ಬಣ್ಣಗಳು ಜೀವನದಲ್ಲಿ ಎಲ್ಲ ರೀತಿಯಲ್ಲೂ ಪರಿಣಾಮ ಬೀರುತ್ತವೆ. ಏಕೆಂದರೆ ಬಣ್ಣಗಳೊಳಗೆ ಒಂದು ರೀತಿಯ ಶಕ್ತಿ ಭರ್ತಿಯಾಗಿರುತ್ತದೆ. ಈ ಬಣ್ಣಗಳು ನಮಗೆ ಸೃಷ್ಟಿಯಿಂದ ದೊರಕಿದ್ದಾಗಿವೆ. ಅವುಗಳ ಮೇಲಿಂದಲೇ ನಮ್ಮ ಆಸಕ್ತಿ ಅನಾಸಕ್ತಿಯ ಬಗ್ಗೆ ತಿಳಿಯುತ್ತದೆ.

ಮೊದಲು ಮನೆಗೆ ಬಣ್ಣ ಮಾಡಿಸುವುದು ಬಹಳ ಸುಲಭದ ಕೆಲಸವಾಗಿತ್ತು. ಏಕೆಂದರೆ ಆಗ ಬಣ್ಣ ಮಾಡಿಸಲು ಕೆಲವೇ ಕೆಲವು ಬಣ್ಣಗಳು ಮಾತ್ರ ಇದ್ದವು. ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಗೋಡೆಗಳಿಗೆ ಬಣ್ಣದ ಮೆರುಗು ಕೊಡುವುದು ಈಗ ಚಿತ್ರಕಲೆಗಿಂತ ಕಡಿಮೆ ಏನಿಲ್ಲ.

ಇಂಟೀರಿಯರ್‌ ಡಿಸೈನರ್‌ ಭೂಮಿಕಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಮನೆಗೆ ಬಣ್ಣ ಹೊಡೆಸುವುದನ್ನು ಈಗ `ವಾಲ್ ಫ್ಯಾಷನ್‌' ಎಂದೇ ಕರೆಯಲಾಗುತ್ತದೆ. ಮೊದಲು ಮನೆಗೆಲ್ಲ ಬಣ್ಣ ಮಾಡಿಸುವುದನ್ನು ಮನೆಯ ಸ್ವಚ್ಛತೆಯ ಕೆಲಸ ಎಂದು ತಿಳಿಯಲಾಗುತ್ತಿತ್ತು. ಆದರೆ ಈಗ ವಾಲ್ ‌ಫ್ಯಾಷನ್‌ನಿಂದ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳಿಂದ ಅಲಂಕರಿಸುವ ಕೆಲಸ ನಡೆಯುತ್ತದೆ.''

ಗ್ರಾಹಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪೇಂಟಿಂಗ್‌ನ ಸಲಕರಣೆಗಳನ್ನು ಉತ್ಪಾದಿಸುವ ಕಂಪನಿಗಳು ಹಲವು ಬಗೆಯ ಬಣ್ಣಗಳನ್ನು ತಯಾರಿಸುತ್ತವೆ. ಮನೆಯ ಆಂತರಿಕ ಗೋಡೆಗಳ ಮೇಲೆ ನಿಮ್ಮ ಕನಸಿನ ಬಣ್ಣಗಳನ್ನು ತುಂಬಲು ಜನ ಈಗ ವಿಭಿನ್ನ ಬಣ್ಣಗಳ ಕಲರ್‌ ಕಾಂಬಿನೇಶನ್‌ ಮತ್ತು ಡಿಸೈನಿಂಗ್‌ ಪೇಂಟ್‌ ಮಾಡಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಜನರ ಕನಸು ನನಸು ಮಾಡಲು ಈಗ ಮಾರುಕಟ್ಟೆಯಲ್ಲಿ ಬಗೆಬಗೆಯ ಉತ್ತಮ ಗುಣಮಟ್ಟದ ಪೇಂಟ್‌ಗಳು ಲಭಿಸುತ್ತಿವೆ.

ಪೇಂಟ್ಸ್ ಉದ್ಯಮಕ್ಕೆ ಸಂಬಂಧಪಟ್ಟ ಬೆಂಗಳೂರಿನ ಪ್ರದೀಪ್‌ ಅವರು ಹೀಗೆ ಹೇಳುತ್ತಾರೆ, ``ಬಣ್ಣಗಳ ಕುರಿತಂತೆ ಜನರಲ್ಲಿ ಅನೇಕ ಅಪೇಕ್ಷೆಗಳಿರುತ್ತವೆ. ತಾವು ಕೊಂಡುಕೊಳ್ಳುವ ಪೇಂಟ್‌ ದೀರ್ಘಕಾಲ ಬಾಳಿಕೆ ಬರಬೇಕು. ಅದರ ಮೇಲೆ ಕೊಳೆಯ ಪರಿಣಾಮ ಉಂಟಾಗಬಾರದು. ಅದನ್ನು ತೊಳೆಯುವುದರ ಮೂಲಕ ಅಂದವಾಗಿ ಕಾಣುವಂತಾಗಬೇಕು. ಈಚೆಗೆ ಈಕೊ ಫ್ರೆಂಡ್ಲಿ ಮತ್ತು ಹೆಲ್ದಿ ಹೋಮ್ ಪೇಂಟ್‌ಗಳ ಬೇಡಿಕೆ ಹೆಚ್ಚುತ್ತಿದೆ. ಅದರಿಂದ ಮನೆಯ ಆರೋಗ್ಯದ ಜೊತೆಗೆ ಮನೆಯವರ ಆರೋಗ್ಯ ಕೂಡ ಚೆನ್ನಾಗಿರಬೇಕು.''

ರೆಡಿ ಟೂ ಯೂಸ್‌ ಮೆಟೀರಿಯಲ್

diwaloin-main

ಗೋಡೆಗಳ ಮೇಲೆ ನಮ್ಮ ಆಸಕ್ತಿಯ ಬಣ್ಣ ಮೂಡಿಸುವುದು ಸುಲಭದ ಸಂಗತಿಯಲ್ಲ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಪೇಂಟ್‌ ಕಂಪನಿಗಳು ಈಗ ರೆಡಿ ಟೂ ಯೂಸ್‌ ಮೆಟೀರಿಯಲ್ ದೊರಕಿಸಿಕೊಡಲು ಆರಂಭಿಸಿವೆ. ಇದರ ಮುಖಾಂತರ ನೀವು ಡಿಸೈನಿಂಗ್‌ ಮತ್ತು ವಾಲ್ ‌ಕಾಂಬಿನೇಶನ್‌ನ ಆಯ್ಕೆಯನ್ನು ಸುಲಭವಾಗಿ ಮಾಡಬಹುದು. ಇವುಗಳಿಂದ ಸೂಕ್ತ ರೀತಿಯಲ್ಲಿ ಮಾಡಿದ ಬಣ್ಣ ಮನೆಯ ಅಂದಚೆಂದವನ್ನು ಹೆಚ್ಚಿಸುತ್ತದೆ. ಗೋಡೆಗಳ ಮೇಲೆ ಮೂಡಿದ ಬಣ್ಣದಿಂದ ಮನೆಯವರ ಸೃಜನಶೀಲತೆಯ ಬಗ್ಗೆ ಗೊತ್ತಾಗುತ್ತದೆ. ಭೂಮಿಕಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಈಗ ಪ್ರತಿಯೊಂದು ಕೋಣೆಗೂ ಬೇರೆ ಬೇರೆ ರೀತಿಯಲ್ಲಿ ಪೇಂಟ್‌ ಮಾಡುವ ಫ್ಯಾಷನ್‌ ಇದೆ. ಇದರ ಜೊತೆ ಜೊತೆಗೆ ಈಗ ಡೆಕೊರೇಟಿವ್ ವಾಲ್‌ನ್ನು ಹೆಚ್ಚೆಚ್ಚು ಇಷ್ಟಪಡಲಾರಂಭಿಸಿದ್ದಾರೆ. ಈಗ 3 ಕೋಣೆಗಳಿಗೆ ಲೈಟ್‌ ಶೇಡ್‌ ಮತ್ತು 1 ಕೋಣೆಗೆ ಡಾರ್ಕ್‌ ಶೇಡ್‌ ಮಾಡಿಸುವ ಟ್ರೆಂಡ್‌ ಇದೆ. ಕೆಲವರು ಡಾರ್ಕ್‌ ಶೇಡ್‌ ಬದಲು ಟೆಕ್ಸ್ ಚರ್‌ ಡಿಸೈನ್‌ ಇಷ್ಟಪಡುತ್ತಾರೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ