ ಆರ್ದ್ರತೆ ಒದಗಿಸುವ ಅಗತ್ಯವಿದೆ.

ಚಳಿಗಾಲದಲ್ಲಿ ಎಂದೂ ಸೋಪು ಬಳಸಿ ಸ್ನಾನ ಮಾಡಬಾರದು. ಅದರ ಬದಲು ಫೇಸ್‌ ವಾಶ್‌, ಬಾಡಿವಾಶ್‌ ಅಥವಾ ಶವರ್‌ ಜೆಲ್‌ಬಳಸಬೇಕು. ಹೆಚ್ಚು ಕೆಮಿಕಲ್ಸ್ ಬೆರೆತಿರುವಂಥ ಸಾಬೂನು ಅಥವಾ ಅದರಂಥ ಉತ್ಪನ್ನಗಳನ್ನು ಬಳಸಬಾರದು. ಮನೆಯಿಂದ ಹೊರಗೆ ಹೊರಡುತ್ತೀರಾದರೆ SPF 30ರ ಸನ್‌ ಸ್ಕ್ರೀನ್‌ ಲೋಶನ್‌ ಬಳಸಲೇಬೇಕು ಅನಿಸಿದರೆ ಅದರ ವ್ಯಾಲ್ಯೂ ನ್ಯೂಟ್ರಲ್ ಆಗಿರಬೇಕು. ಸ್ನಾನ ಆದ ತಕ್ಷಣ ಮೈಗೆಲ್ಲ ಕೋಲ್ಡ್ ಕ್ರೀಂ ಹಚ್ಚಿಕೊಳ್ಳಿ. ತ್ವಚೆಗೆ ಪೂರಕವಾದ ಅಂಶಗಳನ್ನುಳ್ಳಂಥ ಕೋಸ್ಡ್ ಕ್ರೀಂ ಹಾಗೂ ಮಾಯಿಶ್ಚರೈಸರ್‌ ನ್ನಷ್ಟೇ ಬಳಸಬೇಕು. ಅಂದರೆ ಕೊಲ್ಯಾಜೆನ್‌, ಲ್ಯಾಕ್ಟಿಕ್‌ ಆ್ಯಸಿಡ್‌ ಅಥವಾ ಯೂರಿಯಾ ಮುಂತಾದವು ಇರಬೇಕು. ಯಾವ ಉತ್ಪನ್ನಗಳಲ್ಲಿ ಆಲ್ಕೊಹಾಲ್‌, ಕ್ಲೇ, ಗ್ಲಿಸರಿನ್‌ ಇರುತ್ತದೋ ಅಂಥವನ್ನು ಬಳಸಬಾರದು, ಏಕೆಂದರೆ ಇಂಥ ಚರ್ಮದ ಡ್ರೈನೆಸ್‌ನ್ನು ಹೆಚ್ಚಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ