ಫ್ಯಾಷನ್‌ ಲೋಕದಲ್ಲೇ ಅಚ್ಚರಿ ಮೂಡಿಸುವಂಥ ಮೆರುಗು ಮೈಸೂರಿನಲ್ಲಿ ಇತ್ತೀಚೆಗೆ ಅದ್ಭುತವಾಗಿ ಜರುಗಿತು. ಮೈಸೂರು ಫ್ಯಾಷನ್‌ ವೀಕ್‌, ಕಂಟ್ರೀ ಇನ್‌ ತಾರಾ ಹೋಟೆಲ್ ನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಬಾಲಿವುಡ್‌, ಕಾಲಿವುಡ್‌, ಸ್ಯಾಂಡಲ್ ವುಡ್‌ ತಾರೆಯರು ರಾಂಪ್‌ ಮೇಲೆ ಬಿನ್ನಾಣವಾಗಿ ನಡೆದು ರಂಗೇರಿಸಿದರು.

ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಜನಪ್ರಿಯ ತಾರೆಯರ ಜೊತೆಗೆ ಟಾಪ್‌ ಮಾಡೆಲ್ ‌ಗಳು, ಡಿಸೈನರ್‌ಗಳು ಒಂದೇ ವೇದಿಕೆ ಮೇಲೆ ತಮ್ಮೆಲ್ಲ ಪ್ರತಿಭೆಗಳನ್ನು ಪ್ರದರ್ಶಿಸಿದ್ದು ವಿಶೇಷ.

mysuru-sundari-2

ಈ ಫ್ಯಾಷನ್‌ ವೀಕ್‌ನ ಪ್ರಮುಖ ಸೂತ್ರಧಾರ ಹಾಗೂ ಡಿಸೈನರ್‌ ಜಯಂತಿ ಬಲ್ಲಾಳ್‌ ಮಾಧ್ಯಮದವರ ಜೊತೆ ಮಾತನಾಡುತ್ತಾ ಎಲ್ಲ ರಂಗದಿಂದಲೂ ತಾರೆಯರು ಒಟ್ಟಿಗೆ ಇಲ್ಲಿ ಭಾಗಹಿಸಿದ್ದಾರೆ. ಪಾರೂಲ್ ‌ಯಾದವ್, ಸಂಜನಾ, ಸಿಂಧೂ ಲೋಕನಾಥ್‌ ಇವರಲ್ಲದೆ ಸೋಹಾ ಅಲಿಖಾನ್‌, ವಿದ್ಯುತ್‌ ಜಮ್ಮಾವಾಲ್‌, ಭಾರತದ ಟಾಪ್‌ ಡಿಸೈನರ್‌ ಮೋನಾ ಶ್ರಾಫ್‌ ಅವರಿಗಾಗಿ ರಾಂಪ್‌ನಡೆದರು. ಪಾರೂಲ್ ‌ಯಾದವ್ ಡಿಸೈನರ್‌ ರೇಷ್ಮಾ ಕುನ್ಹಿ ಅವರ ಶೋ ಸ್ಟಾಪರ್‌ಆಗಿ ರಾಂಪ್‌ ವಾಕ್‌ ಮಾಡಿದರು. ಕಾಲಿವುಡ್‌ನ ಅಮಾ ಪಾಲ್ ಕೂಡಾ ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿದ್ದರು. ಡಿಸೈನರ್‌ ಯೋಗೇಶ್‌ ಚೌದರಿಯವರ ಶೋ ಸ್ಟಾಪರ್‌ ಆಗಿ ಅಮಾ ರಾಂಪ್‌ ವಾಕ್‌ ಮಾಡಿದರು. ಮೈಸೂರು ಕಲಾನಗರಿ, ಫ್ಯಾಷನ್‌ ಜೊತೆ ಮೇಳೈಸಿಸಿ ಈ ಅಂದ ಚಂದದ ಮಾಡೆಲ್ ಗಳ ಬಳುಕುವ ನಡಿಗೆ ಕಂಡು ಫ್ಯಾಷನ್‌ ಅಭಿಮಾನಿಗಳು ದಿಲ್ ಖುಷ್‌ ಆಗಿದ್ದು ನಿಜ!

mysuru-sundari-3

ಈ ಫ್ಯಾಷನ್‌ ಸಂಜೆಯಲ್ಲಿ ಕಂಟ್ರಿ ಇನ್‌ ಅಂಡ್‌ ಸೂಟ್ಸ್ ಹೋಟೆಲ್ ‌ನ ಜನರಲ್  ಮ್ಯಾನೇಜರ್‌ ಪಂಕಜ್‌ ಸಕ್ಸೇನ ತಮ್ಮ ಹೋಟೆಲ್ ‌ನಲ್ಲಿ ಇಂಥದ್ದೊಂದು ಫ್ಯಾಷನ್‌ ಹಬ್ಬ ನಡೆದಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸುತ್ತ, ಪ್ರಾಯೋಜಕರಾಗಿರುವ ಕೃಷ್ಣಯ್ಯ ಚೆಟ್ಟಿ ಅಂಡ್‌ ಸನ್ಸ್ ನ ಕುಬಾಲ್ ಜೇನ್‌ ಅವರನ್ನು ಹಾಗೂ ಫ್ಯಾಷನ್‌ ವೀಕ್‌ನ ಎಲ್ಲ ಡಿಸೈನರ್‌ಗಳು, ರೂಪದರ್ಶಿಗಳು ಹಾಗೂ ಕೊರಿಯಾ ಗ್ರಾಫರ್‌ಗಳನ್ನು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಮುಂಬೈನಿಂದ ಬಂದಿದ್ದಂಥ ಟಾಪ್‌ ಮಾಡೆಲ್ ‌ಗಳು ಮೈಸೂರು ನಗರವನ್ನು ಅದರ ಅಂದವನ್ನು ಮನಸಾರೆ ಹೊಗಳಿ, ಮೊದಲ ಬಾರಿಗೆ ಮೈಸೂರು ದರ್ಶನ ಮಾಡಿದ್ದು ಎಂದು ಸಂತಸ ವ್ಯಕ್ತಪಡಿಸಿದರು. ಕನ್ನಡದ ಜನಪ್ರಿಯ ತಾರೆ ಪಾರೂಲ್ ‌ಯಾದವ್ ತನ್ನ ಆಪ್ತ ಗೆಳತಿ ಹಾಗೂ ಡಿಸೈನರ್‌ ರೇಷ್ಮಾ ಅವರ ಶೋ ಸ್ಟಾಪರ್‌ ಆಗಿ ಭಾಗವಹಿಸುತ್ತಿರುವುದರ ಜೊತೆಗೆ ತನ್ನ ಮೆಚ್ಚಿನ ನಗರ ಮೈಸೂರಿನಲ್ಲಿ ರಾಂಪ್ ವಾಕ್‌ ಮಾಡುತ್ತಿರುವುದರ ಬಗ್ಗೆ ಹರ್ಷಪಟ್ಟಳು.

mysuru-sundari-4

ಸಿಂಧೇ ಲೋಕನಾಥ್‌ ಬೆಂಗಳೂರಿನಿಂದ ಧಾವಿಸಿ ಬಂದು, ತನಗೆ ಸಿಕ್ಕ ಅಲ್ಪ ಸಮಯದಲ್ಲಿ ತಯಾರಾಗಿ ರಾಂಪ್ ವಾಕ್‌ ಮಾಡಿ ಅಚ್ಚರಿ ಮೂಡಿಸಿದಳು. ಸಂಜನಾ ಕೃಷ್ಣಯ್ಯ ಚೆಟ್ಟಿಯವರ ಜ್ಯೂವೆಲರಿ ಧರಿಸಿ ಆಭರಣಗಳ ಅಂದವನ್ನು ಪ್ರದರ್ಶಿಸಿದಳು. ಫ್ಯಾಷನ್ ಪ್ರಿಯರೆಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂಥ ಫ್ಯಾಷನ್‌ ವೀಕ್‌ ರಾಯಲ್ ರನ್‌ ವೇ.... ಎಂದಿಗೂ ಮರೆಯುವಂಥದ್ದಲ್ಲ.

- ಸರಸ್ವತಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ