ಪ್ರಶ್ನೆ : ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ವಸ್ತುನ್ನು ಹೆಸರಿಸಿ.

ಉತ್ತರ : ಇಡ್ಲಿ, ದೋಸೆ ಹಿಟ್ಟು!

ಪತಿ : ಅಕಸ್ಮಾತ್‌ ಮುಂದೊಂದು ದಿನ ನಾನು ಕಣ್ಮರೆಯಾಗಿ ತಪ್ಪಿಸಿಕೊಂಡು ಬಿಟ್ಟರೆ, ಆಗ ಏನು ಮಾಡ್ತೀಯಾ?

ಪತ್ನಿ : ತಕ್ಷಣ ಪೇಪರ್‌ ನಲ್ಲಿ ಜಾಹೀರಾತು ಕೊಡ್ತೀನಿ.

ಪತಿ : ವಾಹ್‌.... ಏನಂತ ಕೊಡ್ತೀಯಾ?

ಪತ್ನಿ : ಗಂಡ ಬೇಕಾಗಿದ್ದಾನೆ!

ಪತ್ನಿ : ರೀ, ನಾವು ಭೂತ ಓಡಿಸ್ಬೇಕಾದ್ರೆ ತಾಯಿತ ಕಟ್ತೀವಿ, ಅದೇ ಭೂತವನ್ನು ಕರೀಬೇಕಾದ್ರೆ.....?

ಪತಿ : ತಾಳಿ ಕಟ್ತೀವಿ.....!

ಮಹಿಳೆ : ಸ್ವಾಮೀಜಿ, ನನ್ನ ಗಂಡನನ್ನು ಸದ್ಯಕ್ಕೆ ಸಿಲುಕಿರೋ ಹಗರಣದಿಂದ ಪಾರು ಮಾಡಿ.

ಸ್ವಾಮೀಜಿ : ತಾಯಿ, ಯಾವುದಾದರೂ ಹಗರಣವೇ ಇಲ್ಲದ ರಾಜಕಾರಣಿಯ ಮನೆಯಿಂದ ಸಾಸುವೆ ತಂದರೆ, ನಿನ್ನ ಗಂಡನ್ನ ಪಾರು ಮಾಡಬಹುದು.

ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು :

  1. ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ ``ಅವಳು ನಿನ್ನನ್ನೇ ನೋಡುತ್ತಿದ್ದಾಳೆ!''
  2. ಬಸ್‌ ಕಂಡೆಕ್ಟರ್‌ ಹೇಳಿದ ಸುಳ್ಳು ಕಥೆ ``ನೆಕ್ಸ್ಟ ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.''
  3. ಪೋಷಕರು ಹೇಳಿದ ಸುಳ್ಳು ಕಥೆ ``10ನೇ ತರಗತಿವರೆಗೆ ಕಷ್ಟಪಟ್ಟರೆ ಸಾಕು.... ಆಮೇಲೆ ಆರಾಮವಾಗಿ ಇರಬಹುದು.''
  4. ಕಾಲೇಜ್‌ ಪ್ರಿನ್ಸಿಪಾಲ್ ‌ಹೇಳಿದ ಸುಳ್ಳು ಕಥೆ ``ಈ ಕೋರ್ಸ್‌ ಗೆ ಮುಂದೆ ಬಹಳ ಸ್ಕೋಪ್‌ ಇದೆ.''
  5. ಹೊಸದಾಗಿ ನೇಮಕಗೊಂಡ ಸಹೋದ್ಯೋಗಿ ಹೇಳಿದ ಸುಳ್ಳು ಕಥೆ ``ಸಂಬಳ ಕಡಿಮೆ. ಆದರೆ ಏನಂತೆ.... ಕಲಿಯಲು

ಬಹಳಷ್ಟು ಅವಕಾಶ ಇದೆ.''

  1. ಬಡ್ತಿ ತಿರಸ್ಕರಿಸುವಾಗ ಬಾಸ್‌ ಹೇಳಿದ ಸುಳ್ಳು ಕಥೆ ``ನಿನ್ನ ಪರ್ಫಾರ್ಮೆನ್ಸ್ ತೃಪ್ತಿದಾಯಕವಾಗಿಲ್ಲ.''
  2. ಹುಡುಗಿಯನ್ನು ನೋಡಲು ಹೋದಾಗ, ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ ``ನಮ್ಮ ಹುಡುಗಿ ಅಡುಗೆ ಚೆನ್ನಾಗಿ ಮಾಡ್ತಾಳೆ. ಈ ಅವಲಕ್ಕಿ ಇವಳೇ ಮಾಡಿದ್ದು.....!!''
  3. ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ ``ನಾನು ಅಕೇಶನಲಿ ಡ್ರಿಂಕ್ಸ್ ತಗೋಳ್ತೀನಿ ಅಷ್ಟೆ......!!''
  4. ಪ್ರಶಸ್ತಿ ವಿತರಣೆಯ ಸಮಯದಲ್ಲಿ ಅತಿಥಿ ಹೇಳಿದ ಸುಳ್ಳು ಕಥೆ ``ನನ್ನ ದೃಷ್ಟಿಯಲ್ಲಿ ಎಲ್ಲರೂ ವಿನ್ನರ್ಸ್‌.''
  5. ಬಟ್ಟೆ ಅಂಗಡಿಯ ಸೇಲ್ಸ್ ಮನ್‌ ಹೇಳಿದ ಸುಳ್ಳು ಕಥೆ ``ಈ ಬಣ್ಣ ನಿಮಗೆ ಕರೆಕ್ಟ್ ಆಗಿ ಸೂಟ್‌ ಆಗುತ್ತೆ....''
  6. ಟೇಬಲ್ ಮೇಟ್‌ ಹೇಳಿದ ಸುಳ್ಳು ಕಥೆ ``ಬಿಯರ್‌ ಆಲ್ಕೋಹಾಲ್ ಅಲ್ಲ ಮಾರಾಯ....''

ಇನ್ನೊಂದು ಎಕ್ಟ್ರಾಡಿನರಿ ಮಹಾನ್‌ ಸುಳ್ಳು ಕಥೆ ಗಂಡ ತನ್ನ ಹೆಂಡತಿಗೆ ಹೇಳಿದ್ದು  ``ನನ್ನ ಹೃದಯದಲ್ಲಿ ನಿನ್ನನ್ನು ಬಿಟ್ಟು ಯಾರಿಗೂ  ಜಾಗ ಇಲ್ಲ.....!!''

ಟೀಚರ್‌ : `ಸಕ್ಕರೆ' ಎಂಬ ಪದ ಬಳಸಿ ಒಂದು ವಾಕ್ಯ ರಚಿಸಿರಿ.

ಗುಂಡ : ನಿನ್ನೆ ಸಂಜೆ ನಾನು ಒಂದು ಕಪ್‌ ಚಹಾ ಕುಡಿದೆ.

ಟೀಚರ್‌ : ಇದರಲ್ಲಿ ಸಕ್ಕರೆ ಎಲ್ಲಿ ಬಂತೋ...?

ಗುಂಡ : ಅದು ಚಹಾದಲ್ಲಿ ಕರಗಿದೆ ಟೀಚರ್‌!

ಟೀಚರ್‌ : ಮಕ್ಕಳೇ, ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ, ಅಲ್ಲವೇ? ಅದಕ್ಕೆ ಏನಂತಾರೆ?

ಸೀನ : ಅಷ್ಟೆಲ್ಲ ಗೊತ್ತಿದ್ದರೆ ನಾವೇಕೆ ನಿಮ್ಮ ಕ್ಲಾಸ್‌ ಅಟೆಂಡ್‌ ಮಾಡ್ತಿದ್ವಿ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ