ಈ ವಜ್ರಾಭರಣಗಳ ಮಳಿಗೆ ಇದೀಗ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದಿದ್ದು, ಕರ್ನಾಟಕದ ಅತಿ ದೊಡ್ಡ ಬಂಗಾರದ ಒಡವೆಗಳ ಶೋರೂಂ ಎಂಬ ಹೆಗ್ಗಳಿಕೆ ಗಳಿಸಿದೆ. ಈ ಅತಿ ದೊಡ್ಡ ಮಳಿಗೆ 4 ವಿಶಾಲ ಮಹಡಿಗಳಲ್ಲಿ 25,000 ಚದರಡಿ ಹರಡಿದ್ದು, ಗ್ರಾಹಕರ ಉತ್ತಮ ಸೇವೆಗಾಗಿ ವಿಪುಲ ಪಾರ್ಕಿಂಗ್ ಸ್ಪೇಸ್ ಸಹ ಹೊಂದಿದೆ.
ಈ ಶುಭಾರಂಭದ ಸಂದರ್ಭದಲ್ಲಿ ಇಡೀ ನಗರದಲ್ಲಿ ಆಭರಣಗಳ ತಯಾರಿಯ `ವೇಸ್ಟೇಜ್' ಅತಿ ಕನಿಷ್ಠ ಎಂಬ ಹೊಸ ಕ್ರಾಂತಿಯನ್ನೇ ಹರಡಿಬಿಟ್ಟಿತು. ಅಕ್ಷರಶಃ ಎಲ್ಲಾ ಬಗೆಯ ಆಭರಣಗಳಿಗೂ 07% ನಷ್ಟೇ ವೇಸ್ಟೇಜ್ ಎಂಬುದು ಲಲಿತಾ ಜ್ಯೂವೆಲರಿಯ ಅತಿ ದೊಡ್ಡ ಹೆಗ್ಗಳಿಕೆ ಎನಿಸಿತು. ಜೊತೆಗೆ ಮಜೂರಿಯ ಕೂಲಿ (ಮೇಕಿಂಗ್ ಚಾರ್ಜಸ್) ಇಲ್ಲವೇ ಇಲ್ಲ! ಶೇ.89 ಅತಿ ಕನಿಷ್ಠ ಪ್ರಮಾಣದ ವೇಸ್ಟೇಜ್ ಮಾತ್ರವೇ ಇಡೀ ಸಂಗ್ರಹಕ್ಕೆ ಅನ್ವಯಿಸುತ್ತದೆ. ಯಾವ ಆಭರಣಕ್ಕೂ ಶೇ.9ಕ್ಕಿಂತ ಹೆಚ್ಚಿನ ವೆಸ್ಟೇಜ್‌ಇಲ್ಲವೇ ಇಲ್ಲ. ಸಾಮಾನ್ಯವಾಗಿ ಜನ ಒಡವೆ ಖರೀದಿಸುವಾಗ ಶೇ.15ಕ್ಕೂ ಹೆಚ್ಚಿನ ವೇಸ್ಟೇಜ್ ಭತ್ಯೆ ಭರಿಸುವುದು ಅನಿವಾರ್ಯವಾಗಿದೆ, ಅದರಲ್ಲೂ ಮುಖ್ಯವಾಗಿ ಮದುವೆಗೆ ದೊಡ್ಡ ಮೊತ್ತದ ಆರ್ಡರ್ ನೀಡುವಾಗ, ಅತಿ ಸಣ್ಣ ಚಿನ್ನದ ನಾಣ್ಯದಿಂದ ಹಿಡಿದು ಕ್ಲಿಷ್ಟಕರ ದೇವಾಲಯ ವಿನ್ಯಾಸ ಇರುವಂಥ ಯಾವುದೇ ಒಡವೆ ಇರಲಿ, ಲಲಿತಾ ಜ್ಯೂವೆಲರಿಯ ಸಂಗ್ರಹದಲ್ಲಿ ಇಲ್ಲದೇ ಇರಲು ಸಾಧ್ಯವೇ ಇಲ್ಲ. ಆದರೆ ಖಂಡಿತಾ ದುಬಾರಿ ಅಲ್ಲ. ಪ್ರತಿಯೊಂದು ಒಡವೆಯೂ 100% KDM ಹಾಲ್ ಮಾರ್ಕ್ ಸರ್ಟಿಫೈಡ್ ಆಗಿದ್ದು, ಒಡವೆಯಲ್ಲಿನ ಬಂಗಾರ ಅಪ್ಪಟ ಅಪರಂಜಿ ಎಂದು ಖಚಿತಪಡಿಸುತ್ತದೆ.
ಮಾರುಕಟ್ಟೆಯ ಇತರ ಮಳಿಗೆಗಳಿಗೆ ಹೋಲಿಸಿದಾಗ ಇಷ್ಟು ಕನಿಷ್ಠ ವೇಸ್ಟೇಜ್ ಹಾಗೂ ಈ ಹಳದಿ ಲೋಹದ ಮೇಲೆ ದೊಡ್ಡ ಪ್ರಮಾಣದ ಹೂಡಿಕೆ ಖಂಡಿತಾ ಲಾಭಕರ ಎಂದು ಸ್ಪಷ್ಟವಾಗುತ್ತದೆ. ಉದಾ : 30 ಗ್ರಾಂ ಇರುವ ಒಡವೆ, 20% ವೇಸ್ಟೇಜ್ ಪ್ರಕಾರ ಇಂದಿನ ದರದಲ್ಲಿ ರೂ.99,000/ ಬೆಲೆ ಬಾಳುತ್ತದೆ. ಇಲ್ಲಿ ಚಿನ್ನದ ದರ ಪ್ರತಿ ಗ್ರಾಮಿಗೆ ರೂ.2,750/ ಆಗಿದೆ. ಅಂದರೆ ಇತರ ಮಳಿಗೆಗಳಲ್ಲಿ ವಿನ್ಯಾಸ ಆಧರಿಸಿ ಆಭರಣಕ್ಕೆ ತಗಲು ವೇಸ್ಟೇಜ್ 20% ಕೂಡ ಆಗಬಹುದು. ಆದರೆ ಇದನ್ನು ನೀವು ಲಲಿತಾ ಜ್ಯೂವೆಲರಿಯಲ್ಲಿ ಕೊಂಡಾಗ ಕೇವಲ ರೂ.88,275/ ಮಾತ್ರ ತೆರುತ್ತೀರಿ, ಅಂದರೆ ರೂ.10,725/ ನಿವ್ವಳ ಲಾಭ!
``ಭಾರತದಲ್ಲಿ ಗ್ರಾಹಕರು ಬೆಲೆ ಕುರಿತಾಗಿ ಅತಿ ಸೂಕ್ಷ್ಮವಾಗಿ ಸ್ಪಂದಿಸುವುದರಿಂದ, ನಾವು ಗ್ರಾಹಕರಿಗೆ ಅತಿ ಹೆಚ್ಚಿನ ಲಾಭ ಒದಗಿಸಿಕೊಟ್ಟು ದೊಡ್ಡ ಮೊತ್ತದ ಸೇಲ್ಸ್ ಮಾಡಲೇಬೇಕೆಂದು ನಿರ್ಧರಿಸಿದ್ದೇವೆ. ಇದು ನಮ್ಮ ಒಟ್ಟು ಮೊತ್ತದ ಲಾಭಕ್ಕೆ ಪೆಟ್ಟು ನೀಡಿದರೂ, ಗ್ರಾಹಕರ ಸಂತೃಪ್ತಿಯೇ ನಮ್ಮ ಮುಖ್ಯ ಗುರಿಯಾಗಿರುವುದರಿಂದ ಅದು ಪ್ರಮುಖವೆನಿಸದು. ಈ ರೀತಿ ನಮ್ಮ ಎದುರಾಳಿಗಳನ್ನು ಸೋಲಿಸಲಿದ್ದೇವೆ,'' ಎನ್ನುತ್ತಾರೆ ಲಲಿತಾ ಜ್ಯೂವೆಲರಿಯ ಚೇರ್ಮನ್ ಮತ್ತು ಎಂ.ಡಿ. ಆಗಿರುವ ಕಿರಣ್,
ಅವರು ಬೆಲೆಯ ಕುರಿತು ಸ್ಪಷ್ಟೀಕರಣ ನೀಡುತ್ತಾರೆ. ಅವರು ಮಾತು ಮುಂದುವರಿಸುತ್ತಾ, ``ಪ್ರಸ್ತುತ ಮಾರುಕಟ್ಟೆಯಲ್ಲಿ ಇದು ಕನಿಷ್ಠ ಲಭ್ಯವಿರುವ ವೇಸ್ಟೇಜ್. ನಮ್ಮದು ಅತಿ ಬಲಿಷ್ಠ ತಯಾರಿಕಾ ಘಟಕ ಆಗಿರುವುದರಿಂದ ಅದೇ ಬೆಲೆಯಲ್ಲಿ ಗ್ರಾಹಕರಿಗೆ ಮಾರುತ್ತೇವೆ. ಅತಿ ಕನಿಷ್ಠ ವೇಸ್ಟೇಜ್‌ನ, ಗರಿಷ್ಠ ಉಳಿತಾಯದ ಗ್ಯಾರಂಟಿ ನೀಡುತ್ತೇವೆ,'' ಎನ್ನುತ್ತಾರೆ.