- ರಾಘವೇಂದ್ರ ಅಡಿಗ ಎಚ್ಚೆನ್.
"ನಾನು ಅಪ್ಪುಗಾಗಿ ಕನ್ನಡ ಕಲಿತೆ, ಅವರು ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಲು ಹೇಳಿದ್ದರು "ಎಂದು ನಟಿ ದ ಪ್ರಿಯಾ ಆನಂದ್ ಹೇಳಿದ್ದಾರೆ. ಆ ದಿನಗಳು ಡೈರೆಕ್ಟರ್ ಕೆ.ಎಂ.ಚೈತನ್ಯ ನಿರ್ದೇಶನದ ಬಲರಾಮನ ದಿನಗಳು ಸಿನಿಮಾದ ಮೊದಲ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
"ಅಪ್ಪು ನನಗೆ ಕನ್ನಡ ಕಲಿಯೋಕೆ ಹೇಳಿದ್ರು, ಜೊತೆಗೆ ನೀನು ಹೆಚ್ಚು ಹೆಚ್ಚು ಕನ್ನಡ ಸಿನಿಮಾ ಮಾಡಬೇಕು. ಕನ್ನಡ ಕಲಿಯಿರಿ ಅಂತ ಹೇಳಿದ್ರು. ನಾನು ಈಗ ಕನ್ನಡವನ್ನು ಕಲಿತಿದ್ದೀನಿ,ಆದ್ರೆ ಮಾತಾಡೊಕೆ ಸ್ವಲ್ಪ ಕಷ್ಟ. ನನಗೆ ಕನ್ನಡ ಅರ್ಥ ಅಗುತ್ತೆ ಮನೆಯಲ್ಲಿ ಕನ್ನಡ ಮಾತಾಡೊಕೆ ಯಾರು ಇಲ್ಲ " ನಟಿ ಪ್ರಿಯಾ ಆನಂದ್ ಹೇಳಿದ್ದಾರೆ.

ಪ್ರಿಯಾ ಆನಂದ್ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಅನೇಕ ಕನ್ನಡದ ಸಿನಿಮಾಗಳಲ್ಲಿ ನಟಿಸುತ್ತಾ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಪ್ರಿಯಾ "ರಾಜಕುಮಾರ" ಚಿತ್ರದಲ್ಲಿ ನೀತ್ ರಾಜ್‌ಕುಮಾರ್ ಜೋಡಿಯಾಗಿದ್ದರು. ಬಳಿಕ ಜೇಮ್ಸ್' ಚಿತ್ರದಲ್ಲಿ ಸಹ ನಾಯಕಿಯಾಗಿ ಮಿಂಚಿದ್ದರು. ಇಬ್ಬರ ಕಾಂಬಿನೇಷನ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ನಂತರ ಕರಟಕ ದಮನಕ, ಆರೆಂಜ್ ಸಿನಿಮಾಗಳಲ್ಲಿ ನಟಿಸಿ ಪ್ರಿಯಾ ಸೈ ಎನಿಸಿಕೊಂಡಿದ್ದಾರೆ. ಇದೀಗ ವಿನೋದ್ ಪ್ರಭಾಕರ್‌ಗೆ ನಾಯಕಿಯಾಗಿ ಬಲರಾಮನ ಅಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಂಡರ್‌ವರ್ಲ್ಡ್ ಕಮ್ ಪ್ರೇಮ್ ಕಹಾನಿ ಕಥಾನಕದ ಬಲರಾಮನ ದಿನಗಳು ಸಿನಿಮಾ ತೆರೆಗೆ ಬರೋಕೆ ಸಿದ್ದವಾಗಿದ್ದು ಸ್ಟಾರ್‌ಕಾಸ್ಟ್‌ನಿಂದಲೇ ಅತೀವ ಕುತೂಹಲ ಹುಟ್ಟಿಸಿದೆ. ಸಿನಿಮಾದ ಆಲ್ಬಮ್‌ನಿಂದ ಮೊದಲ ಹಾಡು ಬಿಡುಗಡೆ ಆಗಿದ್ದು ಇದು ತಮಿಳಿನ ಖ್ಯಾತ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಕಂಪೋಸ್ ಮಾಡಿರೋ ಗೀತೆಯಾಗಿದೆ. ಜಯಂತ್ ಕಾಯ್ಕಿಣಿ ಹಾಡಿನ ಸಾಹಿತ್ಯ ರಚಿಸಿದ್ದರೆ ಸಂಜಿತ್ ಹೆಗ್ಡೆ ಹಾಗೂ ಪುಣ್ಯ ಹಾಡಿಗೆ ದನಿಯಾಗಿದ್ದಾರೆ. ವಿನೋದ್ ಪ್ರಭಾಕರ್ ಪ್ರಿಯಾ ಆನಂದ್ ಕಾಂಬೋನ ಸಿನಿಮಾ ಇದಾಗಿದ್ದು, ಮೆಲೋಡಿ ಲವ್ ಟ್ರ್ಯಾಕ್‌ನಿಂದ ಗಮನ ಸೆಳೆಯುತ್ತಿದೆ. . 80ರ ದಶಕದ ಲವ್ ಕಮ್ ಕ್ರೈಂ ಸ್ಟೋರಿ ಇದಾಗಿದ್ದು, ನೈಜ ಘಟನೆಗಳನ್ನ ಆಧರಿಸಿ ಚಿತ್ರಿಸಲಾಗಿದೆ. ವಿನೋದ್-ಪ್ರಿಯಾ ಕೆಮಿಸ್ಟ್ರಿ ತುಂಬಾ ಚೆನ್ನಾಗಿದ್ದು, ಹಾಡು ಕೇಳೋಕೂ ಇಂಪಾಗಿದೆ, ಖ್ಯಾತ ಸಿನಿಮಾಟೋಗ್ರಾಫರ್ ಹೆಚ್ ಸಿ ವೇಣುಗೋಪಾಲ್ ಕ್ಯಾಮೆರಾದಲ್ಲಿ ದೃಶ್ಯವೈಭವದ ನಿರೀಕ್ಷೆ ದುಪ್ಪಟ್ಟಾಗಿದೆ.
ಆ ದಿನಗಳು ಸಿನಿಮಾದಂತೆಯೇ . ಈ ಬಾರಿ ಕೂಡ 80 ರ ದಶಕದ ರೆಟ್ರೋ ಕಥೆಯನ್ನ ತೆರೆಗೆ ತರಲಾಗುತ್ತಿದೆ. ಆ ದಿನಗಳು ಚಿತ್ರದಲ್ಲಿದ್ದ ಕಲಾವಿದರುಗಳಿಗೆಲ್ಲಾ ಇಲ್ಲಿಯೂ ಬಣ್ಣ ಹಚ್ಚಿಸಿದ್ದಾರೆ. ಆಶೀಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಬಲರಾಮನ ದಿನಗಳು ತಾರಾಗಣದಲ್ಲಿದ್ದಾರೆ. ಅಲ್ಲದೆ, ಡೆವಿಲ್, ಮಾರ್ಕ್ ಚಿತ್ರಗಳಿಂದ ಒಳ್ಳೆಯ ಸ್ಕೋರ್ ಮಾಡ್ತಿರೋ ಬಿಗ್‌ಬಾಸ್ ಆನೆ ವಿನಯ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್, ಈ ಸಿನಿಮಾನ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ನಟಿ ಲೇಖಾಚಂದ್ರ ಕೈ ಹಿಡಿದ ಯಂಗೆಸ್ಟ್ ನಿರ್ಮಾಪಕ ಶ್ರೇಯಸ್, ಈ ಚಿತ್ರದ ಮೂಲಕ ಕನ್ನಡದಲ್ಲಿ ಹೆಚ್ಚು ಒಳ್ಳೆಯ ಸಿನಿಮಾಗಳನ್ನು ತರುವ ಭರವಸೆ ಕೊಟ್ಟಿದ್ದಾರೆ.





