ಸಣ್ಣ ಕಂದನನ್ನು ಬೆಳೆಸಲು ಹೆಣಗುವ ವಿಭಕ್ತ ಕುಟುಂಬದ ಮೊದಲ ಸಲ ತಾಯಿಯಾದ ಹೆಣ್ಣಿಗೆ ಬೇಸಿಗೆಯಲ್ಲಿ ನವಜಾತನ ಶಿಶುವಿನ ಆರೈಕೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ!

ನವಜಾತ ಶಿಶುಗಳಿಗೆ ಬೇಸಿಗೆಯ ಬೇಗೆ ಹೆಚ್ಚು ಅಸಹನಕಾರಿ ಎನಿಸುತ್ತದೆ. ಏಕೆಂದರೆ ಅಂಥ ಶಿಶುಗಳ ಅತಿ ಕೋಮಲ ತ್ವಚೆ ಮೊದಲ ಸಲ ಇಂಥ ತೀವ್ರ ಬಿಸಿಲಿಗೆ ಸ್ಪಂದಿಸಬೇಕಾಗಿರುತ್ತದೆ. ಇದರಿಂದ ಮಗು ಜೋರಾಗಿ ಚೀರಾಡಿ ಅಳುವುದು, ಧಾರಾಳ ಬೆವರು, ತಲೆಗೂದಲೆಲ್ಲ ಒದ್ದೆಮುದ್ದೆ, ಕೆನ್ನೆ ತೀವ್ರ ಕೆಂಪಾಗುವಿಕೆ, ಜೋರಾಗಿ ಉಸಿರಾಡುವಿಕೆ ಇತ್ಯಾದಿಗಳಿಂದ ಮಗು ಅತ್ಯಧಿಕ ಬೇಸಿಗೆಯ ಕಾಟಕ್ಕೆ ತುತ್ತಾಗಿದೆ ಎಂದು ತಿಳಿಯಬಹುದು.

ಬಿಸಿಲಿನಿಂದ ರಕ್ಷಿಸಿ

ಬೇಸಿಗೆಯಲ್ಲಿ ನವಜಾತ ಶಿಶುಗಳನ್ನು ಬಿಸಿಲಿನ ತೀವ್ರ ಕಿರಣಗಳಿಂದ ದೂರವಿರಿಸಿ. 6 ತಿಂಗಳಿಗೂ ಕಿರಿಯ ಶಿಶುಗಳ ತ್ವಚೆ ಸೂರ್ಯನ ಹಾನಿಕಾರಕ ಕಿರಣಗಳನ್ನು ಎದುರಿಸುವಂಥ ಮೆಲನಿನ್‌ ಅಂಶ ಹೊಂದಿರುವುದಿಲ್ಲ. ಮೆಲನಿನ್‌ ಪಿಗ್ಮೆಂಟ್‌ ನಮ್ಮ ತ್ವಚೆ, ಕಂಗಳು, ಕೂದಲಿಗೆ ಬಣ್ಣ ಒದಗಿಸುತ್ತವೆ. ಪರಿಣಾಮವಾಗಿ ಮೆಲನಿನ್‌ ಅಭಾವದಿಂದ ಸೂರ್ಯನ ಕಿರಣಗಳು ತ್ವಚೆಯ ಜೀವಕೋಶಗಳನ್ನು ಶಾಶ್ವತವಾಗಿ ಹಾನಿಗೊಳಿಸಬಹುದು.

ಮಸಾಜ್‌ ಮಾಡಿ

ಮಗುವಿನ ದೇಹಕ್ಕೆ ದಿನ ಒದಗಿಸುವ ಮಸಾಜ್‌, ಅದರ ಸುಸೂತ್ರ ಬೆಳವಣಿಗೆಗೆ ಸಹಕಾರಿ. ಸೂಕ್ತ ಮಸಾಜ್‌ನಿಂದ ಮಗುವಿನ ಟಿಶ್ಶು, ಮಾಂಸಖಂಡಗಳು ಹಿಗ್ಗುತ್ತವೆ. ಇದರಿಂದ ಅದರ ಸರಿಯಾದ ವಿಕಾಸವಾಗುತ್ತದೆ. ಮಗುವಿನ ನಾಜೂಕು ತ್ವಚೆಗೆ ಚೆನ್ನಾಗಿ ಹೊಂದುವಂಥ ಬೇಬಿ ಆಯಿಲ್ ಆರಿಸಬೇಕಾದ್ದು ಅನಿವಾರ್ಯ. ಹಾಗೆಯೇ ಮಸಾಜ್‌ ನಂತರ ಮಗುವಿನ ತ್ವಚೆ ಅಂಟಂಟು ಆಗಬಾರದು. ಅಂತಹ ಆಯಿಲ್ ನ್ನೇ ಆರಿಸಬೇಕು. ಆಯಿಲ್ ಬದಲು ಮಸಾಜಿಂಗ್‌ ಲೋಶನ್‌, ಕ್ರೀಂ ಬಳಸಬಹುದು. ಸ್ನಾನದ ಸಮಯದಲ್ಲಿ ಇದು ಪೂರ್ತಿ ದೇಹದೊಳಗೆ ಇಳಿಯುವಂತೆ ಗಮನವಹಿಸಬೇಕು.

ಟಬ್‌ ಸ್ನಾನ ಲೇಸು

ಬೇಸಿಗೆಯ ಕಾಟದಿಂದ ಪಾರಾಗಲು ಅತ್ಯುತ್ತಮ ಉಪಾಯವೆಂದರೆ ಸ್ನಾನ. ಪ್ರತಿ ಸಲ ಸ್ನಾನ ಮಾಡಿಸುವ ಬದಲು, ಮಗುವಿಗೆ ಸ್ಪಂಜ್‌ ಬಾಥ್‌ ಮಾಡಿಸಬಹುದು. ಆದರೆ ತೀವ್ರ ಬಿಸಿಲಿನ ಹೊಡೆತಕ್ಕೆ ಮಗು ಸಿಲುಕಿದಾಗ, ಅದನ್ನು ಟಬ್‌ ನೀರಿನಲ್ಲಿ ಕೂರಿಸಿ ಸ್ನಾನ ಮಾಡಿಸಿ. ನೀರು ತುಸು ಬೆಚ್ಚಗಿನ ನೀರಾದರೆ ಒಳ್ಳೆಯದು.

ಟಾಲ್ಕಂ ಪೌಡರ್

ಟಬ್‌ ಸ್ನಾನ ಆದ ನಂತರ ಮಗುವನ್ನು ಟರ್ಕಿ ಟವೆಲ್ ‌ನಿಂದ ಒರೆಸಿ, ಟಾಲ್ಕಂ ಪೌಡರ್‌ ಸಿಂಪಡಿಸಬೇಕು. ಹೀಟ್‌ ರಾಶ್‌ ಕಡಿಮೆ ಮಾಡಲು ಶಿಶುವಿಗೆ ಇದು ಸಹಕಾರಿ. ಮಗುವಿನ ಮೈ ಮೇಲೆ ಅದನ್ನು ಉದುರಿಸಿ, ಮೃದುವಾಗಿ ನೀವಬೇಕು. ಲೈಟಾಗಿ ಮಸಾಜ್‌ ಮಾಡಬೇಕು.

ನಿಯಂತ್ರಿತ ತಾಪಮಾನ

ಮಗು ಸದಾ 16-20 ಡಿಗ್ರಿ ತಾಪಮಾನದಲ್ಲೇ ಇರಬೇಕು. ಅದರ ಕೋಣೆಯನ್ನು ಹಗಲಿನಲ್ಲಿ ತಂಪಾಗಿರಿಸಲು, ಕಿಟಕಿ ಬಾಗಿಲಿಗೆ ಪರದೆ ಅಳವಡಿಸಿ, ತುಸು ಕತ್ತಲಿರುವಂತೆ ಮಾಡಿ. ಫ್ಯಾನ್‌ ಇರಲಿ, ಎ.ಸಿ ಖಂಡಿತಾ ಬೇಡ. ಅದರಿಂದ ಮಗುವಿಗೆ ಥಂಡಿ, ಜ್ವರ ಬರಬಹುದು.

ಸೂಕ್ತ ಉಡುಗೆಗಳು

ಮಗುವಿಗೆ ಎಂಥ ಉಡುಗೆ ತೊಡಿಸಬೇಕೆಂಬುದು ಅಮ್ಮಂದಿರ ದೊಡ್ಡ ಬವಣೆ. ಮಗುವಿಗೆ ಸಾಧ್ಯವಾದಷ್ಟೂ ಹೆಚ್ಚು ಹೆಚ್ಚು ಉಣ್ಣೆ ಬಟ್ಟೆ ತೊಡಿಸಬೇಕು ಎನ್ನುವುದು ಕೇವಲ ಮಿಥ್ಯ. ಗರ್ಭದಿಂದ ಹೊರಬಂದ ಮಗುವಿಗೆ ಹೊರಗಿನ ತಾಪಮಾನ ಖಂಡಿತಾ ಕಡಿಮೆ ಇರುತ್ತವೆ. ಆದರೆ ಮುಖ್ಯವಾಗಿ ಬೇಸಿಗೆಯಲ್ಲಿ ಅದರ ಮೈ ಮೇಲೆ  ಹೆಚ್ಚು ಪದರದ ವಸ್ತ್ರ ಬೇಡ. ಲೈಟ್‌ ಆದ, ಹಿತಕರವೆನಿಸುವ ಹಗುರ ವಸ್ತ್ರಗಳಿರಲಿ. ಮಗುವಿಗೆ ಸದಾ ಸಡಿಲವಾಗಿರುವಂಥ ಕಾಟನ್‌ ವಸ್ತ್ರಗಳೇ ಸರಿ. ಆಗ ಅದರ ತ್ವಚೆಯಲ್ಲಿ ಗಾಳಿಯಾಡಲು ಅನುಕೂಲ. ಹೀಗಾಗಿ ಹತ್ತಿ ಉಡುಗೆಗಳು ಶಿಶುಗಳಿಗೆ ಲಾಭಕಾರಿ, ಹೆಚ್ಚಿನ ಆರಾಮ ಸಿಗುತ್ತದೆ. ಇದರಲ್ಲಿ ಸಲೀಸಾಗಿ ಗಾಳಿ ಆಡುವುದರಿಂದ, ಬೆವರನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಅನಿವಾರ್ಯವಾಗಿ ಹೊರಗೆ ಹೋಗಲೇಬೇಕಾದಲ್ಲಿ, ಮಗುವಿಗೆ ತಲೆಗೊಂದು ಹಿತಕರ ಟೋಪಿ ಹಾಕಿಡಿ. ಹೀಟ್‌ ಸ್ಟ್ರೋಕ್‌ ಆಗದಂತೆ ಮತ್ತೆ ಮತ್ತೆ ಎಚ್ಚರಹಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ