ವಿಟಮಿನ್ಸ್ ನಮ್ಮ ದೇಹದ ವಿಭಿನ್ನ ಚಟುವಟಿಕೆಗಳನ್ನು ನಿಭಾಯಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತವೆ. ವಿಟಮಿನ್ಸ್ ಕೊರತೆಯಿಂದ ಹಲವು ಬಗೆಯ ಆರೋಗ್ಯದ ಸಮಸ್ಯೆಗಳು ಕಾಡಬಹುದು. ಇದರ ಕೊರತೆ ಚರ್ಮದ ಮೇಲೂ ಕಾಣಿಸುತ್ತದೆ. ನೀವು ನಿಮ್ಮ ಚರ್ಮವನ್ನು ಮೃದು, ಕೋಮಲ, ಯಂಗ್‌ಎನರ್ಜೆಟಿಕ್ ಆಗಿರಿಸಿಕೊಳ್ಳ ಬಯಸಿದರೆ ಎಲ್ಲಾ ಬಗೆಯ ವಿಟಮಿನ್ಸನ್ನು ಪ್ರಮಾಣಬದ್ಧವಾಗಿ ಸೇವಿಸಿ.
ವಿಟಮಿನ್ ಎ
ಇದು ಕೊಬ್ಬಿನ ಅಂಶವನ್ನೂ ವಿಲೀನಗೊಳಿಸಬಲ್ಲಂಥ ಶಕ್ತಿ ಹೊಂದಿದೆ. ಇದು ಮುಖ್ಯವಾಗಿ ರೆಟಿನಾಯ್ಡ್ ಕೆರೋಟಿನಾಯ್ಡ್ ರೂಪಗಳಲ್ಲಿ ಲಭ್ಯ. ತರಕಾರಿಗಳ ಬಣ್ಣ ಗಾಢ, ಹೊಳೆ ಹೊಳೆಯುತ್ತಿದ್ದಷ್ಟೂ, ಅದರಲ್ಲಿ ಕೆರೋಟಿನಾಯ್ಡ್ ಪ್ರಮಾಣ ಅಷ್ಟೇ ಅಧಿಕವಾಗಿರುತ್ತದೆ.
ಮೂಲ ವಿಟಮಿನ್ : ಮೊಟ್ಟೆ, ಮಾಂಸ, ಹಾಲು, ಪನೀರ್, ಕ್ರೀಂ, ಲಿವರ್, ಕಿಡ್ನಿ, ಮೀನಿನಂಥ ಆಹಾರ ಪದಾರ್ಥಗಳಲ್ಲಿ ಅಧಿಕ ಲಭ್ಯ. ಇದರಲ್ಲಿ ಸ್ಯಾಚುರೇಟೆಡ್‌ಫ್ಯಾಟ್‌ಕೊಲೆಸ್ಟ್ರಾಲ್ ಸಹ ಅಧಿಕವಾಗಿರುತ್ತದೆ. ಪಾಲಕ್ ಸೊಪ್ಪು, ಕ್ಯಾರೆಟ್, ಕುಂಬಳ, ಬ್ರೋಕ್ಲಿ, ಗಾಢ ಹಸಿರಿನ ಸೊಪ್ಪು ಇತ್ಯಾದಿ ವಿಟಮಿನ್‌ಗೆ ಉತ್ತಮ ಮೂಲ ಎನಿಸಿವೆ.
ಚರ್ಮಕ್ಕೆ ಎಷ್ಟು ಅಗತ್ಯ?
ವಿಟಮಿನ್ ಎ ಸೇವನೆಯಿಂದ ಚರ್ಮದಲ್ಲಿ ಉತ್ತಮ ಬಿಗಿತ ಮೂಡುತ್ತದೆ. ಯಾರು ತಮ್ಮ ಆಹಾರದಲ್ಲಿ ಹೆಚ್ಚಿನಂಶದ ವಿಟಮಿನ್‌ಸೇವಿಸಲ್ಲವೋ, ಅಂಥವರ ಚರ್ಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುಕ್ಕುಗಳು ಬೇಗ ಕಾಣಿಸುತ್ತವೆ. ವಿಟಮಿನ್ ಎ ಕೊರತೆಯಿಂದ ಚರ್ಮ ಶುಷ್ಕ, ಒರಟು ಆಗುತ್ತದೆ. ನಿಮ್ಮ ಚರ್ಮವನ್ನು ಸದಾ ಯಂಗ್ ಚಾರ್ಮಿಂಗ್ ಆಗಿರಿಸಲು ವಿಟಮಿನ್ ಎ ಬೆರೆತ ಆಹಾರ ಪ್ರಮಾಣ ಅಧಿಕಗೊಳಿಸಿ. ಇದು ಚರ್ಮದ ತೈಲಗ್ರಂಥಿಗಳ ಸಕ್ರಿಯತೆಯನ್ನು ಕಡಿಮೆಗೊಳಿಸುತ್ತದೆ. ಅತ್ಯಧಿಕ ಆಯ್ಲಿ ಚರ್ಮದ ಸಮಸ್ಯೆ ಇರುವವರಿಗೆ ಇದರ ಸೇವನೆ ಹೆಚ್ಚು ಪ್ರಯೋಜನಕಾರಿ. ವಿಟಮಿನ್ ಎ ಸೂರ್ಯನ ಯುವಿ ಕಿರಣಗಳಿಂದಲೂ ಚರ್ಮಕ್ಕೆ ಸುರಕ್ಷತೆ ಒದಗಿಸುತ್ತದೆ.
ವಿಟಮಿನ್ ಬಿ ಕಾಂಪ್ಲೆಕ್ಸ್
ಇದು ವಾಸ್ತವದಲ್ಲಿ ಹಲವು ವಿಟಮಿನ್‌ಗಳ ಗುಂಪಾಗಿದೆ. ಇದರಲ್ಲಿ ವಿಟಮಿನ್ ಬಿ(ಥಿಯಾಮಿನ್), ರೈಬೋಫ್ಲೇವಿನ್ (ವಿಟಮಿನ್ ಬಿ), ನಿಯಾಸಿನ್ (ವಿಟಮಿನ್ ಬಿ), ಪೆಂಟಾಥಾನಿಕ್ ಆ್ಯಸಿಡ್ (ವಿಟಮಿನ್ ಬಿ), ಪೈರಿಡಾಕ್ಸಿನ್ (ವಿಟಮಿನ್ ಬಿ), ಬಯೋಟಿನ್(ವಿಟಮಿನ್ ಬಿ), ಫಾಲಿಕ್ ಆ್ಯಸಿಡ್ (ವಿಟಮಿನ್‌ಬಿ), ಕೊಬಾಲಾಮಿನ್ (ವಿಟಮಿನ್ ಬಿ) ಇತ್ಯಾದಿ ಕೂಡಿವೆ.
ಮೂಲ : ಇಡಿಯಾದ ಕಾಳುಗಳು, ಪಾಲಕ್ ಸೊಪ್ಪು, ಬೀನ್ಸ್ ಹಾಗೂ ವಿವಿಧ ಅವರೆ, ಗೋರಿಕಾಯಿ, ಮೊಳಕೆ ಬಂದ ಕಾಳು, ಮೊಟ್ಟೆಯ ಹಳದಿ ಭಾಗ, ಡೇರಿ ಉತ್ಪನ್ನ, ಡ್ರೈಫ್ರೂಟ್ಸ್, ಮಾಂಸ ಇತ್ಯಾದಿ ಬಿ ಕಾಂಪ್ಲೆಕ್ಸ್ ನ ಉತ್ತಮ ಮೂಲಗಳಾಗಿವೆ.
ಚರ್ಮಕ್ಕೆ ಎಷ್ಟು ಅಗತ್ಯ?
ವಯಸ್ಸು ಹೆಚ್ಚುತ್ತಿದ್ದಂತೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಡುತ್ತವೆ. ವಿಟಮಿನ್ ಬಿ ಕಾಂಪ್ಲೆಕ್ಸ್ ಸೇವನೆ ಅವನ್ನು ನಿವಾರಿಸುವಲ್ಲಿ ಪೂರಕ. ಎಗ್ಸಿಮಾ, ಚರ್ಮ ಊದುವಿಕೆ, ಕೆಂಪಾಗುವುದು ಇತ್ಯಾದಿ ಇದರ ಕೊರತೆಯ ಸಂಕೇತವಾಗಿದೆ. ವಿಟಮಿನ್ಸ್ ಬಿ ಕೊರತೆಯಿಂದಾಗಿ ತುಟಿಗಳ ಚರ್ಮ ಒಣಗಿಹೊಗುತ್ತದೆ. ಅದು ತಂತಾನೇ ಒಡೆದು ಸೀಳು ಕಾಣಿಸುತ್ತದೆ. ಯಾರ ಚರ್ಮ ಅತಿ ಸಂವೇದನಾಶೀಲವೋ ಅವರು ತಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಬಿ ಹೇರಳವಾಗಿರುವ ಪದಾರ್ಥ ಬೆರೆಸಿಕೊಳ್ಳಬೇಕು.