ನಿಮಗೆ ಏರೋಬಿಕ್ಸ್, ಬ್ರಿಸ್ಕ್ ವಾಕಿಂಗ್‌, ಜಾಗಿಂಗ್‌, ಜುಂಬಾ ಮುಂತಾದ ಫಿಟ್‌ನೆಸ್‌ ವಿಧಾನಗಳು ಬೇಸರ ಹುಟ್ಟಿಸುತ್ತಿದ್ದರೆ, ನೀವು  ವಾಟರ್‌ ವರ್ಕ್‌ಔಟ್‌ ಅನುಸರಿಸಿ. ಅಂದರೆ ಈಜುಕೊಳವನ್ನೇ ಜಿಮ್ ಪೂಲ್ ‌ಮಾಡಿಕೊಳ್ಳಿ.

ಅಂದಹಾಗೆ ಫಿಟ್‌ನೆಸ್‌ನ ಯಾವುದೇ ವಿಧಾನಗಳಿಂದ ಬಾಡಿ ಟೋನಿಂಗ್‌ ಅವಶ್ಯವಾಗಿ ಆಗುತ್ತದೆ. ಆದರೆ ಕ್ಯಾಲೋರಿ ಬರ್ನ್‌ ಮಾಡುವುದು ಹಾಗೂ ರೋಗಗಳಿಂದ ದೂರ ಇರಲು ನಿಮಗೆ ವಾಟರ್‌ ವರ್ಕ್‌ಔಟ್‌ ಪರಿಣಾಮಕಾರಿ ಎನಿಸುತ್ತದೆ. ವಾಟರ್‌ ವರ್ಕ್‌ಔಟ್‌ನಿಂದ ನೀವು ಹಲವು ಬಗೆಯ ರೋಗಗಳಿಂದ ದೂರ ಇರಬಹುದು. ಇದರಿಂದ ಎಲ್ಲ ಅಂಗಗಳಿಗೂ ಸಾಕಷ್ಟು ಕಸರತ್ತು ಆಗುತ್ತದೆ.

ಏನಿದು ವರ್ಕ್ಔಟ್‌?

ನೀರಿನಲ್ಲಿ ವ್ಯಾಯಾಮ ಮಾಡುವುದನ್ನೇ `ವಾಟರ್‌ ವರ್ಕ್‌ಔಟ್‌' ಅಥವಾ `ಅಕ್ವಾ ವರ್ಕ್‌ಔಟ್‌' ಎಂದು ಕರೆಯಲಾಗುತ್ತದೆ. ಹರಿಯುವ ನೀರಿನಲ್ಲಿ ವಾಟರ್‌ ವರ್ಕ್‌ಔಟ್‌ ಮಾಡಲು ಆಗದು. ಸ್ವಿಮ್ಮಿಂಗ್‌ ಪೂಲ್‌ನಲ್ಲಿಯೇ ವಾಟರ್‌ ಎಕ್ಸರ್‌ ಸೈಜ್‌ ಮಾಡುವುದು ಸೂಕ್ತ. ಅದರಲ್ಲಿ ನೀರಿನ ಆಳ 3 ಅಡಿಗಿಂತ ಅಧಿಕವಾಗಿರಬಾರದು.

WATER-WORKOUT

ನೀರಿನಿಂದ ಏನೆಲ್ಲ ಅನುಕೂಲ?

ವ್ಯಾಯಾಮ ಮಾಡಲು ಬೊಜ್ಜು ಬಹುದೊಡ್ಡ ತೊಂದರೆ ಅನಿಸುತ್ತದೆ. ಇಂಥ ಸ್ಥಿತಿಯಲ್ಲಿ `ವಾಟರ್‌ ವರ್ಕ್‌ಔಟ್‌' ಅನುಸರಿಸಿ. ತಜ್ಞರ ಪ್ರಕಾರ, ವ್ಯಾಯಾಮ ಮಾಡುವಾಗ ದೇಹದ ತೂಕ ಶೇ.10ರಷ್ಟು ಆಗಿರುತ್ತದೆ. ಈ ರೀತಿಯ ವರ್ಕ್‌ಔಟ್‌ ಮಾಡುವುದರಿಂದ ಕೀಲುನೋವು, ಬೊಜ್ಜು, ಮಧುಮೇಹ ಮುಂತಾದವುಗಳಲ್ಲಿ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಮುಕ್ತ ವಾತಾವರಣದಲ್ಲಿ ವ್ಯಾಯಾಮ ಮಾಡುವುದರಿಂದ ಕೈ ಹಾಗೂ ಕಾಲುಗಳು ತಪ್ಪು ದಿಸೆಯಲ್ಲಿ ಕ್ರಿಯಾಶೀಲ ಆಗುವುದರಿಂದ ಪೆಟ್ಟು ತಗುಲುವ ಸಾಧ್ಯತೆ ಇರುತ್ತದೆ. ದೇಹ ಅತಿಯಾಗಿ ಭಾರವಾಗಿರುವ ಕಾರಣದಿಂದ ವ್ಯಾಯಾಮವನ್ನು ಸಮರ್ಪಕವಾಗಿ ಮಾಡಲು ಆಗುವುದಿಲ್ಲ.

ವಾಟರ್‌ ವರ್ಕ್‌ಔಟ್‌ನಿಂದ ಮಾಂಸಖಂಡಗಳಿಗೆ ಬಲ ದೊರೆಯುತ್ತದೆ. ಅದರ ಹೊರತಾಗಿ ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಒತ್ತಡದಿಂದ ಮುಕ್ತಿ ದೊರಕುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ತಾಜಾತನ ಮತ್ತು ಖುಷಿಯವ ಅನುಭವ ದೊರಕುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಇದು ಲಾಭಕರವಾಗಿದೆ. ಅಂದಹಾಗೆ ಇದು ಎಲ್ಲ ವಯಸ್ಸಿನರಿಗೂ ಉಪಯುಕ್ತ.

WATER WRKOUT

ಮೇಲ್ವಿಚಾರಣೆ ಮುಖ್ಯ

ನೀವು ಮೊದಲ ಬಾರಿ ವಾಟರ್‌ ವರ್ಕ್‌ಔಟ್‌ ಮಾಡುತ್ತಿರುವಿರಿ ಎಂದರೆ ಅದನ್ನು ತರಬೇತುದಾರರ ಮೇಲ್ವಿಚಾರಣೆಯಲ್ಲಿಯೇ ಮಾಡಿ. 1 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಇರಬೇಡಿ. ಇಲ್ಲದಿದ್ದರೆ ತ್ವಚೆಗೆ ಸನ್‌ಬರ್ನ್‌ನ ಮಾರಕ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಅದರಿಂದ ಪಾರಾಗಲು ವಾಟರ್‌ ವರ್ಕ್‌ಔಟ್‌ ಮಾಡುವ 20 ನಿಮಿಷ ಮೊದಲು ದೇಹಕ್ಕೆ 30 SPFನ ಸನ್‌ಸ್ಕ್ರೀನ್‌ ಲೇಪಿಸಿಕೊಳ್ಳಿ. ಯಾವುದೇ ಬಗೆಯ ವಾಟರ್‌ ವರ್ಕ್‌ಔಟ್‌ ಮಾಡಿದ ಬಳಿಕ 10 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ಏಕೆಂದರೆ ದೇಹದ ತಾಪಮಾನ ಸಾಮಾನ್ಯಗೊಳ್ಳಲು ಇದು ಅತ್ಯವಶ್ಯ.

ಕ್ಯಾಲೋರಿ ಬರ್ನರ್

ನೀವು ಆರೋಗ್ಯಕರ ರೀತಿಯಲ್ಲಿ ತೂಕ ಕಡಿಮೆ ಮಾಡಲು ಇಚ್ಛಿಸುತ್ತಿದ್ದರೆ ವಾಟರ್‌ ವರ್ಕ್‌ಔಟ್‌ನ್ನು ಅವಶ್ಯವಾಗಿ ಅನುಸರಿಸಿ. ಏಕೆಂದರೆ ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ಮಾಂಸಖಂಡಗಳಿಗೆ ಒತ್ತಡ ಉಂಟಾಗುವುದಿಲ್ಲ. ನೀವು ದಿನಕ್ಕೆ 1 ಗಂಟೆ ವಾಟರ್‌ ವರ್ಕ್‌ಔಟ್‌ ಮಾಡುವುದರಿಂದ 300-600 ಕ್ಯಾಲೋರಿ ಬರ್ನ್‌ ಆಗುತ್ತದೆ. ಅಂದರೆ ವಾಟರ್‌ ವರ್ಕ್‌ಔಟ್‌ನಿಂದ ದೇಹದ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ದೇಹವನ್ನು ಸುರಕ್ಷಿತ ರೀತಿಯಲ್ಲಿ ಶೇಪ್‌ನಲ್ಲೂ ತರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ