ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಜನ ಪ್ರಗತಿ ಪಥದತ್ತ ಸಾಗುತ್ತಿದ್ದರೂ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ಅವುಗಳಲ್ಲಿ ಮಧುಮೇಹ, ಬ್ಲಡ್‌ ಪ್ರೆಶರ್‌, ನಿದ್ರಾಹೀನತೆ ಇತ್ಯಾದಿ ಪ್ರಮುಖವಾಗಿವೆ.

ಈ ಸಮಸ್ಯೆಗಳು ಹೆಚ್ಚಾಗಿ ಆಲೋಚನೆಯಿಲ್ಲದ ಉದ್ದೇಶಗಳ ಹಿಂದೆ ಓಡುವುದು, ಒತ್ತಡಭರಿತ ಜೀವನ ನಡೆಸುವುದು, ಕಡಿಮೆ ನಿದ್ದೆ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಇತ್ಯಾದಿ ಕಾರಣಗಳಿಂದ ಉಂಟಾಗುತ್ತದೆ. ನೀವು ಫಿಟ್‌ ಆಗಿರಲು ಬಯಸಿದರೆ ಆರೋಗ್ಯಪೂರ್ಣ ಆಹಾರವನ್ನು ಸಕಾಲದಲ್ಲಿ ಸೇವಿಸುವುದು, ವ್ಯಾಯಾಮ ಮಾಡುವುದು, ಸಂಪೂರ್ಣ ನಿದ್ದೆ ಮಾಡುವುದು ಬಹಳ ಅಗತ್ಯ.

ನೀವು ವರ್ಕಿಂಗ್‌ ವುಮೆನ್‌ ಆಗಲಿ, ಹೌಸ್‌ ವೈಫ್‌ ಆಗಲಿ ಮೇಲಿನ ವಿಷಯಗಳಿಗೆ ಗಮನ ಕೊಟ್ಟರೆ ನೀವು ಸ್ಛೂರ್ತಿಯುತವಾಗಿ, ತಾಜಾತನದಿಂದ ಕಾಣಿಸುತ್ತೀರಿ.

ಈ ಬಗ್ಗೆ ಬೆಂಗಳೂರಿನ ಫಿಟ್‌ನೆಸ್‌ ಎಕ್ಸ್ ಫರ್ಟ್‌ ಸುನೀತಾ ಹೀಗೆ ಹೇಳುತ್ತಾರೆ, ``ಫಿಟ್‌ನೆಸ್‌ ಬಗ್ಗೆ ಎಲ್ಲ ಮಹಿಳೆಯರೂ ಅತ್ಯಂತ ಉದಾಸರಾಗಿರುತ್ತಾರೆ. ಮನೆಯಲ್ಲೇ ಇದ್ದು ಅಥವಾ ಹೊರಗಿನ ಕೆಲಸ ಮಾಡುತ್ತಿದ್ದರೆ ನಿಮ್ಮ ವರ್ಕ್‌ಔಟ್‌ ಪೂರ್ಣವಾಗುವುದಿಲ್ಲ. ಆಗಾಗ್ಗೆ ಕೊಂಚ ವ್ಯಾಯಾಮ ಮಾಡಬೇಕು.''

ಉದ್ಯೋಗಸ್ಥೆಯರಿಗೆ ಅಗತ್ಯ ವ್ಯಾಯಾಮಗಳು ಹೀಗಿವೆ :

ಕೆಲಸ ಮಾಡುತ್ತಿರುವಾಗ ಸಮಯ ಸಿಕ್ಕಾಗೆಲ್ಲಾ ಕುರ್ಚಿಯಲ್ಲಿ ಕುಳಿತು ನಿಮ್ಮ ತಲೆಯನ್ನು ಎಡಗೈನಿಂದ ಬಲಬದಿಗೆ ತಿರುಗಿಸಿ. 15 ರಿಂದ 20 ಸೆಕಿಂಡ್‌ ಹಾಗೇ ಇಟ್ಟ ನಂತರ ಬಲಗೈನಿಂದ ಎಡಬದಿಗೆ ತಿರುಗಿಸಿ. ಇದು ಕುತ್ತಿಗೆಗೆ ಬಹಳ ಆರಾಮದಾಯಕ ವರ್ಕ್‌ಔಟ್‌ ಆಗಿದೆ.

ನಿಮ್ಮ ಎರಡೂ ಕೈಗಳನ್ನು ತಲೆಯ ಹಿಂದೆ ಹಿಡಿದುಕೊಂಡು ಮೊಣಕೈನಿಂದ ಬಲ ಮಂಡಿಯನ್ನು ಮುಟ್ಟಲು ಪ್ರಯತ್ನಿಸಿ. ಅದಕ್ಕೆ 15 ರಿಂದ 20 ಸೆಕೆಂಡುಗಳು ಸಾಕು. ನಂತರ ಎಡ ಮಂಡಿಯನ್ನು ಮುಟ್ಟಿ.

ಕುರ್ಚಿಯಲ್ಲಿ ಕೂತು ಕಾಲುಗಳನ್ನು 30 ಸೆಕೆಂಡ್‌ ಕಾಲ ನೇರವಾಗಿಡಿ. ಆಗಾಗ್ಗೆ ಹೀಗೆ ಮಾಡುವುದರಿಂದ ಎರಡೂ ಕಾಲುಗಳಿಗೆ ಆಯಾಸವಾಗುವುದಿಲ್ಲ ಹಾಗೂ ಊದಿಕೊಳ್ಳುವುದಿಲ್ಲ.

ಕುರ್ಚಿಯ ಮೇಲೆ ಕುಳಿತು ಕಾಲುಗಳನ್ನು ನೇರ ಮಾಡಿ ಹೆಬ್ಬೆರಳನ್ನು ನೆಲದಲ್ಲಿ ಊರಿ ಒಮ್ಮೆ ಕ್ಲಾಕ್‌ ವೈಸ್‌, ಒಮ್ಮೆ ಆ್ಯಂಟಿ ಕ್ಲಾಕ್ ವೈಸ್‌ ತಿರುಗಿಸಿ. ಇದರಿಂದ ಕಾಲುಗಳಲ್ಲಿ ಉಂಟಾಗುವ ನೋವು ಕಡಿಮೆಯಾಗುತ್ತದೆ ಮತ್ತು ಬ್ಲಡ್‌ ಸರ್ಕ್ಯುಲೇಶನ್‌ ಹೆಚ್ಚುತ್ತದೆ.

ಹೌಸ್‌ ವೈಫ್‌ಗಳು ಯಾರಾದರೂ ಎಕ್ಸ್ ಪರ್ಟ್‌ರಿಂದ ವ್ಯಾಯಾಮ ಕಲಿತು ಮಾಡಬೇಕು. ಇಲ್ಲದಿದ್ದರೆ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಸರಿಯಾದ ಮಾಹಿತಿಯಿಲ್ಲದೆ ಮಾಡಿದ ವ್ಯಾಯಮ ಅನೇಕ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ.

ಒಂದು ಅನುಭದ ಬಗ್ಗೆ ಹೇಳುತ್ತಾ ಸುನೀತಾ ಹೀಗೆಂದರು, ``ಒಬ್ಬ ಮಹಿಳೆ ತೆಳ್ಳಗಾಗಲು ಮನೆಯಲ್ಲಿ ಸೈಕ್ಲಿಂಗ್‌ ಶುರು ಮಾಡಿದ್ದರು. ಆದರೆ ಅಗತ್ಯಕ್ಕಿಂತ ಹೆಚ್ಚು ಸೈಕ್ಲಿಂಗ್‌ ಮಾಡಿದ್ದರಿಂದ ಅವರ ಸ್ಪೈನಲ್ ಕಾರ್ಡ್‌ನಲ್ಲಿ ನೋವು ಶುರುವಾಯಿತು. ಅವರಿಗೆ ಹಲವು ತಿಂಗಳವರೆಗೆ ಸರಿಯಾಗಿ ಕೂರಲು ಏಳಲು ಕಷ್ಟವಾಯಿತು. ಸಾಕಷ್ಟು ಚಿಕಿತ್ಸೆ ಪಡೆದ ನಂತರ ಅವರು ನಾರ್ಮಲ್ ಆದರು.''

ಜಾಗಿಂಗ್‌, ಈಜುವುದು, ಸೈಕ್ಲಿಂಗ್‌, ವಾಕಿಂಗ್‌ನಂತಹ ಹಗುರ ವ್ಯಾಯಾಮಗಳನ್ನು ಬೇಕಾದಾಗ ಮಾಡಬಹುದು. ನಿಮ್ಮನ್ನು ಫಿಟ್‌ಆಗಿಡಲು ಕೆಲವು ವಿಶೇಷ ವ್ಯಾಯಾಮಗಳು ಹೀಗಿವೆ:

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ