ಪ್ರಸವದ ನಂತರ ಪ್ರತಿ ಹೆಂಗಸಿನಲ್ಲಾಗುವ ದೈಹಿಕ ಬದಲಾವಣೆಗಳು ಸಹಜ, ಸಾಮಾನ್ಯವಾದುದು. ಇದರಿಂದ ಚಿಂತೆಗೆ ಒಳಗಾಗುವ ಬದಲು ಏಸ್ಥೆಟಿಕ್ ಸೆಂಟರ್ ಅನುಕೂಲಗಳುಳ್ಳ ಆಸ್ಪೆತ್ರೆಗೆ ಹೋಗಿ `ಮಮ್ಮಿ ಮೇಕ್ ಓವರ್' ಚಿಕಿತ್ಸೆಗೆ ಒಳಪಡುವುದು ಲೇಸು. ಇದರಲ್ಲಿ ಅನೇಕ ಹಂತಗಳಿದ್ದು, ಅದು ನಿಮ್ಮ ದೇಹವನ್ನು ಪ್ರವಸ ಪೂರ್ವದಂತೆಯೇ ಮಾರ್ಪಡಿಸುತ್ತದೆ. ಇದರಿಂದ ನಿಮ್ಮ ಆರೋಗ್ಯ, ಸೌಂದರ್ಯ ಇಮ್ಮಡಿಸುತ್ತದೆ!
ಪ್ರತಿ ತಾಯಿಯ ಕಥೆ : ಮಗುವಿನ ಪಾಲನೆಯಿಂದ ತಾಯ್ತನದ ಸುಖ ಅನುಪಮ. ಪ್ರತಿ ಹೆಣ್ಣು ಹೀಗೆ ತಾಯಿ ಆಗಬಯಸಿ ತನ್ನ ಮಕ್ಕಳ ಜವಾಬ್ದಾರಿ ವಹಿಸುತ್ತಾಳೆ. ಆದರೆ ಬಾಣಂತಿ ಕೆಲವು ತಿಂಗಳ ಬಳಿಕ ತನ್ನನ್ನು ತಾನು ಗಮನಿಸಿಕೊಂಡಾಗ, ಅವಳಿಗೆ ತನ್ನ ಗುರುತೇ ಸಿಗುವುದಿಲ್ಲ! ಪ್ರಸವಕ್ಕೆ ಮುನ್ನ ಅವಳು ಖಂಡಿತಾ ಹೀಗಿರಲಿಲ್ಲ. ಗರ್ಭಾವಸ್ಥೆ, ತಾಯ್ತನ ಅವಳಲ್ಲಿ ಅನೇಕ ದೈಹಿಕ ಬದಲಾವಣೆಗಳನ್ನು ತಂದಿವೆ. ಇದನ್ನು ಸರಿಪಡಿಸಿ ಹಿಂದಿನ ಆ ಬಳುಕು ಬಳ್ಳಿ ದೇಹ ಪಡೆಯಲು ಸಾಧ್ಯವೇ? ಖಂಡಿತಾ ಸಾಧ್ಯ!
ಮಮ್ಮಿ ಮೇಕ್ ಓವರ್ : ಪ್ರಸವದ ನಂತರ ವಕ್ರವಕ್ರವಾಗಿರುವ ಹೆಣ್ಣಿನ ದೇಹವನ್ನು ಮತ್ತೆ ಪ್ರಸವ ಪೂರ್ವದಂತೆ ಶಿಲ್ಪಿ ಕಡೆದ ದೇಹವಾಗಿಸಲು, ಇದು ಪರ್ಸನೈಸ್ಡ್ ಕಾಸ್ಮೆಟಿಕ್ ಪ್ರೊಸೀಜರ್ ಗಳ ವಿಧಾನವಾಗಿದ್ದು, ಸುಂದರ ದೇಹ ರಚನೆ ಬಯಸುವ ಪ್ರತಿ ತಾಯಿಗೂ ಇದು ಅನಿವಾರ್ಯ. ಇದು ತಾಯ್ತನವನ್ನು ಅನುಭವಿಸಿಯೂ, ನಿಮ್ಮ ದೇಹ ರೀಶೇಪ್ ಪಡೆಯಲು ನೆರವಾಗುವ ಆಧುನಿಕ ಚಿಕಿತ್ಸೆ.
ವಿವಿಧ ಹಂತಗಳು : ಇದರಲ್ಲಿ ನಿಮಗೆ ಕಾಸ್ಮೆಟಿಕ್ ಸರ್ಜರಿ, ನಾನ್ ಸರ್ಜಿಕಲ್ ಚಿಕಿತ್ಸೆ ಅಥವಾ ಎರಡರ ಕಾಂಬಿನೇಶ್ ಇರಬಹುದು. ಬ್ರೆಸ್ಟ್ ಆಗ್ಮೆಂಟೇಶನ್, ಬ್ರೆಸ್ಟ್ ಲಿಫ್ಟ್, ಟಮ್ಮಿ ಟಕ್, ಲೈಪೋಸಕ್ಷನ್, ಸರ್ಜಿಕಲ್ ಜೆನಿಟಲ್ ರಿಜುವಿನೇಶನ್...... ಇತ್ಯಾದಿ ಕಾಮನ್ ಸರ್ಜಿಕಲ್ ಪ್ರೊಸೀಜರ್ ಗಳನ್ನು ಇದು ಒಳಗೊಂಡಿದೆ.
ನಾನ್ ಸರ್ಜಿಕಲ್ ಚಿಕಿತ್ಸೆಗಳಲ್ಲಿ ಫ್ಯಾಟ್ ಸೆಲ್ಯುಲೈಟ್ ರಿಡಕ್ಷನ್, ಚರ್ಮದ ಟೈಟ್ ನಿಂಗ್ ಅಥಾ ರೀಸರ್ಫೇಸಿಂಗ್, ನಾನ್ ಸರ್ಜಿಕಲ್ ಜೆನಿಟಲ್ ರಿಜುವಿನೇಶನ್, ಇಂಜೆಕ್ಟಿಂಗ್ ಬೊಟಾಕ್ಸ್ ಅಥವಾ ಫಿಲ್ಲರ್ಸ್ ನಿಮ್ಮ ಫೇಶಿಯಲ್ ರಿಜುವಿನೇಶನ್ ಗೆ ಪೂರಕ.
ಟಮ್ಮಿ ಟಕ್ : ಇದು ಅಬ್ಡಾಮಿನೋಪ್ಲಾಸ್ಟಿ ಎಂಬ ಹೆಸರಲ್ಲೂ ಕರೆಯಲ್ಪಡುತ್ತದೆ. ಗರ್ಭಾವಸ್ಥೆ ಕಾರಣ ದೇಹ ತೂಕ ಗಳಿಸುತ್ತದೆ, ಇದರಿಂದ ಹೊಟ್ಟೆಯ ಗಾತ್ರ ಹಿಗ್ಗುತ್ತದೆ, ಅದರ ಸುತ್ತಲಿನ ಚರ್ಮ ಜೋತುಬಿದ್ದು ಸಡಿಲಗೊಳ್ಳುತ್ತದೆ. ಹಿಂದೆ ಇದ್ದ ವಿಯಲ್ ಸ್ಟೈನ್‌ಮಾಯವಾಗುತ್ತದೆ. ಟಮ್ಮಿ ಟಕ್ ಈ ಅಧಿಕ ಕೊಬ್ಬನ್ನು ತೆಗೆದು, ನಿಮ್ಮ ಸೊಂಟದ ಸುತ್ತಲ ಚರ್ಮವನ್ನು ಟೈಟ್ ಗೊಳಿಸುತ್ತದೆ. ಲೈಪೊಸಕ್ಷನ್ ಮೂಲಕ ಒಳಗಿನ ಹೆಚ್ಚುವರಿ ಕೊಬ್ಬನ್ನು ತೊಲಗಿಸಲಾಗುತ್ತದೆ. ಇದರಿಂದ ನಿಮ್ಮ ಸೊಂಟ ಫ್ಲಾಟ್‌ಟೋನ್ಡ್ ಆಗಿ, ನಿಮ್ಮ ಹಿಂದಿನ ಚೆಲುವು ಮರಳುತ್ತದೆ.
ಬ್ರೆಸ್ಟ್ ಆಗ್ಮೆಂಟೇಶನ್ : ಗರ್ಭಾವಸ್ಥೆ ಮತ್ತು ಸ್ತನ್ಯಪಾನ ಹೆಣ್ಣಿನ ಸ್ತನಗಳ ಗಾತ್ರವನ್ನು ಬದಲಾಯಿಸುತ್ತದೆ. ನಿಪ್ಪಲ್ ಹಿಂದಿಗಿಂತ ದೊಡ್ಡದಾಗಿ, ಸ್ತನ ಕೆಳಭಾಗಕ್ಕೆ ಜಗ್ಗುತ್ತದೆ. ಇದನ್ನು ಹಿಂದಿನಂತೆ ಮಾಡಲು, ಬ್ರೆಸ್ಟ್ ಕಾಸ್ಮೆಟಿಕ್ ಪ್ರೊಸೀಜರ್ ಅನುಸರಿಸುತ್ತಾರೆ. ಅಂದ್ರೆ ಬ್ರೆಸ್ಟ್ ರಿಡಕ್ಷನ್, ಬ್ರೆಸ್ಟ್ ಲಿಫ್ಟ್, ಇಂಪ್ಲಾಂಟ್ಸ್ ಬಳಸಿ ಆಗ್ಮೆಂಟೇಶನ್ ಪ್ರಕ್ರಿಯೆ ಮಾಡುತ್ತಾರೆ.