ಮೇಘ ಮಾಲೆಯಂತೆ ಹರಡಿದ ಕೂದಲು, ಹಾವಿನ ಹೆಡೆಯಂಥ ಜಡೆ, ದುಂಬಿಗಳಂಥ ಮುಂಗುರುಳು ಇತ್ಯಾದಿ. ಹೆಂಗಸರಿಗಂತೂ ತಮ್ಮ ಕೂದಲು ಉದ್ದ ಅಥವಾ ಗಿಡ್ಡಕ್ಕಿರಲಿ, ಅದರ ಸಂರಕ್ಷಣೆಯದೇ ಸದಾ ಚಿಂತೆ ಆಗಿರುತ್ತದೆ.
ಹೀಗಾಗಿ ನೀವು ನಿಮ್ಮ ಕೂದಲಿನ ಸಂರಕ್ಷಣೆಯಲ್ಲಿ ಎಂದೂ ಲೋಪದೋಷ ಮಾಡಿಕೊಳ್ಳಬಾರದು, ಆಗ ಮಾತ್ರ ಅದರ ಸೌಂದರ್ಯ ಹೆಚ್ಚಲು ಸಾಧ್ಯ. ಆದರೂ ಏನೋ ಒಂದು ಕೊರತೆ ಕಾಡುತ್ತಿದೆ ಎಂದರೆ, ಅದರ ಕಡೆ ನಿಗಾವಹಿಸಲು ನಮಗೆ ಸಮಯ ಇಲ್ಲ ಎಂದೇ ಅರ್ಥ. ಹೀಗಾಗಿ ಕೆಳಗಿನ ಸಲಹೆ ಅನುಸರಿಸಿ ನಿಮ್ಮ ಕೇಶ ಸೌಂದರ್ಯ ಹೆಚ್ಚಿಸಿಕೊಳ್ಳಿ.
ಹೊಸ ಬಗೆಯ ಪೋನಿಟೇಲ್ ಯುವತಿಯರಿಗೆ ಸದಾ ಕಾಡುವ ಚಿಂತೆ ಎಂದರೆ ಅವರ ಕೂದಲು ತೆಳ್ಳಗಾಗುವ ಹಿಂಸೆ. ಸ್ಟೈಲ್ ನೆಪದಲ್ಲಿ ನು ಒಮ್ಮೊಮ್ಮೆ ನಮ್ಮ ಕೂದಲನ್ನು ಬಹಳ ನಿರ್ಲಕ್ಷಿಸಿ, ಏನೇನೋ ಚಿತ್ರಹಿಂಸೆ ಮಾಡುತ್ತೇವೆ. ಅಂದ್ರೆ ಹೇರ್ ಕಲರ್, ರೀಬೌಂಡಿಂಗ್ ಯಾ ಕರ್ಲಿಂಗ್ ಇತ್ಯಾದಿ ಮಾಡಿಸುವ ಮೂಲಕ. ಇದರಿಂದಾಗಿ ಕೂದಲು ಬಲು ತೆಳ್ಳಗಾಗುತ್ತದೆ. ಆಗ ಕಾಡುವ ಒಂದೇ ಸಮಸ್ಯೆ ಕೂದಲು ಈಗಾಗಲೇ ಇಷ್ಟು ತೆಳ್ಳಗಾಗಿದೆ, ಇನ್ನು ಇದಕ್ಕೆ ಎಂಥ ಹೇರ್ ಸ್ಟೈಲ್ ಹೀಗಾಗಿ ಇದಕ್ಕೆ ಒಂದೇ ಪರಿಹಾರ ಪೋನಿಟೇಲ್, ಅದು ಎಲ್ಲಾ ತರುಣಿಯರ ಅಚ್ಚುಮೆಚ್ಚಿನ ಆಯ್ಕೆ.
ನಿಮ್ಮ ಕೂದಲು ಅತಿ ತೆಳುವಾಗಿದ್ದರೆ, 2 ಪೋನಿಟೇಲ್ ಬಳಸಿರಿ. ಮೊದಲು ಕೂದಲಿನ ಅರ್ಧ ಭಾಗ ಬಳಸಿ ಪೋನಿಟೇಲ್ ಹೆಣೆಯಿರಿ, ನಂತರ ಅದರ ಕೆಳಗೇ ಬರುವಂತೆ ಮತ್ತೊಂದು ಸೆಟ್ ರೆಡಿ ಮಾಡಿ. ಇದರಿಂದಾಗಿ ನಿಮ್ಮ ಹೊಸ ಪೋನಿಟೇಲ್ ದಟ್ಟ ಹಾಗೂ ಸ್ಟೈಲಿಶ್ ಎನಿಸುತ್ತದೆ.
ಮೂರೇ ನಿಮಿಷಗಳಲ್ಲಿ ಕರ್ಲ್
ನೀವು ಪಾರ್ಟಿಗೆ ಹೋಗಬೇಕೆಂದಿರುವಿರಿ ಹಾಗೂ ಕರ್ಲಿಂಗ್ ಮಾಡಲು ಟೈಂ ಇಲ್ಲವೇ? ಆಗ ನೀವು ಈ ಟ್ರಿಕ್ ಬಳಸಿಕೊಳ್ಳಿ. ಎಲ್ಲಕ್ಕೂ ಮೊದಲು ಮಾಡಬೇಕಾದುದೆಂದರೆ ಒಂದು ಹೈ ಪೋನಿಟೇಲ್ ಮಾಡಿಕೊಳ್ಳಿ. ಇದಾದ ಮೇಲೆ ಕೂದಲನ್ನು ಮುಂಭಾಗಕ್ಕೆ ತಂದು 3 ಭಾಗಗಳಲ್ಲಿ ಡಿವೈಡ್ ಮಾಡಿ. ನಂತರ ಇದನ್ನು ಕರ್ಲ್ ಮಾಡಿ. ಆಮೇಲೆ ಸ್ಪ್ರೇ ಮಾಡಿ, ಹೇರ್ ಬ್ಯಾಂಡ್ ಸೆಟ್ ಮಾಡಿ. ಆಗ ನಿಮ್ಮ ಕೂದಲು ಬೇಗ ಕರ್ಲಿ ಆಗುತ್ತದೆ!
ಸೀಳುತುದಿ ಕೂದಲಿನಿಂದ ಮುಕ್ತಿ
ಸೀಳುತುದಿಯ ಕೂದಲು (ಸ್ಪ್ಲಿಟ್ ಎಂಡ್ ಹೇರ್) ನಿಮ್ಮ ಕೇಶಾಲಂಕಾರವನ್ನು ಹಾಳು ಮಾಡುತ್ತದೆ. ಹೀಗಾಗಿ ನೀವು ಇದರಿಂದ ಅಗತ್ಯ ಮುಕ್ತಿ ಪಡೆಯಬೇಕು. ಅದಕ್ಕಾಗಿ ಯಾರು ಪಾರ್ಲರ್‌ಗೆ ಹೋಗುತ್ತಾರೆ.... ಅಲ್ಲವೇ? ಅದಕ್ಕಾಗಿ ಈ ಸಲಹೆ ಅನುಸರಿಸಿ. ನೀವು ಮನೆಯಲ್ಲಿ ಇದ್ದುಕೊಂಡೇ ಇದನ್ನು ಟ್ರಿಂ ಮಾಡಬಹುದು. ಮೊದಲು ಎಲ್ಲಾ ಕೂದಲನ್ನು ಮುಂಭಾಗಕ್ಕೆ ತನ್ನಿ. ಹೇರ್ ಬ್ಯಾಂಡ್‌ನಿಂದ ಸೆಕ್ಯೂರ್ ಮಾಡಿಕೊಳ್ಳಿ. ಇದಾದ ಮೇಲೆ 2-3 ಇಂಚು ಬಿಟ್ಟು ಮತ್ತೆ ಹೇರ್ ಬ್ಯಾಂಡ್‌ನಿಂದ ಹಾಕಿಡಿ. ಹೀಗೆ 2 ಸಲ ಪುನರಾವರ್ತಿಸಿ. ಹೀಗೆ ಮಾಡುವುದರಿಂದ ಕೊನೆಯಲ್ಲಿ ಕೇವಲ ಸೀಳು ತುದಿಯ ಕೂದಲು ಮಾತ್ರ ಉಳಿಯುತ್ತದೆ. ಅದನ್ನು ನೀವು ಸುಲಭವಾಗಿ ಕತ್ತರಿಯಿಂದ ಕತ್ತರಿಸಬಹುದು. ಈ ರೀತಿ ನಿಮ್ಮ ಕೂದಲು ಸರಿಯಾದ ಆಕಾರದಲ್ಲಿ ಕತ್ತರಿಸಲ್ಪಡುತ್ತದೆ, ಸೀಳು ತುದಿ ಕೂದಲಿನಿಂದ ಮುಕ್ತಿ ಸಿಗುತ್ತದೆ.