ಬಾಥ್‌ ರೂಮ್ ಮನೆಯ ಒಂದು ಮುಖ್ಯ ಭಾಗ. ಇಲ್ಲಿಂದಲೇ ನಾವು ನಮ್ಮ ದಿನವನ್ನು ಆರಂಭಿಸುತ್ತೇವೆ. ಎಷ್ಟೋ ಜನ ತಮ್ಮ ಬೆಡ್‌ ರೂಮ್ ಹಾಗೂ ಲಿವಿಂಗ್‌ ರೂಮ್ ನ್ನು ಚೆನ್ನಾಗಿ ಹೊಳೆಯುವಂತೆ ಮಾಡುತ್ತಾರೆ. ಆದರೆ ಬಾಥ್‌ ರೂಮ್ ನ್ನು ಸ್ವಚ್ಛಗೊಳಿಸುವುದು ಅಗತ್ಯ ಎಂದು ಭಾವಿಸುವುದಿಲ್ಲ.

ತಜ್ಞರ ಪ್ರಕಾರ, ಮನೆಯ ಇತರೆ ಭಾಗಗಳ ಸ್ವಚ್ಛತೆ ಎಷ್ಟು ಮುಖ್ಯವೋ, ಬಾಥ್‌ರೂಮಿನ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ ಬಾಥ್‌ ರೂಮಿನ ಸ್ವಚ್ಛತೆ ನೇರವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸ್ವಚ್ಛತೆ ಕಾಪಾಡದ ಟಾಯ್ಲೆಟ್

ಬಹಳಷ್ಟು ರೋಗಗಳಿಗೆ ಹಾಗೂ ಸೋಂಕುಗಳಿಗೆ ಆಹ್ವಾನ ನೀಡುತ್ತದೆ. ಒಂದು ಸಲ ಈ ಸೋಂಕು ದೇಹವನ್ನು ಪ್ರವೇಶಿಸಿಬಿಟ್ಟರೆ ಅದನ್ನು ಹೋಗಲಾಡಿಸಲು ಹಲವು ತಿಂಗಳುಗಳೇ ಬೇಕಾಗುತ್ತವೆ. ಇದರ ಗಾಢ ಪರಿಣಾಮ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಉಂಟಾಗುತ್ತದೆ. ಏಕೆಂದರೆ ಕೊಳಕು ಟಾಯ್ಲೆಟ್‌ ಮೇಲೆ ಕುಳಿತ ರೋಗಾಣುಗಳು ನಮ್ಮ ದೇಹವನ್ನು ರೋಗದ ಕಪಿಮುಷ್ಟಿಗೆ ಸಿಲುಕಿಸುತ್ತವೆ.

ಈ ಕಾರಣದಿಂದ ಮೂತ್ರ ಸೋಂಕು, ತ್ವಚೆ ಸೋಂಕು ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಈ ರೋಗಗಳಿಂದ ದೂರವಿರಲು ಟಾಯ್ಲೆಟ್‌ ಸ್ವಚ್ಛಗೊಳಿಸುವುದನ್ನು ನಿಮ್ಮ ಪ್ರಾಥಮಿಕ ಆದ್ಯತೆಯಲ್ಲಿ ಸೇರಿಸಿಕೊಳ್ಳಿ.

ನಿಯಮಿತ ಸ್ವಚ್ಛತೆ

IMG_4247-copy (1)

ಬಾಥ್‌ ರೂಮ್ ನ ಪೈಪ್‌ಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಕ್ಲೆನ್ಸಿಂಗ್‌ ಸಲ್ಯೂಷನ್‌ ಹಾಕಿಡಿ. ಇದರಿಂದಾಗಿ ಪೈಪ್‌ಗಳಿಂದ ಕೆಟ್ಟ ವಾಸನೆ ಹೊರಹೊಮ್ಮದು.

ಟಾಯ್ಲೆಟ್‌ನ ಟ್ಯಾಂಕ್‌ನಲ್ಲಿ ಹಾರ್ಪಿಕ್‌ನ ಮಾತ್ರೆ ಅಥವಾ ಡೆಂಚರ್‌ ಕ್ಲೀನರ್‌ ಮಾತ್ರೆ ಹಾಕಿ ಫ್ಲಶ್‌ ಮಾಡಿದಾಗ ಟಾಯ್ಲೆಟ್‌ ಪಾಟ್‌ಸ್ವಚ್ಛಗೊಳ್ಳುತ್ತದೆ.

ವಾಶ್‌ ಬೇಸಿನ್‌ನ ನಲ್ಲಿಯಿಂದ ಕೊಳಕಾದ ಕೈಗಳನ್ನು ಸ್ವಚ್ಛಗೊಳಿಸಿದ ಬಳಿಕ, ಆ ನಲ್ಲಿಯ ಮೇಲೆ ಸ್ವಚ್ಛ ನೀರು ಹಾಕಿ ಅದನ್ನು ತೊಳೆಯಿರಿ. ಇದರಿಂದಾಗಿ ನಿಮ್ಮ ನಂತರ ಬೇರೆ ಸದಸ್ಯರು ಅದನ್ನು ಬಳಸಿದಾಗ ರೋಗಾಣುಗಳು ಅವರಿಗೆ ವರ್ಗಾಣೆಯಾಗಬಾರದು.

ಕೈ ತೊಳೆದುಕೊಂಡ ಬಳಿಕ ಲಿಕ್ವಿಡ್‌ ಆ್ಯಂಟಿ ಬ್ಯಾಕ್ಟೀರಿಯಾ ಸೋಪ್‌ನ್ನು ಬಳಸಿ.

ಟವೆಲ್ ‌ಮತ್ತು ಸ್ಪಾಂಜನ್ನು ದಿನ ಸ್ವಚ್ಛಗೊಳಿಸಿ. ಒದ್ದೆ ಟವೆಲ್ ನ್ನು ನಿಯಮಿತವಾಗಿ ಬಿಸಿಲಿನಲ್ಲಿ ಒಣಗಿಸಿ.

ಟಾಯ್ಲೆಟ್‌ನ ನೆಲ, ಸೀಟು, ಕನ್ನಡಿ, ಶವರ್‌ ಮ್ಯಾಟ್ಸ್ ಹಾಗೂ ಬಕೆಟ್‌ಗಳನ್ನು ಕೂಡ ದಿನ ಸ್ವಚ್ಛಗೊಳಿಸಿ.

ಕೆಲವು ಎಚ್ಚರಿಕೆಗಳು

ಬಾಥ್‌ ರೂಮ್ ಹೈಜೀನ್‌ಗಾಗಿ ಕೆಲವು ಎಚ್ಚರಿಕೆ ವಹಿಸುವುದು ಸೂಕ್ತ.

ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಫ್ಲಶ್‌ ಮಾಡುವ ಮುಂಚೆ ಕಮೋಡ್‌ನ ಮುಚ್ಚಳನ್ನು ಮುಚ್ಚಿ. ಏಕೆಂದರೆ ಫ್ಲಶ್‌ ಮುಖಾಂತರ ಬರುವ ನೀರಿನ ಹನಿಗಳಲ್ಲಿ ರೋಗಾಣುಗಳು ಇರುತ್ತವೆ.

ಶವರ್‌ ಹೆಡ್‌ನ್ನು ಯಾವಾಗಲೂ ಸ್ವಚ್ಛವಾಗಿಡಿ. ಏಕೆಂದರೆ ಯಾವ ಭಾಗದಲ್ಲಿ ಕ್ಷಾರಯುಕ್ತ ನೀರು ಬರುತ್ತೋ, ಅಲ್ಲಿ ಬಿಳಿ ಫಂಗಸ್ ತಗಲು ಸಾಧ್ಯತೆ ಇರುತ್ತದೆ. ಅದರಿಂದ ರೋಗಾಣುಗಳು ಪಸರಿಸುತ್ತವೆ.

ಒಂದು ವೇಳೆ ನಿಮ್ಮ ಬಾಥ್‌ ರೂಮಿನಲ್ಲಿ ಶವರ್‌ಗಾಗಿ ಪ್ರತ್ಯೇಕವಾಗಿ ಕ್ಯುಬಿಕ್‌, ಕ್ಯಾಬಿನೆಟ್‌ ಅಥವಾ ಪರದೆ ಅಳವಡಿಸಿದ್ದರೆ, ಅಲ್ಲಿ ಒದ್ದೆಯಾದಾಗ ಅದನ್ನು ಶುಷ್ಕಗೊಳಿಸಿ ಆ್ಯಂಟಿ ಬ್ಯಾಕ್ಟೀರಿಯಲ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ. ಇದರಿಂದಾಗಿ ಅಲ್ಲಿ ಬಿಳಿ ಫಂಗಸ್ ಉಂಟಾಗುವ ಸಾಧ್ಯತೆ ಕಡಿಮೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ