ಸ್ಕಾಲ್ಪ್ ಕೇರ್

ಬೇಸಿಗೆಯ ದಿನಗಳಲ್ಲಿ ಸ್ಕಾಲ್ಪ್ ಅಥವಾ ತಲೆಯ ಚರ್ಮದ ಭಾಗದ ಆರೈಕೆ ಮಾಡುವುದೂ ಅಷ್ಟೇ ಮುಖ್ಯ. ಈ ಸೀಸನ್‌ನಲ್ಲಿ ತಲೆಯ ಚರ್ಮ ಸದಾ ಶುಭ್ರವಾಗಿದ್ದು, ಆರ್ದ್ರತೆಯಿಂದ ಕೂಡಿರಬೇಕು. ಇದರಿಂದ ಚರ್ಮ ಸೋಂಕಿಗೆ ಬಲಿಯಾಗದೆ ಸುರಕ್ಷಿತವಾಗಿರುತ್ತದೆ. ಏಕೆಂದರೆ ತಲೆಗೂದಲಿನ ಕಾರಣ ಬಿಸಿಲಿನ ಪರಿಣಾಮದಿಂದಾಗಿ ತಲೆಯಲ್ಲಿ ಬೆವರುವುದು ಹೆಚ್ಚು. ಯಾರು ಹೆಚ್ಚು ಬೆವರುತ್ತಾರೋ, ಅವರು ತಮ್ಮ ಕೂದಲನ್ನು ನಿಯಮಿತವಾಗಿ ಶುಚಿಗೊಳಿಸಬೇಕು. ಬೆವರಿನ ಕಾರಣ ತಲೆಗೂದಲಿಗೆ  ಧೂಳು ಮಣ್ಣು ಮೆತ್ತಿಕೊಳ್ಳಬಾರದು.

ನಿಮ್ಮ ತಲೆಯ ಚರ್ಮದ ಅಗತ್ಯಕ್ಕೆ ತಕ್ಕಂತೆ ಮೈಲ್ಡ್ ಶ್ಯಾಂಪೂ ಬಳಸಿರಿ. ಇದರಲ್ಲಿ ಕೆಮಿಕಲ್ಸ್ ಇರಬಾರದು. ಅಗತ್ಯಕ್ಕಿಂತ ಹೆಚ್ಚಾಗಿ ಶ್ಯಾಂಪೂ ಬಳಸುವುದರಿಂದಲೂ ತಲೆ ಚರ್ಮದಲ್ಲಿರಬೇಕಾದ ಅಗತ್ಯ ತೈಲೀಯ ಅಂಶಗಳೂ ಹಾಳಾಗುತ್ತವೆ. ಹೀಗಾಗಿ  ನಿಯಮಿತವಾಗಿ ತಲೆಗೆ ಎಣ್ಣೆ ಹಚ್ಚಿ ಮಸಾಜ್‌ಮಾಡಬೇಕು.

ಕೂದಲನ್ನು ಚೆನ್ನಾಗಿ ತೊಳೆದ ನಂತರ ಉತ್ತಮ ಕಂಡೀಶನರ್‌ಬಳಸಿರಿ. ಇದರಿಂದಾಗಿ ಕೂದಲಿಗೆ ಒಂದು ಸುರಕ್ಷಾ ಕವಚ ಸಿಕ್ಕಿದಂತಾಗುತ್ತದೆ. ಜೊತೆಗೆ ಕಂಡೀಶನರ್‌ಬಳಸುವುದರಿಂದ, ಕೂದಲು ಮತ್ತು ಸ್ಕಾಲ್ಪ್ ಎರಡೂ ಬಿಸಿಲಿನಲ್ಲೂ ಸುರಕ್ಷಿತವಾಗಿರುತ್ತವೆ. ಆಗ ಕೂದಲು ಹೆಚ್ಚು ಡ್ರೈ ಎನಿಸದು.

ಹೆಂಗಸರು ಬಿಸಿಲಲ್ಲಿ ಹೊರಗೆ ಹೋಗುವಾಗ ಕೂದಲನ್ನು ಸ್ಕಾರ್ಫ್‌ನಿಂದ ಕಟ್ಟಿಕೊಂಡು ಹೋಗಬೇಕು. ಇದರಿಂದ ತಲೆ ಚರ್ಮ ಹೆಚ್ಚು ಬೆವರು ಹನಿಸದು. ವೆಂಟಿಲೇಶನ್‌ ಸಹ ಸರಿಯಾಗಿರುತ್ತದೆ. ಜೊತೆಗೆ ತಲೆಗೂದಲು ಧೂಳುಮಣ್ಣಿನಿಂದಲೂ ಸುರಕ್ಷಿತ. ಗಂಡಸರು ಉತ್ತಮ ಫಿಟಿಂಗ್‌ನ ಟೋಪಿ ಧರಿಸಬೇಕು, ಆಗ ತಲೆ ಚರ್ಮಕ್ಕೆ ಹೆಚ್ಚಿನ ಬಿಸಿಲು ಹಾನಿ ಮಾಡದು.

ಸದಾ ಹೈಡ್ರೇಶನ್‌ಉಳಿಸಿಕೊಳ್ಳಿ

ಬೇಸಿಗೆಯಲ್ಲಿ ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ ಎಂದರೆ ನೀರು. ಈ ವಿಷಯ ಕೂದಲಿಗೂ ಅನ್ವಯಿಸುತ್ತದೆ. ಕೂದಲಿನ ಬುಡವನ್ನು ಸಶಕ್ತಗೊಳಿಸಲು, ಅದಕ್ಕೆ ಹೆಚ್ಚಿನ ಹೊಳಪು, ಶಕ್ತಿ ಹಚ್ಚಿಸುವಲ್ಲಿ ನೀರು ನಿರ್ವಹಿಸುವ ಪಾತ್ರ ದೊಡ್ಡದು. ತಲೆ ಚರ್ಮವನ್ನು ಆರೋಗ್ಯವಾಗಿರಿಸಲು ಸಹ ಧಾರಾಳ ನೀರು ಬೇಕು. ಹೈಡ್ರೇಶನ್‌ ಸರಿಯಾಗಿ ಉಳಿಯುವಂತೆ ಮಾಡಲು ನೀರೇ ಮೂಲಾಧಾರ. ಜೊತೆಗೆ ಎಳನೀರು, ನೀರಿನಂಶ ಪ್ರಧಾನವಾದ ಹಣ್ಣುಗಳು, ಹಣ್ಣುಗಳ ಜೂಸ್‌, ನಿಂಬೆ ಪಾನಕ, ನೀರು ಮಜ್ಜಿಗೆ, ಡೀಟಾಕ್ಸ್ ವಾಟರ್‌ ಇತ್ಯಾದಿ ಸಹ ಹೈಡ್ರೇಶನ್‌ ಬಳಸಿಕೊಳ್ಳಲು ಪೂರಕ.

ಶಾರ್ಟ್‌ಹೇರ್‌ನಿಂದ ಕೂಲ್‌ ಲುಕ್ಸ್

ಗಂಡಸರಿಗಂತೂ ಈ ಐಡಿಯಾ ಬಹಳ ಒಪ್ಪುತ್ತೆ ಬಿಡಿ. ಶಾರ್ಟ್‌ ಹೇರ್‌ ಈ ಸೀಸನ್‌ಗೆ ಹೇಳಿಮಾಡಿಸಿದ್ದು. ಅದೇ ರೀತಿ ಹೆಂಗಸರೂ ಸಹ ಯಾರು ತಮ್ಮ ಹೇರ್‌ಕಟ್‌ ಮಾಡಿಸಿಕೊಳ್ಳಲು ಬಯಸುತ್ತಾರೋ ಅಂಥವರೂ ಸಹ ಶಾರ್ಟ್‌ ಹೇರ್‌ ಇರಿಸಿಕೊಂಡರೆ ವಾಸಿ. ಕಲರಿಂಗ್‌ ಬೇಡ

ಹೆಚ್ಚಿನಂಶದ ಡೈ ಹೇರ್‌ ಕಲರ್ಸ್‌ನಲ್ಲಿ ಕೆಮಿಕಲ್ಸ್ ಜಾಸ್ತಿ ಇರುತ್ತದೆ. ಬೇಸಿಗೆಯಲ್ಲಂತೂ ಇದು ಕೂದಲಿಗೆ ಹೆಚ್ಚಿನ ಹಾನಿ ಮಾಡುತ್ತದೆ. ಯಾರು ಬೇಸಿಗೆಯ ಆರಂಭದಲ್ಲೇ ಕಲರಿಂಗ್‌ ಮಾಡಿಸಿಕೊಂಡು ಬಿಟ್ಟಿದ್ದಾರೋ ಅವರು ತಮ್ಮ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆರೈಕೆ ಮಾಡಬೇಕು. ಉರಿಬಿಸಿಲಲ್ಲಿ ಸುತ್ತಾಡಲೇಬೇಡಿ. ಯಾರು ಮಾಡಿಸಬೇಕು ಅಂದುಕೊಂಡಿದ್ದಾರೋ ಅವರು ಬೇಸಿಗೆಯಲ್ಲಿ ಅದನ್ನು ಕೈಬಿಡುವುದೇ ಒಳ್ಳೆಯದು.

ಕ್ರೀಡಾಪ್ರೇಮಿಗಳಿಗಾಗಿ

ಈ ಸೀಸನ್‌ನಲ್ಲಿ ಜನ ಸ್ವಿಮ್ಮಿಂಗ್‌, ಟ್ರೆಕ್ಕಿಂಗ್‌ ಇತ್ಯಾದಿ ಹೆಚ್ಚು ಇಷ್ಟಪಡುತ್ತಾರೆ. ಕೆಲವರು ತಮ್ಮನ್ನು ಫಿಟ್‌ ಆಗಿರಿಸಿಕೊಳ್ಳಲು ಹೆಚ್ಚು ವ್ಯಾಯಾಮ ಮಾಡಿ ಬೆವರು ಹರಿಸುತ್ತಾರೆ. ಅಂಥ ಮಹಿಳೆಯರು ತಮ್ಮ ಕೂದಲಿನ ವಿಶೇಷ ಆರೈಕೆ ಕಡೆ ಗಮನ ಕೊಡಬೇಕು. ಸ್ವಿಮ್ಮಿಂಗ್‌ಗೆ ಮೊದಲು ಶ್ಯಾಂಪೂ ಹಚ್ಚಬೇಡಿ. ಇದರಿಂದಾಗಿ ಕೂದಲಿನ ತೈಲಾಂಶ ಹೋಗಿಬಿಡುತ್ತದೆ ಹಾಗೂ ಕ್ಲೋರಿನ್‌ಸಂಪರ್ಕಕ್ಕೆ ಬೇಗ ಹೊಂದಿಕೊಂಡು ಬಿಡುತ್ತದೆ. ಆದ್ದರಿಂದ ಸ್ವಿಮ್ಮಿಂಗ್‌ನಂತರವೇ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ. ಯಾವ ವ್ಯಾಯಾಮ ಮಾಡಿದರೂ ಸರಿ, ನಿಮ್ಮ ಹೈಡ್ರೇಶನ್‌ ಕಡೆ ಗಮನವಿರಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ