ಚಳಿಗಾಲ ಶುರುವಾಗಿಬಿಟ್ಟಿದೆ. ಅದರಿಂದ ಪಾರಾಗಲು ಬೆಚ್ಚನೆಯ ಉಡುಪುಗಳು ಸ್ವೆಟರ್‌ ಇತ್ಯಾದಿ ವಾರ್ಡ್‌ರೋಬ್‌ನಿಂದ ಹೊರಗೆ ಬಂದಿವೆ. ಚಳಿಗಾಲದಲ್ಲಿ ಉಲ್ಲನ್‌ ಡ್ರೆಸ್‌ಗಳನ್ನು ಧರಿಸುವುದೇ ಬಹಳ ಮಜವಾಗಿರುತ್ತದೆ. ಆದರೆ ಈ ಸೀಸನ್‌ನಲ್ಲಿ ಕೆಲವರಿಗೆ ಅದನ್ನು ಧರಿಸಿದ ಕೂಡಲೇ ಸ್ಕಿನ್‌ ಅಲರ್ಜಿ ಉಂಟಾಗುತ್ತದೆ. ಪ್ರತಿ ವರ್ಷ ಸುಮಾರು ಶೇ.10 ರಿಂದ 15 ಮಹಿಳೆಯರು ಈ ಸಮಸ್ಯೆಗಳಿಂದ ಪೀಡಿತರಾಗಿದ್ದಾರೆ. ಕೋಲ್ಡ್ ಅಲ್ಲ ಅಲರ್ಜಿ ಉಲ್ಲನ್‌ ಬಟ್ಟೆ ಧರಿಸಿದರೆ ಮುಖದ ಮೇಲೆ ರೆಡ್‌ನೆಸ್‌, ಸ್ವೆಲಿಂಗ್‌, ಸ್ಕೇಲಿ, ಮೂಗು ಕಟ್ಟಿ ಕೊಳ್ಳುವುದು, ನವೆ ಉಂಟಾಗುವುದು, ರಾಶೆಸ್‌ ಉಂಟಾಗುವುದು ಇತ್ಯಾದಿ ತೊಂದರೆಗಳಾದರೆ, ಉಲ್ಲನ್‌ಅಲರ್ಜಿ ಇದೆ ಎಂದು ಅರ್ಥ. ಸಾಮಾನ್ಯವಾಗಿ ಈ ಸಮಸ್ಯೆ ಕೈ ಕಾಲುಗಳಲ್ಲಿ ಹೆಚ್ಚಾಗಿ ನೋಡಬಹುದು.

ವೈದ್ಯರ ಪ್ರಕಾರ ಉಲ್ಲನ್‌ ಅಲರ್ಜಿ ಉಂಟಾಗಲು ಮುಖ್ಯ ಕಾರಣ ಸ್ಕಿನ್‌ ಡ್ರೈ ಆಗುವುದು. ಸಾಮಾನ್ಯವಾಗಿ ಅಲರ್ಜಿಗೆ ಗುರಿಯಾಗಿರುವವರಿಗೆ ಉಲ್ಲನ್‌ ಅಲರ್ಜಿಯ ಸಮಸ್ಯೆ ಹೆಚ್ಚಾಗುತ್ತದೆ. ಈ ಅಲರ್ಜಿ ಉಲ್ಲನ್‌ಮತ್ತು ಸ್ಕಿನ್‌ ಹೇರ್‌ನ ನಡುವೆ ಉಂಟಾಗುವ ಎಳೆತದಿಂದ ಬರುತ್ತದೆ. ಆ ಜಾಗದ ಸ್ಕಿನ್‌ ರೆಡ್‌ ಆಗುತ್ತದೆ ಮತ್ತು ಸಣ್ಣ ಸಣ್ಣ ದದ್ದುಗಳುಂಟಾಗುತ್ತವೆ. ಅದರಲ್ಲಿ ಒಂದೇ ಸಮನೆ ನವೆಯಾಗುತ್ತಿರುತ್ತದೆ.

ವಿಂಟರ್‌ನಲ್ಲಿ ಉಲ್ಲನ್‌ ಅಲರ್ಜಿಯಾಗಲು ಇನ್ನೊಂದು ಕಾರಣ ಸ್ಕಿನ್‌ ಉಲ್ಲನ್‌ನೊಂದಿಗೆ ನೇರ ಸಂಪರ್ಕಕ್ಕೆ ಬರುವುದು. ಅದರಿಂದ ಅಟಿಕೇರಿಯಾದ ಸಮಸ್ಯೆ ಉಂಟಾಗುತ್ತದೆ. ಅದರಿಂದ ಅಫೆಕ್ಟೆಡ್‌ ಏರಿಯಾದ ಸ್ಕಿನ್‌ ರೆಡ್‌ ಆಗುತ್ತದೆ. ಉರಿಯೊಂದಿಗೆ ವಿಪರೀತ ನವೆಯೂ ಆಗುತ್ತದೆ. ಕೆಲವರಿಗೆ ಉಲ್ಲನ್‌ ಉಡುಪುಗಳನ್ನು ಧರಿಸಿದರೆ ಮೂಗು, ಕಣ್ಣುಗಳಲ್ಲಿ ನೀರು ಸುರಿಯುತ್ತಿರುತ್ತದೆ. ಅವರು ಕೋಲ್ಡ್ ಆಗಿರಬಹುದು ಎಂದುಕೊಳ್ಳುತ್ತಾರೆ. ಆದರೆ ಅದು ಸ್ಕಿನ್‌ ಅಲರ್ಜಿಯಿಂದ ಆಗಿರುತ್ತದೆ.

ಪರಿಹಾರ ಏನು?

ಉಲ್ಲನ್‌ಅಲರ್ಜಿಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಔಷಧಗಳಿಂದ ಸ್ವಲ್ಪ ಕಾಲ ನೆಮ್ಮದಿ ಸಿಗುತ್ತದೆ. ಔಷಧದ ಪ್ರಭಾವ ಮುಗಿಯುತ್ತಿದ್ದಂತೆ ಮತ್ತೆ ಅಲರ್ಜಿಯಾಗುತ್ತದೆ. ಉಲ್ಲನ್‌ ಅಲರ್ಜಿ ಸಮಸ್ಯೆ ಇರುವವರು ಫುಲ್ ಸ್ಲೀವ್ಸ್ ಕಾಟನ್‌ ಇನ್ನರ್‌ವೇರ್‌ಧರಿಸಬೇಕು. ಆಗ ಸ್ಕಿನ್‌ ಉಲ್ಲನ್‌ನೊಂದಿಗೆ ನೇರ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ಅಲರ್ಜಿಯಿಂದ ಪಾರಾಗಬಹುದು. ಎಲ್ಲಾ ಉಲ್ಲನ್‌ ಬಟ್ಟೆಗಳೂ ಅಲರ್ಜಿಗೆ ಕಾರಣವಾಗುವುದಿಲ್ಲ. ಹೀಗಾಗಿ ಯಾವ ಉಲ್ಲನ್‌ ಬಟ್ಟೆಯಿಂದ ನಿಮಗೆ ತೊಂದರೆಯಾಗುವುದಿಲ್ಲ ಎಂದು ತಿಳಿದುಕೊಂಡು, ಆ ಬಟ್ಟೆಗಳನ್ನು ಧರಿಸಿ. ಅದಲ್ಲದೆ ಉಲ್ಲನ್‌ ಡ್ರೆಸ್‌ ಧರಿಸುವ ಮೊದಲು ಸ್ಕಿನ್‌ ಮೇಲೆ ಅಗತ್ಯವಾಗಿ ಕೋಲ್ಡ್ ಕ್ರೀಂ ಹಚ್ಚಿ.

ಉಲ್ಲನ್‌ ಅಲರ್ಜಿಯಿಂದ ಪಾರಾಗಲು ಮಾಯಿಶ್ಚರೈಸರ್‌ನ್ನು ಉಪಯೋಗಿಸಿ. ಸ್ನಾನದ ನಂತರ ಇಡೀ ಶರೀರದ ಮೇಲೆ ಮಾಯಿಶ್ಚರೈಸರ್‌ ಹಚ್ಚುವುದರಿಂದ ಹಾಯಾಗಿರುತ್ತದೆ.

ಗಮನಿಸಿ

ಅಲರ್ಜಿ ಇರುವ ಸ್ಕಿನ್‌ಗೆ ಆಲಿವ್ ‌ಆಯಿಲ್‌ನಿಂದ ಮಸಾಜ್‌ ಮಾಡಿ.

ಮಾಯಿಶ್ಚರೈಸರ್‌ಯುಕ್ತ ಸೋಪನ್ನು ಉಪಯೋಗಿಸಿರಿ.

ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ.

ವಿಟಮಿನ್‌ `ಇ' ಯುಕ್ತ ನೈಟ್‌ ಕ್ರೀಂನಿಂದ ನಿಮ್ಮ ಮುಖ ಹಾಗೂ ಶರೀರದ ಇತರ ಭಾಗಗಳಲ್ಲಿ ಮಾಯಿಶ್ಚರೈಸರ್‌ ಹಚ್ಚಿ.

ಹೆಚ್ಚು ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಬೇಡಿ.

ಹಗುರವಾಗಿ ಒದ್ದೆಯಾದ ಶರೀರಕ್ಕೆ ಮಾಯಿಶ್ಚರೈಸರ್‌ ಉಪಯೋಗಿಸಿ.

ಡ್ರೈ ಸ್ಕಿನ್‌ಗೆ ಗ್ಲಿಸರಿನ್‌ ಮತ್ತು ರೋಸ್‌ ವಾಟರ್‌ ಬೆರೆಸಿ ಮಾಯಿಶ್ಚರೈಸರ್‌ನಂತೆ ಹಚ್ಚಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ