ನಾವು ಅಡುಗೆಗೆ ನಿತ್ಯ ಬಳಸುವ ಮಸಾಲೆ ಪದಾರ್ಥಗಳು ಸಣ್ಣಪುಟ್ಟ ರೋಗ ಕಾಡಿದಾಗ ಖಂಡಿತಾ ಹೆಚ್ಚು ಉಪಯುಕ್ತ ಎನಿಸುತ್ತವೆ.

ನಿಂಬೆ :

ಈ ನಿಂಬೆ ಹಲವು ವಿಟಮಿನ್ಸ್, ಮಿನರಲ್ಸ್ ತುಂಬಿರುವ ಖಜಾನೆ ಎಂದರೆ ಉತ್ಪ್ರೇಕ್ಷೆಯಲ್ಲ! ಇದು ವಿಟಮಿನ್‌ `ಸಿ' ಅಡಗಿರುವ ಭಂಡಾರ. ಹೀಗಾಗಿ ಇದರ ಸೇವನೆಯಿಂದ ಇನ್‌ ಫೆಕ್ಷನ್‌ ದೂರವಾಗುತ್ತದೆ. ಆಸ್ತಮಾ, ಟ್ರಾನ್ಸಿಲೈಟಿಸ್‌, ಗಂಟಲು ಕೆಟ್ಟಾಗ ಇದರ ಸೇವನೆಯಿಂದ ಆರಾಮ ಸಿಗುತ್ತದೆ. ನಿಂಬೆ ಪಾನಕದ ಸೇವನೆಯಿಂದ ಈ ನಿಂಬೆ ರಸ ಹೈಡ್ರೋಕ್ಲೋರಿಕ್‌ ಆ್ಯಸಿಡ್ ಪ್ರೊಡಕ್ಷನ್‌ ನಲ್ಲಿ ಸಹಕಾರಿ, ಅದು ಆಹಾರ ಜೀರ್ಣವಾಗಲು ಸಹಾಯಕಾರಿ.

ನಿಂಬೆ ಪಾನಕದಿಂದ ಬಿ.ಪಿ, ಒತ್ತಡ ಎಷ್ಟೋ ಕಡಿಮೆ ಆಗುತ್ತದೆ. ಲಿವರ್‌ ಗೆ ಇದು ಟಾನಿಕ್‌ ತರಹ ಕೆಲಸ ಮಾಡುತ್ತದೆ. ಡಯೇರಿಯಾದಂಥ ಸಮಸ್ಯೆಗೆ ಉತ್ತಮ ಫಲ ನೀಡುತ್ತದೆ. ಇದು ಒಂದು ಉತ್ತಮ ಬ್ಲೀಚಿಂಗ್‌ ಏಜೆಂಟ್‌. ಮುಖಕ್ಕೆ ಸರುವುದರಿಂದ, ಮುಖಕ್ಕೆ ಹೆಚ್ಚಿನ ಕಾಂತಿ ಬರುತ್ತದೆ, ಮುಖದಲ್ಲಿನ ಕಲೆಗುರುತು ತಾನಾಗಿ ದೂರಾಗುತ್ತದೆ.

ಶುಂಠಿ :

ginger1

ಶುಂಠಿಗೆ ಮಹಾಔಷಧಿ ಎಂಬ ಹೆಸರಿದೆ. ಇದು ಹಸಿ ಅಥವಾ ಒಣ ರೂಪದಲ್ಲಿಯೂ ಅತ್ಯುತ್ತಮ ಎನಿಸುತ್ತದೆ. ಇದರಲ್ಲಿ ಐರನ್‌, ಕ್ಯಾಲ್ಶಿಯಂ, ಅಯೋಡಿನ್‌, ಕ್ಲೋರಿನ್‌, ವಿಟಮಿನ್‌ ಸಹಿತ ಇನ್ನೂ ಅನೇಕ ಪೋಷಕಾಂಶಗಳು ಅಡಗಿವೆ. ಸಾಮಾನ್ಯವಾಗಿ ಗರ್ಭವತಿಯರನ್ನು ಕಾಡುವ ಮಾರ್ನಿಂಗ್‌ ಸಿಕ್‌ ನೆಸ್‌ ದೂರಾಗಲು ಇದರ ರಸ ಸೇವಿಸಬೇಕು.

ಇದು ಸಹಜವಾಗಿಯೇ ಜೀರ್ಣಶಕ್ತಿ ಸುಧಾರಿಸಲು ನೆರವಾಗುತ್ತದೆ. ಹೊಟ್ಟೆಯ ಸಣ್ಣಪುಟ್ಟ ತೊಂದರೆಗಳನ್ನೂ ನಿವಾರಿಸುತ್ತದೆ. ಇದರ ಜೊತೆ ಓಮ, ಸೈಂಧವ ಲವಣ, ನಿಂಬೆರಸ ಬೆರೆಸಿ ಸೇವಿಸುವುದರಿಂದ ದುರ್ಬಲ ಜೀರ್ಣಶಕ್ತಿಯೂ ಎಷ್ಟೋ ಪಟ್ಟು ಸುಧಾರಿಸುತ್ತದೆ. ಇದರ ನಿಯಮಿತ ಸೇವನೆಯಿಂದ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಳ್ಳುವುದಿಲ್ಲ. ಹುಳಿತೇಗು ಸಹ ಮಾಯವಾಗುತ್ತದೆ. ನೆಗಡಿ, ಜ್ವರ, ತಲೆನೋವು ಹಾಗೂ ಮುಟ್ಟಿನ ಹೊಟ್ಟೆನೋವಿಗೂ ಇದು ಉಪಶಮನ ನೀಡುತ್ತದೆ. ನಿಯಮಿತ, ನಿರಂತರ ಶುಂಠಿ ಸೇವನೆಯಿಂದ ಕೊಲೆಸ್ಟ್ರಾಲ್ ಎಷ್ಟೋ ಪಟ್ಟು ಕಡಿಮೆ ಆಗುತ್ತದೆ.

ಓಮ :

Untitled-1 (1)

ನಿಯಮಿತ ರೂಪದಲ್ಲಿ ಓಮ ಸೇವಿಸುವುದರಿಂದ ಡೈಜೆಶನ್‌ ಸುಸೂತ್ರವಾಗಿರುತ್ತದೆ. ಹೊಟ್ಟೆನೋವು, ಅಸಿಡಿಟಿಯ ಕಿರಿಕಿರಿ ತಪ್ಪುತ್ತದೆ. 1 ಚಮಚ ಓಮಕಾಳು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು, ತುಸು ಬಿಸಿ ನೀರು ಕುಡಿಯುವುದರಿಂದ ಎಷ್ಟೋ ಲಾಭವಿದೆ. ಓಮ, ಸೈಂಧವ ಲವಣ, ಇಂಗು, ಜಜ್ಜಿದ ನೆಲ್ಲಿಕಾಯಿ, ತುಸು ಜೇನುತುಪ್ಪ ಬೆರೆಸಿ ಬೆಳಗೂ ಬೈಗೂ ಸೇವಿಸುವುದರಿಂದ ಹುಳಿತೇಗು, ವಾಕರಿಕೆ, ಹೊಟ್ಟೆ ತೊಳೆಸುವಿಕೆ ಮುಂತಾವುದೆಲ್ಲ ಎಷ್ಟೋ ತಗ್ಗುತ್ತದೆ. ತಲೆನೋವು ಬಂದಾಗ ಓಮ ಅಗಿದು ಸೇವಿಸಿ, ಲಾಭ ಪಡೆಯಿರಿ. ಹೆಚ್ಚು ನವೆ, ಕಡಿತ, ತುರಿಕೆ ಇರುವ ಕಡೆ ಓಮ ಅರೆದು ಪೇಸ್ಟ್ ಹಚ್ಚಬೇಕು. ಕಿವಿ ನೋವು ಕಾಡುತ್ತಿದೆಯೇ? 1-2 ಹನಿ ಓಮದ ಎಣ್ಣೆ ಕಿವಿಗೆ ಹಾಕಿದರೆ ತಗ್ಗುತ್ತದೆ. ಕಿವಿಯಲ್ಲಾಗುವ ಸೋಂಕು ದೂರಗೊಳಿಸುವಲ್ಲಿ ಓಮದ ಪಾತ್ರ ಹಿರಿದು. ಆಸ್ತಮಾ ರೋಗಿಗಳು ದಿನಾ ಬೆಳಗ್ಗೆ 1 ಲೋಟ ಬಿಸಿ ನೀರಿಗೆ ಅರ್ಧ ಚಮಚ ಓಮದ ಪುಡಿ ಬೆರೆಸಿ ಸೇವಿಸುವುದರಿಂದ ರೋಗ ಉಲ್ಬಣಗೊಳ್ಳಲು ಬಿಡದೆ, ತಗ್ಗಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ