ನೀವು ಆಸ್ಪತ್ರೆಯಿಂದ ನಿಮ್ಮ ಪುಟ್ಟ ಕಂದನನ್ನು ಮನೆಗೆ ಎತ್ತಿಕೊಂಡು ಬರುವಾಗ ನಿಮ್ಮ ಮನಸ್ಸಿನಲ್ಲಿ ಅದರ ಪಾಲನೆಪೋಷಣೆಗೆ ಸಂಬಂಧಪಟ್ಟಂತೆ ಹತ್ತು ಹಲವು ಪ್ರಶ್ನೆಗಳು ಏಳುತ್ತವೆ. ನಾನು ಇದನ್ನು ಹೇಗೆ ಬೆಳೆಸಿ ದೊಡ್ಡವನಾಗಿಸುವೆ? ಇದು ಯಾವಾಗ ಮಾತನಾಡಲು ಕಲಿಯುತ್ತದೆ? ಯಾವಾಗ ನಡೆಯುತ್ತದೆ? ಯಾವಾಗ ಇದು ನನ್ನ ಮಾತನ್ನು ಅರ್ಥ ಮಾಡಿಕೊಳ್ಳುತ್ತದೆ? ಇತ್ಯಾದಿ.

ನಿಜ ಹೇಳಬೇಕೆಂದರೆ, ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವುದು ನಿಜಕ್ಕೂ ಒಂದು ಸವಾಲಿನ ಕೆಲಸವೇ ಸರಿ. ಅದು ಒಂದು ಜವಾಬ್ದಾರಿಯುತ ಕೆಲಸ. ಅದರ ದೈಹಿಕ ಹಾಗೂ ಮಾನಸಿಕ ಬೆಳಣಿಗೆಗಾಗಿ ಪ್ರೀತಿಯ ಪೋಷಣೆ ಅತ್ಯಗತ್ಯ. ನೀವು ಮಗುವಿನ ಯಾವುದೇ ಕೆಲಸ ಮಾಡಿದರೂ ಅದನ್ನು ಒಂದು ಡ್ಯೂಟಿ ಎಂಬಂತೆ ಮಾಡಬೇಡಿ. ಮಗುವನ್ನು ನಾನು ಅಪಾರವಾಗಿ ಪ್ರೀತಿಸುತ್ತೇನೆ, ಹಾಗಾಗಿ ಅದು ನನ್ನ ಪ್ರೀತಿಯ ಕೆಲಸ ಎಂದು ಭಾವಿಸಿ. ನಿಮ್ಮ ಈ ಭಾವನೆಯೇ ನಿಮ್ಮ ಮಗುವನ್ನು ಉತ್ತಮ ರೀತಿಯಲ್ಲಿ ಪೋಷಿಸಲು ಸಹಾಯವಾಗುತ್ತದೆ.

ಆಫೀಸೊಂದರಲ್ಲಿ ಕೆಲಸ ಮಾಡುವ ರಜನಿ ಹೀಗೆ ಹೇಳುತ್ತಾರೆ, ``ನಾನು ಆಫೀಸಿನಿಂದ ಮನೆಗೆ ಬಂದಾಗ, ಮಗುವನ್ನು ನೋಡಿ ನನ್ನ ದಣಿವೆಲ್ಲ ಕ್ಷಣಾರ್ಧದಲ್ಲಿ ನಿವಾರಣೆ ಆಗಿಬಿಡುತ್ತದೆ. ನನ್ನ 3 ವರ್ಷದ ಮಗಳಲ್ಲಿ ನಾನು ಪ್ರತಿದಿನ ಏನಾದರೂ ಹೊಸತೊಂದನ್ನು ಕಾಣುತ್ತೇನೆ. ಅದರ ಗಮನ ಸೆಳೆಯುವ ರೀತಿ, ಮಾತನಾಡುವ ಪದ್ಧತಿ ಸ್ವಲ್ಪ ವಿಭಿನ್ನ ಎನಿಸುತ್ತದೆ.

''ಈ ಕುರಿತಂತೆ ಚೈಲ್ಡ್ ಸೈಕಾಲಜಿಸ್ಟ್ ಡಾ. ವಿನುತಾ ಹೀಗೆ ಹೇಳುತ್ತಾರೆ, ``ಮಗುವೊಂದು 4 ವರ್ಷದ ತನಕ ತನ್ನ ಜೀವಿತಾವಧಿಯ ಶೇ.80ರಷ್ಟನ್ನು ಕಲಿತುಕೊಂಡುಬಿಡುತ್ತದೆ. ಉಳಿದ ಶೇ.20 ರಷ್ಟು ಮುಂದಿನ ದಿನಗಳಲ್ಲಿ ಕಲಿತುಕೊಳ್ಳುತ್ತದೆ. ಮಕ್ಕಳು ಒಂದು ರೀತಿಯಲ್ಲಿ ವಿಜ್ಞಾನಿಗಳ ಹಾಗೆ ಎಂದು ಹೇಳಿದ್ದರಲ್ಲಿ ತಪ್ಪೇನಿಲ್ಲ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಅವರಲ್ಲಿ ಮುಗ್ಧತೆ ಹಾಗೂ ಹೊಸದನ್ನು ಕಲಿಯಬೇಕೆಂಬ ತುಡಿತ ಗಮನಕ್ಕೆ ಬರುತ್ತದೆ. 1 ವರ್ಷಕ್ಕಿಂತ ಕಡಿಮೆ ಇರುವ ಮಗು ಪ್ರತಿಯೊಂದು ವಸ್ತುವನ್ನೂ ಬಾಯಿಗೆ ಹಾಕಿಕೊಳ್ಳುತ್ತದೆ. ಇದರ ಕಾರಣ ಇಷ್ಟೆ, ಆಗ ಮಗುವಿನ ರುಚಿಗ್ರಾಹ್ಯ ಅಂಗಗಳು ವಿಕಸಿತವಾಗುತ್ತಿರುತ್ತವೆ.

''ಮಗುವಿನ ಪೋಷಣೆಯ ಆನಂದ ಮಗು ತನ್ನ ಕಣ್ಣೆದುರೇ ಬೆಳೆಯುತ್ತಿರುವುದನ್ನು ನೋಡುವ ಅನುಭೂತಿ ವಿಭಿನ್ನವಾಗಿರುತ್ತದೆ. ಮೊದಲ ಬಾರಿ ನೀವು ಅದನ್ನು ನಿಮ್ಮ ಮಡಿಲಲ್ಲಿ ತೆಗೆದುಕೊಳ್ಳುತ್ತಿದ್ದರೆ, ಆಗ ನಿಮಗೆ ಇಡೀ ಜೀವನ ನಿಮ್ಮ ಮಡಿಲಲ್ಲಿರುವಂತೆ ಭಾಸವಾಗುತ್ತದೆ. ಹುಟ್ಟಿದಂದಿನಿಂದ ಹಿಡಿದು ದಿನದಿನ ನಿಮ್ಮ ಮಗುವಿನ ವರ್ತನೆಯಲ್ಲಿ ಬದಲಾವಣೆ ಉಂಟಾಗುತ್ತದೆ. ಅದು ಬಹು ವೇಗದಲ್ಲಿ ಎಲ್ಲವನ್ನೂ ಕಲಿತುಕೊಳ್ಳುತ್ತದೆ.

ಮಗುವಿನ ಸಮರ್ಪಕ ಬೆಳಣಿಗೆಗೆ ಅವಶ್ಯಕವಾದುದೆಂದರೆ, ನೀವು ಅದರ ಪೋಷಣೆಯನ್ನು ಜವಾಬ್ದಾರಿಯಂತೆ ನೋಡದೆ, ಒಂದು ಸುಖಾನುಭವದ ರೀತಿಯಲ್ಲಿ ನೋಡುವಿಕೆ. ಮಗು ಅತ್ಯಂತ ಸೂಕ್ಷ್ಮ ಸ್ವಭಾವದ್ದಾಗಿರುತ್ತದೆ.  ಹೀಗಾಗಿ ಅದನ್ನು ಯಾವುದೇ ಕಾರಣಕ್ಕೂ ಗದರಿಸುವ ರೀತಿಯಲ್ಲಿ ಮಾತನಾಡಿಸಬೇಡಿ.

ಮಗುವಿನ ಬೆಳವಣಿಗೆಯಲ್ಲಿ ಸ್ಪರ್ಶ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಹೊರಗಿನಿಂದ ಮನೆಗೆ ಬರುತ್ತಿದ್ದಂತೆ ಅದನ್ನು ತಬ್ಬಿಕೊಳ್ಳಿ. ಮೃದುವಾಗಿ ಚುಂಬಿಸಿ ಅದರ ಬೆನ್ನ ಮೇಲೆ ಕೈಯಾಡಿಸುತ್ತಾ ನೀನು ನನಗೆ ಯಥೇಚ್ಛ ಪ್ರೀತಿ ಕೊಟ್ಟವಳು, ನಿನ್ನ ಪ್ರೀತಿಯ ಧಾರೆ ನನಗೆ ಹೀಗೆಯೇ ದೊರೆಯುತ್ತಿರಲಿ ಎಂದು ಹೇಳಿ. ಆ ಪುಟ್ಟ ಕಂದ ನಿಮ್ಮ ಮಾತಿಗೆ ಪ್ರತಿಕ್ರಿಯೆ ಕೊಡದಿರಬಹುದು. ಆದರೆ ತನ್ನ ಪುಟ್ಟ ಬೆರಳುಗಳಿಂದ ಆಟ ಆಡುತ್ತಾ ನಿಮ್ಮ ಮೈಮನಕ್ಕೆ ಖುಷಿಯನ್ನಂತೂ ಕೊಡುತ್ತದೆ. ತನ್ನದೇ ಆದ ತೊದಲು ಭಾಷೆಯಲ್ಲಿ ಮಗು ಏನನ್ನೋ ಹೇಳುತ್ತಿರುವುದು ನಿಮ್ಮನ್ನು ಖುಷಿಯ ಅಲೆಯಲ್ಲಿ ತೇಲಿಸುತ್ತದೆ. ಮಗುವಿನ ಜೊತೆ ಆಗಾಗ ಮಾತನಾಡುತ್ತಲೇ ಇರಿ. ನೀವೆಷ್ಟು ಮಾತನಾಡುತ್ತೀರೋ, ಮಗು ಅಷ್ಟೇ ಬೇಗನೆ ಮಾತನಾಡಲು ಕಲಿಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ