ಪ್ರಚಲಿತ ಸಮಯದಲ್ಲಿ ಕೃತಕಬುದ್ಧಿ ಮತ್ತೆ ಎಲ್ಲ ಕ್ಷೇತ್ರಗಳಲ್ಲಿಯೂ ಲಗ್ಗೆ ಇಟ್ಟ ಮೇಲೆ ಸಂತಾನೋತ್ಪತ್ತಿ ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಇದನ್ನು ಹೊರತುಪಡಿಸಲಾದೀತೇ?

ವೈದ್ಯಕೀಯದ ಅನೇಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಅದಾಗಲೇ ಬಳಕೆಯಾಗುತ್ತಿದೆ. ಹೊರರೋಗಿ ಅಥವಾ ಒಳರೋಗಿಗಳ ದತ್ತಾಂಶ ಸಂಕಲನ, ಹಣ ಪಾವತಿ, ಪರೀಕ್ಷೆಗಳ ವರದಿ, ಹೀಗೆ ಇವೆಲ್ಲವನ್ನೂ ಕೃತಕ ಬುದ್ಧಿಮತ್ತೆಗಳು ಮಾಡುತ್ತಲೇ ಇವೆ. ಆಸ್ಪತ್ರೆಗಳಲ್ಲಿ ಇದಕ್ಕಾಗಿಯೇ ಪ್ರತ್ಯೇಕ ತಂತ್ರಾಂಶಗಳನ್ನು ಅಳಡಿಸಿರುತ್ತಾರೆ.

ಆದರೆ ಸಂತಾನೋತ್ಪತ್ತಿ ಚಿಕಿತ್ಸೆ ಅತೀ ಕ್ಲಿಷ್ಟಕರವಾಗಿರುತ್ತದೆ. ಅಲ್ಲದೆ ಪ್ರತಿ ಮಹಿಳೆ ಅಥವಾ ದಂಪತಿಗಳನ್ನು ಪ್ರತ್ಯೇಕವಾಗಿ ಮಾಪಿಸಿ ಅವರಿಗೆ ಹೊಂದುವಂತಹ ವೈಯಕ್ತಿಕ ಚಿಕಿತ್ಸೆ ಒದಗಿಸಬೇಕಾಗುತ್ತದೆ. ಇದೆಲ್ಲವನ್ನೂ ಕೂಲಂಕಷವಾಗಿ ಮಾಪಿಸುವ ವೈದ್ಯರ ಸಹಾಯಕ್ಕೆ ಕೃತಕ ಬುದ್ಧಿಮತ್ತೆ ಸಹಾಯ ಮಾಡಲಾದೀತೇ?

ಕೃತಕ ಬುದ್ಧಿಮತ್ತೆ ಎಂದರೆ ಏನು?

ಅನುಭವಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಕಲಿಯಲು, ಯೋಚಿಸಲು ಮತ್ತು ಸೃಷ್ಟಿಸಲು, ಮಾತನಾಡಲು, ನಿರ್ಣಯಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾನವರು ಯಂತ್ರಗಳಿಗೆ ನೀಡಿರುವ ಸಾಮರ್ಥ್ಯದಿಂದಾಗಿ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿ ಮಾಡಲು ಸಾಧ್ಯವಾಗಿದೆ.

ಹೀಗಾಗಿ, ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲಿಯೂ ವಿಷಯಗಳನ್ನು ಕೃತಕ ಬುದ್ಧಿಮತ್ತೆಗೆ `ಕಲಿಸಿದರೆ,' ಅದು ಮಾಹಿತಿಯನ್ನು ಸಂಸ್ಕರಿಸಿ. ನೆನಪಿನಲ್ಲಿ ಇರಿಸಿಕೊಂಡು, ಮುಂದೆ ಸೂಕ್ತವಾಗಿ ಕೆಲಸ ನಿರ್ವಹಿಸುತ್ತದೆ. ಅಂದರೆ ಅದು ಬಳಕೆಯಾಗುತ್ತಾ, ಮತ್ತಷ್ಟು ಚುರುಕಾಗುತ್ತದೆ!

sono avc

ಸಂತಾನೋತ್ಪತ್ತಿ ಚಿಕಿತ್ಸಾ ಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಿಕೊಳ್ಳಬಹುದು?

  1. ದಂಪತಿಗಳ ಮಾಪನದ ಪ್ರಕ್ರಿಯೆಯಲ್ಲಿ ವಯಸ್ಸು, ತೂಕ, ಹಿಂದಿನ ಚಿಕಿತ್ಸೆ ಮತ್ತದರ ಫಲಿತಾಂಶ, ಪ್ರಸ್ತುತ ದೇಹ ಸ್ವಾಸ್ಥ್ಯ, ಮತ್ತಿತರ ಎಲ್ಲ ಚಿಕಿತ್ಸೆ ಮಾಡುವ ಮುನ್ನ ಬೇಕಾದ ಮುಖ್ಯ ಮಾಹಿತಿಗಳು. ಕೃತಕ ಬುದ್ಧಿಮತ್ತೆ ಇಂತಹ ಮಾಹಿತಿಗಳನ್ನು ಸಮಗ್ರವಾಗಿಸಿ, ಚಿಕಿತ್ಸಾ ವಿಧಾನ, ಪಥ ಹಾಗೂ ನಿರೀಕ್ಷಿಸಬಹುದಾದ ಫಲಿತಾಂಶದ ಮುನ್ಸೂಚನೆ ಕೊಡಬಹುದು.
  2. ಪ್ರಯೋಗಾಲಯದ ಪರೀಕ್ಷೆಗಳು ಹಾರ್ಮೋನುಗಳ ಮೇಲ್ವಿಚಾರಣೆ ಅದಾಗಲೇ ಪ್ರಯೋಗಾಲಯದಲ್ಲಿ ಉತ್ತಮ ಯಂತ್ರಗಳ ಬಳಕೆಯಾಗಿದ್ದು, ಫಲಿತಾಂಶಗಳನ್ನು ಮತ್ತಷ್ಟು ಸಮಂಜಸವಾಗಿ ವ್ಯಾಖ್ಯಾನ ಮಾಡಲು ಕೃತಕ ಬುದ್ಧಿಮತ್ತೆ ಸಹಾಯ ಮಾಡುತ್ತದೆ.
  3. ಅಲ್ಟ್ರಾಸೌಂಡ್ಅಥವಾ ಸ್ಕ್ಯಾನಿಂಗ್ಗರ್ಭಕೋಶ ಹಾಗೂ ಅಂಡಕೋಶಗಳನ್ನು ಮಾಪಿಸಲು ಹಾಗೂ ಅಂಡೋತ್ಪತ್ತಿಗೆ ಕೊಡುತ್ತಿರುವ ಔಷಧಿಗಳು ಸಮಂಜಸವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಕಂಡುಕೊಳ್ಳಲು ಮಹಿಳೆಯರಿಗೆ ನಿಯತಕಾಲಕ್ಕೆ ಅಲ್ಟ್ರಾಸೌಂಡ್‌ ಅಥವಾ ಸ್ಕ್ಯಾನಿಂಗ್‌ ಮಾಡಬೇಕಾಗುತ್ತದೆ. ಎಷ್ಟು ಮೊಟ್ಟೆಗಳು ಉತ್ಪತ್ತಿಯಾಗುತ್ತಿವೆ, ಗರ್ಭಕೋಶದಲ್ಲಿ ತೊಂದರೆ ಇದೆಯೇ ಎಂದೆಲ್ಲಾ ಮತ್ತಷ್ಟು ಚೆನ್ನಾಗಿ ಅಧ್ಯಾಯಿಸಲು ಕೃತಕ ಬುದ್ಧಿಮತ್ತೆ ಸಹಾಯವಾಗುತ್ತದೆ. ಇದಕ್ಕೆ ಬೇಕಾಗಿರುವ ತಂತ್ರಾಂಶವನ್ನು ಅಲ್ಟ್ರಾಸೌಂಡ್‌ ಯಂತ್ರದಲ್ಲಿಯೇ ಅಳವಡಿಸಲಾಗಿರುತ್ತದೆ.
  4. ಚಿಕಿತ್ಸೆ ಉತ್ತಮೀಕರಣ ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ, ಅಂಡಕೋಶದಿಂದ ಮೊಟ್ಟೆ ಉತ್ಪತ್ತಿಯಾಗಲು ಮುಖ್ಯವಾದ ಚುಚ್ಚುಮದ್ದುಗಳನ್ನು ಕೊಡಬೇಕಾಗುತ್ತದೆ. ಇವುಗಳ ಪರಿಮಾಣ ಮಹಿಳೆಯ ಅಂಡೋತ್ಪತ್ತಿ ಸಾಮರ್ಥ್ಯ, ವಯಸ್ಸು, ರಕ್ತಪರೀಕ್ಷೆಗಳು ಹಾಗೂ ದೇಹ ಸ್ವಾಸ್ಥ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಚರಾಂಶಗಳನ್ನೆಲ್ಲಾ ಕ್ರೋಢೀಕರಿಸಿ, ಸಮಗ್ರವಾದ ಚುಚ್ಚುಮದ್ದಿನ ಪ್ರಮಾಣವನ್ನು ಕೃತಕ ಬುದ್ಧಿಮತ್ತೆಯ ಹಮ್ಮುಗೆ ಸೂಚಿಸಬಹುದು.
  5. ವೀರ್ಯಾಣು ಹಾಗೂ ಅಂಡಾಣುಗಳ ಆಯ್ಕೆ ಬೆಂಬಲಿತ ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಮಹಿಳೆಯಲ್ಲಿ ಅಂಡೋತ್ಪತ್ತಿ ಆಗುವ ಸಮಯಕ್ಕೆ ಸಂಸ್ಕರಿಸಿದ ವೀರ್ಯಾಣುವನ್ನು ಆಕೆಯ ಗರ್ಭದಲ್ಲಿ ಇರಿಸುವುದು ಹಾಗೂ ಪ್ರಣಾಳ ಶಿಶು ಮುಖ್ಯವಾದ ಚಿಕಿತ್ಸೆಗಳಾಗಿರುತ್ತದೆ. ಇವುಗಳ ಯಶಸ್ಸು ಸಹಜವಾಗಿಯೇ ವೀರ್ಯಾಣು ಹಾಗೂ ಅಂಡಾಣುಗಳ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಉತ್ತಮ ಅಂಡಾಣು ಹಾಗೂ ವೀರ್ಯಾಣುಗಳನ್ನು ಆಯ್ದು, ಉಪಯೋಗಿಸಲು ಕೃತಕ ಬುದ್ಧಿಮತ್ತೆಯು ಭ್ರೂಣಶಾಸ್ತ್ರ ತಜ್ಞರಿಗೆ ನೆರವಾಗಬಹುದು.
  6. ಉತ್ತಮ ಭ್ರೂಣದ ಆಯ್ಕೆ ಮಹಿಳೆಯ ಶರೀರದಿಂದ ಅಂಡಾಣುಗಳನ್ನು ಹೊರತೆಗೆದು, ಅವುಗಳನ್ನು ವೀರ್ಯಾಣುಗಳೊಂದಿಗೆ ಪ್ರಯೋಗಾಲಯದಲ್ಲಿ, ಅನುಕೂಲವಾದ ವಾತಾವರಣದಲ್ಲಿ ಕೃತಕವಾಗಿ ಬೆಸೆಯಲಾಗುತ್ತದೆ. ನಂತರ ಭ್ರೂಣ ಉತ್ಪತ್ತಿಯಾದ ಮೇಲೆ ಅದನ್ನು ತಾಯಿಯ ಗರ್ಭದಲ್ಲಿ ಇರಿಸಲಾಗುವುದು. ಇದೇ ಪ್ರಣಾಳ ಶಿಶುವಿನಲ್ಲಿ ನಡೆಯುವ ಪ್ರಕ್ರಿಯೆ. ಉತ್ಪತ್ತಿಯಾದ ಭ್ರೂಣಗಳಲ್ಲಿ ಉತ್ತಮವಾದುದನ್ನು ಆಯ್ದುಕೊಳ್ಳಲು ಭ್ರೂಣಶಾಸ್ತ್ರ ತಜ್ಞರಿಗೆ ಕೃತಕ ಬುದ್ಧಿಮತ್ತೆ ಸಹಾಯ ಮಾಡುತ್ತದೆ.
  7. ಮುನ್ಸೂಚಕ ಮಾದರಿಗಳು ಪ್ರತಿ ಹಂತದಲ್ಲೂ ಯಶಸ್ಸಿನ ಅಂದಾಜು ಹಾಗೂ ಉತ್ತಮವಾಗಿಸಬಲ್ಲ ಪಥಗಳನ್ನು ಸೂಚಿಸುವ ತಂತ್ರಾಂಶಗಳು ಇದಾಗಿದ್ದು, ಚಿಕಿತ್ಸೆಯಲ್ಲಿ ನೆರವಾಗುತ್ತವೆ.
  8. ವಂಶವಾಹಿಗಳ ತಪಾಸಣೆ ಕೆಲವೊಮ್ಮೆ ವಂಶವಾಹಿಯ ತೊಂದರೆಗಳಿದ್ದರೆ ಸತತವಾಗಿ ಗರ್ಭಪಾತ, ಮಕ್ಕಳಾಗುವುದರಲ್ಲಿ ತೊಂದರೆಯಾಗಬಹುದು. ತಳಿ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮುನ್ನಡೆದಿರುವುದರಿಂದ, ಇಲ್ಲಿ ನೆರವಾಗುತ್ತದೆ.

ಈ ಮೇಲ್ಕಂಡ ಕಾರಣಗಳಿಂದ ನಮಗೆ ಸ್ಪಷ್ಟವಾಗುವುದೇನೆಂದರೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಅನೇಕ ವಿಧದಲ್ಲಿ, ಹಂತಗಳಲ್ಲಿ ವೈದ್ಯರಿಗೆ ನೆರವಾಗಬಲ್ಲವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ