ಟೀಮ್ ಇಂಡಿಯಾ ಕ್ವೀನ್ ಆರ್ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ ಮದುವೆ ಯಾವಾಗ ಎಂಬ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ದೊರೆತಿದೆ. ಪ್ರಿಯಕರ ಪಲಾಷ್ ಮುಚ್ಚಲ್ ಜೊತೆಗೆ ಹಸೆಮಣೆ ಏರಲು ಸಾಂಗ್ಲಿ ಸುಂದರಿ ರೆಡಿಯಾಗಿದ್ದಾರೆ. ನಾಳೆ (ನ.23) ಜೀವನದ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಸ್ಮೃತಿ ಮಂದಾನ ಮದುವೆಯಿಂದಾಗ ಅವರ ಮನೆಯಲ್ಲಿ ಸಡಗರ, ಸಂಭ್ರಮಕ್ಕೆ ಕಾರಣವಾಗಿದೆ. ನಾಳೆ ನಡೆಯಲಿರುವ ಅದ್ಧೂರಿ ವಿವಾಹ ಸಮಾರಂಭದಲ್ಲಿ ಬಹುಕಾಲದ ಗೆಳೆಯ, ಪ್ರಿಯಕರ ಪಲಾಶ್ ಮುಚ್ಚಲ್ನ ಸ್ಮೃತಿ ವರಿಸಲಿದ್ದಾರೆ.
ಹಳದಿ ಸೆರಮನಿ: ವಿವಾಹಕ್ಕೂ ಮುನ್ನ ಹಳದಿ ಶಾಸ್ತ್ರವು ಅದ್ಧೂರಿಯಾಗಿ ನಡೆದಿದೆ. ಸ್ಮೃತಿ ಮಂದಾನ ವಿವಾಹವನ್ನು ಭಾಗಿಯಾಗಲು ಆಪ್ತ ಆಟಗಾರ್ತಿಯರು ಸಾಂಗ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರು ಸಂಭ್ರಮದಿಂದ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಂದಾನ, ಪಲಾಶ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರ್ತಿಯರೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ಶೆಫಾಲಿ ವರ್ಮಾ ಸಖತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ.
ಇಂದೋರ್ ಸೊಸೆ: ಬಾಲಿವುಡ್ ಮತ್ತು ಕ್ರಿಕೆಟ್ಗೂ ದೀರ್ಘಕಾಲದ ನಂಟಿದೆ. ಬಾಲಿವುಡ್ ನಟಿಯರನ್ನು ವರಿಸಿದ ಹಲವು ಟೀಮ್ ಇಂಡಿಯಾ ಕ್ರಿಕೆಟಿಗರಿದ್ದಾರೆ. ಸ್ಮೃತಿ ಮಂದಾನ ವಿಚಾರದಲ್ಲೂ ಇದೇ ಮರುಕಳಿಸಿದೆ. ಮಹಾರಾಷ್ಟ್ರದ ಸಾಂಗ್ಲಿಯ ಸುಂದರಿ ಸ್ಮೃತಿ ಮಂದಾನ, ಇಂದೋರ್ ಸೊಸೆಯಾಗಲಿದ್ದಾರೆ. ಅವರು ಬಾಲಿವುಡ್ನ ಗಾಯಕ ಹಾಗೂ ಮ್ಯೂಸಿಕ್ ಡೈರೆಕ್ಟರ್.
ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಮಂದಾನ ಮದುವೆಯಾಗುತ್ತಿರುವುದು ಸರ್ಪ್ರೈಸ್ ಏನಲ್ಲ. ಕಳೆದ ಕೆಲ ವರ್ಷಗಳಿಂದಲೇ ಇವರಿಬ್ಬರು ಒಟ್ಟಾಗಿ ಓಡಾಡುತ್ತಿದ್ದರು.
ಮೋದಿ ಪತ್ರ: ವಿವಾಹ ಸಂಭ್ರಮದಲ್ಲಿರುವ ಸ್ಮೃತಿ ಮಂದಾನಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಪತ್ರ ಮುಖೇನ ಶುಭ ಕೋರಿದ್ದಾರೆ. ನಿಮ್ಮ ಮುಂದಿನ ಜೀವನ ಚನ್ನಾಗಿರಲಿ. ಇಬ್ಬರಿಗೂ ನನ್ನ ಆಶೀರ್ವಾದಗಳು ಎಂದು ಪತ್ರ ಬರೆದು ಮೋದಿ ಕಳಿಸಿದ್ದಾರೆ.
ಐತಿಹಾಸಿಕ ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾ ಕ್ವೀನ್ ಫ್ಯಾನ್ಸ್ಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದ್ದಾರೆ. ವೈವಾಹಿಕ ಜೀವನದ ಇನ್ನಿಂಗ್ಸ್ ಶುರು ಮಾಡಿದ್ದಾರೆ.





