ಮನೆಯ ಅಲಂಕಾರದಲ್ಲಿ ಹೂವುಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕುರಿತಂತೆ ಬೆಂಗಳೂರಿನ ಸ್ಪ್ರಿಂಗ್‌ ಬ್ಲಾಸಂ ವೆಂಚರ್‌ಪ್ರೈ.ಲಿ.ನ ಫ್ಲವರ್‌ ಡಿಸೈನರ್‌ ಕನ್ಸಲ್ಟೆಂಟ್‌ ಲಕ್ಷ್ಮೀ ಹೀಗೆ ಹೇಳುತ್ತಾರೆ, ``ಮನೆಯ ಅಲಂಕಾರಕ್ಕೆ ಹೂಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಮನೆಯ ಗೋಡೆಗಳು ಹಾಗೂ ಪೀಠೋಪಕರಣಗಳ ಬಣ್ಣ ಹೇಗಿದೆ ಎನ್ನುವುದನ್ನು ಗಮನಿಸುವುದು ಸೂಕ್ತ. ಏಕೆಂದರೆ ಹೂಗಳ ಅಲಂಕಾರಕ್ಕೂ ಗೋಡೆಗಳ ಬಣ್ಣಕ್ಕೂ ಹೊಂದಾಣಿಕೆ ಆಗುವಂತಿರಬೇಕು.''

ನೈಸರ್ಗಿಕ ಮತ್ತು ತಾಜಾ ಹೂಗಳಿಂದ ಮನೆಗೆ ಯಾವ ರೀತಿಯ ಶೋಭೆ ದೊರೆಯುತ್ತದೋ, ಅದು ಕೃತಕ ಹೂಗಳಿಂದ ಖಂಡಿತ ದೊರೆಯುವುದಿಲ್ಲ. ಆದರೂ ಮನೆಯ ಅಲಂಕಾರದಲ್ಲಿ ಕೃತಕ ಹೂಗಳು ಮುಖ್ಯ ಪಾತ್ರ ವಹಿಸುತ್ತವೆ. ಏಕೆಂದರೆ ಇವುಗಳ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಅವನ್ನು ವ್ಯಾಕ್ಯೂಮ್ ಕ್ಲೀನರ್‌ ಅಥವಾ ಮೃದು ಒದ್ದೆ ಬಟ್ಟೆಯಿಂದ ಒರೆಸಿದರೆ ಸಾಕು.

ಹೂಗಳ ಅಲಂಕಾರ

ಕೃತಕ ಹೂಗಳು ಸುಂದರವಾಗಿ ಕಾಣುವಂತೆ ಮಾಡಲು ಅವನ್ನು ಕ್ರಿಸ್ಟಲ್, ವುಡನ್‌ ಅಥವಾ ಸಿರಾಮಿಕ್‌ ಹೂಕುಂಡದಲ್ಲಿ ಹಾಕಿಡಿ. ಒಳ್ಳೆಯ ರೀತಿಯಲ್ಲಿ ಪೇರಿಸಿಟ್ಟ ಹೂಗಳು ಮಾತ್ರ ಸುಂದರವಾಗಿ ಕಾಣುತ್ತವೆ.

ಚೆಂದದ ಹೂಗಳ ಅಂದದ ಅಲಂಕಾರಕ್ಕೆ ಕೆಳಕಂಡ ಸಂಗತಿಗಳನ್ನು ಗಮನಿಸಿ :

ಹೂಗಳನ್ನು ಹೂಗುಚ್ಚಗಳಲ್ಲಿ ಅಲಂಕರಿಸಿ ಇಟ್ಟರೆ, ಆ ನೀರಿನಲ್ಲಿ ಒಂದು ಚಿಟಕಿ ಉಪ್ಪು ಅಥವಾ ಸಕ್ಕರೆಯನ್ನು ಅವಶ್ಯವಾಗಿ ಹಾಕಿಡಿ.

ನೀರನ್ನು ಬದಲಿಸುವ ಸಮಯದಲ್ಲಿ ಹೂವಿನ ಕಾಂಡವನ್ನು ಅತ್ಯಲ್ಪ ಪ್ರಮಾಣದಲ್ಲಿ ಕತ್ತರಿಸಿ. ಏಕೆಂದರೆ ಕೆಳಭಾಗದಲ್ಲಿ ಬ್ಯಾಕ್ಟೀರಿಯಾಗಳು ಜಮೆಗೊಳ್ಳದಿರಲಿ ಹಾಗೂ ಹೂಗಳು ಸುಲಭವಾಗಿ ತೇವಾಂಶ ಹೀರಿಕೊಳ್ಳುವಂತಾಗಬೇಕು.

ಹೂಗಳ ಅಲಂಕಾರವನ್ನು ಡ್ರಾಯಿಂಗ್‌ ರೂಮಿನಲ್ಲಿ ಅಥವಾ ಹೆಚ್ಚು ಜನರು ಕುಳಿತುಕೊಂಡು ಮಾತನಾಡುವ ಸ್ಥಳದಲ್ಲಿಯೇ ಮಾಡಿ. ಇದರಿಂದ ನಿಮ್ಮಲ್ಲಿ ಸಕಾರಾತ್ಮಕತೆಯ ಭಾವನೆ ಬರುತ್ತದೆ.

ಹಾರಿಝಾಂಟಲ್ ಫ್ಲೋರ್‌ ಅರೇಂಜ್‌ ಮೆಂಟ್‌

ಸಾಮಾನ್ಯವಾಗಿ ಡಿನ್ನರ್‌ ಪಾರ್ಟಿಗಳಿಗೆ ಉಪಯುಕ್ತ. ಇದು ಕಂಟೇನರ್‌ ಅಥವಾ ಅಳ್ಳಕವಾದ ಹೂದಾನಿಯಲ್ಲಿ ಇಡಲಾಗುತ್ತದೆ. ಇದರ ಎತ್ತರ ಕಡಿಮೆ ಇರುತ್ತದೆ ಹಾಗೂ ಅಗಲವಾಗಿ ಕಂಡುಬರುತ್ತದೆ. ಇದರಲ್ಲಿ ಗುಲಾಬಿ ಅಥವಾ ಕುಮುದ ಹೂಗಳು ಮುಖ್ಯವಾಗಿರುತ್ತವೆ. ಇದನ್ನು ನೀವು ಸೈಡ್‌ ಟೇಬಲ್ ಶೆಲ್ಫ್ ಅಥವಾ ಬಾಥ್‌ರೂಮಿನಲ್ಲಿ ಕೂಡ ಮಾಡಬಹುದು.

ಟ್ರೈ ಆ್ಯಂಗ್ಯುಲರ್‌ ಫ್ಲೋರ್‌ ಅರೇಂಜ್‌ ಮೆಂಟ್‌

ಹೆಚ್ಚಾಗಿ ಆಫೀಸ್‌ ಅಥವಾ ಫಾರ್ಮಲ್ ಲುಕ್ಸ್ ಗಾಗಿ ಮಾಡಲಾಗುತ್ತದೆ. ಇದರಲ್ಲಿ ನಡುನಡುವೆ ಉದ್ದನೆಯ ಹೂಗಳನ್ನು ಇಡಲಾಗುತ್ತದೆ. ಅಕ್ಕಪಕ್ಕ ವಿವಿಧ ಉದ್ದಳತೆಯ ಹೂಗಳನ್ನು ಸೇರಿಸಿ ತ್ರಿಕೋನದ ರೂಪ ನೀಡಲಾಗುತ್ತದೆ. ಇದನ್ನು ಹೆಚ್ಚಾಗಿ ಫ್ಲವರ್‌ ಪಾಟ್‌ನಲ್ಲಿ ಅಲಂಕರಿಸಿಡಲಾಗುತ್ತದೆ.

ವರ್ಟಿಕಲ್ ಫ್ಲೋರ್‌ ಅರೇಂಜ್‌ ಮೆಂಟ್‌

ಸಾಮಾನ್ಯವಾಗಿ ಆಫೀಸು ಅಥವಾ ಫಾರ್ಮಲ್ ಲುಕ್ಸ್ ಗಾಗಿ ಉಪಯುಕ್ತವಾಗಿರುತ್ತದೆ. ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬದ ಸಮಾರಂಭಗಳಿಗೆ ಈ ತೆರನಾದ ಹೂಗಳ ಅಲಂಕಾರ ಕೈಗೊಳ್ಳಲಾಗುತ್ತದೆ. ಬಳಿಕ ಚಿಕ್ಕ ಚಿಕ್ಕ ಹೂಗಳನ್ನು ಸಾಲಾಗಿರುವ ರೀತಿಯಲ್ಲಿ ಅಲಂಕರಿಸಲಾಗುತ್ತದೆ. ಇದರಲ್ಲಿ ಗುಲಾಬಿ ಮತ್ತು ಟ್ಯೂಲಿಪ್‌ ಹೂಗಳನ್ನು ನಟ್ಟನಡುವೆ ಅಲಂಕರಿಸಿ ಅಕ್ಕಪಕ್ಕ ಬೇರೆ ಬೇರೆ ಹೂಗಳನ್ನು ಹೂದಾನಿಯಲ್ಲಿ ಹಾಕಿ ಮೂಲೆಯಲ್ಲಿ ಟೇಬಲ್ ಮೇಲೆ ಇಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ