ಸುಂದರವಾಗಿ ಕಂಗೊಳಿಸಲು ಫೇಶಿಯಲ್‌ಗಿಂತ ಬೇರೊಂದು ಉತ್ತಮ ವಿಧಾನವಿಲ್ಲ. ಸಮಯಕ್ಕೆ ಸರಿಯಾಗಿ ಫೇಶಿಯಲ್ ಮಾಡಿಸುವುದರಿಂದ ಮುಖ ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುತ್ತದೆ. ಬನ್ನಿ, ಫೇಶಿಯಲ್‌ನ ವಿಶಿಷ್ಟ ವಿಧಾನಗಳನ್ನು ತಿಳಿದುಕೊಳ್ಳೋಣ.
ಮಿನರಲ್ ಫೇಶಿಯಲ್ : ಈ ಫೇಶಿಯಲ್ ಮಾಡಿಸುವ ಮೊದಲು ಮುಖವನ್ನು ಫೇರ್‌ನೆಸ್ ಕ್ಲೆನ್ಸರ್‌ನಿಂದ ಶುಚಿಗೊಳಿಸಿ. ಅದಾದ ಮೇಲೆ ಮಲ್ಟಿ ವಿಟಮಿನ್ ಟ್ಯಾಬ್ಲೆಟ್‌ನ್ನು ನೀರಲ್ಲಿ ಕರಗಿಸಿ, ನೆನೆಸಿದ ಗಾರ್ ಸಮೇತ ಮುಖಕ್ಕೆ ಹಚ್ಚಬೇಕು. 7-8 ನಿಮಿಷಗಳ ನಂತರ ಗಾರ್ ಪದರದ ಮೇಲೆ ಫೇರ್‌ನೆಸ್ ಜೆಲ್ ಹಚ್ಚಬೇಕು ಹಾಗೂ ಸ್ವಲ್ಪ ಹೊತ್ತು ಹಾಗೇ ಬಿಡಬೇಕು. ನಂತರ ಕೆಳಗಿನಿಂದ ಮೇಲಕ್ಕೆ ರೋಲ್ ಮಾಡುತ್ತಾ ಗಾರ್‌ನ ಒಣಪದರ ತೆಗೆಯಿರಿ.
ನಂತರ ಮುಖದ ಮೇಲೆ ಗೋಲಾಕಾರವಾಗಿ, ಬೆರಳಾಡಿಸುತ್ತಾ 45 ನಿಮಿಷ ಅದೇ ಗಾರ್‌ನಿಂದ ಸ್ಕ್ರಬಿಂಗ್ ಮಾಡಿ.
ಅದಾದ ಮೇಲೆ ಮುಖಕ್ಕೆ ಫೇರ್‌ನೆಸ್ ಟೋನರ್ ಹಚ್ಚಿರಿ. ನಂತರ ಲ್ಯಾವೆಂಡರ್ ಲೋಶನ್, ಫೇರ್‌ನೆಸ್ ನೈಟ್ ಕ್ರೀಂ ಮತ್ತು ಆ್ಯಲೋವೆರಾ ಜೆಲ್ ಮಿಕ್ಸ್ ಮಾಡಿ, ಅದರಿಂದ ಮುಖದ ಮಸಾಜ್ ಮಾಡಿ. ಮುಖದಲ್ಲಿ ಸುಕ್ಕುಗಳಿದ್ದರೆ, ಫೇರ್‌ನೆಸ್ ನೈಟ್ ಕ್ರೀಮಿಗೆ ಬದಲಾಗಿ ಆ್ಯಂಟಿ ಏಜಿಂಗ್ ಕ್ರೀಂ ಹಚ್ಚಿ ಮಸಾಜ್ ಮಾಡಬೇಕು. ಆಮೇಲೆ ಮತ್ತೆ ಗಾರ್‌ನ್ನು ನೀರಲ್ಲಿ ನೆನೆಸಿ ಮುಖಕ್ಕೆ ಹಚ್ಚಬೇಕು ಹಾಗೂ ಕೈಗಳಿಂದ ಹೀಟ್ ಕಂಪ್ರೆಶನ್ ನೀಡಿ. ಈಗ ಪ್ರೋಟೀನ್ ಪೌಡರ್‌ನ್ನು ಮಲ್ಟಿ ವಿಟಮಿನ್‌ಯುಕ್ತ ನೀರಲ್ಲಿ ಕದಡಿಕೊಂಡು, ಮುಖಕ್ಕೆ ಹಚ್ಚಬೇಕು. ಇದು ಚೆನ್ನಾಗಿ ಒಣಗಿದ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಕೊನೆಯಲ್ಲಿ ಸನ್‌ಸ್ಕ್ರೀನ್ ಲೋಶನ್ ಹಚ್ಚಬೇಕು.
ಆ್ಯಂಟಿ ಆಕ್ಸಿಡೆಂಟ್ ಫೇಶಿಯಲ್ : ಇದನ್ನು ಮಾಡುವುದಕ್ಕಾಗಿ ಎಲ್ಲಕ್ಕೂ ಮೊದಲು ಮುಖವನ್ನು ಫೇರ್‌ನೆಸ್ ಕ್ಲೆನ್ಸರ್‌ನಿಂದ ಶುಚಿಗೊಳಿಸಿ. ಅದಾದ ಮೇಲೆ ಗ್ರೀನ್ ಟೀಯ 2 ಟೀ ಬ್ಯಾಗ್ಸ್ ನ್ನು ನೀರಲ್ಲಿ ನೆನೆಹಾಕಿಡಿ. ಸ್ವಲ್ಪ ಹೊತ್ತಿನ ನಂತರ ಟೀಬ್ಯಾಗ್ಸ್ ನ್ನು ನೀರಿನಿಂದ ಹೊರತೆಗೆದು ಕಂಗಳ ಮೇಲಿಡಿ. ಸ್ವಲ್ಪ ಹೊತ್ತಿನ ನಂತರ ಈ ಟೀ ಬ್ಯಾಗ್ಸ್ ನಿಂದ ಗ್ರೀನ್ ಟೀ ಹೊರತೆಗೆದು ಅದಕ್ಕೆ ಫೇರ್‌ನೆಸ್ ಜೆಲ್ ಬೆರೆಸಿ, 45 ನಿಮಿಷ ಮುಖದ ಸ್ಕ್ರಬಿಂಗ್ ಮಾಡಿ. ಆಮೇಲೆ ಮುಖವನ್ನು ತಣ್ಣೀರಿನಿಂದ ಶುಚಿಗೊಳಿಸಿ. ನಂತರ ಲ್ಯಾವೆಂಡರ್ ಲೋಶನ್, ಫೇರ್‌ನೆಸ್ ನೈಟ್ ಕ್ರೀಂ, ಆ್ಯಲೋವೇರಾ ಜೆಲ್ ಮಿಕ್ಸ್ ಮಾಡಿ 10 ನಿಮಿಷ ಮುಖದ ಮಸಾಜ್ ಮಾಡಿ. ಅದಾದ ಮೇಲೆ ತಣ್ಣೀರಿನಲ್ಲಿ ಗಾರ್ ನೆನೆಸಿ ಮುಖದ ಮೇಲೆ ಹರಡಿರಿ, ಕೈಗಳಿಂದ ಕಂಪ್ರೆಶನ್ ನೀಡಿ. ಇದಾದ ಮೇಲೆ ಪ್ರೋಟೀನ್ ಪೌಡರ್‌ನ್ನು ಗ್ರೀನ್ ಟೀಯ ನೀರಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಬೇಕು. 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಹೇರ್ ಸ್ಪಾ : ಯಾವ ರೀತಿ ಚರ್ಮಕ್ಕೆ ಪೋಷಣೆ ಒದಗಿಸಲು ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಅಗತ್ಯವೇ, ಅದೇ ತರಹ ಬದಲಾಗುತ್ತಿರುವ ಋತುಮಾನಕ್ಕೆ ತಕ್ಕಂತೆ ಕೂದಲು ಸಹ ಶುಷ್ಕ ಹಾಗೂ ನಿರ್ಜೀವ ಆಗುತ್ತದೆ. ಅದರ ಕಾಂತಿ ವಾಪಸ್ಸು ತರಲು ಸ್ಪಾನ ಅಗತ್ಯವಿದೆ. ಹೇರ್ ಸ್ಪಾಗಾಗಿ ಎಲ್ಲಕ್ಕೂ ಮೊದಲು ಕೂದಲನ್ನು ಕೊಬ್ಬರಿ ಎಣ್ಣೆ ಹಾಗೂ ಸೆಲೂನ್ ಆಲ್ಮಾ ಹೇರ್ ಆಯಿಲ್‌ನ ಮಸಾಜ್ ಮಾಡಿ. ನಂತರ 10-15 ನಿಮಿಷ ಆವಿ ಒದಗಿಸಿ. ಅದಾದ ಮೇಲೆ ಶ್ಯಾಂಪೂ ಮಾಡಬೇಕು. ಇದಾದ ನಂತರ ಕೂದಲನ್ನು ಟವೆಲ್‌ನಿಂದ ಒರೆಸಿ ಒಣಗಿಸಿ. ಆಮೇಲೆ ಪ್ರೋಟೀನ್ ಪೌಡರ್‌ನ್ನು ನೀರಲ್ಲಿ ಕರಗಿಸಿ ಕೂದಲಿಗೆ ಹಚ್ಚಿರಿ. ಇದನ್ನು ಅಪ್ಪಿತಪ್ಪಿಯೂ ಕೂದಲಿನ ಬುಡಕ್ಕೆ ಹಚ್ಚಿ ತಿಕ್ಕಬಾರದು. ಬುಡಕ್ಕೆ 1 ಇಂಚು ಮೇಲೆಯೇ ಹಚ್ಚಬೇಕು. 15 ನಿಮಿಷ ಹಾಗೇ ಒಣಗಲು ಬಿಡಿ. ನಂತರ ನೀಟಾಗಿ ತಣ್ಣೀರಿನಿಂದ ತೊಳೆಯಿರಿ.