-: ರಾಘವೇಂದ್ರ ಅಡಿಗ ಎಚ್ಚೆನ್.
ಸರ್ಕಾರವು ಹೊರತರುತ್ತಿರುವ ಹೊಸ ಮಸೂದೆಯ ಕುರಿತು ಅರಿವು ಮೂಡಿಸುವ *’ರಾಂಗ್ ವರ್ಡ್ಸ್’* ವಿಡಿಯೋ ಆಲ್ಬಂ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿತು. *ರ‍್ಯಾಡಿಕಲ್ ಕಾನ್ಸೆಪ್ಟ್ ಸ್ಟುಡಿಯೋ ನಿರ್ಮಾಣದ* ಜವಬ್ದಾರಿಯನ್ನು ಹೊತ್ತುಕೊಂಡಿದೆ.

ಬೆಂಗಳೂರು ಮೂಲದ ಯುವ ಪ್ರತಿಭೆ *ನಹೇಶ್ ಪೂಲ್ ವೃತ್ತಿಯಲ್ಲಿ ಆಟೋಮೊಬೈಲ್ ಇಂಜಿನಿಯರ್. ಪ್ರವೃತ್ತಿ ಫಿಲಂ ಮೇಕರ್. ಇದರಿಂದಲೇ ಸದರಿ ಗೀತೆಗೆ ಸಾಹಿತ್ಯ, ಸಂಗೀತ, ನಿರ್ದೇಶನ ಜತೆಗೆ ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.*

ಈ ಸಂದರ್ಭದಲ್ಲಿ ಮಾತನಾಡಿದ ನಹೇಶ್ ಪೂಲ್, ಕಳೆದ ತಿಂಗಳು ’ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಅಥವಾ ಸಮುದಾಯದ ವಿರುದ್ದ ಯಾವುದೇ ವ್ಯಕ್ತಿ ಮಾತನಾಡಿದರೆ ಅಪರಾಧ ಎಂದು ಐವತ್ತು ಸಾವಿರ ದಂಡ, ಏಳು ವರ್ಷ ಜೈಲು ಶಿಕ್ಷೆ ಎಂಬುದರ ಬಗ್ಗೆ ಮಸೂದೆ ಹೊರಡಿಸಿದೆ. ಆದರೆ ಇಲ್ಲಿಯವರೆಗೂ ರಾಜ್ಯಪಾಲರಿಂದ ಹಸಿರು ನಿಶಾನೆ ಸಿಕ್ಕಿಲ್ಲ.

ಇಂತಹ ಮಸೂದೆ ಸಾರ್ವಜನಿಕರಿಗೆ ಮಾಹಿತಿ ತಿಳಿದಿರುವುದಿಲ್ಲ. ಅದಕ್ಕಾಗಿ ಹಾಡಿನ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ. ’ನಾನು ತಪ್ಪಾದ ಪದಗಳನ್ನು ಬಳಸಲು ಸಾಧ್ಯವಿಲ್ಲ.

ಅವುಗಳನ್ನು ಬಳಸಿದರೆ ನನ್ನನ್ನು ಬಂದಿಸುತ್ತಾರೆ. ನನಗೆ ಬೇರೆ ಯಾವುದೇ ಪದಗಳಿಲ್ಲ.
ಜತೆಗೆ ನಾವು ಜನರಿಗೆ ಮರಳಿ ಕೊಡುವಂತಹ ಒಂದು ಮಾದರಿ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ.

ವಿಧಾನಸೌದ ಮೆಟ್ಟಲುಗಳ ಬಳಿಯಿಂದ ಪ್ರತಿಯೊಂದು ಹಂತವನ್ನು ನೇರ ಪ್ರಸಾರವಾಗಿ ತೋರಿಸಿ, ಪಾರದರ್ಶಕತೆಯೊಂದಿಗೆ ರಸ್ತೆಯನ್ನು ನಿರ್ಮಿಸುವುದು ನನ್ನ ಗುರಿಯಾಗಿದೆ. ಇದನ್ನು ನಿರ್ಮಿಸಲು ನನಗೆ ಸಹಾಯ ಮಾಡಿ ಎನ್ನುವಂತಹ ಅಂಶಗಳು ಇರಲಿದೆ. ವಿಧಾನಸೌದ ಮುಂಬಾಗ ಒಂದು ದಿನ ಚಿತ್ರೀಕರಣ ನಡೆಸಲಾಗಿದೆ ಎಂದು ಗಿಟಾರ್ ನುಡಿಸಿ ಮಾಧ್ಯಮ ಮಿತ್ರರನ್ನು ರಂಜಿಸಿದರು.

ಕ್ರಿಯೇಟೀವ್ ಮುಖ್ಯಸ್ಥೆ ಅಕ್ಷರಸುರೇಶ್, ಛಾಯಾಗ್ರಹಣ-ಸಂಕಲನ ಸಾಗರ್ ಅವರದಾಗಿದೆ.





