ಹವಾಮಾನಕ್ಕೂ ಮುಟ್ಟಿಗೂ ಏನು ಸಂಬಂಧ ಎಂದು ನಿಮಗನ್ನಿಸಿದರೆ, ಈ ಮಾಹಿತಿ ನಿಮಗೆ ಉಪಯುಕ್ತವಾಗುತ್ತದೆ.

ನಮ್ಮೆಲ್ಲರ ಮನಸ್ಸಿನಲ್ಲಿ ಮುಟ್ಟಿಗೆ ಸಂಬಂಧಪಟ್ಟಂತೆ ಹತ್ತು ಹಲವು ಪ್ರಶ್ನೆಗಳಿರುತ್ತವೆ. ಅದು ನಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ದುಷ್ಪರಿಮಾಮಗಳೇನಾದರೂ ಆಗಬಹುದಾ? ಮುಟ್ಟಿನಲ್ಲಿ ಅಡೆತಡೆ ಉಂಟಾದರೆ ಏನು ಮಾಡಬೇಕು? ಇವೇ ಆ ಪ್ರಶ್ನೆಗಳು.

ಹವಾಮಾನ ನಿಮ್ಮ ಮುಟ್ಟಿನ ಮೇಲೆ ಏನಾದರೂ ಅಡೆತಡೆ ತರಬಹುದೇ? ಎಂಬ ಪ್ರಶ್ನೆಗೆ ಉತ್ತರ `ಹೌದು' ಎಂದು ಹೇಳಲೇಬೇಕು. ಚಳಿಗಾಲದಲ್ಲಿ ಪೀರಿಯಡ್ಸ್ ಹಾಗೂ ಪ್ರಿಮೆನುಸ್ಟ್ರುವಲ್ ಒತ್ತಡ ಹೆಚ್ಚಬಹುದು. ಚಳಿಗಾಲ ಬಹಳಷ್ಟು ಜನರಿಗೆ ಪೀರಿಯಡ್ಸ್ ಸಂದರ್ಭದಲ್ಲಿ ಸಾಕಷ್ಟು ದುಷ್ಪರಿಣಾಮಗಳನ್ನು ಉಂಟು ಮಾಡಬಹುದು. ಚಳಿಗಾಲದಲ್ಲಿ ಅಧಿಕ ಚಳಿಯ ಕಾರಣದಿಂದ ಮಹಿಳೆಯರು ಬಹುಬೇಗ ಅನಾರೋಗ್ಯ ಪೀಡಿತರಾಗಬಹುದು. ಇನ್ನು ಕೆಲವು ಮಹಿಳೆಯರಿಗೆ ಹವಾಮಾನದ ಏರುಪೇರಿನ ಕಾರಣ ಮಹಿಳೆಯರ ಮೂಡ್‌ ನಲ್ಲಿ ಕೂಡ ಸಾಕಷ್ಟು ಏರಿಳಿತ ಕಂಡುಬರುತ್ತದೆ. ಚಳಿಗಾಲ ಮುಟ್ಟಿನ ಸೈಕಲ್ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತದೆ ಎಂದು ಮಹಿಳೆಯರು ಅಂದುಕೊಳ್ಳುತ್ತಾರೆ. ಅದೇ ಕಾರಣದಿಂದ ಮಹಿಳೆಯರು ಚಳಿಗಾಲದಲ್ಲಿ ಮುಟ್ಟಿಗೆ ಸಂಬಂಧಪಟ್ಟಂತೆ ಅನೇಕ ಸಮಸ್ಯೆಗಳನ್ನು ಹೊತ್ತು ವೈದ್ಯರ ಬಳಿ ಹೋಗುತ್ತಾರೆ. ಹೀಗಾಗಿ ಬದಲಾಗುತ್ತಿರುವ ಹವಾಮಾನದ ಸಂದರ್ಭದಲ್ಲಿ ಕೆಲವು ಸಂಗತಿಗಳ ಬಗ್ಗೆ ಗಮನಕೊಡುವುದು ಅಗತ್ಯ.

ಚಳಿಗಾಲದಲ್ಲಿ ಮುಟ್ಟಿನಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಹಾಗೂ ಅದರಿಂದ ಹೇಗೆ ಹೊರಬರಬೇಕೆಂದು ಈ ಮಾಹಿತಿ ನಿಮಗೆ ನೆರವಾಗಬಹುದು.

ಪೀರಿಯಡ್ಸೈಕಲ್ ಅವಧಿ : ಚಳಿಗಾಲ ಮುಟ್ಟಿನ ಅವಧಿಯ ಮೇಲೂ ಪ್ರಭಾವ ಬೀರುತ್ತದೆ. ಹಾರ್ಮೋನು ಸ್ರಾವದಲ್ಲಿ ಹೆಚ್ಚಳ, ಮುಟ್ಟಿನ ದಿನಗಳ ಅವಧಿ ಕಡಿಮೆಯಾಗುವುದು, ಓವ್ಯೂಲೇಶನ್‌ ನ ಹೆಚ್ಚುತ್ತಿರುವ ಫ್ರೀಕ್ವೆನ್ಸಿ ಇವೆಲ್ಲ ಕಂಡುಬರುತ್ತವೆ. ಒಂದು ಸಂಶೋಧನೆಯ ಪ್ರಕಾರ, ಬೇಸಿಗೆಯಲ್ಲಿ ಅಂಡಾಶಯ ಹೆಚ್ಚು ಸಕ್ರಿಯವಾಗಿರುತ್ತದೆ. ಚಳಿಗಾಲದಲ್ಲಿ ಓವ್ಯೂಲೇಶನ್‌ ನ ಮಟ್ಟ 97% ದಿಂದ ಕುಗ್ಗಿ 71% ಆಗುತ್ತದೆ. ದೀರ್ಘಾವಧಿ ಪೀರಿಯಡಸ್ ಸೈಕಲ್ ಹಾಗೂ ಕುಗ್ಗಿದ ಓವ್ಯೂಲೇಶನ್‌ ನ ಕಾರಣದಿಂದ ಪೀರಿಯಡ್ಸ್ ನ ಅನುಭವ ಅತ್ಯಂತ ನೋವಿನಿಂದ ಕೂಡಿರುತ್ತದೆ.

ಬಿಸಿಲು : ಸೂರ್ಯನ ಕಿರಣಳಲ್ಲಿ ವಿಟಮಿನ್‌ `ಡಿ' ಹಾಗೂ ಡೊಪಾಮೈನ್‌ ತಯಾರಾಗಲು ನೆರಾವಾಗುತ್ತವೆ. ಇದರ ಹೊರತಾಗಿ ಮುಟ್ಟಿನ ಅವಧಿಯಲ್ಲಿ ನಾವು ಮೂಡ್‌ ಸ್ವಿಂಗ್ಸ್ ನ ಅನುಭವ ಮಾಡಿಕೊಳ್ಳುತ್ತೇವೆ. ಅದು ಇನ್ನೂ ಸ್ವಲ್ಪ ಹೆಚ್ಚಳವಾಗುತ್ತದೆ. ಅದರಿಂದ ಪಾರಾಗುವುದು ಕಷ್ಟಕರ ಎನಿಸುತ್ತದೆ. ಬಿಸಿಲು ಪ್ಲೆಝರ್‌, ಮೋಟಿವೇಶನ್‌ ಹೆಚ್ಚಿಸುತ್ತದೆ. ಅದೇ ರೀತಿ ಬಿಸಿಲು ನಮ್ಮಲ್ಲಿ ಸ್ಟಿಮ್ಯುಲೇಶನ್‌ ಹಾರ್ಮೋನ್‌ (ಎಫ್‌.ಎಚ್‌.ಎಸ್‌) ಸ್ರಾವವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನು ದೇಹವನ್ನು ಸಾಧಾರಣ ಸ್ಥಿತಿಗೆ ತರುತ್ತದೆ. ಬೇಸಿಗೆಗೆ ಹೋಲಿಸಿದರೆ ಮಹಿಳೆಯರಿಗೆ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಓವ್ಯೂಲೇಶನ್‌ ಪ್ರಕ್ರಿಯೆ ಜರುಗುತ್ತದೆ. ಇದರಿಂದ ಅವರ ಪೀರಿಯಡ್ಸ್ ಹೆಚ್ಚಿನ ದಿನಗಳ ತನಕ ಇರುತ್ತದೆ.

ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್ : ಮುಟ್ಟಿನ ಆರಂಭಕ್ಕೂ ಮುನ್ನ ದೇಹದಲ್ಲಿ ಕಂಡುಬರುವ ಬದಲಾವಣೆ ಅಥವಾ ಲಕ್ಷಣಗಳು ಪ್ರಿಮೆನ್‌ಸ್ಟ್ರುವಲ್ ‌ಸಿಂಡ್ರೋಮ್ ಎನ್ನುತ್ತಾರೆ. ಈ ಅವಧಿಯಲ್ಲಿ ಮಹಿಳೆಯರಲ್ಲಿ ಸಿಡಿಮಿಡಿತನ, ಊತ, ಚಿಂತೆ, ಖಿನ್ನತೆಯಂತಹ ಲಕ್ಷಣಗಳು ಕಂಡುಬರುತ್ತವೆ. ಚಳಿಗಾಲದಲ್ಲಿ ಮಹಿಳೆಯರು ವಿಶೇಷವಾಗಿ ಮನೆಯಲ್ಲಿಯೇ ಇರುತ್ತಾರೆ. ಇದರಿಂದಾಗಿ ಅವರು ತಮ್ಮನ್ನು ತಾವು ಹೆಚ್ಚು ತಟಸ್ಥ ಎಂದು ಭಾವಿಸುತ್ತಾರೆ. ಬಿಸಿಲಿನ ಕೊರತೆ ಅಂದರೆ, ವಿಟಮಿನ್‌ `ಡಿ' ಹಾಗೂ ಕ್ಯಾಲ್ಶಿಯಂನ ಕೊರತೆಯ ಕಾರಣದಿಂದ ಪಿಎಂಎಸ್‌ ಮತ್ತಷ್ಟು ಹೆಚ್ಚುತ್ತದೆ. ಉನ್ನತಮಟ್ಟದ ಕ್ಯಾಲ್ಶಿಯಂಯುಕ್ತ ಪದಾರ್ಥಗಳ ಸೇವನೆ ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದರ ಮೂಲಕ ಪಿಎಂಎಸ್‌ ಲಕ್ಷಣಗಳಿಂದ ಹೊರಬರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ