ಕಳೆದ ಐದಾರು ದಿನಗಳಿಂದ ದೇಶಾದ್ಯಂತ ಇಂಡಿಗೋ ವಿಮಾನಯಾನದಲ್ಲಿ ಆದ ಸಮಸ್ಯೆಯಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಇಂಡಿಗೋ ಸಮಸ್ಯೆಯಿಂದ ಕಾಶ್ಮೀರದ ಬಾರಾಮುಲ್ಲಾದಿಂದ ಬೆಂಗಳೂರಿಗೆ 5 ವರ್ಷದ ಬಾಲಕಿ ಥೆನ್ ನಲ್ ಅಶ್ವಿನ್ ಒಬ್ಬಳೇ ಪ್ರಯಾಣಿಸುವಂತಾಗಿದೆ.
ಬಾರಾಮುಲ್ಲಾದಿಂದ ಬೆಂಗಳೂರಿಗೆ ತನ್ನ ಅಜ್ಜಿಯ ಮನೆಗೆ ಥೆನ್ ನಲ್ ಮಾವ ಆದರ್ಶ್ ಜೊತೆ ಬರಬೇಕಿತ್ತು. ಆದರೆ ಡಿ. 5 ರಂದು ಟಿಕೆಟ್ ಬುಕಿಂಗ್ ಕ್ಯಾನ್ಸಲ್ ಆಗಿದೆ. ಡಿ.6 ರಂದು ಕೂಡ ಟಿಕೆಟ್ ಕ್ಯಾನ್ಸಲ್ ಆಗಿದ್ದರಿಂದ ಕೇರ್‌ಟೇಕರ್ ಜೊತೆ ಥೆನ್ ನಲ್ ಬೆಂಗಳೂರಿಗೆ ಬಂದಿದ್ದಾಳೆ.
ಬಾರಾಮುಲ್ಲಾನಲ್ಲಿ ಹೆಚ್ಚಿನ ಚಳಿಯಿದ್ದು, ಮಗುವಿನ ಆರೋಗ್ಯ ಸ್ಥಿತಿ ಕೆಡಬಾರದೆಂದು ಬೆಂಗಳೂರಿಗೆ ಕಳುಹಿಸಿದ್ದಾರೆ. ಈ ಥೆನ್ ನಲ್ ಕರೆದುಕೊಂಡು ಬರಲು ಅವಳ ಮಾವ ಬುಕ್ ಮಾಡಿದ ಎರಡು ಕಡೆಯ ಫ್ಲೈಟ್ ಟಿಕೆಟ್ ರೇಟ್ ಹಾಗೂ ಮತ್ತೊಮ್ಮೆ ಬುಕ್ ಮಾಡಿದ ಮೂರು ಟಿಕೆಟ್ ಹಾಗೂ ಕೇರ್ ಟೇಕರ್‌ಗೆ ನೀಡಿದ ಹಣ ಸೇರಿ ಒಟ್ಟು 50 ಸಾವಿರ ರೂ. ಲಾಸ್ ಆಗಿದೆ. ರೀಫಂಡ್‌ಗೆ ಮನವಿ ಮಾಡಿದರೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಕೇರ್ ಟೇಕರ್ ಹೇಳಿದ್ದಾರೆ.





