ವ್ಯವಸ್ಥಿತ ಮನೆಯ ಲಕ್ಷಣಗಳು ಸೌಂದರ್ಯದೊಂದಿಗೆ ಅದರ ಎಲ್ಲ ಮೂಲೆಗಳಿಂದ ಹೊರಸೂಸುವ ಸುಗಂಧದಿಂದಲೂ ತಿಳಿದುಬರುತ್ತದೆ. ಮನೆಯ ಅಲಂಕಾರದಿಂದ ಅದು ಸುಂದರವಾಗಿ ಕಾಣುವಂತೆ ಮಾಡುವ ಹಾಗೆ ಅದನ್ನು ಸುಗಂಧಿತವಾಗಿ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೆಲವರು ಅಗರಬತ್ತಿ, ಧೂಪಗಳನ್ನು ಅಂಟಿಸುವ ದೇಶೀಯ ಪದ್ಧತಿಗಳಿಂದ ಮನೆಯನ್ನು ಸುಗಂಧಿತವಾಗಿಟ್ಟುಕೊಳ್ಳುತ್ತಾರೆ. ಕೆಲವರು ರೂಮ್ ಫ್ರೆಶ್‌ನರ್‌ನಂತಹ ಉತ್ಪನ್ನಗಳ ಮೇಲೆ ಭರವಸೆ ಇಡುತ್ತಾರೆ. ಆದರೆ ಇವುಗಳಲ್ಲಿ ಯಾವುದೇ ಉತ್ಪನ್ನದ ವಾಸನೆ ಹೆಚ್ಚು ಸಮಯ ಇರುವುದಿಲ್ಲ.

ಮನೆಯಲ್ಲಿ ಹೆಚ್ಚು ಸಮಯ ಸುವಾಸನೆ ತುಂಬಿರಲು ಇಂದು ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್‌ ಪದ್ಧತಿಯಿಂದ ನಡೆಯುವ ಉತ್ಪನ್ನಗಳು ಇದ್ದು ಅವುಗಳಿಂದ ಎಲ್ಲ ಸಮಯದಲ್ಲೂ ಮನೆಯನ್ನು ಸುಗಂಧಿತವಾಗಿಟ್ಟುಕೊಳ್ಳಬಹುದು. ಅವುಗಳಲ್ಲಿ ಒಂದು ಏರ್‌ವಿಕ್‌ ಫ್ರೆಶ್‌ ಮ್ಯಾಟಿಕ್‌ ಆಗಿದ್ದು, ಅದರ ಆಟೋಮ್ಯಾಟಿಕ್‌ ಫ್ರ್ಯಾಗ್ರೆನ್ಸ್ ಟೆಕ್ನಿಕ್‌ನಿಂದ ಮನೆಯಲ್ಲಿ ಸುವಾಸನೆ ತುಂಬಿರುತ್ತದೆ.

ವಿಧ ವಿಧವಾದ ಸುವಾಸನೆ

ಮಾರುಕಟ್ಟೆಯಲ್ಲಿ ಇಂತಹ ಎಲೆಕ್ಟ್ರಾನಿಕ್‌ ಡಿವೈಸ್‌ಗಳಿರುವ ಅನೇಕ ಉತ್ಪನ್ನಗಳಿದ್ದು ಅವುಗಳಲ್ಲಿ ಸುವಾಸನೆಯುಕ್ತ ರೀಫಿಲ್ ‌ಹಾಕಿ ಎಲ್ಲ ಸಮಯದಲ್ಲೂ ವಿಧವಿಧವಾದ ಸುವಾಸನೆಗಳನ್ನು ಪಡೆಯಬಹುದು. ವಿಶೇಷವೆಂದರೆ ಈ ಡಿವೈಸ್‌ಗಳಲ್ಲಿ ಟೈಮರ್‌ ಸೆಟ್ ಮಾಡಲಾಗಿರುತ್ತದೆ. ಅದರ ಸಹಾಯದಿಂದ ಕೊಂಚ ಕೊಂಚ ಹೊತ್ತು ಬಿಟ್ಟು ಫ್ರ್ಯಾಗ್ರೆನ್ಸ್ ಹೊರಬರುತ್ತಿರುತ್ತದೆ. ಈ ಡಿವೈಸ್‌ ಯಾವುದೇ ಸಾಧಾರಣ ರೂಮ್ ಫ್ರೆಶ್‌ನರ್‌ಗೆ ಹೋಲಿಸಿದರೆ ಅನೇಕ ದಿನಗಳು ಕೆಲಸಕ್ಕೆ ಬರುತ್ತವೆ.

ಏನು ವಿಶೇಷ?

ಈ ಆಧುನಿಕ ಡಿವೈಸ್‌ನ್ನು ಮನೆಯ ಯಾವುದೇ ಮೂಲೆ ಅಥವಾ ಗೋಡೆಯ ಮೇಲೆ ಸುಲಭವಾಗಿ ಅಳವಡಿಸಬಹುದು.

ಆಧುನಿಕವಾಗಿ ಕಾಣುವ ಈ ಡಿವೈಸ್‌ಗಳನ್ನು ಮನೆಯ ಇತರ ಎಲೆಕ್ಟ್ರಾನಿಕ್‌ ಐಟಂಗಳನ್ನು ಅಲಂಕರಿಸಿದಂತೆ ಅಲಂಕರಿಸಬಹುದು.

ಇವು ಬೇರೆ ಬೇರೆ ಫ್ರ್ಯಾಗ್ರೆನ್ಸ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಬೇರೆ ಬೇರೆ ಸುವಾಸನೆಗಳನ್ನು ದಿನದ ಬೇರೆ ಬೇರೆ ಸಮಯಗಳಲ್ಲಿ ನಿಮ್ಮ ಮೂಡ್‌ಗೆ ತಕ್ಕಂತೆ ಬೇಕೆಂದಾಗ ಉಪಯೋಗಿಸಬಹುದು.

ಬೆಳಗಿನ ಹೊತ್ತು ಗಂಧದ ವಾಸನೆಯುಳ್ಳ ರೀಫಿಲ್ ನ್ನು ಡಿವೈಸ್‌ನಲ್ಲಿ ಇನ್‌ಸರ್ಟ್‌ ಮಾಡಬಹುದು. ಸಂಜೆ ಲ್ಯಾವೆಂಡರ್‌ನ ವಾಸನೆಯಿಂದ ರಿಲ್ಯಾಕ್ಸ್ ಮಾಡಿಕೊಳ್ಳಬಹುದು. ನಿಮ್ಮ ಮೂಡ್‌ ರೊಮ್ಯಾನ್ಸ್ ನಿಂದ ಕೂಡಿದ್ದರೆ ಗುಲಾಬಿ ವಾಸನೆಯುಳ್ಳ ರೀಫಿಲ್ ಉಪಯೋಗಿಸಿ ಪರಿಸರದಲ್ಲಿ ರೊಮ್ಯಾನ್ಸ್ ತುಂಬಬಹುದು.

ಈ ಡಿವೈಸ್‌ಗಳಲ್ಲಿ ನಿಮ್ಮ ಇಚ್ಛೆಗೆ ಅನುಸಾರವಾಗಿ ಫ್ರ್ಯಾಗ್ರೆನ್ಸ್ ಲೆವೆಲ್ ‌ಕೂಡ ಸೆಟ್‌ ಮಾಡಬಹುದು.

ಮೂಲೆ ಮೂಲೆಯಲ್ಲೂ ಸುಗಂಧ

ಲಿವಿಂಗ್‌ ರೂಮ್ : ಅತಿಥಿಗಳನ್ನು ಸ್ವಾಗತಿಸುವ ಜಾಗ ಇದೇ. ಹೀಗಾಗಿ ಈ ಕೋಣೆಯ ಅಲಂಕಾರದೊಂದಿಗೆ ಇದು ಸುಗಂಧಿತವಾಗಿರುವುದೂ ಅಗತ್ಯ.

ಬೆಡ್‌ ರೂಮ್ : ದಿನವಿಡೀ ದುಡಿದು ದಣಿದು ಮನೆಗೆ ಬಂದಾಗ ಬೆಡ್‌ ರೂಮ್ ನಲ್ಲಿ ಮನಸ್ಸಿಗೆ ನೆಮ್ಮದಿ ತರುವಂತಹ ಸುಗಂಧ ಬರುತ್ತಿರಬೇಕು.

ಬಾಥ್‌ ರೂಮ್ : ಬಾಥ್‌ ರೂಮ್ ಸ್ವಚ್ಛವಾಗಿರುವುದರೊಂದಿಗೆ ಸುಗಂಧದಿಂದ ಕೂಡಿರುವುದೂ ಅಗತ್ಯ. ಬಾಥ್‌ ರೂಮ್ ನಿಂದ ದುರ್ವಾಸನೆ ಬರುತ್ತಿದ್ದರೆ ಇಡೀ ದಿನ ಹಾಳಾಗುತ್ತದೆ. ಏಕೆಂದರೆ ದಿನದ ಆರಂಭ ಬಾಥ್‌ ರೂಮಿನಿಂದಲೇ ಶುರುವಾಗುತ್ತದೆ.

ಕಿಚನ್‌ : ಅಂದಹಾಗೆ ಅಡುಗೆಮನೆ ಭೋಜನದ ಸುಗಂಧದಿಂದ ಕೂಡಿರುತ್ತದೆ. ಆದರೆ ಸಿಂಕ್‌ ಮತ್ತು ಡಸ್ಟ್ ಬಿನ್‌ನಿಂದ ದುರ್ಗಂಧ ಬರುತ್ತಿದ್ದರೆ ಇದನ್ನು ದೂರ ಮಾಡಲು ಈ ಡಿವೈಸ್‌ ಸಹಾಯಕವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ