ಈ ಕುರಿತು ತಜ್ಞರ ಸಲಹೆ ಎಂದರೆ, ಉಗುರಿನ ಸಹಾಯದಿಂದ ಮಿನರಲ್ಸ್, ವಿಟಮಿನ್ಸ್ ಕೊರತೆ ಮಾತ್ರವಲ್ಲದೆ ಥೈರಾಯ್ಡ್, ಅನೀಮಿಯಾ, ಕಾರ್ಡಿಯಾಕ್ ಡಿಸೀಸ್, ಲಂಗ್ಸ್ ಡಿಸ್‌ಆರ್ಡರ್ಸ್ ಇತ್ಯಾದಿಗಳ ಬಗ್ಗೆ ಸುಲಭವಾಗಿ ತಿಳಿಯಬಹುದಾಗಿದೆ. ಹೆಲ್ದಿ ನೇಲ್ಸ್ ಸದಾ ತೆಳು ಗುಲಾಬಿ ಬಣ್ಣ ಹೊಂದಿರುತ್ತವೆ. ಪ್ರತಿ ದಿನ ಇವು 0.0030 ಮಿ.ಮೀ.ವರೆಗೂ ಬೆಳೆಯುತ್ತವೆ. ಆದರೆ ಇದು ವ್ಯಕ್ತಿಯ ವಯಸ್ಸು, ಆರೋಗ್ಯವನ್ನು ಅವಲಂಬಿಸಿದೆ. ಚಿಕ್ಕವಯಸ್ಸಿನಲ್ಲಿ ಉಗುರು ಬೇಗ ಬೇಗ ಬೆಳೆಯುತ್ತದೆ, ಆದರೆ ವಯಸ್ಸು, ಹೆಚ್ಚಿದಂತೆ ಇದರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಚಳಿಗಾಲ, ಹಿಮ ಬೀಳುವ ಕಡೆ ಉಗುರು, ಕೂದಲು ಉದ್ದ ಬೆಳೆಯುವುದು ಇನ್ನೂ ನಿಧಾನ. ಆದರೆ ಬೇಸಿಗೆಯಲ್ಲಿ ಇದು ಬೇಗ ಬೇಗ ಬೆಳೆಯುತ್ತದೆ.
ಉಗುರು ಏನು ಹೇಳುತ್ತದೆ?
ನಿಮ್ಮ ಉಗುರಿನ ಆಕಾರ ಗಿಣಿಯ ಕೊಕ್ಕಿನ ತರಹ ಚೂಪಾಗ ತೊಡಗಿದರೆ, ನಿಮಗೆ ಹೃದ್ರೋಗವಿದೆ ಎಂದು ಸೂಚನೆ ಅಥವಾ ಲಂಗ್ಸ್ ಡಿಸ್‌ಆರ್ಡರ್ ಸಹ ಆಗಿರಬಹುದು.
ಉಗುರಿನ ಮೇಲ್ಪದರದ ಮೇಲೆ ಬಿಳಿ ಕಲೆಗಳುಂಟಾದರೆ ಬಯೋಟಿನ್ ಕೊರತೆಯ ಸೂಚನೆ ಎಂದರಿಯಬೇಕು. ಬಯೋಟಿನ್‌ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ತಗ್ಗಿಸಿ, ದೇಹಕ್ಕೆ ಶಕ್ತಿ ತುಂಬುತ್ತದೆ. ಜೊತೆಗೆ ಈ ಉಗುರು ಲಿವರ್‌ಗೆ ಸಂಬಂಧಿಸಿದ ರೋಗದ ಕಡೆಯೂ ಸಂಕೇತ ನೀಡುತ್ತದೆ. ಇದಕ್ಕಾಗಿ ನಮ್ಮ ಆಹಾರದಲ್ಲಿ ಸದಾ ತಾಜಾ ಹಸಿ ತರಕಾರಿಗಳನ್ನು ಸಲಾಡ್, ಕೋಸಂಬರಿ ರೂಪದಲ್ಲಿ ಹೆಚ್ಚಾಗಿ ಸೇವಿಸಬೇಕು.
ಕ್ಯಾಲ್ಶಿಯಂ, ಪ್ರೋಟೀನ್, ವಿಟಮಿನ್‌ಗಳ ಕೊರತೆಯಿಂದ ಉಗುರು ಬ್ರಿಟ್ ಆಗುತ್ತದೆ. ಆಗ ಉಗುರಿನ ಮೇಲಿನಿಂದ ತೆಳು ಪದರಗಳು ಉದುರಲು ಆರಂಭಿಸುತ್ತವೆ. ಅಸಲಿಗೆ ಇಂಥ ಉಗುರುಗಳಲ್ಲಿ ರಕ್ತ ಪ್ರವಾಹ ಕಡಿಮೆ ಆಗಿರುತ್ತದೆ. ಇಂಥವರು ಸಾಮಾನ್ಯವಾಗಿ ಥೈರಾಯ್ಡ್ ಅಥವಾ ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿರುತ್ತಾರೆ. ಆದ್ದರಿಂದ ರೋಗದ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಮೊಟ್ಟೆ, ಮೀನು, ಬಾದಾಮಿ ಇತ್ಯಾದಿಗಳ ಸೇವನೆ ಬಲು ಲಾಭಕಾರಿ.
ಯಾರ ಉಗುರು ಲೈಟ್‌ನೀಲಿ ಬಣ್ಣಕ್ಕೆ ತಿರುಗುತ್ತದೋ ಅಂಥವರಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾ, ಹೃದ್ರೋಗಗಳ ಸಂಕೇತದ ಕುರಿತಾಗಿಯೂ ಆಗಿರಬಹುದು. ಮೊದಲೇ ಎಚ್ಚರ ವಹಿಸುವುದು ಲೇಸು.
ಹಳದಿ ಉಗುರಿನವರು ಸಾಮಾನ್ಯವಾಗಿ ಕಾಮಾಲೆ (ಜಾಂಡೀಸ್) ಪೀಡಿತರಾಗಿರುತ್ತಾರೆ. ಜೊತೆಗೆ ಸಿರೋಸಿಸ್‌ಫಂಗಲ್ ಇನ್‌ಫೆಕ್ಷನ್ ಕೂಡ ಆಗಿರಬಹುದು. ಅಧಿಕ ಧೂಮಪಾನ ಮಾಡುವವರ ಉಗುರು ಸಹ ಹಳದಿ ಅಥವಾ ಕೆಟ್ಟ ಬಣ್ಣಕ್ಕೆ ತಿರುಗುವುದನ್ನು ಗಮನಿಸಬಹುದು.
ಅರ್ಧ ಬಿಳಿ, ಅರ್ಧ ಗುಲಾಬಿ ಬಣ್ಣದ ಉಗುರು, ವ್ಯಕ್ತಿ ಕಿಡ್ನಿಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದಾನೆ ಎಂದು ಸೂಚಿಸುತ್ತದೆ. ಇಂಥ ರಕ್ತದ ಕೊರತೆ (ಅನೀಮಿಯಾ) ಬಗ್ಗೆಯೂ ಸೂಚಿಸುತ್ತವೆ.
ಬಿಳಿಯ ಬಣ್ಣದ ಉಗುರು ಲಿವರ್‌ಗೆ ಸಂಬಂಧಿಸಿದ ರೋಗ ಇದೆ ಎಂದು ಹೇಳುತ್ತದೆ. ಉದಾ : ಹೆಪಟೈಟಿಸ್.
ಎಷ್ಟೋ ಸಲ ಉಗುರಿನ ಅಕ್ಕಪಕ್ಕದ ಚರ್ಮ ತಂತಾನೇ ಒಣಗತೊಡಗುತ್ತದೆ. ಇದನ್ನು ನಿರ್ಲಕ್ಷಿಸದಿರಿ. ವಿಟಮಿನ್`ಸಿ,' ಫಾಲಿಕ್‌ಆ್ಯಸಿಡ್, ಪ್ರೋಟೀನ್ಸ್ ಕೊರತೆಯಿಂದ ಹೀಗಾಗುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಪ್ರೋಟೀನ್‌ಯುಕ್ತ ಪದಾರ್ಥ, ತಾಜಾ ಹಸಿರು ತರಕಾರಿ, ಸೊಪ್ಪು ಇತ್ಯಾದಿ ಹೇರಳವಾಗಿರಲಿ.