`ಆರೋಗ್ಯಕ್ಕೂ ಅಡುಗೆ ಮನೆಗೂ ನಿಕಟ ಸಂಬಂಧ ಇದೆ,' ಎನ್ನುವ ಮಾತು ಸತ್ಯ. ಅಡುಗೆಮನೆಯಲ್ಲಿ ಕೇವಲ ರುಚಿಕರ ಆಹಾರವಷ್ಟೇ ತಯಾರಾಗುವುದಿಲ್ಲ. ಇಡೀ ಕುಟುಂಬದ ಆರೋಗ್ಯ ಹಾಗೂ ದೀರ್ಘಾಯುಷ್ಯ ಕೂಡ ಅಡುಗೆಮನೆಯನ್ನೇ ಅವಲಂಬಿಸಿದೆ. ಅಡುಗೆಮನೆಯ ವಾತಾವರಣ ಚೆನ್ನಾಗಿದ್ದಾರೆ ಮಾತ್ರ ಆರೋಗ್ಯ ಹಾಗೂ ರುಚಿಯ ಸಂಬಂಧವನ್ನು ಬಹಳ ವರ್ಷಗಳ ಕಾಲ ಕಾಪಾಡಿ ಕೊಂಡು ಹೋಗಬಹುದು. ಅದಕ್ಕಾಗಿ ವಿದ್ಯುತ್‌ ಉಪಕರಣಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಪಾತ್ರೆಗಳು ಸಮರ್ಪಕವಾಗಿರಬೇಕು, ಕ್ರಿಮಿಕೀಟಗಳ ಹಾವಳಿ ಇರಬಾರದು.

ವಿದ್ಯುತ್ಉಪಕರಣಗಳ ಸೂಕ್ತ ನಿರ್ವಹಣೆ

Kitchen-bhi-ho-eco-frindly-3

ಎಲೆಕ್ಟ್ರಾನಿಕ್ಸ್ ಅಪ್ಲೆಯನ್ಸಸ್‌ ಅಥವಾ ವಿದ್ಯುತ್‌ ಉಪಕರಣಗಳಿಲ್ಲದೆ ಇಂದಿನ ಆಧುನಿಕ ಅಡುಗೆಮನೆಯನ್ನು ಕಲ್ಪಿಸಿಕೊಳ್ಳಲು ಆಗದು. ಆದರೆ ಇದಕ್ಕಾಗಿ ಕಡಿಮೆ ವಿದ್ಯುತ್‌ ಬಳಸುವಂತಹ ಉಪಕರಣಗಳನ್ನು ಬಳಸಬೇಕು. ಅಡುಗೆಮನೆಯಲ್ಲಿ ವಿದ್ಯುತ್ ಮುಖಾಂತರ ನಡೆಯುವ ಮಿಕ್ಸಿ, ಓವನ್‌, ಟೋಸ್ಟರ್‌, ಕಾಫಿ ಮೇಕರ್‌, ಮೈಕ್ರೊವೇವ್ ಮುಂತಾದವುಗಳನ್ನು ಬಳಸಿದ ಬಳಿಕ ಅವನ್ನು ಮುಚ್ಚಿಡಬೇಕು. ಅವು ಸ್ವಯಂಚಾಲಿತ ಬಂದ್‌ ಆಗುತ್ತವೆ ಎಂದು ತಿಳಿಯಬೇಡಿ. ಅವನ್ನು ಮೇನ್‌ ಪ್ಲಗ್‌ ನಿಂದ ಪ್ರತ್ಯೇಕಗೊಳಿಸಿ.

ಫ್ರಿಜ್‌ ನ್ನು ಮೇಲಿಂದ ಮೇಲೆ ತೆಗೆಯಬೇಡಿ. ಮೇಲಿಂದ ಮೇಲೆ ಬಾಗಿಲು ತೆರೆಯುತ್ತಿದ್ದರೆ ವಿದ್ಯುತ್‌ ಹೆಚ್ಚು ಖರ್ಚಾಗುತ್ತದೆ.

ಆಹಾರವನ್ನು ತಯಾರಿಸಲು ಅಥವಾ ಬಿಸಿ ಮಾಡಲು ಓವನ್‌ ಬದಲು ಮೈಕ್ರೊವೇವ್ ‌ನ್ನು ಬಳಸಿ. ಆಹಾರ ಬಿಸಿ ಮಾಡಲು ಇದು ಒಳ್ಳೆಯ ಉಪಕರಣ. ಆದರೆ ಮೈಕ್ರೋವೇವ್ ‌ನಲ್ಲಿ ಗಾಜಿನ ಉಪಕರಣಗಳನ್ನು ಬಳಸುವುದು ಸೂಕ್ತ.

Kitchen-bhi-ho-eco-frindly-5

ವಿದ್ಯುತ್‌ ಉಪಕರಣಗಳ ಸ್ವಚ್ಛತೆಯ ಬಗ್ಗೆ ಗಮನಕೊಡಿ. ಟೋಸ್ಟರ್‌ ನಲ್ಲಿ ಬ್ರೆಡ್‌ ಬಿಸಿ ಮಾಡಿದ್ದರೆ ಅಥವಾ ಸ್ಯಾಂಡ್‌ ವಿಚ್ ತಯಾರಿಸಿ ಕೊಂಡಿದ್ದರೆ ಬಳಿಕ ಅದನ್ನು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಮಿಕ್ಸಿ ಅಥವಾ ಹ್ಯಾಂಡ್‌ ಬ್ಲೆಂಡರ್‌ ನ್ನು ಕೂಡ ತಕ್ಷಣವೇ ಸ್ವಚ್ಛಗೊಳಿಸಿಡಿ.

ಅಡುಗೆಮನೆಯಲ್ಲಿ ಲೈಟ್‌ ನ ವ್ಯವಸ್ಥೆ ಸರಿಯಾಗಿರಲಿ. ಅಡುಗೆ ಮಾಡುವಾಗ ಎಗ್ಸಾಸ್ಟ್ ಫ್ಯಾನ್‌ ಅಥವಾ ಚಿಮಣಿಯ ಬಳಕೆಯನ್ನು ಅವಶ್ಯ ಮಾಡಿ. ಏಕೆಂದರೆ ಒಗ್ಗರಣೆಯ ವಾಸನೆ ಹೊರಗೆ ಹೋಗಬೇಕು. ಕಾಲಕಾಲಕ್ಕೆ ಅವನ್ನು ಕೂಡ ಸ್ವಚ್ಛಗೊಳಿಸುತ್ತ ಇರಬೇಕು.

ಪಾತ್ರೆಗಳ ಆಯ್ಕೆ ಮತ್ತು ಸ್ವಚ್ಛತೆ

Kitchen-bhi-ho-eco-frindly-2

ಅಡುಗೆಮನೆಯನ್ನು ಪರಿಸರಸ್ನೇಹಿ ಆಗಿ ಮಾಡಲು ಸೂಕ್ತ ಪಾತ್ರೆಗಳ ಆಯ್ಕೆ ಹಾಗೂ ಅವುಗಳ ಸ್ವಚ್ಛತೆ ಅತ್ಯಂತ ಅವಶ್ಯ. ಆರೋಗ್ಯ ತಜ್ಞರ ಪ್ರಕಾರ ಹೊಟ್ಟೆಯ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಡುಗೆಮನೆಯಲ್ಲಿ ಸ್ವಚ್ಛತೆ ಅತ್ಯಂತ ಅವಶ್ಯ. ಸಿಂಕ್‌ ನಲ್ಲಿ ಹೆಚ್ಚು ಹೊತ್ತು ಮುಸುರೆ ಪಾತ್ರೆಗಳಿದ್ದರೆ, ಮಿಕ್ಸಿ, ಗ್ರೈಂಡರ್‌ ಗಳಲ್ಲಿ ಉಳಿದ ಆಹಾರ ಕಣಗಳಿಂದ ಕೀಟಾಣುಗಳು ಜನ್ಮ ತಳೆಯುತ್ತವೆ. ಅವೇ ಹಲವು ರೋಗಗಳಿಗೆ ಕಾರಣವಾಗುತ್ತವೆ.

ಮಾರುಕಟ್ಟೆಯಲ್ಲಿ ಹಲವು ಬಗೆಯ ಉಪಕರಣಗಳು ಲಭ್ಯವಿವೆ. ಪಾತ್ರೆಗಳು ಯಾವುದೇ ಆಗಿರಬಹುದು. ಆದರೆ ಅವು ಸ್ವಚ್ಛ ಆಗಿರಬೇಕಾದುದು ಮುಖ್ಯ. ಹುಳಿ, ಪಲ್ಯ ಹಾಗೂ ಇತರೆ ಪದಾರ್ಥಗಳನ್ನು ತಯಾರಿಸಲು ಅಲ್ಯುಮಿನಿಯಂ ಪಾತ್ರೆಗಳು ಸೂಕ್ತವಲ್ಲ. ತವಾ ಹಾಗೂ ಕಬ್ಬಿಣದ ಅಗಲವಾದ ಪಾತ್ರೆಗಳನ್ನು ಬಳಸಿ.

ಇತ್ತೀಚಿನ ವರ್ಷಗಳಲ್ಲಿ ನಾನ್‌ ಸ್ಟಿಕ್‌ ಉಪಕರಣಗಳು ಹೆಚ್ಚು ಚಾಲ್ತಿಯಲ್ಲಿವೆ. ಆ ಪಾತ್ರೆಗಳಲ್ಲಿ ಪದಾರ್ಥಗಳು ಅಂಟಿಕೊಳ್ಳುವುದಿಲ್ಲ ಹಾಗೂ ಕರಕಲಾಗುವುದಿಲ್ಲ. ಅಷ್ಟೇ ಅಲ್ಲ, ಅತ್ಯಂತ ಕಡಿಮೆ ಎಣ್ಣೆಯಲ್ಲಿ ಆಹಾರ ಸಿದ್ಧವಾಗುತ್ತದೆ. ಆದರೆ ಇಂತಹ ಪಾತ್ರೆಗಳ ಕೋಟಿಂಗ್‌ ಬಿಟ್ಟುಕೊಳ್ಳಲು ಶುರು ಮಾಡಿದ ನಂತರ ಅವುಗಳ ಬಳಕೆ ನಿಲ್ಲಿಸಬೇಕು. ಏಕೆಂದರೆ ಆ ಅಂಶ ಆಹಾರದಲ್ಲಿ ಸೇರಿಬಿಡುತ್ತದೆ. ಅದು ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ