ಕನ್ನಡದ ದಿಗಂತ್‌ ಮತ್ತು ಮಲೆಯಾಳದ ಫಹದ್‌ ಫಾಸಿಲ್, ತಮಿಳಿನ ಸೂಪರ್‌ ಸ್ಟಾರ್‌ ಇಳಯ ದಳಪತಿ ವಿಜಯ್‌ ಅವರೊಂದಿಗೆ  ಹೊಸ ಜೋಸ್‌ ಆಲುಕ್ಕಾಸ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣ ಭಾರತದ ಮೂರು ಸಿನಿಮಾ ತಾರೆಯರು ಇದೇ ಮೊದಲ ಬಾರಿಗೆ ಒಟ್ಟಾಗಿ ಜೋಸ್‌ ಆಲುಕ್ಕಾಸ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಜಾಹೀರಾತು ಇದೇ ದೀಪಾವಳಿಯಿಂದ ದಕ್ಷಿಣ ಭಾರತದಾದ್ಯಂತ ಪ್ರಸಾರಗೊಳ್ಳುತ್ತಿದೆ. ಇತ್ತೀಚೆಗೆ ಹೈದರಾಬಾದ್‌ ನ ರಾಮೋಜಿ ರಾವ್ ‌ಫಿಲ್ಮ್ ಸಿಟಿಯಲ್ಲಿ ಇದರ ಚಿತ್ರೀಕರಣ ನಡೆಸಲಾಯಿತು. ಜೋಸ್‌ ಆಲುಕ್ಕಾಸ್‌ ತಂಡ ಈ ಯೋಜನೆಯ ಬಗ್ಗೆ ತುಂಬಾ ಸಂಭ್ರಮಗೊಂಡಿದ್ದು, ಈ ಜಾಹೀರಾತು ಗ್ರಾಹಕರ ಹೃದಯದಲ್ಲಿ ನೆಲೆಸುತ್ತದೆ ಎಂಬ ಆಶಾಭಾವನೆ ಹೊಂದಿದ್ದಾರೆ.

`ಇಳಯ ದಳಪತಿ ವಿಜಯ್‌ ಅವರು ಜೋಸ್‌ ಆಲುಕ್ಕಾಸ್‌ ನ ಆಭರಣಗಳ ಉತ್ಪನ್ನ ರಾಯಭಾರಿಯಾಗಿದ್ದು, ಅವರ ಜಾಹೀರಾತುಗಳು ಸಂಬಂಧಗಳ ಸುತ್ತ ಸುತ್ತು ನಮ್ಮ ಬ್ರ್ಯಾಂಡ್‌ ಮತ್ತು ಅದರ ಸಿದ್ಧಾಂತಗಳ ಆಕಾರವನ್ನು ಸೃಷ್ಟಿಸುವಲ್ಲಿ ನೆರವಾಗಿವೆ,' ಎನ್ನುತ್ತಾರೆ ವರ್ಗೀಸ್‌ ಆಲುಕ್ಕಾ.`ನಮ್ಮ ಕಳೆದ ವರ್ಷದ ಜಾಹೀರಾತು, ವ್ಯಾಪಾರಕ್ಕೂ ಮೀರಿದ ಸಂಬಂಧಗಳ ಕುರಿತ ಸಂದೇಶವನ್ನು ಹೊಂದಿತ್ತು. ಆ ಚಿತ್ರದಲ್ಲಿ ವಿಜಯ್‌ ಮತ್ತು ಶೋಭಾ ಮೇಡಂ (ಶೋಭಾ ಚಂದ್ರಶೇಖರ್‌) ಅವರನ್ನು ಹೊಂದಲು ನಾವು ತುಂಬಾ ಧನ್ಯರಾಗಿದ್ದೆವು.

`ಈ ವರ್ಷ, ಭಾಷೆಗಳೇ ಇರಲಿ ಅಥವಾ ಸಮುದಾಯಗಳೇ ಇರಲಿ, ಭಿನ್ನತೆಗಳನ್ನು ನಿರಾಕರಿಸುವ ಸಂಬಂಧಗಳ ಕುರಿತು ನಾವು ಮಾತನಾಡುವಾಗ ಈ ಪಾತ್ರಗಳಿಗೆ ಸರಿಹೊಂದುವ ನಟರಿಗಾಗಿ ನಾವು ಹುಡುಕಾಟ ನಡೆಸಿದ್ದೆವು.

`ಈ ರೀತಿಯಾಗಿ ನಾವು ಫಹದ್‌ ಮತ್ತು ದಿಗಂತ್‌ ಅವರನ್ನು ಈ ಜಾಹೀರಾತಿಗೆ ಹಾಕಿಕೊಂಡಿದ್ದೇವೆ. ಅವರು ಈ ಜಾಹೀರಾತಿಯಲ್ಲಿ ವಿಜಯ್‌ ಗೆ ಜೊತೆ ನೀಡಿದ್ದಾರೆ,' ಎಂದು ವರ್ಗೀಸ್‌ ಆಲುಕ್ಕಾ ತಿಳಿಸಿದರು.

ಜೋಸ್‌ ಆಲುಕ್ಕಾಸ್‌ ಯಾವಾಗಲೂ ಸಂಬಂಧಗಳ ಮಹತ್ವವನ್ನು ಬಿಂಬಿಸುತ್ತದೆ. ಈ ಜಾಹೀರಾತು ಸಹ ಅದಕ್ಕಿಂತ ಬೇರೆಯಲ್ಲ, ಎಂದು ಆ ತಂಡ ಹೇಳುತ್ತದೆ.

`ಇದು ಒಂದು ಹೊಸ ಪ್ರಯತ್ನ. ಆಭರಣದ ಜಾಹೀರಾತುಗಳಲ್ಲಿ ನಾವು ನೋಡುವ ಒಂದೇ ಮಾದರಿಯ ಪಾತ್ರಗಳಿಂದ ಸರಿಯಲು ನಾವು ಇದರೊಂದಿಗೆ ಪ್ರಯತ್ನಿಸಿದ್ದೇವೆ. ನೀವು ನೋಡಬಯಸುವ ನಿಮ್ಮ ಅಚ್ಚುಮೆಚ್ಚಿನ ತಾರೆಯರು ಈ ಪಾತ್ರಗಳಲ್ಲಿ ಇದ್ದಾರೆ. ಆದರೂ ಈ ಚಿತ್ರದಲ್ಲಿ ಈ ಹಿಂದಿನ ಜಾಹೀರಾತುಗಳಲ್ಲಿ ಇದ್ದಂತೆಯೇ ಅದೇ ಭಾವನಾತ್ಮಕ ಸಂವೇದನೆಯ ಮಿಡಿತವಿದೆ,' ಎಂದು ಎಂ.ಡಿ. ಜಾನ್‌ ಆಲುಕ್ಕಾ ಹೇಳಿದರು.

`ಹೊಸ ಜಾಹೀರಾತು ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ಪ್ರಸಾರವಾಗಲಿದೆ. ಸಂಬಂಧಗಳ ವೇದಿಕೆಯ ಮೇಲೆ ನಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುವುದು ನಮ್ಮ ಆಲೋಚನೆ,' ಎಂದು ಎಂ.ಡಿ. ಪಾಲ್ ‌ಜೆ. ಆಲುಕ್ಕಾ ಹೇಳಿದರು.

`ನಮ್ಮ ಏಜೆನ್ಸಿ ಡೆಂಟ್ಸು ಕಮ್ಯೂನಿಕೇಶನ್ಸ್, ಭಿನ್ನತೆಗಳನ್ನು ಮೀರಿದ ಸಂಬಂಧಗಳು ಎಂಬ ಚಿಂತನೆಯೊಂದಿಗೆ ಈ ಜಾಹೀರಾತನ್ನು ರೂಪಿಸಿದೆ. ಹೆಸರಾಂತ ಜಾಹೀರಾತು ತಯಾರಕ ಮನೋಜ್‌ ಪಿಳ್ನೈ ನಮಗಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

`ದೇಶದಲ್ಲಿನ ಕೆಲವು ಅತ್ಯುತ್ತಮ ತಂತ್ರಜ್ಞರು ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ,' ಎಂದು ಜೋಸ್‌ ಆಲುಕ್ಕಾಸ್‌ ನ ಬ್ರ್ಯಾಂಡ್‌ ಮ್ಯಾನೇಜರ್‌ ಜೀಜೊ ಪಿಪಿ ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ