ಇಂದಿನ ಮಹಿಳೆಯರು ಕೆರಿಯರ್ಹಾಗೂ ಭವಿಷ್ಯದ ಕುರಿತು ಒಂದು ಅಜ್ಞಾತ ಭಯಕ್ಕೆ ಗುರಿಯಾಗಿರುತ್ತಾರೆ, ಎಂಬುದು ನಿಜ. ಆದರೆ ಹಾಗೆಂದ ಮಾತ್ರಕ್ಕೆ ನಿಜ ಜೀವನದ ಸವಾಲುಗಳಿಗೆ ಏಕೆ ಹೆದರಬೇಕು? ನಿಟ್ಟಿನಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಏನೆಲ್ಲ ಮಾಡಬಹುದು....?

ನಮ್ಮ ದೇಶದ ಶೇ.50ಕ್ಕಿಂತಲೂ ಹೆಚ್ಚಿನ ತಾಯಂದಿರಾದ ಉದ್ಯೋಗಸ್ಥ ವನಿತೆಯರು, ಕೇವಲ 30ರ ಹರೆಯದಲ್ಲೇ ತಮ್ಮ ಮಕ್ಕಳ ಆರೈಕೆಗಾಗಿ, ನೌಕರಿ ಬಿಡಬೇಕಾಗುತ್ತದೆ. ಅಶೋಕ ಯೂನಿವರ್ಸಿಟಿಯ `ಜ್ಯಾನ್‌ ಪ್ಯಾಕ್ಟ್ ಸೆಂಟರ್‌ ಫಾರ್‌ ವಿಮೆನ್ಸ್ ಲೀಡರ್‌ ಶಿಪ್‌' ತಾನು `ಪ್ರಿಡಿಕೆಮ್ಯಾಂಟ್‌ ಆಫ್‌ ರಿಟರ್ನಿಂಗ್‌ ಮದರ್ಸ್‌' ಎಂಬ ಹೆಸರಲ್ಲಿ ಒಂದು ವರದಿ ಸಲ್ಲಿಸಿದೆ. ಇದು ಉದ್ಯೋಗಸ್ಥ ತಾಯಂದಿರು ಎದುರಿಸಬೇಕಾದ ಸವಾಲುಗಳ ಕುರಿತಾಗಿ ನಡೆಸಲಾದ ಒಂದು ಆಮೂಲಾಗ್ರ ಸಂಶೋಧನೆ. ಈ ವರದಿಯ ಪ್ರಕಾರ, ತಾಯಿ ಆದ ನಂತರ, ಕೇವಲ 27% ಹೆಂಗಸರು ಮಾತ್ರವೇ ತಮ್ಮ ಕೆರಿಯರ್‌ ನ್ನು ಮುಂದುವರಿಸಲು ಸಾಧ್ಯ, ಮುಂದೆ ವರ್ಕ್‌ ಪೇರ್ಸ್‌ ನ ಭಾಗ ಆಗಿರುತ್ತಾರೆ. ಅಂದ್ರೆ ತಾಯಿ ಆದ ತಕ್ಷಣ ಬಹುತೇಕ 73% ಹೆಂಗಸರು ತಮ್ಮ ಕೆಲಸ ಬಿಟ್ಟು ಬಿಡುತ್ತಾರೆ.

ಪ್ರೊಫೆಶನಲ್ ಸೋಶ್‌ ಸೈಟ್‌ ಲಿಂಕ್‌ ಡೈನ್‌ ಸಹ ಇತ್ತೀಚೆಗೆ ಇಂಥದ್ದೇ ಒಂದು ವರದಿ ತಯಾರಿಸಿತು. ಇದರ ಪ್ರಕಾರ ನಮ್ಮ ದೇಶದಲ್ಲಿ 10ಕ್ಕೆ 7 ಮಹಿಳೆಯರು, ತಾಯಂದಿರಾದ ತಕ್ಷಣ ತಮ್ಮ ಕೆಲಸ ಬಿಡಲು ಬಯಸುತ್ತಾರೆ. ಇದಕ್ಕೆ ಮುಖ್ಯ ಕಾರಣ ವರ್ಕ್ ಪ್ಲೇಸ್‌ ನಲ್ಲಿ ಪಕ್ಷಪಾತ, ಸಂಬಳದಲ್ಲಿ ಕಡಿತ, ಕೆಲಸದಲ್ಲಿ ಫ್ಲೆಕ್ಸಿಬಿಲಿಟಿಯ ಕೊರತೆ.

ಈ ವರದಿಗಾಗಿ ಸುಮಾರು 2,266 ಹೆಂಗಸರನ್ನು ಸಂದರ್ಶಿಸಲಾಯಿತು. ಇದರಲ್ಲಿ ಹೆಂಗಸರ ಕೆಲಸ ಹಾಗೂ ಅದಕ್ಕೆ ಸಂಬಂಧಿಸಿದ ಸವಾಲುಗಳ ಕುರಿತಾಗಿ ವಿಮರ್ಶಿಸಲಾಯಿತು. ಈ ಸಂಶೋಧನೆಯಿಂದ ಖಚಿತವಾದುದೆಂದರೆ, ಕೊರೋನಾ ಮಹಾಮಾರಿ ಬಂದು ಹೆಂಗಸರ ಕೆಲಸದ ಮೇಲೆ ಬಲು ಕೆಟ್ಟ ಪರಿಣಾಮ ಬೀರಿದೆ. ಕೊರೋನಾ ನಂತರ ಈಗ ನಮ್ಮ ದೇಶದಲ್ಲಿ 10 ರಲ್ಲಿ 7 ಮಂದಿ, ಅಂದ್ರೆ ಸುಮಾರು 83% ಹೆಂಗಸರು ಆಫೀಸ್‌ ನಲ್ಲಿ ಹೆಚ್ಚು ಫ್ಲೆಕ್ಸಿಬಲ್ ವಿಧಾನಗಳಿಂದ ಕೆಲಸ ಮಾಡಬಯಸುತ್ತಾರೆ.

CU339060

ಹೆಂಗಸರೇಕೆ ನೌಕರಿ ಮಾಡಲಾರರು?

ಫ್ಲೆಕ್ಸಿಬಿಲಿಟಿಯ ಕೊರತೆ ಕಾರಣ ಹೆಂಗಸರು ನೌಕರಿ ಬಿಡುತ್ತಿದ್ದಾರೆ. ಒಂದು ಸಮೀಕ್ಷೆ  ಪ್ರಕಾರ, ಸುಮಾರು 70% ಹೆಂಗಸರು, ಕೊರೋನಾ ಕಾಲದಲ್ಲಿ ತಾಯಿಯಾಗುವ ಸಂದರ್ಭ ನೋಡಿಕೊಂಡು, ಕೆಲಸ ಬಿಡುತ್ತಾರೆ ಅಥವಾ ಬಿಡುವ ವಿಚಾರ ಮಾಡುತ್ತಾರೆ. ಕೆಲಸ ಮಾಡಲು ಎಲ್ಲಿ ಫ್ಲೆಕ್ಸಿಬಲ್ ಅವರ್ಸ್‌ ಇಲ್ಲವೋ ಅಂಥ ಕಡೆ ನೌಕರಿಯೇ ಬೇಡ ಎಂದು ಸಾರಾಸಗಟಾಗಿ ತಿರಸ್ಕರಿಸುತ್ತಾರೆ.

ಸಮೀಕ್ಷೆ ಪ್ರಕಾರ, 5 ರಲ್ಲಿ 3 ಹೆಂಗಸರು, ವರ್ಕ್‌ ಪ್ಲೇಸ್‌ ನಲ್ಲಿ ಫ್ಲೆಕ್ಸಿಬಿಲಿಟಿ ಇರುವುದರಿಂದ ತಮ್ಮ ತಮ್ಮ ಪರ್ಸನಲ್ ಲೈಫ್‌ ಹಾಗೂ ನೌಕರಿ ಮಧ್ಯೆ ಬ್ಯಾಲೆನ್ಸ್ ಇರಿಸಿಕೊಳ್ಳಲು ಸುಲಭ ಎಂದು ಭಾವಿಸುತ್ತಾರೆ. ಇದರಿಂದ ಹೆಂಗಸರಿಗೆ ತಮ್ಮ ಕೆರಿಯರ್‌ ನಲ್ಲಿ ಮುಂದುವರಿಯಲು ಉತ್ತಮ ಅವಕಾಶ ದೊರಕುತ್ತದೆ. ಇದು ಅವರ ಉತ್ತಮ ಮಾನಸಿಕ ಆರೋಗ್ಯಕ್ಕೂ ಅಷ್ಟೇ ಮುಖ್ಯ. ಇವೆಲ್ಲ ಕಾರಣಗಳಿಂದ ಅವರು ಮುಂದೆ ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲರು. ಈ ಅವಕಾಶಗಳು ಸಿಗದಿದ್ದರೆ, ತಮ್ಮ ಕೌಟುಂಬಿಕ ಜವಾಬ್ದಾರಿಗಳ ಕಾರಣ, ಅವರಿಗೆ ಕೆಲಸ ಬಿಡುವುದು ಅನಿವಾರ್ಯ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ