ಕಿಚನ್‌ ಮನೆಯ ಮಹತ್ವಪೂರ್ಣ ಭಾಗವಾಗಿದೆ. ಅದರಿಂದ ಸ್ವಾದ ಹಾಗೂ ಆರೋಗ್ಯ ಎರಡೂ ಪೂರೈಕೆಯಾಗುತ್ತದೆ. ಇಲ್ಲಿ ಕೊಂಚ ನಿರ್ಲಕ್ಷ್ಯ ವಹಿಸಿದರೂ ನಮ್ಮ ಆರೋಗ್ಯ ಹಾಳಾಗುತ್ತದೆ. ಫುಡ್‌ ಪಾಯಿಸನಿಂಗ್‌ ಅಥವಾ ಹೊಟ್ಟೆಯಲ್ಲಿ ಉಂಟಾಗುವ ಇಪ್ೞೆಕ್ಷನ್‌ ಬರೀ ಹೊರಗಿನ ಆಹಾರ ತಿನ್ನುವುದರಿಂದಲೇ ಆಗುವುದಿಲ್ಲ. ಮನೆಯ ಆಹಾರದಲ್ಲಿ ಸ್ವಚ್ಛತೆಯ ಕೊರತೆಯಿಂದಲೂ ಉಂಟಾಗಬಹುದು.

ಕಿಚನ್‌ನಲ್ಲಿ ಉಂಟಾಗಬಹುದಾದ ಸಣ್ಣಪುಟ್ಟ ತಪ್ಪುಗಳು ಸ್ವಚ್ಛವಾದ ಆಹಾರವನ್ನೂ ಸೋಂಕುಯುಕ್ತ ಆಹಾರವನ್ನಾಗಿ ಪರಿವರ್ತಿಸುತ್ತದೆ. ಒಮ್ಮೊಮ್ಮೆ ಮಹಿಳೆಯರು ತರಕಾರಿ ಕತ್ತರಿಸಿದ ನಂತರ ಚಾಕುವನ್ನು ತೊಳೆಯದೇ ಇಟ್ಟುಬಿಡುತ್ತಾರೆ. ಹಸಿ ತರಕಾರಿಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಇದ್ದು ಅ ಚಾಕುವಿನ ಮೇಲೆಯೇ ಉಳಿದುಬಿಡುತ್ತವೆ ಮತ್ತು ಪ್ರತಿ 1 ಗಂಟೆಗೆ ಅವುಗಳ ಸಂಖ್ಯೆ ದ್ವಿಗುಣವಾಗುತ್ತದೆ. ಅದೇ ಚಾಕುವಿನಿಂದ ಮಹಿಳೆ ಮತ್ತೆ ಹಣ್ಣು ಅಥವಾ ಬೇರೊಂದು ತಿನ್ನುವ ವಸ್ತುವನ್ನು ಕತ್ತರಿಸಿದಾಗ ಅವು ಸೋಂಕು ಉಂಟು ಮಾಡುತ್ತವೆ. ಹೀಗೆ ಸಣ್ಣ ಸಣ್ಣ ತಪ್ಪುಗಳು ದೊಡ್ಡ ದೊಡ್ಡ ಕಾಯಿಲೆಗಳಿಗೆ ಕಾರಣವಾಗುತ್ತವೆ.

ಕಿಚನ್‌ ಸ್ವಚತೆ

stainless-steel-one-and-a-half-bowl-kitchen-sink-inc-mono-block-tap-461-pನಿಯಮಿತವಾಗಿ ಸ್ವಚ್ಛಗೊಳಿಸಬೇಕು. ವಿಶೇಷವಾಗಿ ಸಿಂಕ್‌, ಫಿಲ್ಟರ್‌, ಸ್ಲ್ಯಾಬ್‌ ಮತ್ತು ಫ್ರಿಜ್‌ ಇತ್ಯಾದಿಗಳನ್ನು. ಇವು ಕಿಚನ್‌ನ ಮಹತ್ವಪೂರ್ಣ ಭಾಗಗಳಾಗಿದ್ದು, ಅವುಗಳ ಸ್ವಚ್ಛತೆ ಬಹುಮುಖ್ಯ. ಕಿಚನ್‌ನ ನಿಯಮಿತ ಸ್ವಚ್ಛತೆಯಿಂದ ಸ್ವಚ್ಛ ಊಟ ಸಿಗುವುದಲ್ಲದೆ ಕೊಂಚ ವ್ಯಾಯಾಮ ಆಗುತ್ತದೆ.

ಸಿಂಕ್

ಸಿಂಕ್‌ ಕಿಚನ್‌ನ ಒಂದು ಮಹತ್ವಪೂರ್ಣ ಭಾಗವಾಗಿದ್ದು, ಅಲ್ಲಿ ರೋಗಾಣುಗಳು ಉತ್ಪನ್ನವಾಗುವ ಅಪಾಯ ಹೆಚ್ಚಾಗಿರುತ್ತದೆ.

ಸಿಂಕ್‌ನಲ್ಲಿ ನುಣುಪಾದ ಪದರ ಜಮೆಯಾಗಲು ಬಿಡಬಾರದು. ಏಕೆಂದರೆ ಅದರಲ್ಲಿ ಸ್ಟೆಫಾಯಿಯೋಕೋಕಸ್‌ ಓರಿಯಸ್‌ ಎಂಬ ಬ್ಯಾಕ್ಟೀರಿಯಾ ಉತ್ಪನ್ನವಾಗಿ ಕಾಯಿಲೆಗಳಿಗೆ ಕಾರಣವಾಗುತ್ತವೆ.

ಸಿಂಕ್‌ನ ಸ್ವಚ್ಛತೆಗಾಗಿ ಆ್ಯಂಟಿ ಬ್ಯಾಕ್ಟೀರಿಯಲ್ ಉತ್ಪನ್ನಗಳನ್ನು ಉಪಯೋಗಿಸಬೇಕು. ಇದರಲ್ಲಿ ಕ್ಲೀನರ್‌ ಮತ್ತು ಡಿಸ್ಇನ್‌ಫೆಕ್ಟೆಂಟ್‌ ಎರಡೂ ಸೇರಿರುತ್ತದೆ. ಕ್ಲೀನರ್‌ ಸ್ವಚ್ಛತೆಯ ಕೆಲಸ ನಿರ್ವಹಿಸುತ್ತದೆ ಮತ್ತು ಡಿಸ್ಇನ್‌ಫೆಕ್ಟೆಂಟ್‌ ರೋಗಾಣುಗಳನ್ನು ಸಾಯಿಸುತ್ತದೆ.

ಸಿಂಕ್‌ನಲ್ಲಿ ಖಾದ್ಯ ಪದಾರ್ಥ ಅಥವಾ ಯಾವುದೇ ಬೇರೆ ಸಾಮಗ್ರಿ ಒಟ್ಟಿಗೇ ಇಡಬೇಡಿ. ಏಕೆಂದರೆ ಅದರಲ್ಲಿ ನೀರೂ ಸೇರಿಕೊಳ್ಳುತ್ತದೆ. ಅದರಲ್ಲಿ ರೋಗಾಣು ಉತ್ಪನ್ನವಾಗಿ ಅದರ ಜೊತೆಗೆ ಸೊಳ್ಳೆಗಳೂ ಉತ್ಪನ್ನವಾಗುತ್ತವೆ.

ಸ್ಲ್ಯಾಬ್‌ ಮತ್ತು ಗ್ಯಾಸ್‌ ಸ್ಟವ್

DSC_9346

ಒಂದು ಅಧ್ಯಯನದಂತೆ ಹೆಚ್ಚಿನ ಭಾರತೀಯ ಅಡುಗೆಮನೆಗಳಲ್ಲಿ ಸ್ವಚ್ಛತೆಗಾಗಿ ಉಪಯೋಗಿಸುವ ಬಟ್ಟೆ ಕೊಳೆ ಹಾಗೂ ಸೋಂಕುಯುಕ್ತವಾಗುತ್ತದೆ. ಏಕೆಂದರೆ ಮಹಿಳೆಯರು ಸ್ವಚ್ಛಗೊಳಿಸಿದ ನಂತರ ಬಟ್ಟೆಯನ್ನು ಬರೀ ನೀರಲ್ಲಿ ಒಗೆದುಬಿಡುತ್ತಾರೆ. ಹೀಗೆ ಮಾಡುವುದರಿಂದ ರೋಗಾಣುಗಳು ಬಟ್ಟೆಯಲ್ಲೇ ಉಳಿಯುತ್ತವೆ. ಅದೇ ಬಟ್ಟೆಯನ್ನು ಮತ್ತೆ ಉಪಯೋಗಿಸಿದರೆ ರೋಗಾಣುಗಳು ಹರಡಿಕೊಳ್ಳುತ್ತವೆ.

ಕಿಚನ್‌ ಸ್ವಚ್ಛಗೊಳಿಸಿದ ನಂತರ ಬಟ್ಟೆಯನ್ನು ಹಾಗೆಯೇ ಬಿಡಬೇಡಿ. ಅದನ್ನು ಡಿಟರ್ಜೆಂಟ್‌ ಮತ್ತು ಡಿಸ್ಇನ್‌ಫೆಕ್ಟೆಂಟ್‌ ಹಾಕಿದ ನೀರಿನಿಂದ ಒಗೆದು ಒಣಗಿಸಿದ ನಂತರ ಉಪಯೋಗಿಸಿ.

ಸ್ಲ್ಯಾಬ್‌, ಗ್ಯಾಸ್‌ ಒಲೆ, ಪಾತ್ರೆಗಳು ಮತ್ತು ಕೈಗಳನ್ನು ಒರೆಸಿಕೊಳ್ಳಲು ಬೇರೆ ಬೇರೆ ಬಟ್ಟೆಗಳನ್ನು ಇಟ್ಟುಕೊಳ್ಳಿ. ಏಕೆಂದರೆ ಕಿಚನ್‌ನ ಹೈಜೀನ್‌ ಕಾಪಾಡಿಕೊಳ್ಳಬೇಕು.

ಗ್ಯಾಸ್‌ ಮತ್ತು ಸ್ಲ್ಯಾಬ್‌ನ ಸ್ವಚ್ಛತೆಗಾಗಿ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಸ್ಯಾನಿಟೈಸರ್ಸ್‌ ಲಭ್ಯವಿವೆ.

ಗ್ಯಾಸ್‌ ಸ್ಟವ್ ಅಥವಾ ಸ್ಲ್ಯಾಬ್‌ ಮೇಲೆ ಏನಾದರೂ ಬಿದ್ದಾಗ ಅದನ್ನು ಒಣಗಲು ಬಿಡಬೇಡಿ. ಕೂಡಲೇ ಸ್ವಚ್ಛಗೊಳಿಸಿ.

ಅನೇಕ ಮಹಿಳೆಯರು ಸ್ಲ್ಯಾಬ್‌ನ್ನು ತರಕಾರಿ ಕತ್ತರಿಸಲು ಮತ್ತು ರೊಟ್ಟಿ ತಟ್ಟಲು ಉಪಯೋಗಿಸುತ್ತಾರೆ. ಅದು ಹಾನಿಕಾರಕವಾಗಬಹುದು.

ಪಾತ್ರೆಗಳ ಸ್ವಚ್ಛತೆ

ಫುಡ್‌ ಪಾಯಿಸನಿಂಗ್‌ಅಥವಾ ಹೊಟ್ಟೆಯ ಇನ್ಛೆಕ್ಷನ್‌ಗೆ ಕಾರಣ ಪಾತ್ರೆಗಳಲ್ಲಿ ಉಳಿದುಬಿಡುವ ಸೋಪ್‌ ಕೂಡ ಆಗುತ್ತದೆ. ಅದರ ಬಗ್ಗೆ ಗಮನಕೊಡಿ.

ಪಾತ್ರೆಗಳನ್ನು ಲಿಕ್ವಿಡ್‌ ಸೋಪ್‌ನಿಂದ ತೊಳೆದರೆ ಅದರಿಂದ ಅಂಟುವಿಕೆಯೂ ದೂರವಾಗಿ ಪಾತ್ರೆಯಲ್ಲಿ ಸೋಪ್‌ ಕೂಡ ಉಳಿಯುವುದಿಲ್ಲ.

ಪಾತ್ರೆಗಳನ್ನು ತೊಳೆದ ನಂತರ ಕೀಟಾಣುಗಳು ಉಳಿಯದಂತಿರಲು ಅವನ್ನು 5 ನಿಮಿಷ ಬಿಸಿನೀರಿನಲ್ಲಿ ಇಟ್ಟು ಹೊರತೆಗೆಯಿರಿ.

ಒದ್ದೆ ಪಾತ್ರೆಗಳನ್ನು ಸಂಪೂರ್ಣವಾಗಿ ಒಣಗುವವರೆಗೆ ಎಂದೂ ಒಳಗೆ ಇಡಬೇಡಿ. ತೇವದಿಂದಾಗಿ ಅವುಗಳಲ್ಲಿ ಕೀಟಾಣುಗಳು ಉತ್ಪತ್ತಿಯಾಗುತ್ತವೆ.

ಕಿಚನ್‌ ಟೂಲ್ಸ್

 

ತರಕಾರಿ ಕತ್ತರಿಸಿದ ನಂತರ ಚಾಪರ್‌ ಬೋರ್ಡ್‌ ತೊಳೆಯದೆ ಇಡಬೇಡಿ. ಹಾಗೆ ಮಾಡಿದರೆ ಕೆಲವು ಗಂಟೆಗಳ ಬಳಿಕ ಅದರಲ್ಲಿ ಕೀಟಾಣುಗಳು ಉತ್ಪನ್ನವಾಗುತ್ತವೆ. ಅವು ಚಾಪರ್‌ ಬೋರ್ಡ್‌ ಮೇಲೆ ಮುಂದೆ ಕತ್ತರಿಸುವ ಖಾದ್ಯ ಪದಾರ್ಥಗಳನ್ನು ಸೋಂಕಿಗೀಡು ಮಾಡುತ್ತವೆ.

ಕಚ್ಚಾ ಮೀಟ್‌, ಮೀನು ಅಥವಾ ಚಿಕನ್‌ ಇತ್ಯಾದಿಗಳನ್ನು ಕತ್ತರಿಸಲು ಬೇರೆ ಬೇರೆ ಚಾಪರ್‌ ಬೋರ್ಡ್‌ ಉಪಯೋಗಿಸಿ. ಏಕೆಂದರೆ ಇವುಗಳಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯಾ ಸಿಗುತ್ತವೆ. ಕತ್ತರಿಸಿದ ನಂತರ ಚಾಪರ್‌ ಬೋರ್ಡ್‌ನ್ನು ಬಿಸಿನೀರಿನಿಂದ ತೊಳೆಯಬೇಕು. ಆಗ ಎಲ್ಲ ಬ್ಯಾಕ್ಟೀರಿಯಾ ಸಾಯುತ್ತವೆ.

ಅಡುಗೆ ಮಾಡುವಾಗ ಮಹಿಳೆಯರು ಒಮ್ಮೊಮ್ಮೆ ಸೌಟುಗಳನ್ನು ಉಪಯೋಗಿಸುತ್ತಾ ಅವನ್ನು ಗ್ಯಾಸ್‌ ಒಲೆ ಅಥವಾ ಸ್ಲ್ಯಾಬ್‌ ಮೇಲೆ ಇಟ್ಟುಬಿಡುತ್ತಾರೆ. ಅದರಿಂದ ಗ್ಯಾಸ್‌ ಒಲೆಯಂತೂ ಕೊಳೆಯಾಗುತ್ತದೆ. ಅಲ್ಲಿರುವ ಕೀಟಾಣುಗಳು ಊಟದಲ್ಲಿ ಸೇರುತ್ತವೆ. ಹಾಗೆ ಮಾಡಬೇಡಿ.

ಹೆಚ್ಚಿನ ಮನೆಗಳಲ್ಲಿ ಫ್ರಿಜ್‌ನ ಹ್ಯಾಂಡಲ್ ಕೂಡ ಸೋಂಕುಯುಕ್ತವಾಗಿರುತ್ತದೆ. ಏಕೆಂದರೆ ಅನೇಕ ಮಹಿಳೆಯರು ಕೆಲಸ ಮಾಡುವಾಗ ಕೊಳೆ ಕೈಗಳಿಂದ ಫ್ರಿಜ್‌ ತೆರೆಯುತ್ತಾರೆ. ಅದರಿಂದಾಗಿ ಹ್ಯಾಂಡಲ್ ಕೊಳೆಯಾಗುತ್ತದೆ. ಕೆಲವು ಗಂಟೆಗಳ ಬಳಿಕ ಅದರಲ್ಲಿ ಕೀಟಾಣುಗಳು ಉತ್ಪತ್ತಿಯಾಗುತ್ತವೆ.

ಒಮ್ಮೊಮ್ಮೆ ಮಿಕ್ಸರ್‌ ಮತ್ತು ಗ್ರೈಂಡರ್‌ ಜಾರ್‌ನ ಮುಚ್ಚಳದಲ್ಲಿ ಇರುವ ರಬ್ಬರ್‌ನ ಮೂಲೆಗಳಲ್ಲಿ ಕೊಳೆ ಉಳಿದುಹೋಗುತ್ತದೆ. ಅವನ್ನೂ ನಿಯಮಿತವಾಗಿ ಸ್ವಚ್ಛಗೊಳಿಸಿ.

ಫುಡ್‌ ಸ್ಟೋರೇಜ್‌

ಹಸಿ ತರಕಾರಿಗಳನ್ನು ಫ್ರಿಜ್‌ನಲ್ಲಿ ಬೇಯಿಸಿದ ಆಹಾರದೊಂದಿಗೆ ಇಡಬೇಡಿ. ತರಕಾರಿಗಳನ್ನು ಪಾಲಿಥಿನ್‌ ಬ್ಯಾಗ್‌ನಲ್ಲಿ ಸುತ್ತಿ ಫ್ರಿಜ್‌ನ ಕೆಳಗಿನ ಬ್ಯಾಸ್ಕೆಟ್‌ನಲ್ಲಿಟ್ಟರೆ ಚೆನ್ನಾಗಿರುತ್ತದೆ.

ಹಸಿಮಾಂಸ, ಚಿಕನ್‌ ಮತ್ತು ಮೊಟ್ಟೆಯನ್ನು ರಾಪ್‌ ಮಾಡಿ ಮತ್ತು ಬೇರೆ ಆಹಾರ ಪದಾರ್ಥಗಳೊಂದಿಗೆ ಬೆರೆಸದೆ ಬೇರೆಯಾಗಿಡಿ. ಏಕೆಂದರೆ ಇವುಗಳಲ್ಲಿರುವ ಬ್ಯಾಕ್ಟೀರಿಯಾ ಇತರ ಆಹಾರ ಪದಾರ್ಥಗಳನ್ನು ಹಾಳು ಮಾಡಬಹುದು.

ಬೇಯಿಸಿದ ಆಹಾರವನ್ನು ಫ್ರಿಜ್‌ನಲ್ಲಿ ತೆರೆದಿಡುವ ಬದಲು ಸಿಲ್ವರ್‌ ಫಾಯಿಲ್‌ನಲ್ಲಿ ರಾಪ್‌ ಮಾಡಿಟ್ಟರೆ ಸ್ವಚ್ಛವಾಗಿ, ತಾಜಾ ಆಗಿರುತ್ತದೆ.

ಒದ್ದೆ ಡಬ್ಬಿಗಳಲ್ಲಿ ಒಣ ಆಹಾರ ಪದಾರ್ಥಗಳನ್ನು ಇಡಬೇಡಿ. ಅವು ತೇವದಿಂದಾಗಿ ಹಾಳಾಗುತ್ತವೆ.

ಒಣಗಿಸಿ ಪುಡಿ ಮಾಡಿದ ಮಾಸಲೆ ಡಬ್ಬಿಗಳಲ್ಲಿ ಎಂದೂ ಒದ್ದೆ ಚಮಚ ಅಥವಾ ಕೈ ಹಾಕಬೇಡಿ.

ಆಹಾರ ಪದಾರ್ಥಗಳನ್ನು ಸದಾ ಏರ್‌ ಟೈಟ್‌ ಡಬ್ಬಗಳಲ್ಲೇ ಇಡಬೇಕು.

– ಪರಿಮಳಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ