ಕಣ್ಣುಗಳು ದೇಹದ ಅತ್ಯಂತ ಸೂಕ್ಷ್ಮ ಅಂಗಗಳಾಗಿವೆ. ಅವುಗಳ ಆರೋಗ್ಯ ನಮ್ಮ ಜೀವನಶೈಲಿಯಿಂದ ಪ್ರಭಾವಿತಗೊಳ್ಳುತ್ತವೆ. ಬಹಳಷ್ಟು ರೋಗಗಳು ಅಂದರೆ ಕ್ರಾನಿಕಲ್ ಕಿಡ್ನಿ ಡಿಸೀಸ್‌, ಹೈಪರ್‌ ಟೆನ್ಶನ್‌, ಮಧುಮೇಹದ ಪ್ರಭಾವ ನಮ್ಮ ಕಣ್ಣುಗಳ ಮೇಲೆ ಆಗಿಯೇ ಆಗುತ್ತದೆ.

ಕಿಡ್ನಿ ರೋಗಗಳು ಮತ್ತು ಕಣ್ಣು

ಕಿಡ್ನಿ ವೈಫಲ್ಯದಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುತ್ತದೆ. ಇಂತಹ ಸ್ಥಿತಿಯಲ್ಲಿ ನೇತ್ರತಜ್ಞರ ಬಳಿ ಚಿಕಿತ್ಸೆ ಪಡೆದು ಅಗತ್ಯವಿದ್ದರೆ ಕನ್ನಡಕ ಧರಿಸುವ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು.

ನೀವು ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯದೇ ಹೋದರೆ ಅದರ ದುಷ್ಪರಿಣಾಮ ಕಣ್ಣಿನ ದೃಷ್ಟಿಯ ಮೇಲೆ ಆಗಬಹುದು. ಕಿಡ್ನಿ ಸಮಸ್ಯೆ ಕೊನೆಯ ಹಂತದಲ್ಲಿದ್ದಾಗ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೊರಟು ಹೋಗಬಹುದು. ಇಂತಹ ಸ್ಥಿತಿ ಬರದಂತೆ ನೋಡಿಕೊಳ್ಳಿ.

ಕಿಡ್ನಿ ರೋಗದ ಲಕ್ಷಣಗಳು

ಕಿಡ್ನಿ ಸಮಸ್ಯೆ ಏಕಾಏಕಿ ಶುರುವಾಗುವುದಿಲ್ಲ. ಇದು ದೀರ್ಘಕಾಲದ ತನಕ ತಪ್ಪು ಜೀವನಶೈಲಿಯ ಪರಿಣಾಮವಾಗಿರುತ್ತದೆ. ಕಿಡ್ನಿ ಸಮಸ್ಯೆಯಿಂದ ರಕ್ಷಣೆ ಮಾಡಿಕೊಳ್ಳುವ ಅತ್ಯುತ್ತಮ ವಿಧಾನವೆಂದರೆ, ಅದರ ಲಕ್ಷಣಗಳ ಮೇಲೆ ದೃಷ್ಟಿ ಇರಿಸಿ, ಅದಕ್ಕೆ ಚಿಕಿತ್ಸೆ ಪಡೆಯುವುದಾಗಿದೆ. ಕಿಡ್ನಿ ರೋಗದ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ :

ದಣಿವು : ನಿಮಗೆ ಮೇಲಿಂದ ಮೇಲೆ ದಣಿವು ಅನಿಸುತ್ತಿದ್ದರೆ, ಒಳ್ಳೆಯ ಆಹಾರ ಸೇವನೆಯ ಬಳಿಕವೂ ಈ ಸಮಸ್ಯೆ ಮುಂದುವರಿದಿದ್ದರೆ, ನಿಮಗೆ ಕಿಡ್ನಿ ಸಮಸ್ಯೆಯ ಅಪಾಯ ಇರಬಹುದಾಗಿದೆ. ಒಂದುವೇಳೆ ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಟಾಕ್ಸಿನ್‌ ಸೇರಿಕೊಳ್ಳುತ್ತದೆ. ಹೀಗಾಗಿ ನಿಮಗೆ ಆಗಾಗ ದಣಿವಿನ ಅನುಭೂತಿ ಉಂಟಾಗುತ್ತದೆ.

ನಿದ್ರೆಯಲ್ಲಿ ಅಡಚಣೆ : ದೇಹದಲ್ಲಿ ಟಾಕ್ಸಿನ್ಸ್ ಇದ್ದರೆ ಕಿಡ್ನಿಯ ಫಿಲ್ಟರ್‌ ಮಾಡುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದೇ ಕಾರಣದಿಂದ ಮೂತ್ರದ ಮುಖಾಂತರ ಹೊರಹೋಗಬೇಕಿದ್ದ ಟಾಕ್ಸಿನ್ಸ್ ದೇಹದಲ್ಲಿಯೇ ಉಳಿದು ನಿದ್ರೆಗೆ  ಸಂಬಂಧಪಟ್ಟ ಸಮಸ್ಯೆಯನ್ನು ಹುಟ್ಟು ಹಾಕುತ್ತವೆ.

ಮೂತ್ರದಲ್ಲಿ ಸಮಸ್ಯೆ : ಕಿಡ್ನಿ ಸಮಸ್ಯೆಯ ಸಾಮಾನ್ಯ ಲಕ್ಷಣವೆಂದರೆ, ಸ್ವಲ್ಪ ಸ್ವಲ್ಪ ಹೊತ್ತಿಗೆ ಮೂತ್ರ ಆಗುವುದು. ದಿನಕ್ಕೆ ನೀವು ಹಲವು ಬಾರಿ ಮೂತ್ರ ಮಾಡಲು ಹೋಗಬೇಕೆನ್ನಿಸಿದರೆ ಅದು ನಿಮಗೆ ವೈದ್ಯರ ಬಳಿ ಹೋಗಲು ಸೂಕ್ತ ಸಮಯವಾಗಿರುತ್ತದೆ. ಕಿಡ್ನಿಗಳು ಮನುಷ್ಯನ ದೇಹದ ಮೂತ್ರ ಪ್ರಕ್ರಿಯೆಯನ್ನು ನಿಯಂತ್ರಿಸುತ್ತೇವೆ. ಅದರಲ್ಲಿ ಏನಾದರೂ ಸಮಸ್ಯೆ ಉಂಟಾದರೆ,  ಮೂತ್ರದ ಅಭ್ಯಾಸದಲ್ಲೂ ಬದಲಾವಣೆ ಉಂಟಾಗುತ್ತದೆ.

ಮೂತ್ರದ ಟೆಕ್ಸ್ ಚರ್‌, ಬಣ್ಣ, ವಾಸನೆ ಮುಂತಾದವುಗಳಲ್ಲಿ ಬದಲಾವಣೆ ನಿಶ್ಚಿತವಾಗಿಯೂ ಅದು ಕಿಡ್ನಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗೆ ಸಂಬಂಧಪಟ್ಟಿರಬಹುದು. ನೀವು ಮೂತ್ರ ಮಾಡುವ ಸಮಯದಲ್ಲಿ ಅದರಲ್ಲಿ ನೊರೆ ನೊರೆ ಕಂಡುಬಂದರೆ ವೈದ್ಯರ ಬಳಿ ಹೋಗಿ.

ಕಾಲುಗಳಲ್ಲಿ ಊತ : ಯಾವುದಾದರೂ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದರೆ, ದೇಹದಲ್ಲಿ ಸೋಡಿಯಂ ಜಮೆಗೊಳ್ಳುತ್ತದೆ. ಅಂತಹ ಸ್ಥಿತಿಯಲ್ಲಿ ಕಾಲುಗಳು ಹಾಗೂ ಹಿಮ್ಮಡಿಯಲ್ಲಿ ಊತ ಕಾಣಿಸಬಹುದು. ನಿಮಗೆ ಶೂ, ಚಪ್ಪಲಿ ಬಿಗಿ ಅನ್ನಿಸಿದರೆ ಅದು ಕಿಡ್ನಿಗೆ ಸಂಬಂಧಪಟ್ಟ ಯಾವುದಾದರೂ ಸಮಸ್ಯೆ ಆಗಿರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ