ಯಾವ ಸ್ಥಳದಲ್ಲಿ ನಾವು ಕುಟುಂಬದವರಿಗೆ ಪೌಷ್ಟಿಕ ಆಹಾರವನ್ನು ಬಡಿಸುತ್ತೇವೋ, ಅಲ್ಲಿ ರೋಗಾಣುಗಳು ಇದ್ದರೆ ನಮ್ಮವರು ಆರೋಗ್ಯದಿಂದಿರಲು ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ವಿಶೇಷ ಸ್ವಚ್ಛತೆಯ ಅಗತ್ಯ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಬ್ಯಾಕ್ಟೀರಿಯಾಗಳು ಎಲ್ಲೆಲ್ಲಿ ಅಡಗಿ ಕುಳಿತಿರುತ್ತವೆ ಆ ಸ್ಥಳವನ್ನು ಕಂಡುಹಿಡಿಯುವ ಅಗತ್ಯ ಇರುತ್ತದೆ. ರೋಗಾಣು ಹಾಗೂ ಬ್ಯಾಕ್ಟೀರಿಯಾಗಳ ಹಾಟ್‌ ಸ್ಪಾಟ್‌ ಮತ್ತು ಸ್ವಚ್ಛಗೊಳಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳಿ :

ಬ್ಯಾಕ್ಟೀರಿಯಾದ ಮೂಲ ಕಿಚನ್‌ ಟವೆಲ್

images (1)

‌ಪ್ರತಿಯೊಂದು ಮನೆಯಲ್ಲಿ ಅಡುಗೆಮನೆಯ ಸ್ಲ್ಯಾಬ್‌ನ್ನು ಸ್ವಚ್ಛಗೊಳಿಸುವ ಟವೆಲ್ಸ್ ಇದ್ದೇ ಇರುತ್ತವೆ. ಎಷ್ಟೋ ಸಲ ನಾವು ಸ್ಲ್ಯಾಬ್ ಸ್ವಚ್ಛಗೊಳಿಸುತ್ತೇವೆ. ಒಮ್ಮೊಮ್ಮೆ ಆತುರಾತುರದಲ್ಲಿ ಪಾತ್ರೆಗಳನ್ನು ಕೂಡ ಸ್ವಚ್ಛಗೊಳಿಸುತ್ತೇವೆ. ನೀವು ಹೀಗೆಯೇ ಮಾಡುವವರಾಗಿದ್ದರೆ ಸ್ವಲ್ಪ ಜಾಗೃತರಾಗಿರಿ. ಏಕೆಂದರೆ ಅಡುಗೆಮನೆಯ ಟವೆಲ್ ‌ಒದ್ದೆಯಾಗಿರುವ ಕಾರಣದಿಂದ ಅದರಲ್ಲಿ ಕ್ಯಾಲಿಫಾರ್ಮ ಬ್ಯಾಕ್ಟೀರಿಯಾಗಳು ಉದ್ಭವಿಸುತ್ತವೆ. ಅವು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಅಡುಗೆಮನೆಯ ಟವೆಲ್‌ನ್ನು ಬಳಸಿದ ಬಳಿಕ ಡಿಶ್‌ ವಾಶ್‌ ಜೆಲ್ ‌ಮಿಶ್ರಿತ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ, ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. ಕೈಯಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಬಟ್ಟೆಗಳನ್ನು ಕೂಡ ಅದೇ ರೀತಿಯಲ್ಲಿ ಸ್ವಚ್ಛಗೊಳಿಸಿ, ಕೊರೋನಾ ಕಾಲದಲ್ಲಂತೂ ಪ್ರತಿದಿನ ಈ ನಿಯಮ ಅನುಸರಿಸಿ.

ಮೈಕ್ರೋವೇವ್ ‌ಪ್ಲೇಟ್‌ನಲ್ಲಿ ರೋಗಾಣುಗಳು

kisspng-german-cockroach-american-cockroach-insect-blattel-roach-5ab6cd5a7f0149.9048826315219295625202 (1)

ಮಾಡರ್ನ್‌ ಕಿಚನ್‌ನ ಇಂದಿನ ದಿನಗಳಲ್ಲಿ ಪ್ರತಿಯೊಂದು ಅಡುಗೆಮನೆಯಲ್ಲಿ ಮೈಕ್ರೋವೇವ್ ‌ಇದ್ದೇ ಇರುತ್ತದೆ. ಇಂತಹದರಲ್ಲಿ ನಾವು ಚಿಕ್ಕಪುಟ್ಟ ಸಂಗತಿಗಳಿಗಾಗಿ ಸ್ಟವ್‌ನ್ನು ಅವಲಂಬಿಸದೆ ಮೈಕ್ರೋವೇವ್‌ನ್ನೇ ಅವಲಂಬಿಸಿದ್ದೇವೆ. ಉದಾಹರಣೆಗಾಗಿ ಅಡುಗೆ ಬಿಸಿ ಮಾಡುವುದು ಇತರೆ ಚಿಕ್ಕಪುಟ್ಟ ಡಿಶ್‌ಗಳನ್ನು ತಯಾರಿಸಲು ಅದನ್ನು ಬಳಸುತ್ತೇವೆ. ಒಂದು ವೇಳೆ ನೀವು ಅದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸದೆ ಇದ್ದರೆ ನೀವು ಅನಾರೋಗ್ಯ ಪೀಡಿತರಾಗಬಹುದು.

ಸಂಶೋಧನೆಗಳಿಂದ ಸಾಬೀತಾದ ಸಂಗತಿಯೆಂದರೆ, ಮೈಕ್ರೋವೇವ್ ‌ಪ್ಲೇಟ್‌ನಲ್ಲಿ 100 ಪಟ್ಟು ರೋಗಾಣುಗಳು ಇರುತ್ತವೆ. ಮೈಕ್ರೋವೇವ್‌ ಬಿಸಿ ಮಾಡಿದಾಗ ಬ್ಯಾಕ್ಟೀರಿಯಾಗಳು ಕೂಡ ಸತ್ತು ಹೋಗುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವ ಸಂಗತಿ ಹೀಗಿಲ್ಲ. ಕೆಲವು ಬ್ಯಾಕ್ಟೀರಿಯಾಗಳು ಸತ್ತು ಹೋದರೆ, ಇನ್ನು ಕೆಲವು ಬ್ಯಾಕ್ಟೀರಿಯಾಗಳು ಮತ್ತಷ್ಟು ಬಲಿಷ್ಠವಾಗುತ್ತವೆ. ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ.

ಮೈಕ್ರೋವೇವ್ ‌ಬಳಸುವ ಮುನ್ನ ಹಾಗೂ ಉಪಯೋಗಿಸಿದ ಬಳಿಕ ಅದರ ಪ್ಲೇಟ್‌ನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ವಾರದಲ್ಲಿ ಒಂದು ದಿನ ಮೈಲ್ಡ್ ಕ್ಲೀನರ್‌ನಿಂದ ಮೈಕ್ರೋವೇವ್‌ನ್ನು ಸ್ವಚ್ಛಗೊಳಿಸಿ ಮತ್ತು ಶುಷ್ಕಗೊಳ್ಳಲು ಬಿಡಿ. ಬ್ಯಾಕ್ಟೀರಿಯಾವನ್ನು ಸಾಯಿಸಲು ನೀವು ಮೈಕ್ರೋವೇವ್‌ನಲ್ಲಿ ನಿಂಬೆಹಣ್ಣನ್ನು 30 ಸೆಕೆಂಡ್‌ಗಳ ಮಟ್ಟಿಗೆ ಇಟ್ಟು ಅದನ್ನು ಚಾಲ್ತಿಗೊಳಿಸುವ ಟ್ರಿಕ್‌ನ್ನು ಕೂಡ ಉಪಯೋಗಿಸಬಹುದು. ಅದರಿಂದ ಹೊರಹೊಮ್ಮಿದ ಹಬೆ ಬ್ಯಾಕ್ಟೀರಿಯಾಗಳನ್ನು ನಿವಾರಣೆ ಮಾಡುತ್ತದೆ.

ಚಾಪಿಂಗ್‌ ಬೋರ್ಡ್‌ ನಿರ್ಲಕ್ಷ್ಯ ಬೇಡ

American-Roach---2_20140926-141034_1 (1)

ಚಾಪಿಂಗ್‌ ಬೋರ್ಡ್‌ ಹಣ್ಣು, ತರಕಾರಿ ಮುಂತಾದವುಗಳನ್ನು ಕತ್ತರಿಸುವುದರ ಹೊರತಾಗಿ ಬಹಳಷ್ಟು ಕೆಲಸಗಳಿಗೆ ಉಪಯೋಗವಾಗುತ್ತದೆ. ಬಹಳಷ್ಟು ಗೃಹಿಣಿಯರು ಉಪಯೋಗಿಸಿದ ಬಳಿಕ ಅದನ್ನು ಕೇವಲ ನೀರಿನಿಂದ ಸ್ವಚ್ಛಗೊಳಿಸಿ ಇಟ್ಟುಬಿಡುತ್ತಾರೆ. ನೀವು ಕೂಡ ಹಾಗೆಯೇ ಮಾಡುವವರಾಗಿದ್ದರೆ ಅದು ಆರೋಗ್ಯದ ಜೊತೆಗೆ ಚೆಲ್ಲಾಟ ಆಡಿದಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ