ಬದಲಾಗುತ್ತಿರುವ ಟ್ರೆಂಡ್ ಗೆ ಅನುಗುಣವಾಗಿ ಮನೆಯನ್ನು ಸಿಂಗರಿಸುವುದು ಇಂದು ಅನಿವಾರ್ಯವಾಗಿದೆ. ಕೊಂಚ ಕ್ರಿಯೇಟಿವಿಟಿ ನಿಮ್ಮ ಮನೆಗೆ ಸ್ಮಾರ್ಟ್ ಲುಕ್ ಕೊಡುತ್ತದೆ.
ಇಂಟೀರಿಯರ್ ಡಿಸೈನ್ ನಿಂಗ್ ಕೇವಲ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಕಾಲ ಮುಗಿಯಿತು. ಈಗ ಅವುಗಳ ಮೂಲಕ ಮನೆಗಳಿಗೂ ಮಾಡರ್ನ್ ಲುಕ್ ಕೊಡಲಾಗುತ್ತಿದೆ.
ವಿ.ಎಂ. ಗ್ರೂಪ್ ನ ಇಂಟೀರಿಯರ್ ಡಿಸೈನರ್ ಮತ್ತು ಸೀನಿಯರ್ ಆರ್ಕಿಟೆಕ್ಟ್ ಮೋಹನ್ ಹೀಗೆ ಹೇಳುತ್ತಾರೆ, ಮನೆಯ ಥೀಮ್ ವೈಯಕ್ತಿಕ ಇಚ್ಛೆಯನ್ನು ಅವಲಂಬಿಸಿದೆ. ಆದರೆ ಇಂದು ಬದಲಾಗುತ್ತಿರುವ ಜೀವನಶೈಲಿಯಲ್ಲಿ ಪ್ರತಿಯೊಂದು ಟ್ರೆಂಡಿ ಲುಕ್ ಹೆಚ್ಚು ಇಷ್ಟವಾಗುತ್ತಿದೆ. ಈಗ ನಿಮ್ಮ ಮನೆಗೆ ಹೊಸ ಲುಕ್ ಕೊಡುವಂತಹ ಅನೇಕ ಕ್ರಿಯೇಟಿವ್ ವಿಧಾನಗಳಿವೆ.
ಡಿಸೈನರ್ ಗೋಡೆಗಳು : ಪೇಂಟ್ ಮಾಡಿಸುವ ಬದಲಾದ ಟೆಕ್ನಿಕ್ ಗಳು ಮತ್ತು ಇತರ ಕಲೆಗಳಿಂದ ಗೋಡೆಗಳಿಗೆ ಉತ್ತಮ ರೂಪ ಕೊಡಬಹುದು.
ಮಾಡರ್ನ್ ಪೇಂಟಿಂಗ್ ಟ್ರೆಂಡ್ಸ್ : ಈಗ ಕಾಂಬಿನೇಷನ್ ಕಲರ್ ಮಾಡಿಸುವ ಟ್ರೆಂಡ್ ಇದೆ. ಡಾರ್ಕ್ ರೆಡ್ ನೊಂದಿಗೆ ಲೈಟ್ ಅಥವಾ ಬ್ರೌನ್ ಕಲರ್ ನೊಂದಿಗೆ ಲೈಟ್ ಪೇಂಟ್ ಬಹಳ ಆಕರ್ಷಕವಾಗಿರುತ್ತದೆ. ಕಾಂಬಿನೇಷನ್ ಕಲರ್ ನಲ್ಲಿ 2 ಗೋಡೆಗಳಿಗೆ ಗಾಢ ಪೇಂಟ್ ಮಾಡಿದ್ದರೆ, ಉಳಿದ 2 ಗೋಡೆಗಳಿಗೆ ತೆಳುವಾಗಿ ಪೇಂಟ್ ಮಾಡಿಸಬೇಕು.
ಗ್ರಾಫಿಕ್ ಪೇಂಟಿಂಗ್ಸ್ : ಗ್ರಾಫಿಕ್ ಪೇಂಟಿಂಗ್ಸ್ ಗೋಡೆಗಳಿಗೆ ಬಹಳ ಆಕರ್ಷಕ ಲುಕ್ ಕೊಡುತ್ತದೆ. ಗೋಡೆಗಳ ಮೇಲೆ ಅನೇಕ ಬಣ್ಣಗಳನ್ನು ಉಪಯೋಗಿಸುವುದರಿಂದ ಡಾಟ್ಸ್, ಸರ್ಕಲ್ಸ್, ಕ್ಯೂಬ್ಸ್ ಮತ್ತು ಸ್ಟ್ರೈಪ್ಸ್ ಗಳಿಗೆ ಡಿಸೈನ್ ಮಾಡಬಹುದು.
ಸ್ಟೈಲಿಶ್ ವಾಲ್ ಪೇಪರ್ : ಗೋಡೆಗಳಿಗೆ ಹಾಕುವ ವಾಲ್ ಪೇಪರ್ ಗೋಡೆಗಳ ಕೊರತೆಗಳನ್ನು ಮುಚ್ಚುತ್ತದೆ ಮತ್ತು ಅವಕ್ಕೆ ಟ್ರೆಂಡಿ ಲುಕ್ ಕೊಡುತ್ತದೆ. ಅನಿಮಲ್ ಪ್ರಿಂಟೆಡ್, ಡಲ್ ಲುಕಿಂಗ್, ವೆಲ್ವೆಟ್ ಪ್ಲೇಕ್ಡ್, ಬ್ರಿಕ್ಸ್ ಅಂಡ್ ಸ್ಟೋನ್ ವಾಲ್ ಪೇಪರ್ ಟ್ರೆಂಡ್ ನಲ್ಲಿದೆ. ಅವನ್ನು ಕೋಣೆಯ ಫರ್ನೀಚರ್ ಗಳ ಬಣ್ಣಕ್ಕೆ ಅನುಗುಣವಾಗಿ ಆರಿಸಬೇಕು. ವಾಲ್ ಪೇಪರ್ ಹಾಕಿಸುವುದರಿಂದ ಗೋಡೆಗಳಿಗೆ ಪೇಂಟ್ ಮಾಡಿಸುವ ಅಗತ್ಯವಿರುವುದಿಲ್ಲ. ಜೊತೆಗೆ ಅವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ವಿಶೇಷ ಡಿಸೈನಿಂಗ್ : ಯಾವುದಾದರೂ ಒಂದು ಗೋಡೆಗೆ ಸ್ಟೋನ್, ಟೈಲ್ಸ್, ವುಡ್ ವರ್ಕ್ ನಿಂದ ಡಿಸೈನ್ ಮಾಡಿಸಿದರೆ ಬಹಳ ಒಳ್ಳೆಯ ಲುಕ್ ಕೊಡುತ್ತದೆ.
ಸ್ಮಾರ್ಟ್ ಫ್ಲೋರಿಂಗ್ : ಫ್ಲೋರಿಂಗ್ ಇಡೀ ಮನೆಯ ಲುಕ್ ಬದಲಾಯಿಸುತ್ತದೆ. ಈಗ ಲ್ಯಾಮಿನೇಟೆಡ್ ವುಡ್ ಫ್ಲೋರಿಂಗ್ ಟ್ರೆಂಡ್ ನಲ್ಲಿದೆ. ಇದನ್ನು ಸ್ವಚ್ಛಗೊಳಿಸುವುದು ಸುಲಭ. ಇದರ ಮೇಲೆ ಗೀರುಗಳೂ ಬೀಳುವುದಿಲ್ಲ. ಇದಲ್ಲದೆ ಮಾರ್ಬಲ್ ಮತ್ತು ಟೈಲ್ಸ್ ಫ್ಲೋರಿಂಗ್ ಕೂಡ ಆಕರ್ಷಕ ಬಣ್ಣಗಳಲ್ಲಿ ಮತ್ತು ಆಕಾರಗಳಲ್ಲಿ ಲಭ್ಯವಿವೆ. ಅಕ್ರೆಲಿಕ್ ಕಾರ್ಪೆಟ್, ಎಂಬ್ರಾಯಿಡರಿ ಮತ್ತು ಸ್ಟೋನ್ ವರ್ಕ್ ಇರುವ ಕಾರ್ಪೆಟ್ ನಿಂದಲೂ ನೆಲವನ್ನು ಅಲಂಕರಿಸಬಹುದು.
ಲೈಟಿಂಗ್ : ಮನೆಗೆ ಲಕ್ಷುರಿ ಲುಕ್ ಕೊಡಲು ಹ್ಯಾಂಗಿಂಗ್ ಪೆಂಡೆಂಟ್, ಶಾಂಡಿಲಿಯರ್ (ಛಾವಣಿಯಿಂದ ತೂಗಿಸುವ ಬ್ರ್ಯಾಂಚ್ಡ್ ಲೈಟಿಂಗ್), ಲಾವ್ ಲ್ಯಾಂಟರ್ನ್ ಮತ್ತು ವಾಲ್ ಲೈಟ್ಸ್ ಹಾಕಿ. ಅವನ್ನು ಸಾಮಾನ್ಯವಾಗಿ ಡ್ರಾಯಿಂಗ್ ರೂಮ್ ನಲ್ಲಿ ಹಾಕಲಾಗುತ್ತದೆ. ಅಸೆಂಟ್ ಲೈಟ್ಸ್ ಯಾವುದಾದರೂ ವಿಶೇಷ ಜಾಗವನ್ನು ಹೈಲೈಟ್ ಮಾಡಲು ಹಾಕಲಾಗುತ್ತವೆ ಹಾಗೂ ಅವು ಲಿವಿಂಗ್ ರೂಮ್ ಗೂ ಒಳ್ಳೆಯ ಆಯ್ಕೆಯಾಗಿರುತ್ತವೆ.