ಮಕ್ಕಳಿಗೆ ಮೊದಲಿನಿಂದಲೂ ಸ್ವಚ್ಛತೆ ಶುಭ್ರತೆ ಹಾಗೂ ಹೈಜೀನ್‌ಗಳ ಕುರಿತಾಗಿ ತಿಳಿಸುತ್ತಲೇ ಇರಬೇಕು. ಈ ಅಭ್ಯಾಸ ಬಾಲ್ಯದಿಂದಲೇ ರೂಢಿಯಾದರೆ ಉತ್ತಮ, ಆಗ ಮಕ್ಕಳು ಇದರ ಕಡೆ ಆಸಕ್ತಿ ತಳೆಯಲು ಸಾಧ್ಯ. ಕೇವಲ ಮಕ್ಕಳಿಗೆ ಹೇಳಿಬಿಟ್ಟರೆ ಆಗಲಿಲ್ಲ, ಪೋಷಕರಿಗೂ ಈ ಅಭ್ಯಾಸಗಳ ಅಳವಡಿಕೆ ಇರಬೇಕು. ಹೇಳಿದ ಮಾತ್ರಕ್ಕೆ ಮಕ್ಕಳು ಇವನ್ನು ಪಾಲಿಸುವುದಿಲ್ಲ. ಹಿರಿಯರು ನಡೆದುಕೊಳ್ಳುವ ರೀತಿ ಗಮನಿಸಿ ಅದನ್ನು ಅನುಸರಿಸುತ್ತಾರೆ. ಹೈಜೀನ್‌ ಮತ್ತು ಸ್ವಚ್ಛತೆ ಶುಭ್ರತೆ ಮಕ್ಕಳನ್ನು ಎಷ್ಟೋ ರೋಗಗಳಿಂದ ದೂರ ಇಡುತ್ತದೆ. ಬೇಸಿಗೆ, ಮಳೆಗಾಲಗಳಲ್ಲಿ ಸೋಂಕು ಹರಡುವ ರೋಗಗಳ ತೀವ್ರ ಕಾಟವಿರುತ್ತದೆ. ಹೀಗಾಗಿ ಈ ಕಾಲದಲ್ಲಿ ಹೈಜೀನ್‌ಗೆ ಹೆಚ್ಚಿನ ಮಹತ್ವ ಕೊಡಬೇಕು.

ಒಂದು ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 47% ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಾರೆ. ಇದಕ್ಕೆ ಕಾರಣ ಹೊಟ್ಟೆಗಾಗುವ ಸೋಂಕು. ಏಕೆಂದರೆ ಸತತ ಸೋಂಕಿನಿಂದ, ಮಕ್ಕಳ ದೇಹದಿಂದ ಪೋಷಕಾಂಶಗಳು ನಷ್ಟಗೊಳ್ಳುತ್ತವೆ. ಅದರ ಪರಿಣಾಮ ಅವರ ಮೆದುಳಿನ ಮೇಲಾಗುತ್ತದೆ. ಇಷ್ಟು ಮಾತ್ರವಲ್ಲ, ಪೂರ್‌ ಹೈಜೀನ್‌ ಕಾರಣ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಯಲೂಬಹುದು.

ಈ ಕುರಿತಾಗಿ ಮಕ್ಕಳ ತಜ್ಞರು, ಸದಾ ಸ್ವಸ್ಥ ದೇಹದಲ್ಲಿ ಸ್ವಸ್ಥ ಬುದ್ಧಿ ಇರುತ್ತದೆ ಎನ್ನುತ್ತಾರೆ. ಇದು ಖಂಡಿತಾ ಸರಿ. ಏಕೆಂದರೆ ಹೈಜೀನ್‌ ಹಲವು ರೂಪಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಡೆಂಟಲ್, ನೇಲ್ಸ್, ಹೇರ್‌, ಫುಲ್ ಬಾಡಿ ಇತ್ಯಾದಿ ಸೇರಿವೆ.

ಸ್ವಚ್ಛತೆ ಶುಭ್ರತೆ ಕುರಿತಾದ ಈ ಸಲಹೆಗಳನ್ನು ಪೋಷಕರು ತಾವು ಪಾಲಿಸಿ, ಮಕ್ಕಳಿಗೂ ತಿಳಿಸಿಕೊಡಬೇಕು :

- ಮಗು ಸ್ವಲ್ಪ ದೊಡ್ಡದಾದಂತೆ ಅದಕ್ಕೆ ತಾನೇ ಹಲ್ಲುಜ್ಜಿಕೊಳ್ಳುವ ಅಭ್ಯಾಸ ಮಾಡಿಸಿ, ಬ್ರಶ್ಶಿಗೆ ಪೇಸ್ಟ್ ಹಾಕಿಕೊಟ್ಟು, ಬ್ರಶ್ಶಿಂಗ್‌ ಮಾಡುವ ವಿಧಾನ ಕಲಿಸಿ. ಜೊತೆಗೆ ನೀವು ಮಗು ಬಳಿ ನಿಂತು ಬ್ರಶ್‌ ಮಾಡುವುದರಿಂದ ಅದಕ್ಕೆ ಸಹಜವಾಗಿ ತಾನೂ ಮಾಡಬೇಕೆಂಬ ಆಸಕ್ತಿ ಮೂಡುತ್ತದೆ. ಇದನ್ನು ನಿರ್ಲಕ್ಷಿಸಿದರೆ, ಸಣ್ಣ ವಯಸ್ಸಿನಲ್ಲೇ ಮಗುವಿಗೆ ದಂತಕ್ಷಯ ಉಂಟಾಗುತ್ತದೆ. ದಂತ ಕುಳಿಗಳು ವಸಡುಗಳವರೆಗೂ ತಲುಪಿದರೆ, ಹಾಲುಹಲ್ಲು ಬಿದ್ದ ನಂತರ ಹೊಸ ಹಲ್ಲು ಮೂಡಲು ಸಮಸ್ಯೆ ಆಗಬಹುದು. ಇಷ್ಟು ಮಾತ್ರವಲ್ಲ, ಕೆಲವು ಮಕ್ಕಳು ತುಸು ದೊಡ್ಡವರಾಗುವವರೆಗೂ ಬಾಟಲಿ ಹಾಲು ಅಭ್ಯಾಸವಿರುತ್ತದೆ. ಇದರಿಂದಲೂ ದಂತ ಕುಳಿಗಳಾಗುತ್ತವೆ. ಆದ್ದರಿಂದ ಹಾಲು ಕುಡಿದ ನಂತರ ಆ ಮಕ್ಕಳು ತುಸು ನೀರು ಕುಡಿದು, ಬಾಯಿ ಮುಕ್ಕಳಿಸುವಂತೆ ಮಾಡಿ.

- ನೇಲ್ಸ್ ಹೈಜೀನ್‌ ಕುರಿತಾಗಿ ಮಕ್ಕಳಿಗೆ ಅಗತ್ಯ ತಿಳಿಸಿಕೊಡಬೇಕು. ಮಕ್ಕಳು ಹೊರಗಿನ ಧೂಳುಮಣ್ಣಿನಲ್ಲಿ ಆಟವಾಡಿಕೊಂಡು ಬಂದಿರುತ್ತಾರೆ. ಇದರಿಂದ ಉಗುರಿಗೆ ಕೊಳೆ ತುಂಬಿಕೊಳ್ಳುವುದು ಸಹಜ. ಉಗುರು ಕಚ್ಚುವ ಅಭ್ಯಾಸವಿರುವ ಮಕ್ಕಳಿಗೆ ಈ ಕೊಳೆ ನೇರವಾಗಿ ಅವರ ಹೊಟ್ಟೆ ಸೇರುತ್ತದೆ. ಕೊಳಕು ಕೈಗಳಿಂದ ದೇಹ ಅಥವಾ ತಲೆ ಕೆರೆಯುವುದರಿಂದ, ಅನಗತ್ಯ ಕ್ರಿಮಿಗಳಿಗೆ ಆಹ್ವಾನವಿತ್ತಂತೆ. ಇದನ್ನು ಸ್ಕ್ಯಾಬಿಜ್‌ ಇನ್‌ಫೆಕ್ಷನ್‌ ಎನ್ನುತ್ತಾರೆ. ಕೈ ತೊಳೆಯದೆ ಏನನ್ನಾದರೂ ತಿನ್ನುವ ಅಭ್ಯಾಸವಿರುವ ಮಕ್ಕಳಿಗೆ ಈ ಸೋಂಕು ಸುಲಭವಾಗಿ ಹೊಟ್ಟೆಗೆ ಸೇರುತ್ತದೆ. ಮಕ್ಕಳ ಕೈಗಳಲ್ಲಿ ತುಸು ಬೆಳೆದ ಉಗುರು ಗಮನಿಸಿದ ತಕ್ಷಣ, ಅವನ್ನು ಪುಸಲಾಯಿಸಿ ಉಗುರು ತೆಗೆಯಿರಿ. ಮೊದಲ ದಿನ ಅದು ಒಪ್ಪದಿದ್ದರೆ, ಹೇಗಾದರೂ ರಮಿಸಿ ಮಾರನೇ ದಿನ ತೆಗೆಯಿರಿ. ಹೀಗೆ ಇದೊಂದು ಅಗತ್ಯ ಕ್ರಮ ಎಂದು ಅದಕ್ಕೆ ಮನವರಿಕೆ ಮಾಡಿಕೊಡಿ. ಹಾಗೆ ಮಾಡುವಾಗ ಮಗುವಿಗೆ ಅದು ಎಷ್ಟು ಮುಖ್ಯ ಎಂದು ಅದರ ಲಾಭಾಂಶಗಳ ಬಗ್ಗೆ ತಿಳಿಸಿ. ಹಾಗೆಯೇ ಏನನ್ನೇ ಸೇವಿಸುವ ಮೊದಲು ಅಥವಾ ಶೌಚದ ನಂತರ ಮಗು ಲಿಕ್ವಿಡ್‌ ಸೋಪ್‌ ಬಳಸಿ ಕೈ ತೊಳೆಯಬೇಕು ಎಂಬುದನ್ನು ಕಲಿಸಿ. ಅದೇ ತರಹ ಹೊರಗೆ ಇದ್ದಾಗ ಸ್ಯಾನಿಟೈಸರ್‌ ಬಳಸುವುದನ್ನೂ ಕಲಿಸಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ