ಇಂದಿನ ಧಾವಂತದ ಬದುಕಿನಲ್ಲಿ ಜನ ತಮ್ಮ ಶರೀರವನ್ನು ಸರಿಯಾಗಿ ಗಮನಿಸದಿದ್ದರೆ  ಹಲವಾರು ಕಾಯಿಲೆಗಳು ಅವರ ಶರೀರದಲ್ಲಿ ಮನೆ ಮಾಡುತ್ತವೆ. ಸಮಯಕ್ಕೆ ಸರಿಯಾಗಿ ಅದನ್ನು ಗಮನಿಸಿದರೆ ಜೀವನದಲ್ಲಿ ಮುಂದೆ ಬರುವ ತೊಂದರೆಗಳಿಂದ ರಕ್ಷಿಸಿಕೊಳ್ಳಬಹುದು. ರೆಗ್ಯುಲರ್‌ ಮೆಡಿಕಲ್ ಚೆಕಪ್‌ನ್ನು ವಯಸ್ಸಾದವರು ಮಾತ್ರ ಮಾಡಿಸಿಕೊಳ್ಳಬೇಕೆಂದು ಜನ ಯೋಚಿಸುತ್ತಾರೆ. ಆದರೆ ವಾಸ್ತವವೇನೆಂದರೆ 25 ವರ್ಷ ವಯಸ್ಸಾಗುತ್ತಲೇ ನಮ್ಮ ಇಡೀ ಶರೀರದ ಚೆಕಪ್‌ಮಾಡಿಸಿಕೊಳ್ಳಬೇಕು.

ಮೆಡಿಕಲ್ ಟೆಸ್ಟ್ ಮಾಡಿಸುವುದರಿಂದ ನಮಗೆ ಏನು ಲಾಭ ಎಂದು ತಿಳಿಯೋಣ ಬನ್ನಿ.

ಬ್ಲಡ್ಟೆಸ್ಟ್ : ಯಾವುದೇ ರೋಗದ ಚಿಕಿತ್ಸೆಗಿಂತ ಅದು ಬರದಂತೆ ತಡೆಯುವುದು ಉತ್ತಮ. ಅದಕ್ಕಾಗಿ ಬ್ಲಡ್‌ ಟೆಸ್ಟ್ ಮಾಡಿಸುವುದು ಬಹಳ ಅಗತ್ಯ. ಅದು ನಮಗೆ ಬಹಳಷ್ಟು ಕಾಯಿಲೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಹಲವರು ವರ್ಷಕ್ಕೆ 3 ಬಾರಿ ತಮ್ಮ ರುಟೀನ್‌ ಚೆಕಪ್‌ ಮಾಡಿಸಲು ಬಯಸುತ್ತಾರೆ. ಅದರಿಂದ ಅವರಿಗೆ ಮುಂದೆ ಬರಬಹುದಾದ ಕಾಯಿಲೆಯ ಬಗ್ಗೆ ತಿಳಿಯುತ್ತದೆ. ಇಷ್ಟೇ ಅಲ್ಲ, ಒಂದುವೇಳೆ ನೀವು ತಾಯಿ ಆಗುವವರಿದ್ದರೆ ಆಗಲೂ ನೀವು ಬ್ಲಡ್‌ ಟೆಸ್ಟ್ ಮಾಡಿಸುವುದು ಬಹಳ ಅಗತ್ಯ. ಏಕೆಂದರೆ ನಿಮ್ಮ ಹಾಗೂ ಹುಟ್ಟು ಮಗುವಿನ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬಹುದು.

ಹೀಮೋಗ್ರಾಮ್ : ಹೀಮೋಗ್ರಾಮ್ ಅಥವಾ ಕಂಪ್ಲೀಟ್‌ ಬ್ಲಡ್‌ ಕೌಂಟ್‌ ಹಲವಾರು ಕಾಯಿಲೆಗಳ ಪರೀಕ್ಷೆಗೆ ಸಹಾಯ ಮಾಡುತ್ತದೆ. ಉದಾ : ಅನೀಮಿಯಾ, ಸೋಂಕು ಇತ್ಯಾದಿ. ಈ ಟೆಸ್ಟ್ ನ್ನು ದೋಷಗಳನ್ನು ಪರೀಕ್ಷಿಸಲು ಒಂದು ವ್ಯಾಪಕ ಸ್ಕ್ರೀನಿಂಗ್‌ ಟೆಸ್ಟ್ ರೂಪದಲ್ಲಿ ಉಪಯೋಗಿಸಲಾಗುತ್ತದೆ. ವಾಸ್ತವದಲ್ಲಿ ಇದನ್ನು ರಕ್ತದ ವಿಭಿನ್ನ ಭಾಗಗಳನ್ನು ಪರೀಕ್ಷಿಸಲು ಉಪಯೋಗಿಸಲಾಗುತ್ತದೆ.

ಕಿಡ್ನಿ ಫಂಕ್ಷನ್ಟೆಸ್ಟ್ : ಒಂದು ವೇಳೆ ನಮ್ಮ ಎರಡೂ ಕಿಡ್ನಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅವು ನಮ್ಮ ರಕ್ತದಲ್ಲಿನ ಕಶ್ಮಲಗಳನ್ನು ದೂರಗೊಳಿಸುತ್ತದೆ. ಒಂದುವೇಳೆ ಅವು ಕಾರ್ಯ ನಿರ್ವಹಿಸದಿದ್ದರೆ ನಮ್ಮ ಶರೀರಕ್ಕೆ ಹಲವಾರು ತೊಂದರೆಗಳಾಗುತ್ತವೆ. ಕಿಡ್ನಿ ಫಂಕ್ಷನ್‌ ಟೆಸ್ಟ್ ನಿಂದ ಅವುಗಳ ಕಾರ್ಯಕ್ಷಮತೆಯ ಬಗ್ಗೆ ತಿಳಿಯುತ್ತದೆ.

ಲಿವರ್ಫಂಕ್ಷನ್ಟೆಸ್ಟ್ : ಲಿವರ್‌ ಫಂಕ್ಷನ್‌ ಟೆಸ್ಟ್ ಒಂದು ರೀತಿಯ ಬ್ಲಡ್‌ ಟೆಸ್ಟ್ ಆಗಿದೆ. ಅದರಿಂದ ಲಿವರ್‌ನಲ್ಲಿ ಉಂಟಾಗುವ ಎಲ್ಲಾ ತೊಂದರೆಗಳನ್ನೂ ಪತ್ತೆ ಹಚ್ಚಬಹುದು.

ಬ್ಲಡ್ಕೌಂಟ್‌ : ಈ ಟೆಸ್ಟ್ ಮೂಲಕ ನಮ್ಮ ಶರೀರದ ವೈಟ್‌ ಬ್ಲಡ್‌ ಸೆಲ್ಸ್ ಮತ್ತು ರೆಡ್‌ ಬ್ಲಡ್‌ ಸೆಲ್ಸ್ ಕೌಂಟ್‌ ತಿಳಿಯಬಹುದು.

ಬ್ಲಡ್ಶುಗರ್ಟೆಸ್ಟ್ : ಮಧುಮೇಹದ ರೋಗಿಗಳಿಗೆ ಈ ಟೆಸ್ಟ್ ಬಹಳ ಅಗತ್ಯ. ಬಲಹೀನತೆ, ಕಾಲುಗಳಲ್ಲಿ ನೋವು, ತೂಕ ಕಡಿಮೆಯಾಗುವುದು, ಮೂಳೆಗಳು ದುರ್ಬಲವಾಗುವುದು ಇತ್ಯಾದಿ ಲಕ್ಷಣಗಳು ಈ ರೋಗಿಗಳಲ್ಲಿ ಸಾಮಾನ್ಯ. ಮಧುಮೇಹ  ರೋಗಿಗಳಿಗೆ ಗಾಯವಾದರೆ ಬೇಗನೆ ವಾಸಿ ಆಗುವುದಿಲ್ಲ. ಆದ್ದರಿಂದ ರಕ್ತ ಪರೀಕ್ಷೆ ಮಾಡಿಸಿಕೊಂಡು ರೋಗಿಗಳು ತಮ್ಮ ಆಹಾರದಲ್ಲಿ ಪಥ್ಯ ಮಾಡಿಕೊಳ್ಳಬಹುದು.

ಚೆಸ್ಟ್ ಎಕ್ಸ್ರೇ : ಚೆಸ್ಟ್ ಎಕ್ಸ್-ರೇ ಮಾಡಿಸುವುದರಿಂದ ಶ್ವಾಸಕೋಶಗಳಲ್ಲಿನ ತೊಂದರೆಗಳು, ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿ ಎದೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಮಾಡಬಹುದು.

ಟೋಟಲ್ ಲಿಪಿಡ್ಪ್ರೊಫೈಲ್ ‌: ಟೋಟಲ್ ಲಿಪಿಡ್‌ ಪ್ರೊಫೈಲ್ ಕೂಡ ಒಂದು ರೀತಿಯ ಬ್ಲಡ್‌ ಟೆಸ್ಟ್ ಆಗಿದೆ. ಅದರ ಮೂಲಕ ಹಲವಾರು ಕಾಯಿಲೆಗಳನ್ನು ಪತ್ತೆ ಮಾಡಬಹುದು. ಉದಾ : ಕೊಲೆಸ್ಟ್ರಾಲ್, ಜೆನೆಟಿಕ್‌ ಡಿಸ್‌ಆರ್ಡರ್‌, ಕಾರ್ಡಿಯೋ ವ್ಯಾಸ್ಕುಲಾರ್ ಡಿಸೀಸ್‌, ಪ್ಯಾನ್‌ ಕ್ರಿಯೈಟಿಸ್‌ ಇತ್ಯಾದಿ.

ಯೂರಿನ್ಮತ್ತು ಸ್ಟೂಲ್ ರುಟೀನ್ಎಗ್ಸಾಮಿನೇಶನ್‌ : ಯೂರಿನ್‌ ಸ್ಟೂಲ್ ‌ರುಟೀನ್‌ ಎಗ್ಸಾಮಿನೇಶನ್‌ನಿಂದ ಮಧುಮೇಹದಂತಹ ರೋಗಗಳನ್ನು ಪತ್ತೆಹಚ್ಚಬಹುದು.

.ಸಿ.ಜಿ. : ಇ.ಸಿ.ಜಿ. ಮೂಲಕ ನಮಗೆ ಹೃದಯದ ಹಲವಾರು ಕಾಯಿಲೆಗಳ ಬಗ್ಗೆ ತಿಳಿಯುತ್ತದೆ.

ಎಲ್ಲ ಟೆಸ್ಟ್ ಗಳನ್ನೂ ಮಾಡಿಸುವ ಮೊದಲು ಒಮ್ಮೆ ವೈದ್ಯರ ಸಲಹೆಯನ್ನು ಅಗತ್ಯವಾಗಿ ಕೇಳಿ. ಅವರು ಹೇಳಿದರೆ ಹೊಟ್ಟೆಯ ಅಲ್ಟ್ರಾಸೌಂಡ್‌ ಮತ್ತು ಥೈರಾಯಿಡ್‌ ಪ್ರೊಫೈಲ್ ಟೆಸ್ಟ್ ಕೂಡ ಅಗತ್ಯವಾಗಿ ಮಾಡಿಸಿ. ಒಂದುವೇಳೆ ಬ್ಲಡ್‌ ಪ್ರೆಶರ್‌ ಕಡಿಮೆ ಇದ್ದು, ಹಸಿವಾಗದಿದ್ದರೆ ಮತ್ತು ಹೊಟ್ಟೆಯಲ್ಲಿ ನೋವಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ರೋಗಿಗೆ ಎಷ್ಟೇ ವಯಸ್ಸಾಗಿರಲಿ, ಒಮ್ಮೆ ಈ ಎಲ್ಲ ಟೆಸ್ಟ್ ಮಾಡಿಸಿದ ನಂತರ 5 ವರ್ಷಕ್ಕೆ ಒಮ್ಮೆ ಇವೆಲ್ಲ ಟೆಸ್ಟ್ ಗಳನ್ನು ಮತ್ತೊಮ್ಮೆ ಮಾಡಿಸಬೇಕು.

ಕಾಯಿಲೆ ಅಥವಾ ಕಾಯಿಲೆಗೆ ಸಂಬಂಧಿಸಿದ ಯಾವುದೇ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಸ್ವತಃ ನೀವೇ ಡಾಕ್ಟರ್‌ ಆಗಲು ಪ್ರಯತ್ನಿಸಬೇಡಿ.

ಮುಂದೆ 40 ವರ್ಷ ವಯಸ್ಸಾದ ಮೇಲೆ ಈ ಎಲ್ಲ ಟೆಸ್ಟ್ ಗಳನ್ನೂ ಪ್ರತಿ 2 ವರ್ಷಕ್ಕೊಮ್ಮೆ ಮಾಡಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿ ಶರೀರ ಕೊಂಚ ಬಲಹೀನವಾಗುತ್ತದೆ. ಕಾಯಿಲೆಗಳು ಹೆಚ್ಚಾಗುತ್ತವೆ. ಜೊತೆಗೆ ವಯಸ್ಸು ಹೆಚ್ಚಾದಂತೆಲ್ಲ ನಮ್ಮ ಮೂಳೆಗಳು ಬಲಹೀನವಾಗುತ್ತವೆ.  ಹೀಗಾಗಿ ಮಹಿಳೆಯರು ಬೋನ್‌ ಡೆನ್ಸಿಟಿ ಚೆಕಪ್‌ ಮಾಡಿಸಬೇಕು. ಈ ವಯಸ್ಸಿನಲ್ಲಿ ನಿಮ್ಮ ಎಲ್ಲ ರೆಗ್ಯುಲರ್‌ ಟೆಸ್ಟ್ ಗಳ ಜೊತೆ ಜೊತೆಗೆ ಟ್ರೆಡ್‌ ಮಿಲ್ ‌ಟೆಸ್ಟ್  (ಟಿ.ಎಂ.ಟಿ) ಮತ್ತು ಇಕೋ ಕಾರ್ಡಿಯೋಗ್ರಫಿ (ಇಕೊ) ಮಾಡಿಸುವುದು ಅಗತ್ಯ. ಏಕೆಂದರೆ ಈ ವಯಸ್ಸಿನಲ್ಲಿ ನಮ್ಮ ಮೂಳೆಗಳ ಜೊತೆ ಜೊತೆಗೆ ನಮ್ಮ ಹೃದಯ ಬಲಹೀನವಾಗತೊಡಗುತ್ತದೆ.

ಮಹಿಳೆಯರಿಗೆ 40 ರಿಂದ 45 ವರ್ಷದಲ್ಲಿ ತಮ್ಮ ಹಾರ್ಮೋನ್‌ ಟೆಸ್ಟ್ ಕೂಡ ಮಾಡಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರಿಗೆ ಮೆನೋಪಾಸ್‌ ಬರುತ್ತದೆ. ಅದರೊಂದಿಗೆ ಶರೀರದ ಹಾರ್ಮೋನುಗಳಲ್ಲಿಯೂ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಹೀಗೆಯೇ 50 ವರ್ಷವಾದಾಗ ಈ ಎಲ್ಲ ಟೆಸ್ಟ್ ಗಳನ್ನು ಪ್ರತಿ ವರ್ಷ ಮಾಡಿಸಬೇಕು. ಈ ಟೆಸ್ಟ್ ಗಳ ಜೊತೆಗೆ ಪುರುಷರು ಈ ವಯಸ್ಸಿನಲ್ಲಿ ಪ್ರೋಸ್ಟೇಟ್‌ ಟೆಸ್ಟ್ ಮಾಡಿಸಬೇಕು.

ನಿಮ್ಮ ರುಟೀನ್‌ ಚೆಕಪ್‌ ಮಾಡಿಸಿಕೊಳ್ಳುವುದರಿಂದ ಮುಂಬರುವ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರಬಹುದು.

–  ಡಾ. ಅನುರಾಧಾ

Tags:
COMMENT