ತಾನು, ತನ್ನದು, ತಾನು ಮಾಡಿದ್ದೇ ಸರಿ ಎನ್ನುವ ಸ್ವಾರ್ಥ ಮನುಷ್ಯರನ್ನು ಯಾವ ಮಟ್ಟಕ್ಕಾದರೂ ಎಳೆದೊಯ್ಯಬಲ್ಲದು. ಇದರ ಅರಿವಾಗುವಷ್ಟರಲ್ಲಿ ಬದುಕಿನ ಸಂಧ್ಯಾಕಾಲ ಬಂದಿರುತ್ತದೆ. ಇಂತಹ ಎಡವಟ್ಟಾಗದಂತೆ ಎಚ್ಚರಿಕೆ ವಹಿಸುವುದು ನಮ್ಮ ಕೈಯಲ್ಲಿ ಇದೆಯಲ್ಲವೇ......?

ಹಿಂದಿನ ಕಾಲದಲ್ಲಿದ್ದಂತೆ ಬೆಳಗ್ಗೆ ಬರುವ ಪತ್ರಿಕೆಗಾಗಿ ಕಾದು ನಿಲ್ಲುವ ಕಾಲ ಇದಲ್ಲ, ಅದು ಹುಟ್ಟಿನ ಸುದ್ದಿಯಿರಲಿ, ಸಾವಿನ ಸುದ್ದಿಯಿರಲಿ, ಘಟನೆ ನಡೆದ ಕ್ಷಣಾರ್ಧದಲ್ಲಿ ವಿಶ್ವಾದ್ಯಂತ ಬಿತ್ತರಗೊಳ್ಳುವ ಕಾಲ. ಅಷ್ಟೇಕೆ, ತಾನೇ ಮೊದಲು ಹೇಳಿದ್ದು ಎಂಬ ಧಾವಂತದಲ್ಲಿ ಸಾಯುವ ಮೊದಲೇ ಶ್ರದ್ಧಾಂಜಲಿ ಸಲ್ಲಿಸುವವರೂ ಬಹಳಷ್ಟು ಜನರಿದ್ದಾರೆ.

ಅಂತಹದೊಂದು ಸುದ್ದಿ ಜಾಲತಾಣಗಳಲ್ಲಿ ಬಿತ್ತರಗೊಂಡಿತ್ತು. ವಿಶ್ವವಿಖ್ಯಾತ ವಿಜ್ಞಾನಿ, ಭಾರತೀಯ ಮೂಲದ ಡಾ. ರಮಾದೇವಿಯವರ ನಿಧನದ ಸುದ್ದಿ. ಅದಕ್ಕೂ ಮಿಗಿಲಾಗಿ, ಅವರು ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದು, ಸಾವಿನ ಸುದ್ದಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು. ಏಕೆಂದರೆ ಹುಟ್ಟಿದ್ದು ಈ ದೇಶದಲ್ಲಾದರೂ ತನ್ನ ಬದುಕಿನ ಹೆಚ್ಚಿನ ಅವಧಿಯನ್ನು ವಿದೇಶದಲ್ಲಿ ಕಳೆದದ್ದು, ವಿಶ್ವವೇ ಬೆರಗಾಗುವ ಸಾಧನೆ ಮಾಡಿದ್ದು ಹೊರದೇಶದಲ್ಲಿ. ಆದರೂ ತಮ್ಮ ಮರಣಾನಂತರ ತಮ್ಮ ದೇಹವನ್ನು ಹುಟ್ಟೂರಿನ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದು ಹೆಚ್ಚು ಪ್ರಚಾರ ಪಡೆದಿತ್ತು. ಆದರೆ ಆ ದೇಹ ದಾನದ ಹಿಂದಿನ ಕಥೆ ಇಂದಿನ ತಲೆಮಾರಿನವರಿಗೆ ಗೊತ್ತಿರಲಿಕ್ಕಿಲ್ಲ. ಅದನ್ನು ತಿಳಿದುಕೊಳ್ಳಬೇಕಾದರೆ ಅವರ ಗತಕಾಲದ ಕೆಲವು ವಿಶಿಷ್ಟ ಅಧ್ಯಾಯಗಳತ್ತ ನೋಡಬೇಕಿದೆ.

`ಪ್ರೀತಿ ಕುರುಡು' ಎಂಬ ಗಾದೆ ಮಾತಿನ ಅರ್ಥವಿಷ್ಟೇ, ಪ್ರೀತಿಯ ಬಲೆಗೆ ಬಿದ್ದರೆ ಬೇರೇನೂ ಕಾಣದು, ಕಾಣುವುದು ಪ್ರೀತಿ ಮತ್ತು ಪ್ರೇಮ ಮಾತ್ರ. ಅವರವರ ದೃಷ್ಟಿಯಿಂದ ಅದು ಸರಿಯಿರಬಹುದು, ಆದರೂ ನಮ್ಮ ದೇಶ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುವವರು ಸ್ವಂತ ವಿಷಯ ಬಂದಾಗ ಮಾತ್ರ ಸ್ವಾರ್ಥಿಯಾಗುವುದೇಕೆ ಎಂದು ಅರ್ಥವಾಗುವುದಿಲ್ಲ. ಮುಖ್ಯವಾಗಿ ಇಂದಿನ ಯುವಜನತೆಯಲ್ಲಿ ಇದು ಸ್ವಲ್ಪ ಹೆಚ್ಚೇ. ಆದರೆ ಸನಾತನ ಸಂಸ್ಕೃತಿಯ ಅರಿವು ಕಿಂಚಿತ್ತಾದರೂ ಇರುವವರಿಗೆ ಅರ್ಥವಾಗಲೇ ಬೇಕಾದ ಕೆಲವೊಂದು ಸರಳ ಸತ್ಯಗಳಿವೆ. ಅವುಗಳನ್ನು ತಿಳಿದುಕೊಳ್ಳುವ ಮನಸ್ಸು, ತಾಳ್ಮೆ ಇರಬೇಕು ಅಷ್ಟೇ.

ಅವರವರ ಬದುಕನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಅವರವರಿಗಿದೆ. ಹೌದು, ನಿಜ, ಇರಬೇಕು ಕೂಡಾ. ಆದರೆ ಯಾವುದೇ ಕ್ಷೇತ್ರವಿರಲಿ, ಎಷ್ಟೇ ಉನ್ನತ ಶಿಕ್ಷಣ ಪಡೆದಿರಲಿ, ಅತ್ಯುನ್ನತ ಅಧಿಕಾರ ಸ್ಥಾನದಲ್ಲಿರಲಿ, ಅನುಭವಕ್ಕೆ ಸಮನವಾದದ್ದು ಯಾವುದೂ ಇಲ್ಲ. ಇದು ಪ್ರೀತಿಪ್ರೇಮ ವಿವಾಹ ಮತ್ತು ನಂತರದ ಜೀವನಕ್ಕೂ ಅನ್ವಯಿಸುತ್ತದೆ. ಆದರೆ ಒಂದಿಷ್ಟು ಕಲಿತು, ಒಳ್ಳೆಯ ಆದಾಯ ಬರುವ ಉದ್ಯೋಗ ಸಿಕ್ಕಿದರೆ ಹೆಚ್ಚಿನವರಿಗೆ ಹಿರಿಯರ ಮಾತು ಅಪಥ್ಯ.

ಇಷ್ಟು ಮಾಡಿದರೆ ಸಾಕು, ಜಗತ್ತನ್ನೇ ಗೆದ್ದಂತೆ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆದರೆ ಅವರು ವಾಸ್ತವವನ್ನು ಮಾತ್ರ ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಹಿರಿಯರು ಅವರಿಗೆ ಅರ್ಥ ಮಾಡಿಸುವುದರಲ್ಲಿ ವಿಫಲರಾಗುತ್ತಾರೆ. ಎರಡರಲ್ಲಿ ಯಾವುದೋ ಒಂದು, ಅಥವಾ ಕೆಲವೊಮ್ಮೆ ಎರಡೂ ಹೌದು. ಮುಖ್ಯವಾಗಿ ಸಾಧನೆಯ ಅಮಲು ತಲೆಗೆ ಏರಿಸಿಕೊಂಡವರ ಭ್ರಮೆಯೇ ಇದಕ್ಕೆ ಮುಖ್ಯ ಕಾರಣ. ಬೇರೆ ಯಾವುದೇ ಕ್ಷೇತ್ರದಲ್ಲಿ ಒಮ್ಮೆ ತೆಗೆದುಕೊಂಡ ನಿರ್ಧಾರ ತಪ್ಪಾದರೆ ತಿದ್ದಿಕೊಳ್ಳಲು ಅವಕಾಶವಿದೆ. ಸಾಮಾಜಿಕ ವ್ಯವಸ್ಥೆ ಆದರೆ ವೈವಾಹಿಕ ಬದುಕಿನಲ್ಲಿ ಅದರಲ್ಲೂ ನಮ್ಮ ದೇಶದಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ಇಲ್ಲಿನ ಸಾಮಾಜಿಕ ವ್ಯವಸ್ಥೆಯೇ ಹಾಗಿದೆ. ಕಣ್ಣೆದುರಿಗೇ ಇಷ್ಟೊಂದು ಅನಾಹುತಗಳು ನಡೆಯುತ್ತಿದ್ದರೂ ಪುನರಾವರ್ತನೆ ಆಗುತ್ತಿರುವುದೇಕೆ? ಕಾರಣವಿಷ್ಟೇ, ವಿದೇಶಿ ಸಂಸ್ಕೃತಿಯ ಪ್ರಭಾವ ಮತ್ತು ಜಾಲತಾಣಗಳು ಸೃಷ್ಟಿಸುವ ಭ್ರಮಾಲೋಕ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ