50ನೇ ವಿವಾಹ ವಾರ್ಷಿಕೋತ್ಸವದಂದು ಗಂಡನ ಕಣ್ಣಲ್ಲಿ ಎರಡು ಹನಿ ಕಣ್ಣೀರನ್ನು ನೋಡಿದ ಹೆಂಡತಿ, ``ರೀ, ನೀವು ಇಷ್ಟು ಭಾವುಕರು ಅಂತ ತಿಳಿದಿರಲಿಲ್ಲ,'' ಎಂದಳು.

ಗಂಡ ಹೇಳಿದ, ``50 ವರ್ಷಗಳ ಹಿಂದೆ ನಾನು ಮಾಡಿದ ಸಣ್ಣ ತಪ್ಪಿಗೆ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡ ನಿಮ್ಮಪ್ಪ, ನನ್ನ ಮಗಳನ್ನು `ಲಗ್ನ ಆಗ್ತೀಯಾ..... ಇಲ್ಲ 50 ವರ್ಷ ನಿನ್ನ ಜೈಲಿಗೆ ತಳ್ಳಿಬಿಡಲಾ?' ಎಂದು ಘರ್ಜಿಸಿದಾಗ, ಜೈಲೇ ಇರಲಿ ಎಂದು ಒಪ್ಪಿಕೊಂಡಿದ್ದರೆ ಚೆನ್ನಾಗಿತ್ತು.... ಇವತ್ತಿಗೆ ನನ್ನ ಬಿಡುಗಡೆ ಆಗ್ತಿತ್ತು. ಅದನ್ನು ನೆನೆಸಿಕೊಂಡು ಕಣ್ಣೀರು ಬಂತು ಅಷ್ಟೇ....'' ಎನ್ನುವುದೇ?

ತಂದೆ : ಮಗನೇ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ ಮದುವೆಗೆ ಮೊದಲು ಸಾಧಿಸಿ ಮುಗಿಸಿಬಿಡು.

ಮಗ : ಯಾಕಪ್ಪ ಹಾಗಂತೀಯಾ?

ತಂದೆ : ಮದುವೆಯಾದ ನಂತರ ಸಾಧಿಸಿದರೆ ಹೆಂಡತಿಯ ಕಾಲ್ಗುಣ ಅಂತಾರೆ!

ಅಜಯ್‌ : ನೀನು ಮಾಡದ ತಪ್ಪಿಗೆ ನೀನೇ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದೀಯಂತೆ, ಹೌದಾ?

ವಿಜಯ್‌ : ಹೌದಯ್ಯ, ಮುಂದಿನ ತಿಂಗಳು ನಾನು ಮದುವೆ ಆಗ್ತಿದ್ದೀನಿ!

ಗುಂಡ : ಇತ್ತೀಚೆಗೆ ಒಂದೇ ಕಡೆ ನೋಡಿ ನೋಡಿ ನನ್ನ ಕಣ್ಣು ಸದಾ ನೋಯ್ತಾ ಇದೆ ಡಾಕ್ಟರ್‌.

ವೈದ್ಯರು : ಸ್ವಲ್ಪ ಲೇಡೀಸ್‌ ಹಾಸ್ಟೆಲ್ ‌ಕಡೆ ಓಡಾಡೋದನ್ನು ಕಡಿಮೆ ಮಾಡಿ, ಸರಿಹೋಗುತ್ತೆ!

ಪತ್ನಿ : ಆ ಕಾಮಿಡಿ ಸಿನಿಮಾ ನೋಡಿ ನೋಡಿ ನಕ್ಕೂ ನಕ್ಕು ನನ್ನ ಅರ್ಧ ಜೀವಾನೇ ಹೋದ ಹಾಗಾಯ್ತು ರೀ.

ಪತಿ : ಹೌದಾ....? ಜಾಸ್ತಿ ದುಡ್ಡಾದರೂ ಪರವಾಗಿಲ್ಲ, ನಾನು ಕೊಡ್ತೀನಿ.... ಒಳ್ಳೆ ಥಿಯೇಟರ್‌ನಲ್ಲಿ ಇನ್ನೊಮ್ಮೆ ಆ ಸಿನಿಮಾ ನೋಡಿಬಿಡು!

ಪತ್ನಿ : ರೀ..... ಅಡುಗೆ ಏನು ಮಾಡಲಿ ಅಂತ ಆಗಿನಿಂದ ಬಹಳ ಯೇಚನೆ ಮಾಡ್ತಾ ಇದ್ದೀನಿ.

ಪತಿ : ನಿನಗೊಂದು ಯೋಚನೆ ಆದರೆ, ನನ್ನದು ಇನ್ನೊಂದು ತರಹದ ಯೋಚನೆ ಆಗಿದೆ.

ಪತ್ನಿ : ನಿಮ್ಮದೇನು ಅಂಥ ಯೋಚನೆ?

ಪತಿ : ನೀನು ಮಾಡಿದ್ದನ್ನು ತಿನ್ನುವುದು ಹೇಗೆ ಅಂತಾ?

ಪತಿ : ತುಂತುರು ಮಳೆ ಬಿದ್ದು ವಾತಾವರಣ ಇಷ್ಟು ಹಿತಕರ ಆಗಿರೋವಾಗ, ಈ ಸಮಯದಲ್ಲಿ ನೀನು ಏನಾದರೂ ವಿಶೇಷವಾದದ್ದನ್ನು ಹೇಳಬಾರದೇ.....?

ಪತ್ನಿ : ವಾವ್‌...  ಹೌ ನೈಸ್‌! ನಡೆಯಿರಿ, ಹಾಗೇ ಸುತ್ತಾಡಿಕೊಂಡು ಶಾಪಿಂಗ್‌ ಮುಗಿಸೋಣ!

ಮಹೇಶ್‌ : ಏನೋ ನೀನು.... ಇಷ್ಟು ಸಂತೋಷದಿಂದ ಸ್ವೀಟ್ಸ್ ಹಂಚುತ್ತಾ ಇದ್ದೀಯಾ.... ಲಾಟರಿ ಹೊಡೀತೇನು?

ಸುರೇಶ್‌ : ಇಲ್ಲ ಕಣೋ... ನಾಳೆಯಿಂದ ನನ್ನ ಹೆಂಡತಿ ತನ್ನ ಘನಘೋರ ಅಡುಗಿ ಮಾಡುವುದನ್ನು ನಿಲ್ಲಿಸಲಿದ್ದಾಳಂತೆ. ಇನ್ನಾದರೂ ನಾನೇ ಬೇಯಿಸಿಕೊಂಡು ನೆಮ್ಮದಿಯಾಗಿ ಇರಬಹುದಲ್ಲ....!

ತಾಯಿ : ಮಮತಾ, ನೀನು ಚರ್ಚಾಕೂಟದ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ನಿಮ್ಮ ತಂದೆ ಏನೆಂದರು?

ಮಗಳು : ಮಮತಾ, ದಿನದಿಂದ ದಿನಕ್ಕೆ ಮಾತನಾಡುವುದರಲ್ಲಿ ನೀನು ನಿಮ್ಮಮ್ಮನನ್ನು ಮೀರಿಸುತ್ತಿದ್ದೀಯಾ ಅಂತ ಹೇಳಿದರು.

ಪ್ರಶ್ನೆ : 1983ರಲ್ಲಿ ಕ್ರಿಕೆಟ್‌ ವಿಶ್ವ ಕಪ್‌ ಯಾರಿಗೆ ಸಿಕ್ಕಿತು?

ಉತ್ತರ : ಅದನ್ನು ಗೆದ್ದವರಿಗೆ!

ವಿಮಲಮ್ಮ ಸೀರೆ ಕೊಳ್ಳಲೆಂದು ಅಂಗಡಿಗೆ ಹೋದರು. ಸೇಲ್ಸ್ ಮ್ಯಾನ್‌ ಎಂಥ ಸೀರೆ ತೋರಿಸಿದರೂ ಅವರು ಬಡಪಟ್ಟಿಗೆ ಒಪ್ಪುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ