ಒಂದು ಅಂದಾಜಿನ ಪ್ರಕಾರ 4 ವ್ಯಕ್ತಿಗಳಲ್ಲಿ ಒಬ್ಬರಿಗೆ ಕೀಲುನೋವು ತಪ್ಪಿದ್ದಲ್ಲವಂತೆ, ಗಂಡಸರಿಗೆ ಹೋಲಿಸಿದರೆ ಹೆಂಗಸರಲ್ಲಿ ಇದು ಹೆಚ್ಚು.

ಕೀಲುನೋವಿಗೆ ಕಾರಣವೇನು?

ಕೀಲುನೋವಿಗೆ ಅನೇಕ ಕಾರಣಗಳಿವೆ. ಅಂದರೆ, ಬೋನ್‌ ಫ್ಲೂಯಿಡ್‌ ಅಥವಾ ಮೆಂಬ್ರೇನ್‌ನಲ್ಲಿನ ಪರಿವರ್ತನೆ, ತೀವ್ರ ಪೆಟ್ಟು, ಒಳಗೊಳಗೆ ರೋಗ ಮೂಡುವುದು, ಮೂಳೆ ಕ್ಯಾನ್ಸರ್‌, ಆರ್ಥ್‌ರೈಟಿಸ್‌, ಸ್ಥೂಲಕಾಯ, ರಕ್ತದ ಕ್ಯಾನ್ಸರ್‌, ವಯಸ್ಸು ಹೆಚ್ಚುತ್ತಿದ್ದಂತೆ ಕೀಲುಗಳ ಮಧ್ಯದ ಕಾರ್ಟಿೀಜ್‌ಕುಶನ್‌ನ್ನು ಬಳುಕಿಸುವ, ಅಂಟಿಕೊಳ್ಳುವಂತೆ ಮಾಡುವ ಲ್ಯೂಬ್ರಿಕೆಂಟ್‌ ಕಡಿಮೆ ಆಗುವುದು, ಲಿಗಮೆಂಟ್ಸ್ ಎಳೆಯಲ್ಪಟ್ಟು ಅದರಲ್ಲಿ ಬಳುಕುವಿಕೆ ತಗ್ಗುವುದು…. ಇತ್ಯಾದಿ.

ಕೀಲುಗಳನ್ನು ಆರೋಗ್ಯವಾಗಿಡುವುದು ಹೇಗೆ?

ಕೀಲುಗಳ ನೋವಿನಲ್ಲಿ ಅದರಲ್ಲೂ ಆರ್ಥ್‌ರೈಟಿಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ಕೆಲವು ಉಪಾಯಗಳುಂಟು. ಇವನ್ನು ಅನುಸರಿಸಿ ಇದರ ತೀವ್ರ ಗಂಭೀರ ಸ್ವರೂಪದಿಂದ ತಪ್ಪಿಸಿಕೊಳ್ಳಬಹುದು ಅಥವಾ ಬಾಧೆ ಹೆಚ್ಚಿದಾಗ ಅದನ್ನು ಹೀಗೆ ನಿಯಂತ್ರಿಸಬಹುದು :

ಕೀಲುಗಳಲ್ಲಿನ ಕಾರ್ಟಿಲೇಜ್‌ಗೆ ಆರ್ಥ್‌ರೈಟಿಸ್‌ ಕಾರಣ ಹಾನಿ ಉಂಟಾಗಬಹುದು. ಇದು ಶೇ.70ರಷ್ಟು ನೀರಿನಿಂದ ರೂಪುಗೊಂಡಿದೆ, ಆದ್ದರಿಂದ ದಿನವಿಡೀ ನೀರು ಕುಡಿಯುತ್ತಲೇ ಇರಿ.

ಕ್ಯಾಲ್ಶಿಯಂಯುಕ್ತ ಆಹಾರ ಪದಾರ್ಥಗಳಾದ ಹಾಲು, ಹಾಲಿನ ಉತ್ಪನ್ನಗಳು, ಬ್ರೋಕ್ಲಿ, ಸಾಲ್ಮನ್‌ ಫಿಶ್‌, ಪಾಲಕ್‌ ಸೊಪ್ಪು, ರಾಜ್ಮಾ, ಕಡಲೆಕಾಯಿ, ಬಾದಾಮಿ, ಟೋಫು ಇತ್ಯಾದಿಗಳನ್ನು ಹೆಚ್ಚು ಸೇವಿಸಿ.

ವಿಟಮಿನ್‌ಸಿ  ಡಿ, ಆರೋಗ್ಯಕರ ಕೀಲುಗಳಿಗೆ ಪೂರಕ. ಆದ್ದರಿಂದ ಇವು ಧಾರಾಳ ಇರುವಂಥ ಆಹಾರ ಪದಾರ್ಥಗಳಾದ ಸ್ಟ್ರಾಬೆರಿ, ಕಿತ್ತಳೆ, ಕಿವೀ, ಅನಾನಸ್‌, ಹೂಕೋಸು, ಎಲೆಕೋಸು, ಹಾಲು, ಮೊಸರು, ಮೀನು ಇತ್ಯಾದಿ ಧಾರಾಳ ಸೇವಿಸಿ.

ಬೆಳಗಿನ ಹೊಂಬಿಸಿಲಲ್ಲಿ ವಾಕಿಂಗ್‌ ಹೊರಡಿ. ಇದರಿಂದ ವಿಟಮಿನ್‌ ಡಿ ಸಿಗುತ್ತದೆ.

ನಿಮ್ಮ ತೂಕವನ್ನು ಕಂಟ್ರೋಲ್ ‌ಮಾಡಿ. ತೂಕ ಹೆಚ್ಚಿದಷ್ಟು ಕೀಲುಗಳ ಮೇಲೆ ಅಧಿಕ ಒತ್ತಡ ಬೀಳುತ್ತದೆ.

ನಿಯಮಿತವಾಗಿ ವ್ಯಾಯಾಮ, ಯೋಗ, ವಾಕಿಂಗ್‌ ಮಾಡಿ. ಇವು ಕೀಲಿನ ಬಾಧೆ ತಪ್ಪಿಸುತ್ತವೆ. ಆದರೆ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಹೇರುವ ವ್ಯಾಯಾಮದಿಂದ ದೂರವಿರಿ.

ಧೂಮಪಾನ, ಮಧುಪಾನ ಕೀಲುಗಳಿಗೆ ಹಾನಿಕರ. ಆರ್ಥ್‌ರೈಟಿಸ್‌ ರೋಗಿಗಳು ಇದರ ಸೇವನೆ ನಿಲ್ಲಿಸಿದರೆ ಅವರ ಕೀಲುನೋವು ತಪ್ಪಿ ಎಷ್ಟೋ ಸುಧಾರಣೆ ಕಾಣಬಹುದು.

ಆರೋಗ್ಯವಂತರು ಸಹ ಧೂಮಪಾನ ಮಾಡಬಾರದು. ಏಕೆಂದರೆ ಅದು ನಿಮ್ಮನ್ನು ರುಮೆಟೈಡ್‌ ಆರ್ಥ್‌ರೈಟಿಸ್‌ಗೆ ಗುರಿಪಡಿಸುತ್ತದೆ.

ತಾಜಾ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇದು ಆಸ್ಟ್ರೋ ಆರ್ಥರೈಟಿಸ್‌ನ ಬಾಧೆಗೆ ಸಿಲುಕದಂತೆ ಮಾಡುತ್ತದೆ.

ನಿಮ್ಮ ಅಡುಗೆಗೆ ಅರಿಶಿನ, ಹಸಿಶುಂಠಿ ಬೆರೆಸಲು ಮರೆಯದಿರಿ. ಇದು ಕೀಲು ಊತ ಆಗದಂತೆ ಕಾಪಾಡುತ್ತದೆ.

ಸದಾ ಹಾಯಾಗಿ ಮಲಗಿ ಒರಗಿ ಸುಖವಾಗಿಯೇ ಇರಬೇಡಿ. ಚಟುವಟಿಕೆಯಿಂದ ಓಡಾಡುತ್ತಿರಿ.

ಊತ ಹೆಚ್ಚಿಸುವ ಪದಾರ್ಥಗಳಾದ ಉಪ್ಪು, ಸಕ್ಕರೆ, ಆಲ್ಕೋಹಾಲ್‌, ಕೆಫೀನ್‌, ಎಣ್ಣೆ, ಅತಿ ಜಿಡ್ಡಿನ ಪದಾರ್ಥ, ಟ್ರಾನ್ಸ್ ಫ್ಯಾಟ್‌, ರೆಡ್‌ ಮೀಟ್‌ ಇತ್ಯಾದಿ ದೂರವಿಡಿ.

ವಾಕಿಂಗ್‌, ಜಾಗಿಂಗ್‌, ಡ್ಯಾನ್ಸ್, ಜಿಮ್ ಪ್ರಾಕ್ಟೀಸ್‌. ಮೆಟ್ಟಿಲು ಏರಿ ಇಳಿಯುವುದು, ಲಘು ವ್ಯಾಯಾಮ ಇತ್ಯಾದಿಗಳಿಂದ ನಿಮ್ಮ ಮೂಳೆಗಳನ್ನು ಸದೃಢಗೊಳಿಸಿ.

ಚಳಿಗಾಲದಲ್ಲಿ ವಿಶೇಷ ಆರೈಕೆ

ಚಳಿಗಾಲದಲ್ಲಿ ಕೀಲು ನೋವು ಹೆಚ್ಚು ಬಾಧಿಸುತ್ತದೆ. ಏಕೆಂದರೆ ಈ ಋತುವಿನಲ್ಲಿ ಜನ ಹೆಚ್ಚು ಆರಾಮವಾಗಿರಲು ಬಯಸುತ್ತಾರೆ. ಇದರಿಂದ ದೈಹಿಕ ಸಕ್ರಿಯತೆ ಕಡಿಮೆ ಆಗುತ್ತದೆ. ಹಗಲು ಚಿಕ್ಕದು, ಇರುಳು ದೊಡ್ಡದಾಗಿರುವುದರಿಂದ ಜೀವನಶೈಲಿ ಬದಲಾಗುತ್ತದೆ. ಆಹಾರಾಭ್ಯಾಸಗಳೂ ಬದಲಾಗುತ್ತವೆ. ಜನ ವ್ಯಾಯಾಮದತ್ತ ಗಮನಹರಿಸುವುದಿಲ್ಲ. ಹೀಗಾಗಿ ಈ ಸಮಸ್ಯೆ ಗಂಭೀರವಾಗುತ್ತದೆ. ಆದ್ದರಿಂದ ಈ ಕೆಳಗಿನ ವಿಷಯಗಳತ್ತ ಗಮನಹರಿಸಿ :

ನಿಯಮಿತವಾಗಿ ವ್ಯಾಯಾಮ ಮಾಡಿ. ದೈಹಿಕವಾಗಿ ಸಕ್ರಿಯರಾಗಿರಿ.

ಹೊರಗಿನ ತಾಪಮಾನ ಬಲು ಕಡಿಮೆ ಆದಾಗ, ಹೊರಗಿನ ಓಡಾಟವನ್ನು ಆದಷ್ಟೂ ಕಡಿಮೆ ಮಾಡಿ.

ಸದಾ ಬೆಚ್ಚಗಿನ ಉಡುಗೆ ಧರಿಸಿ.

ಚಳಿ ಎಂದು ನೀರಿನ ಸೇವನೆ ಕಡಿಮೆ ಮಾಡಬಾರದು. ಪ್ರತಿ ದಿನ ಅಗತ್ಯ 10-12 ಗ್ಲಾಸ್‌ ನೀರು ಕುಡಿಯಿರಿ.

ನಿಮ್ಮನ್ನು ಅತಿ ಶೀತದಿಂದ ದೂರವಿಡಿ. ಯಾವ ಭಾಗದಲ್ಲಿ ನೋವು ಹೆಚ್ಚೋ, ಅಲ್ಲಿ ಬಿಗಿಯಾಗಿ ಬಟ್ಟೆ ಕಟ್ಟಿ. (ಅಗತ್ಯ ನೀವು ಬ್ಯಾಂಡ್‌ ಬಳಸಿರಿ.)

ಕೊರೆಯುವ ಯಾವ ಪದಾರ್ಥವನ್ನೂ ಸೇವಿಸಬೇಡಿ. ಆದಷ್ಟೂ ಆಹಾರವನ್ನು ಬಿಸಿ ಮಾಡಿ ಸೇವಿಸಿ. ಈರುಳ್ಳಿ, ಬೆಳ್ಳುಳ್ಳಿ, ಸಾಲ್ಮನ್‌ಫಿಶ್‌, ಬೆಲ್ಲ, ಬಾದಾಮಿ, ಗೋಡಂಬಿ ಇತ್ಯಾದಿ ಅಧಿಕ ಸೇವಿಸಿ.

ವಾಕಿಂಗ್‌, ಜಾಗಿಂಗ್‌, ವ್ಯಾಯಾಮ ತಪ್ಪಿಸಬೇಡಿ. ಇದರಿಂದ ಮಾಂಸಖಂಡಗಳು ಸಕ್ರಿಯಗೊಳ್ಳುತ್ತವೆ, ಕೀಲುಗಳು ಚುರುಕಾಗುತ್ತವೆ. ವ್ಯಾಯಾಮ ನಿಧಾನವಾಗಿ ಮಾಡಬೇಕು, ಅವಸರ ಬೇಡ.

ಜರಡಿಯಾಡದ ಗೋಧಿಹಿಟ್ಟು, ಹೆಸರುಕಾಳು, ಕಡಲೆಕಾಳು ಇತ್ಯಾದಿ ಹೊರಸಿಪ್ಪೆ ಸಮೇತ ಸೇವಿಸಬೇಕು. ತಾಜಾ ತರಕಾರಿಗಳಾದ ಕುಂಬಳ, ಸೋರೆ, ಪಡವಲ, ಸೌತೆ, ಹೂಕೋಸು, ಎಲೆಕೋಸು, ಕ್ಯಾರೆಟ್‌ ಇತ್ಯಾದಿ ಸೇವಿಸುತ್ತಿರಿ. ಹೆಚ್ಚು ಹೆಚ್ಚಾಗಿ ಬ್ರೋಕ್ಲಿ ಉಪಯೋಗಿಸಿ. ಇದು ಆರ್ಥ್‌ರೈಟಿಸ್‌ನ್ನು ಬೇಗ ತಗ್ಗಿಸುತ್ತದೆ.

ಟೈಮ್ ಗೆ ಸರಿಯಾಗಿ ಔಷಧಿ, ಮಾತ್ರೆ ಸೇವಿಸಿ.

ಕೀಲು ನೋವಿನ ಸಮಸ್ಯೆ ಜೊತೆ ಇನ್ನೇನಾದರೂ ಬೇರೆ ಕಷ್ಟಗಳಿದ್ದರೆ ತಕ್ಷಣ ವೈದ್ಯರಿಗೆ ತೋರಿಸಿ. ಅಧಿಕ ಊತ, ಕೆಂಪಾಗುವಿಕೆ, ಜಾಯಿಂಟ್ಸ್ ಬಳಸಲಾಗದಂಥ ಸಮಸ್ಯೆ, ಅತ್ಯಧಿಕ ನೋವು ಇತ್ಯಾದಿ ಯಾವುದೇ ಆಗಿರಬಹುದು, ನಿರ್ಲಕ್ಷಿಸಬೇಡಿ.

ಡಾ. ಎನ್‌. ಸಿಂಗ್ಸರ್ಕಾರ್‌, ಆರ್ಥೊಪೆಡಿಕ್ಸ್, ಜಾಯಿಂಟ್ರೀಪ್ಲೇಸ್ಮೆಂಟ್ಸರ್ಜನ್‌, ಲೀಲಾವತಿ ಆಸ್ಪತ್ರೆ, ಮುಂಬೈ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ