ಮದುವೆಯ ದಿನ ಪ್ರತಿ ವಧುವಿಗೆ ಮಹತ್ವಪೂರ್ಣವಾಗಿರುತ್ತದೆ. ಅವಳು ಯಾವುದೇ ಜಾತಿ, ಧರ್ಮದವಳಾಗಿದ್ದರೂ ಸಹ. ಬನ್ನಿ, ಪಾಕಿಸ್ತಾನಿ ಮೇಕಪ್‌ನ ಜೊತೆ ಜೊತೆಗೆ ವಧುವಿನ ಹೇರ್‌ ಸ್ಟೈಲ್ ಕೂಡ ಹೇಗಿರಬೇಕೆಂದು ತಿಳಿಸುತ್ತಿದ್ದಾರೆ ಮೇಕಪ್‌ ಆರ್ಟಿಸ್ಟ್ ಶಕೀಲಾ ಮಲ್ಲಿಕ್‌.

ಫೇಸ್‌ ಮೇಕಪ್‌

ಮೊದಲು ಮುಖವನ್ನು ಹಣೆಯಿಂದ ಕತ್ತಿನವರೆಗೆ ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಮುಖ ಕುತ್ತಿಗೆಯವರೆಗೆ ಸಿಲ್ಕಿ ಬೇಸ್‌ ಪ್ರೈಮರ್‌ ಹಚ್ಚಿ. ಆಮೇಲೆ ಅಲ್ಟ್ರಾದ ಬೇಸ್‌ ಎಫ್‌ಎಸ್‌ ಹಚ್ಚಿ. ಸ್ಕಿನ್‌ ಟೋನ್‌ನ್ನು ಕೊಂಚ ಬೆಳ್ಳಗೆ ಕಾಣಿಸಲು ಬೇಸ್‌ ಲೈಟ್‌ ಬ್ರಶ್‌ನಿಂದ ಮುಖಕ್ಕೆ ಹಚ್ಚಿ. ಪಾಲಿಶಿಂಗ್‌ ಬ್ರಶ್‌ನಿಂದ ಮುಖದ ಮೇಲೆ ವರ್ತುಲಾಕಾರವಾಗಿ ಸುತ್ತಿ. ನಂತರ ಮುಖದ ಮೇಲೆ ಕೊಂಚ ಶಿಮರಿ ಫೌಂಡೇಶನ್‌ ಹಚ್ಚಿ. ನಂತರ ಮುಖದ ಮೇಲೆ ಪ್ಲೇನ್‌ ವಾಟರ್‌ ಸ್ಪ್ರೇ ಮಾಡಿ ಮತ್ತು ಅದು 3 ನಿಮಿಷದವರೆಗೆ ಸೆಟ್ ಆಗಲು ಬಿಡಿ. ನಂತರ ಸ್ಪಂಜಿನಿಂದ ಮುಖದ ಮೇಲೆ ಡಬ್‌ ಡಬ್‌ ಎಂದು ತಟ್ಟಿ. ಹೀಗೆ ಮಾಡಿದಾಗ ಬೇಸ್‌ ಚೆನ್ನಾಗಿ ಸೆಟ್ ಆಗುತ್ತದೆ.

ಕಂಗಳ ಮೇಕಪ್

arabian-hair-style-(1)

ಮೊದಲಿಗೆ ಕಣ್ಣುಗಳ ಮೇಲೆ ಬ್ರಶ್‌ನಿಂದ ಗೋಲ್ಡನ್‌ ಶಿಮರ್‌ನ ಶ್ಯಾಡೋ ಹಚ್ಚಿ. ಕಣ್ಣುಗಳ ಹೊರಗಿನ ಕೋನಗಳಿಗೆ ಬ್ರೌನ್‌ ಕಲರ್ ಹಾಗೂ ಒಳಗಿನ ಕೋನಗಳಿಗೆ ರೆಡ್‌ ಕಲರ್‌ನ ಶ್ಯಾಡೋ ಹಚ್ಚಿ ಮತ್ತು ಅದನ್ನು ಚೆನ್ನಾಗಿ ಮರ್ಜ್‌ ಮಾಡಿ. ಶ್ಯಾಡೋ ಹಚ್ಚುವಾಗೆಲ್ಲಾ ಒಳಗಿನ ಕಡೆಗೆ ಹಚ್ಚಿ. ಐ ಬಾಲ್ಸ್ ನ ಸೆಂಟರ್‌ನಲ್ಲಿ ಶಿಮರಿ ಶ್ಯಾಡೋ ಹಚ್ಚಿ. ಈಗ ವಾಟರ್‌ ಲೈನ್‌ ಏರಿಯಾದಲ್ಲಿ ಕಾಜಲ್ ಹಚ್ಚಿ. ಕಣ್ಣುಗಳು ಬಹಳ ಚಿಕ್ಕದಾಗಿದ್ದು, ಮೂಗಿಗೆ ಬಹಳ ಹತ್ತಿರದಲ್ಲಿದ್ದರೆ ಸಂಪೂರ್ಣ ವಾಟರ್‌ ಲೈನ್‌ ಏರಿಯಾಗೆ ಕಾಜಲ್ ಹಚ್ಚಬೇಡಿ. ಇಲ್ಲದಿದ್ದರೆ ಕಣ್ಣುಗಳು ಇನ್ನಷ್ಟು ಚಿಕ್ಕದಾಗಿ ಕಾಣುತ್ತವೆ. ಈಗ ಕಾಜಲ್‌ನ್ನು ಬ್ರಶ್‌ನಿಂದ ಮರ್ಜ್‌ ಮಾಡಿ. ಹೀಗೆಯೇ ಮೇಲಿನ ಲೈನ್‌ನಲ್ಲಿ ಲೈನರ್‌ ಹಚ್ಚಿ ಮತ್ತು ಅದನ್ನು ಮರ್ಜ್‌ ಮಾಡಿ.

ಈಗ ಗ್ಲಿಟರ್‌ ಜೆಲ್‌‌ನ್ನು ಐ ಬಾಲ್ಸ್ ಮೇಲೆ ಹಚ್ಚಿ. ನಂತರ ಅದರ ಮೇಲೆ ಶಿಮರ್‌ ಹಚ್ಚಿ. ಐ ಲ್ಯಾಶಸ್‌ ಮೇಲೆ ಮಸ್ಕರಾ ಹಚ್ಚಿ. ಅದನ್ನು ಬ್ರಶ್‌ನಿಂದ ಮರ್ಜ್‌ ಮಾಡಿ. ಐ ಲೈನರ್‌ ಜಾಗದಲ್ಲಿ ಐ ಪೆನ್ಸಿಲ್‌‌ನಿಂದಲೇ ಲೈನರ್‌ ಹಚ್ಚಿ. ಐ ಬ್ರೋಸ್‌ ಕೆಳಗೆ ಹೈಲೈಟರ್‌ಮತ್ತು ಗ್ಲಿಟರ್‌ ಐ ಲೈನರ್‌ ಹಚ್ಚಿ. ಇದರಿಂದ ಕಣ್ಣುಗಳು ಸುಂದರವಾಗಿ ಕಾಣುತ್ತವೆ.ಫೇಸ್‌ ಕಾಂಟೂರಿಂಗ್‌ ಮುಖವನ್ನು ಶಾರ್ಪ್‌ ಆಗಿ ಕಾಣಿಸಲು ಫೇಸ್‌ ಕಟ್‌ ಮಾಡುವುದು ಬಹಳ ಅಗತ್ಯ. ಕಂಗಳ ಮೇಕಪ್‌ ನಂತರ ಫೇಸ್‌ ಮೇಲೆ ಪೌಡರ್‌ ಪಫಿಂಗ್‌ ಮಾಡಿ ಮತ್ತು ಬ್ರೌನ್‌ ಬೇಸ್‌ ಕಲರ್‌ ಬ್ರಶ್‌ನಿಂದ ಕಾಂಟೂರಿಂಗ್‌ ಮಾಡಿ. ಮೊದಲು ಮೂಗನ್ನು ಶಾರ್ಪ್‌ ಮಾಡಿ. ಚಿಕ್ಕದಾದ ಹಾಗೂ ಅಗಲವಾದ ಮೂಗನ್ನು ಇದರಿಂದ ತೆಳ್ಳಗೆ ತೋರಿಸಬಹುದು. ಈಗ ಚೀಕ್ಸ್ ನಿಂದ 4 ಇಂಚು ಗ್ಯಾಪ್‌ನಲ್ಲಿ ಕಾಂಟೂರಿಂಗ್‌ ಮಾಡಿ. ಸ್ಕ್ವೇರ್‌ ಫೇಸ್‌ ಆಗಿದ್ದರೆ 1, 2 ಅಥವಾ 3 ಇಂಚಿನ ಅಂತರದಲ್ಲಿ ಮಾಡಬಹುದು. ಒಂದು ವೇಳೆ ಫೋರ್‌ ಹೆಡ್‌ ಅಗಲವಾಗಿದ್ದರೆ ಅದಕ್ಕೂ ಕಾಂಟೂರಿಂಗ್‌ ಮಾಡಿ.

ಲಿಪ್ಸ್ ಮೇಕಪ್

lips-mkp

ಲಿಪ್‌ ಪೆನ್ಸಿಲ್‌‌ನಿಂದ ಲಿಪ್ಸ್ನ ಔಟ್‌ ಲೈನ್‌ ಮಾಡಿಕೊಂಡು ಬ್ರಶ್‌ನಿಂದ ರೆಡ್‌ ಕಲರ್‌ನ ಲಿಪ್‌ಸ್ಟಿಕ್‌ ಹಚ್ಚಿ. ಚೀಕ್ಸ್ ಎತ್ತಿ ತೋರಲು ಬ್ಲಶರ್‌ ಹಚ್ಚಿ.

ಹೇರ್‌ ಸ್ಟೈಲ್ ಮೊದಲು ಕೂದಲನ್ನು ಚೆನ್ನಾಗಿ ಬಾಚಿ. ನಂತರ ಮಧ್ಯೆ ಬೈತಲೆ ತೆಗೆದು ಇಯರ್‌ ಟು ಇಯರ್‌ ಕೂದಲನ್ನು ಒಂದು ಭಾಗ ಮಾಡಿ. ಟಾಪ್‌ನ ಕೆಲವು ಕೂದಲನ್ನು ತೆಗೆದುಕೊಂಡು ಬ್ಯಾಕ್‌ ಕೋಂಬಿಂಗ್‌ ಮಾಡಿ. ಆ ಕೂದಲನ್ನು ಎತ್ತರಕ್ಕೆ ಪಫ್‌ ಮಾಡಿ. ಮುಂದಿನ ಕೂದಲಿನ 1-1 ಜುಟ್ಟು ತೆಗೆದುಕೊಂಡು ಬ್ಯಾಕ್‌ ಕೋಂಬಿಂಗ್‌ ಮಾಡುತ್ತಾ ಪಫ್‌ ಮೇಲಿಂದ ಹಿಂದೆ ತೆಗೆದುಕೊಂಡು ಪಿನ್‌ನಿಂದ ಸೆಟ್‌ ಮಾಡಿ. ಕಿವಿಯ ಬಳಿಯ ಕೂದಲಿನ 1-1 ಜುಟ್ಟು ತೆಗೆದುಕೊಂಡು ಬ್ಯಾಕ್‌ ಕೋಂಬಿಂಗ್‌ ಮಾಡಿ.

ಅದನ್ನು ಬೆರಳುಗಳಿಂದ ರೋಲ್ ಮಾಡಿ ಸೈಡ್‌ನಲ್ಲೇ ಪಿನ್‌ನಿಂದ ಸೆಟ್‌ ಮಾಡಿ. ಹೀಗೆಯೇ ಇನ್ನೊಂದು ಕಿವಿಯ ಕಡೆಯೂ ಮಾಡಿ. ಈಗ ಮುಂದೆ ಬೈತಲೆ ಬೊಟ್ಟು ಇಟ್ಟು ಮುಂದಿನ ಕೂದಲಿನ ಮೇಲೆ ಸ್ಪ್ರೇ ಮಾಡಿ. ಹಿಂದಿನ ಅರ್ಧ ಕೂದಲನ್ನು ಎತ್ತಿ ಆಪೋಸಿಟ್ ಸೈಡ್‌ನಲ್ಲಿ ಕ್ರಾಸ್‌ ಮಾಡುತ್ತಾ ಪಿನ್‌ನಿಂದ ಸೆಟ್‌ ಮಾಡಿ. ಕೂದಲಿಗೆ ಸ್ಪ್ರೇ ಮಾಡಿ 1-1 ಜುಟ್ಟನ್ನು ರೋಲ್ ‌ಮಾಡಿ ಪಿನ್‌ನಿಂದ ಸೆಟ್‌ಮಾಡುತ್ತಾ ರೋಲ್ ‌ಮಾಡುತ್ತಿರಿ. ಈಗ ಕಲರ್‌ಫುಲ್ ದಾರ ತೆಗೆದುಕೊಂಡು ಅದನ್ನು ರೋಲ್ ಮಾಡಿರುವ ಜುಟ್ಟಿನಲ್ಲಿ ಸುತ್ತಿ. ಈಗ ಜುಟ್ಟಿಗೆ ಕಲರ್‌ಫುಲ್ ಆ್ಯಕ್ಸೆಸರೀಸ್‌ ಸಿಕ್ಕಿಸಿ.

ಜ್ಯೂವೆಲರಿ

jewllery-(5)

ಈಗ ವಧುವಿಗೆ ಮೂಗುತಿ, ಕಡೆ, ಬಳೆಗಳು, ಬ್ರೇಸ್‌ ಲೆಟ್‌ ಇತ್ಯಾದಿ ತೊಡಿಸಿ. ಪಾಕಿಸ್ತಾನಿ ವಧುವಿಗೆ ಕೂದಲಿನ ಮಧ್ಯೆ ಬೈತಲೆ ಬೊಟ್ಟು ಮತ್ತು ಒಂದು ಸೈಡ್‌ನಲ್ಲಿ ಕವಡೆಯನ್ನು ತೊಡಿಸಲಾಗುತ್ತದೆ. ನಂತರ ತಲೆಯ ಮೇಲೆ ಸೀರೆ ಹೊದಿಸಲಾಗುತ್ತದೆ.

ಅರೇಬಿಯನ್‌ ಲುಕ್ಸ್

arabian-hair-style-(4)

ಈ ಮೇಕಪ್‌ನಲ್ಲೂ ಪಾಕಿಸ್ತಾನಿ ಮೇಕಪ್‌ನಂತೆ ಕಣ್ಣುಗಳಿಗೆ ವಿಶೇಷ ಗಮನ ಕೊಡಲಾಗುತ್ತದೆ. ಇದರಲ್ಲಿ ಸ್ಮೋಕಿ ಐಸ್ ಮಾಡಲಾಗುತ್ತದೆ.

ಮೇಕಪ್

ಮೊದಲು ಮುಖವನ್ನು ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌ ಮಾಡಿ. ನಂತರ ಮುಖಕ್ಕೆ ಸಿಲ್ಕಿ ಬೇಸ್‌ ಹಚ್ಚಿ. ಈಗ ಅಲ್ಚ್ರಾದ ಎಫ್‌ಎಸ್‌ ಬೇಸ್‌ ಮತ್ತು ಟಿವಿ ಲೈಟ್‌ ಬೆರೆಸಿ ಮುಖಕ್ಕೆ ಹಚ್ಚಿ. ಈ ಬೇಸ್‌ನ್ನು ನೆಕ್‌ವರೆಗೆ ಹಚ್ಚಿ ಮತ್ತು ಬ್ರಶ್‌ನಿಂದ ಬೇಸ್‌ನ್ನು ಮುಖದ ಮೇಲೆ ಚೆನ್ನಾಗಿ ಮರ್ಜ್‌ ಮಾಡಿ. ಈಗ ಶಿಮರಿ ಫೌಂಡೇಶನ್‌ನ್ನು ತೆಳುವಾಗಿ ಹಚ್ಚಿ. ಅದನ್ನೂ ನೆಕ್‌ವರೆಗೆ ಹಚ್ಚಿ. ಈಗ ಪಾಲಿಶಿಂಗ್‌ ಬ್ರಶ್‌ನ್ನು, ಮುಖದ ಮೇಲೆ ಗುಂಡಗೆ ಸುತ್ತಿ. ನಂತರ ಮುಖದ ಮೇಲೆ ಸ್ಪ್ರೇ ಮಾಡಿ.

ಫೇಸ್‌ ಕಾಂಟೂರಿಂಗ್‌

ಬೇಸ್‌ (ಡಾರ್ಕ್‌ ಬೇಸ್‌) ತೆಗೆದುಕೊಂಡು ಚೀಕ್ಸ್, ಫೋರ್‌ ಹೆಡ್‌ ಮತ್ತು ನೋಸ್‌ನ ಕಟಿಂಗ್‌ ಮಾಡಿ. ಇದರಿಂದ ಫೇಸ್‌ ಚಿಕ್ಕದಾಗಿ ಮತ್ತು ಸುಂದರವಾಗಿ ಕಾಣುತ್ತದೆ ಮತ್ತು ಕಣ್ಣುಗಳು ಎದ್ದು ಕಾಣುತ್ತವೆ.

ಬ್ಲಶರ್‌ ಕೆನ್ನೆಗಳನ್ನು ಉಬ್ಬಿದಂತೆ ತೋರಲು ರೆಡ್‌ ಲಿಪ್‌ಸ್ಟಿಕ್‌ನಿಂದಲೂ ಬ್ಲಶರ್‌ ಹಚ್ಚಬಹುದು. ಇದನ್ನು ಬೆರಳುಗಳಿಂದ ಕೆನ್ನೆಗಳ ಮೇಲೆ ಹಚ್ಚಿ ನಂತರ ಬ್ರಶ್‌ನಿಂದ ಚೆನ್ನಾಗಿ ಮರ್ಜ್‌ ಮಾಡಿ.

ಕಂಗಳ ಮೇಕಪ್

eye-mkp-(1)

ಔಟರ್‌ ಏರಿಯಾದಿಂದ ಒಳಗಿನವರೆಗೆ ಬ್ರಶ್‌ನಿಂದ ಶ್ಯಾಡೋ ಹಚ್ಚಿ. ಬ್ರೌನ್‌ ಕಲರ್‌ನ ಶ್ಯಾಡೋ ತೆಗೆದುಕೊಳ್ಳಿ. ನಂತರ ಕಣ್ಣುಗಳ ಮೇಲೆ ಮತ್ತು ಐ ಬ್ರೋಸ್‌ ಕೆಳಗೆ ಹೈಲೈಟ್‌ ಮಾಡಿ. ಈಗ ವಯ್ಲೆಟ್‌ ಕಲರ್‌ನಿಂದ ವಾಟರ್‌ ಲೈನ್‌ ಏರಿಯಾದಲ್ಲಿ ತೆಳುವಾಗಿ ಲೈನರ್‌ ಹೊರಗೆ ತೆಗೆದು ಹಚ್ಚಿ. ಮೇಲಿನ ಏರಿಯಾದಲ್ಲಿ ಐ ಲೈನರ್‌ ಹಚ್ಚಿ ಬ್ರಶ್‌ನಿಂದ ಮರ್ಜ್‌ ಮಾಡಿ. ಕೆಳಗಿನ ಏರಿಯಾದಲ್ಲಿ ಕಾಜಲ್ ಹಚ್ಚಿ ಮರ್ಜ್‌ ಮಾಡಿ. ಇದರಿಂದ ನ್ಯಾಚುರಲ್ ಲುಕ್ಸ್ ಬರುತ್ತದೆ. ನಂತರ ರೆಪ್ಪೆಗಳಿಗೆ ಮಸ್ಕರಾ ಹಚ್ಚಿ. ಈಗ ಮುಖವನ್ನು ಪೌಡರ್‌ನಿಂದ ಪಫಿಂಗ್‌ ಮಾಡಿ.

ಹೇರ್‌ ಸ್ಟೈಲ್ ‌

hair-(10)

ಕೂದಲನ್ನು ಬಾಚಿ ಮುಂದಿನಿಂದ ಹಾಫ್‌ ಮೂನ್‌ ಮಾಡಿ. ಕಿವಿಯ ಮೇಲಿನ ಕೂದಲಿಗೆ ಸ್ಪ್ರೇ ಮಾಡಿ ಹಿಂದೆ ಪಿನ್‌ನಿಂದ ಸೆಟ್ ಮಾಡಿ. ಮುಂದೆ ಕೂದಲಿನ 1 ಜೊಂಪೆ ಬಿಟ್ಟು ಮಿಕ್ಕ ಕೂದಲನ್ನು ಬ್ಯಾಕ್‌ ಕೋಂಬಿಂಗ್‌ ಮಾಡಿ. ಅದರಿಂದ ಕೂದಲಿನ ಪಫ್‌ ಮಾಡಿ ಮತ್ತು ಅದನ್ನು ಪಿನ್‌ನಿಂದ ಸೆಟ್‌ ಮಾಡಿ. ಟಾಪ್‌ನ ಕೂದಲನ್ನು 2 ರೋಲ್ ಮಾಡಿ ಪಿನ್‌ನಿಂದ ಅಕ್ಕಪಕ್ಕ ಸೆಟ್‌ ಮಾಡಿ. ಹಿಂದಿನ ಕೂದಲನ್ನು ಪಿನ್‌ನಿಂದ ಸೆಟ್‌ ಮಾಡಿ. ನಂತರ 1-1 ಜೊಂಪೆಯನ್ನೂ ಕ್ರಾಸ್‌ ಮಾಡುತ್ತಾ ಕೋಂಬ್‌ ಮಾಡಿ ಮತ್ತು ಸ್ಪ್ರೇ ಮಾಡಿ.

ಕೊಂಚ ಲೂಸ್‌ ಮಾಡುತ್ತಾ ಎರಡೂ ಕಡೆ ಪಿನ್‌ನಿಂದ ಸೆಟ್‌ ಮಾಡಿ. ನಂತರ 1-1 ಕಡೆಯ ಪಿನ್‌ ತೆಗೆಯಿರಿ ಮತ್ತು ಟಾಪ್‌ ಮೇಲೆ ಆರ್ಟಿಫಿಶಿಯಲ್ ಆದ ಚಿಕ್ಕ ಜಡೆಯನ್ನು ಮೇಲೆ ಕಟ್ಟಿ ಪಿನ್‌ನಿಂದ ಸೆಟ್‌ ಮಾಡಿ. ಇದರಲ್ಲಿ ಕೂದಲಿನ ಲೀವ್‌ನ್ನೂ ರೋಲ್ ಮಾಡಿ ಹಾಕಬಹುದು. ಕ್ರೌನ್‌ ಏರಿಯಾದಲ್ಲಿ 3 ಲೀವ್ ‌ರೋಲ್ ‌ಹಾಕಿ. ನಂತರ ಹೇರ್‌ ಆ್ಯಕ್ಸೆಸರೀಸ್‌ನ ಒಡವೆ ಇರುವ ದಾರವನ್ನು ತಲೆಯ ಹಿಂದಿನಿಂದ ತೆಗೆದುಕೊಳ್ಳುತ್ತಾ ಮುಂದುಗಡೆ ತಂದು ಸೊಟ್ಟಗೆ ತಿರುಗಿಸಿ. ನಂತರ ಮುಖದ ಮೇಲೆ ದುಪಟ್ಟಾದ ಬುರ್ಕಾ ಮಾಡಿಕೊಂಡು ಹೋಗಿ. ಈಗ ಸಂಪೂರ್ಣವಾಗಿ ಅರೇಬಿಯನ್‌ ಲುಕ್ಸ್ ಸಿದ್ಧವಾಯಿತು.

– ರಜಿಯಾ ಖಾನ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ