ಮನೆಯನ್ನು ಅಚ್ಚುಕಟ್ಟುಗೊಳಿಸುವಾಗ ಫರ್ನೀಚರ್‌, ಪರದೆ, ಕುಶನ್‌, ಲೈಟ್‌, ಕಾರ್ಪೆಟ್‌ ಇವನ್ನು ಬದಲಿಸುವುದು ಅತ್ಯಂತ ಸುಲಭ. ಆದರೆ ಫ್ಲೋರಿಂಗ್‌ನ್ನು ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಫ್ಲೋರಿಂಗ್‌ ಮನೆಯ ಒಂದು ಬಹುದೊಡ್ಡ ಭಾಗವನ್ನು ಕವರ್‌ ಮಾಡುತ್ತದೆ. ಹೀಗಾಗಿ ಕೋಣೆಗೆ ಎಲಿಗೆಂಟ್‌ ಲುಕ್ಸ್ ನೀಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಫ್ಲೋರಿಂಗ್ ಇಲ್ಲದೇ ಇದ್ದರೆ ಮನೆಯ ಅಂದವೇ ಹೊರಟು ಹೋಗುತ್ತದೆ.

ಈಚೆಗೆ ಮಾರುಕಟ್ಟೆಯಲ್ಲಿ ಫ್ಲೋರಿಂಗ್‌ನ ಸಾಕಷ್ಟು ಪರ್ಯಾಯಗಳು ಲಭ್ಯವಿದ್ದು, ಅದರಲ್ಲಿ ನಿಮಗೆ ಬೇಕಾದುದನ್ನು ಹುಡುಕುವುದು ಕಷ್ಟವೆನಿಸುತ್ತದೆ. ಅದರಲ್ಲೂ ವಿಶೇಷವಾಗಿ ಫ್ಲೋರಿಂಗ್‌ ಬಹಳ ವರ್ಷ ಸುರಕ್ಷಿತವಾಗಿ ಉಳಿಯಬೇಕೆಂದರೆ, ಬದಲಾಗುತ್ತಿರುವ ಟ್ರೆಂಡ್‌ಗೆ ಹೊಂದುವಂತಹ ಮನೆಗೆ ಮೆರುಗು ಕೊಡುವಂತಹ ಸುಂದರ ಫ್ಲೋರಿಂಗ್‌ನ ಸ್ಟೈಲ್ ನ್ನು ಸೇರ್ಪಡೆ ಮಾಡಿಕೊಳ್ಳಿ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪಾರ ಫ್ಲೋರಿಂಗ್‌ ಆಪ್ಶನ್ಸ್ ನಲ್ಲಿ ನಿಮಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಂಡು ಕೋಣೆಯ ಗಾತ್ರಕ್ಕನುಗುಣವಾಗಿ ಅದನ್ನು ಡೆಕೋರೇಟ್‌ ಮಾಡಬಹುದು. ಫ್ಲೋರಿಂಗ್‌ ಕವರಿಂಗ್‌ ಮಾಡಿದ ಬಳಿಕ ಜನರು ಕಾರ್ಪೆಟ್‌, ವುಡನ್, ಲ್ಯಾಮಿನೇಟ್‌, ಟೈಲ್ಸ್, ಮಾರ್ಬಲ್, ಬ್ಯಾಂಬೂ, ಕಾರ್ಕ್‌ ಮುಂತಾದವನ್ನೇ ಇಷ್ಟಪಡುತ್ತಾರೆ.

ಬದಲಾವಣೆಯ ಗಾಳಿ

ಮನೆಯಿರಬಹುದು, ಆಫೀಸ್‌ ಆಗಿರಬಹುದು ಅಥವಾ ವಾಣಿಜ್ಯ ಸಂಸ್ಥೆ. ಇಲ್ಲೆಲ್ಲ ಫೋರಿಂಗ್‌ನ ಟ್ರೆಂಡ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದೊಂದು ಕಾಲದಲ್ಲಿ ರೆಡ್‌ ಆಕ್ಸೈಡ್‌ನ್ನೇ ಹೆಚ್ಚು ಇಷ್ಟಪಡಲಾಗುತ್ತಿತ್ತು. ನಂತರ ಮೊಸಾಯಿಕ್‌ ಫ್ಲೋರಿಂಗ್‌ನ ಕಾಲ ಬಂತು. ಅದರ ಬಳಿಕ ಮಾರ್ಬಲ್ ನ ಕ್ರೇಜ್‌ ಬಂತು. ಈಚೆಗೆ ಗ್ರಾನೈಟ್‌ನ ಆಕರ್ಷಣೆ ಕಡಿಮೆಯಾಗಿ ವಿಟ್ರಿಫೈಡ್‌ ಟೈಲ್ಸ್ ನ ಮೋಹ ಜಾಸ್ತಿಯಾಗಿರುವುದರಿಂದ ಸಾಧಾರಣ ಸೆರಾಮಿಕ್‌ ಟೈಲ್ಸ್ ಔಟ್‌ ಡೇಟೆಡ್‌ ಆಗುತ್ತಿವೆ.

ಈಚೆಗೆ ವುಡನ್‌ ಹಾಗೂ ಲ್ಯಾಮಿನೇಟೆಡ್‌ ಫ್ಲೋರಿಂಗ್‌ನ ಟ್ರೆಂಡ್‌ ಜೋರಾಗಿದೆ. ಜನರಲ್ಲಿ ಅದರ ಬಗ್ಗೆ ಹೆಚ್ಚುತ್ತಿರುವ ಒಲವಿನ ಬಗ್ಗೆ ಇಂಟೀರಿಯರ್‌ ಡಿಸೈನರ್‌ ಸುಚಿತ್ರಾ ಹೀಗೆ ಹೇಳುತ್ತಾರೆ, ``ಇದನ್ನು ಅಳವಡಿಸುವುದು ಸುಲಭ. ಮನೆಯಲ್ಲಿ ಯಾವುದೇ ಕಸ ಕೊಳೆಯನ್ನುಂಟು ಮಾಡದೆ ಇದು 4-5 ದಿನಗಳಲ್ಲಿ ಮುಗಿದು ಹೋಗುತ್ತದೆ ಮತ್ತು ಇಂಟರ್‌ ಲಾಕಿಂಗ್‌ ವ್ಯವಸ್ಥೆಯಿಂದಾಗಿ ಇದನ್ನು ಯಾವಾಗ ಬೇಕಾದರೂ ತೆಗೆದು, ಪುನಃ ಅಳವಡಿಸಬಹುದಾಗಿದೆ.''

ನೈಸರ್ಗಿಕ ವಾತಾವರಣ, ಪಾರಂಪರಿಕ ಅಂದಚೆಂದಕ್ಕಾಗಿ ವುಡನ್‌ ಫ್ಲೋರ್‌ ಎಲ್ಲಕ್ಕೂ ಉತ್ತಮ ಎಂದು ಭಾವಿಸಲಾಗುತ್ತದೆ. ಇವು ಪರಿಸರಸ್ನೇಹಿ ಕೂಡ ಆಗಿರುತ್ತವೆ. ಈ ಕಾರಣದಿಂದ ನಿಮ್ಮನ್ನು ನೀವು ಪರಿಸರಕ್ಕೆ ನಿಕಟ ಎಂದು ಭಾವಿಸಬಹುದು. ಅದನ್ನು ಅಳಡಿಸುವುದರಿಂದ ಕೋಣೆಯ ಗಾತ್ರ ಹೆಚ್ಚಾದಂತೆ ಭಾಸವಾಗುತ್ತದೆ. ಎಲ್ಲಕ್ಕೂ ಮಹತ್ವದ ಸಂಗತಿಯೇನೆಂದರೆ, ಅದು ತನ್ನ ಇನ್ಸುವೇಟಿಂಗ್‌ ಸಾಮರ್ಥ್ಯದಿಂದಾಗಿ ಅನೇಕ ವರ್ಷಗಳ ತನಕ ಹಾಳಾಗುವುದಿಲ್ಲ. ಇದರ ವಿಶೇಷತೆಯೆಂದರೆ, ಇದನ್ನು 4 ಗಂಟೆಗಳಲ್ಲಿಯೇ ಅಳವಡಿಸಬಹುದಾಗಿದೆ. ಇದನ್ನು ಅಳವಡಿಸುವುದು ಅಥವಾ ಲಾಕ್‌ ಮಾಡಲು ಅಥವಾ ಟಂಗ್‌ ಎಂಡ್‌ ಗ್ರೂ‌ತಾಂತ್ರಿಕತೆ ಅಥವಾ ಯಾವುದಾರೂ ಅಂಟಿಸುವ ಪದಾರ್ಥ ಅಥವಾ ಮೊಳೆಗಳನ್ನು ಬಳಸಬಹುದಾಗಿದೆ.

ಯಾವ ಫ್ಲೋರಿಂಗ್‌ ಹೆಚ್ಚು ಚಾಲ್ತಿಯಲ್ಲಿದೆ?

ಹಾರ್ಡ್‌ ವುಡ್‌ ಫ್ಲೋರಿಂಗ್‌ : ಹಾರ್ಡ್‌ ವುಡ್‌ ಫ್ಲೋರಿಂಗ್‌ನ ಟ್ರೆಂಡ್‌ ಬಹಳ ಹಳೆಯದು. ಫೈನಲ್ ಪ್ರೊಸೆಸ್ಡ್ ವುಡನ್‌ನಿಂದ ತಯಾರಿಸಿದ ಹಾರ್ಡ್‌ ವುಡ್‌ ಫ್ಲೋರಿಂಗ್‌ನ ಹೊಳಪು ತುಂಬಾ ಚೆನ್ನಾಗಿರುತ್ತದೆ. ಏಕೆಂದರೆ ಅದು ರಿಯಲ್ ವುಡ್‌ ಆಗಿರುತ್ತದೆ. ಒಂದು ವೇಳೆ ಕೋಣೆಯಲ್ಲಿ ಕಾರ್ಪೆಟ್‌ ಹಾಸಿದ್ದರೆ ಅದು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಧೂಳು ಶೇಖರಣೆಗೊಳ್ಳುತ್ತದೆ. ಅದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹಾರ್ಡ್‌ ವುಡ್‌ ಫ್ಲೋರಿಂಗ್‌ಅಳವಡಿಸುವುದರಿಂದ ನೀವು ಈ ಸಮಸ್ಯೆಯಿಂದ ಪಾರಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ