ಸದಾ ಮುಗುಳ್ನಗು ಜೊತೆಗಿದ್ದರೆ, ಮಾನವ ದೇಹದಲ್ಲಿ ಆರೋಗ್ಯಕ್ಕೆ ಪೂರಕವಾಗುವ ರಾಸಾಯನಿಕಗಳು ಉತ್ಪನ್ನವಾಗಿ ವ್ಯಕ್ತಿ ಸುಖಿಯಾಗುತ್ತಾನೆ.
ಮಂದಹಾಸ, ಮುಗುಳ್ನಗುವಿನಿಂದ ವ್ಯಕ್ತಿ ತನ್ನ ಟೆನ್ಶನ್, ಉದ್ವಿಗ್ನತೆ, ಒತ್ತಡಗಳಿಂದ ಮುಕ್ತನಾಗುತ್ತಾನೆ, ಲವಲವಿಕೆ ಗಳಿಸುತ್ತಾನೆ.
ಟಿವಿ ನಟಿ ದಿವ್ಯಾಂಕಾ ತ್ರಿಪಾಠಿ ಹೇಳುತ್ತಾಳೆ, ವಿಸಿಬಲ್ ವೈಟ್ ಮುಗುಳ್ನಗೆಯಿಂದ ಕೆಲಸ ನಿರ್ವಹಿಸುವುದು ಸುಲಭವಾಗುತ್ತದೆ. ನನ್ನ ಮುಗುಳ್ನಗು ಎಷ್ಟೋ ಬಾರಿ ಪೊಲೀಸರ ಬಳಿ ರಕ್ಷಣೆಯ ಅಸ್ತ್ರವಾಗಿದೆ. ಟ್ರಾಫಿಕ್ ರೂಲ್ಸ್ ಮುರಿದು ಅವರ ಬಳಿ ಸಿಕ್ಕಿಬಿದ್ದಾಗ, ನಾನು ನಸುನಕ್ಕು ನನ್ನ ತಪ್ಪು ಒಪ್ಪಿಕೊಳ್ತೀನಿ. ಏಕೆಂದರೆ ಕ್ಲೋಸಪ್ ಡೈಮಂಡ್ ಅಟ್ರಾಕ್ಷನ್‌ನ ಒಂದು ವಿಸಿಬಲ್ ವೈಟ್ ಮುಗುಳ್ನಗುವಿನಿಂದ ಎಂಥ ಕಷ್ಟದ ಕೆಲಸವಾದರೂ ಸಲೀಸಾಗುತ್ತದೆ ಹಾಗೂ ಜನರ ಮೇಲೆ ದಟ್ಟ ಪ್ರಭಾವ ಬೀರತ್ತದೆ.
ನಮ್ಮ ದೈನಂದಿನ ಜೀವನದಲ್ಲೂ ನಗುವಿನ ವಾತಾವರಣ ಸದಾ ನಿಮಗೆ ಹೊಸಶಕ್ತಿ ತುಂಬುತ್ತದೆ. ಒಂದು ದಿನದಲ್ಲಿ ನೀವು 1-5 ಬಾರಿ ಮುಗುಳ್ನಕ್ಕರೆ, ನಿಮಗೆ ಬೇರೆ ಔಷಧಿಗಳ ಗೊಡವೆ ಇರುವುದಿಲ್ಲ. ನಟಿ ಜೂಹಿ ಚಾವ್ಲಾ ಹೇಳುವುದೆಂದರೆ, ಮುಗುಳ್ನಗೆಯಿಂದ ನೀವು ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ನನಗೆ ಮನೆ ಅಥವಾ ಹೊರಗೆ ಟೆನ್ಶನ್ ಹೆಚ್ಚಾದಾಗ, ನಸುನಕ್ಕು ಸುಮ್ಮನಾಗ್ತೀನಿ. ಇದರಿಂದ ನನ್ನಲ್ಲಿ ಸಕಾರಾತ್ಮಕ ಧೋರಣೆ ಮೂಡುತ್ತದೆ. ಮಕ್ಕಳು ನನ್ನ ಮಾತು ಕೇಳದಿದ್ದಾಗ, ಅವರನ್ನು ನನ್ನ ವಿಸಿಬಲ್ ಮುಗುಳ್ನಗೆಯ ಮೋಡಿಗೆ ಒಳಪಡಿಸುತ್ತೇನೆ.
ಸದಾ ವೇಗದ ಓಟದ ಇಂದಿನ ಜೀವನಶೈಲಿಯಲ್ಲಿ ಜನ ನಗು, ನಗಿಸುವ ಕಲೆಯನ್ನೇ ಮರೆತಿದ್ದಾರೆ. ಪ್ರತಿಯೊಬ್ಬರೂ ಇಂದು ಟೆನ್ಶನ್‌ನಲ್ಲಿ ಮುಳುಗಿರುತ್ತಾರೆ. ನಗುವುದಕ್ಕಾಗಿ ಯಾರೋ ಒಬ್ಬ ವ್ಯಕ್ತಿ ಅಥವಾ ಘಟನೆಯೇ ಆಗಬೇಕೆಂದಿಲ್ಲ. ಹಳೆಯ ಹವ್ಯಾಸ, ಪ್ರಕರಣಗಳು, ಉಲ್ಲಾಸದಾಯಕ ಕ್ಷಣಗಳು ಅಥವಾ ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಂಡು ನಗಬಹುದು. ಹಿನ್ನೆಲೆ ಗಾಯಕಿ ಸೋನಾ ಬ್ಯಾನರ್ಜಿ ಹೇಳುತ್ತಾಳೆ, ನಸುನಗುತ್ತಿರುವ ಮುಖವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಏಕೆಂದರೆ ಹಸನ್ಮುಖಿ ವ್ಯಕ್ತಿತ್ವ ಯಾರನ್ನಾದರೂ ಸದಾ ಪ್ರಭಾವಿತಗೊಳಿಸಬಲ್ಲದು, ಜೊತೆಗಿದು ಸಕಾರಾತ್ಮಕ ಧೋರಣೆಗೆ ಮೊದಲ ಮೆಟ್ಟಿಲಾಗಿದೆ. ನನ್ನ ಯಾವ ಕೆಲಸವೇ ಇರಲಿ, ಅದು ಮನೆಗೆಲಸ ಅಥವಾ ಹಾಡುಗಾರಿಕೆ ಆಗಿರಲಿ, ಅದನ್ನು ನಸುನಗುತ್ತಾ ಮಾಡುತ್ತೇನೆ.
ಅಸಲಿಗೆ ಮಂದಹಾಸ, ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳಗಿಸುತ್ತದೆ. ಸುಸ್ತಾದವರಿಗೆ ವಿಶ್ರಾಂತಿ, ನಿರಾಸೆಗೊಂಡವರಿಗೆ ಆಸೆ, ಬೇಸತ್ತವರಿಗೆ ಹೊಸ ಆಶಾಕಿರಣ, ರೋಗಿಗಳಿಗೆ ರೋಗನಿರೋಧಕ ಸಾಮರ್ಥ್ಯ ಇತ್ಯಾದಿಗಳಿವೆ. ನಗುವುದಕ್ಕಾಗಿ ಖರ್ಚು ಮಾಡಬೇಕಿಲ್ಲ ಬದಲಿಗೆ ಅದರಿಂದ ಹೆಚ್ಚಿನ ಲಾಭವಿದೆ. ಹಾಸ್ಯ ರೂಪದ ಈ ನೈಸರ್ಗಿಕ ಟಾನಿಕ್ ಒಂದು ದಿವ್ಯಾಸ್ತ್ರವೇ ಹೌದು. ಇದನ್ನು ನಿಮ್ಮ ಜೀವನದ ಅಭಿನ್ನ ಅಂಗವಾಗಿಸಿಕೊಳ್ಳಿ, ಇಡೀ ಜೀವನ ಉತ್ಸಾಹಪೂರ್ಣವಾಗಿ ಕಳೆದುಹೋಗುತ್ತದೆ. ಹೀಗಾಗಿ ನಾನು ಸದಾ ವಿಸಿಬಲ್ ಲೈಟ್ ಜೊತೆಗೆ ಮುಗುಳ್ನಗುತ್ತೇನೆ!
ನಟಿ ರಾಣಿ ಮುಖರ್ಜಿ ಚೋಪ್ರಾ ಹೇಳುತ್ತಾಳೆ, ನಾನಂತೂ ಸದಾ ನಸುನಗುತ್ತಿರುತ್ತೇನೆ. ಹೀಗಾಗಿ ಯಾರೇ ನನ್ನನ್ನು ಭೇಟಿಯಾದರೂ ನನ್ನ ವಿಸಿಬಲ್ ಲೈಟ್ ಮುಗುಳ್ನಗು ಕಂಡು ನನ್ನಿಂದ ಪ್ರಭಾವಿತರಾಗುತ್ತಾರೆ. ನಾವು ಹಲವಾರು ತಿಂಗಳುಗಳ ಕಾಲ ಒಟ್ಟಿಗೆ ಬೆರೆತು ಶೂಟಿಂಗ್ ನಡೆಸಬೇಕಿರುವುದರಿಂದ, ಪರಸ್ಪರ ಕಂಡು ಮುಗುಳ್ನಗುವುದರಿಂದ ಎಲ್ಲರಲ್ಲೂ ಹೊಂದಾಣಿಕೆ ಮೂಡುತ್ತದೆ. ಇದರಿಂದ ಕೆಲಸ ಮಾಡಲು ಎನರ್ಜಿ ಹೆಚ್ಚುತ್ತದೆ, ಒಂದು ಸಕಾರಾತ್ಮಕ ಪರಿಣಾಮ ಮೂಡುತ್ತದೆ. ಕೆಲವು ವಿಚಾರವಂತರ ಪ್ರಕಾರ, ಮುಗುಳ್ನಗು ಒಂದು ಸುಖೀ ಅನುಭವ. ಆದ್ದರಿಂದ ನಗಬೇಕು ಎನಿಸಿದಾಗ ಮುಕ್ತರಾಗಿ ನಕ್ಕುಬಿಡಬೇಕು. ನಸುನಗುವಾಗ ವ್ಯಕ್ತಿಯ ಸೌಂದರ್ಯ ತಂತಾನೇ ಇಮ್ಮಡಿಸುತ್ತದೆ. ಮಂದಹಾಸದಿಂದ ಆತ್ಮವಿಶ್ವಾಸ ಮತ್ತು ಆಂತರಿಕ ಸಂತೃಪ್ತಿ ಹೆಚ್ಚುತ್ತದೆ.