ಬೆಂಗಳೂರು ನಗರವನ್ನು ಸುತ್ತು ಹಾಕಿದಾಗ ಪ್ರತಿಯೊಂದು ರಸ್ತೆಯಲ್ಲೂ ಒಂದಲ್ಲ ಒಂದು ಹೊಸ ಮನೆ ನಿರ್ಮಾಣವಾಗುತ್ತಲೇ ಇರುತ್ತದೆ. ಮರಳು, ಸಿಮೆಂಟು ಮತ್ತು ಕಬ್ಬಿಣದ ಬೆಲೆ ಗಗನಕ್ಕೇರಿದರೂ ನಿರ್ಮಾಣ ಕಾರ್ಯಗಳು ನಡೆಯುತ್ತಲೇ ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳ ನಿರ್ಮಾಣವಾಗುತ್ತಿರುವುದರ ಜೊತೆಗೆ ವಿಭಿನ್ನ ರೀತಿಯ ವಿನ್ಯಾಸದ ಮನೆಗಳು, ನೋಡಿದರೆ ವಾಹ್ ಎನ್ನಬೇಕು. ಅಂತಹ ಒಳಾಂಗಣದ ರೂಪುರೇಷೆ! ಮನೆಯ ಪ್ರತಿಯೊಂದು ವಿಭಾಗಕ್ಕೂ ಗಮನವಿತ್ತು, ಕಲಾತ್ಮಕತೆಯನ್ನು ಮೂಡಿಸುವುದರಲ್ಲಿ ವಿನ್ಯಾಸಕರು ಸಫಲರಾಗುತ್ತಿದ್ದಾರೆ. ಹಿಂದೆ ಸುಮ್ಮನೆ ಅಗತ್ಯಕ್ಕೆಂದು ಅಥವಾ ನಿಕೃಷ್ಟವೆನಿಸಿದ ಮನೆಯ ಕೆಲವು ವಿಭಾಗಗಳನ್ನೂ ಅತ್ಯಂತ ಆಕರ್ಷಕವಾಗಿ ಮೂಡಿಸಲಾಗುತ್ತಿದೆ. ಅಂತಹ ವಿಷಯಗಳಲ್ಲೊಂದು ಮನೆಯ ಒಳಗಿನ ಮಹಡಿಯ ಮೆಟ್ಟಿಲು.

ಮಹಡಿಯ ಮೆಟ್ಟಿಲು ಎನ್ನುವುದು ಮೇಲಿನ ಅಂತಸ್ತಿಗೆ ಹತ್ತಲು ಒಂದು ಸಾಧನವಷ್ಟೆ, ಆದರೆ ಅದನ್ನು ಮನೆಯ ಮುಖ್ಯ ಅಲಂಕಾರಿಕ ತಾಣವನ್ನಾಗಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಬಂದಾಗ `ಹೌದು' ಎನ್ನುತ್ತದೆ ಕಲಾತ್ಮಕತೆಯನ್ನು ಹೊಂದಿರುವ ಆಧುನಿಕ ಮನೋಭಾವ. ಮೆಟ್ಟಿಲೆಂದಾಗ ಮನೆಯ ಒಂದು ಮೂಲೆಯಲ್ಲಿ ಕಿರಿದಾದ ಮರದ ಹಲಗೆಗಳನ್ನೊಳಗೊಂಡ ಚಿತ್ರಣವೇ ಕಣ್ಣ ಮುಂದೆ ಬರುತ್ತದೆ. ಆದರೆ ಅದನ್ನೂ ಸುಂದರವಾಗಿ ರೂಪಿಸಬಹುದೆನ್ನುತ್ತಾರೆ ಆಧುನಿಕ ವಿನ್ಯಾಸಕಾರರು. ಮನೆಯನ್ನು ಕಟ್ಟುವಾಗ ಪ್ರತಿಯೊಂದು ಹಂತದಲ್ಲೂ ಉಪಯುಕ್ತತೆಯ ಜೊತೆ ಜೊತೆಗೆ ಅದು ಆಕರ್ಷಕವಾಗಿ ಕಾಣಬೇಕು ಮತ್ತು ನಮ್ಮ ಜೇಬಿಗೆ ಎಟುಕಿಸಬೇಕು ಎನ್ನುವ ವಿಷಯವನ್ನು ಮನದಟ್ಟು ಮಾಡಿಕೊಂಡೇ ಮನೆಯ ರೂಪುರೇಷೆಯನ್ನು ಮಾಡಲಾಗುತ್ತದೆ.

ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಮನೆಯ ಮೆಟ್ಟಿಲು ಬಹಳ ಕಡಿದಾಗಿತ್ತು ಮತ್ತು ಮರದಿಂದ ಮಾಡಿದ ಆ ಮೆಟ್ಟಿಲುಗಳನ್ನು ಹತ್ತಲು ಕಷ್ಟವೆಂದು ಒಂದು ಹಗ್ಗವನ್ನು ಇಳಿಬಿಟ್ಟಿರುತ್ತಿದ್ದರು. ಅದನ್ನು ಹಿಡಿದುಕೊಂಡೇ ನಾವು ಹತ್ತುತ್ತಿದ್ದುದು. ಆದರೆ  ಕ್ರಮೇಣ ಕಾಂಕ್ರೀಟಿನಿಂದ ಮಾಡಿದ ಮೆಟ್ಟಿಲುಗಳು ಕಾಣತೊಡಗಿದವು. ಹಿಂದಿನ ಮರದ ಮೆಟ್ಟಿಲುಗಳಿಗಿಂತ ಈ ಮೆಟ್ಟಿಲುಗಳ ಮೇಲೆ ಏರುವುದು ಸರಾಗವಾಗಿತ್ತು ಮತ್ತು ಗಟ್ಟಿಮುಟ್ಟಾಗಿಯೂ ಇರುತ್ತಿತ್ತು. ಆದರೆ ಅಂತಹ ಆಕರ್ಷಣೆಯೇನೂ ಕಾಣುತ್ತಿರಲಿಲ್ಲ.

ಆದರೆ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿ ಈಗ ಮೆಟ್ಟಿಲುಗಳು ಬಹಳ ಸುಂದರವಾಗಿ ರೂಪಿಸಲ್ಪಡುತ್ತಿವೆ. ಹಿಂದೆ ಅಗತ್ಯಕ್ಕನುಗುಣವಾಗಿದ್ದ ಮೆಟ್ಟಿಲುಗಳು ಇಂದು ಮನೆಯ ಆಕರ್ಷಣೆಗಳಲ್ಲಿ ಒಂದಾಗಿವೆಯೆಂದರೆ ತಪ್ಪಾಗಲಾರದು. ಈಗ ವಿಧ ವಿಧದ ಮನಸೆಳೆಯುವಂತಹ ಮೆಟ್ಟಿಲುಗಳು ಕಾಣಸಿಗುತ್ತವೆ. ಒಂದಕ್ಕಿಂತ ಒಂದು ವಿಭಿನ್ನ ಮತ್ತು ಸುಂದರವಾಗಿರುತ್ತವೆ.

ಉದಾ  1 : ಮೇಲಿನಿಂದ ಹೊಳೆಯುವ ಕಬ್ಬಿಣದ ಹಗ್ಗಗಳನ್ನು ಇಳಿಬಿಟ್ಟು ಅದರ ಬಲದಿಂದಲೇ ಮೆಟ್ಟಿಲುಗಳನ್ನು ರೂಪಿಸಿರುವ ಜಾಣ್ಮೆ ಎದ್ದು ಕಾಣುತ್ತದೆ. ಆ ಹೊಳೆಯುವ ಕಬ್ಬಿಣದ ಹಗ್ಗಗಳು ನೋಡಲೂ ಸುಂದರವಾಗಿದ್ದು, ಮೆಟ್ಟಿಲುಗಳಿಗೆ ಆಸರೆಯಂತೆ ಇರುತ್ತದೆ. ಬಹಳ ಸರಳವಾದ ವಿಧಾನ. ಇಳಿಬಿಟ್ಟ ಹಗ್ಗಗಳು ಹತ್ತುವ ಸಮಯದಲ್ಲೂ ಅದನ್ನು ಹಿಡಿದು ಹತ್ತಲು ಸಹಾಯಕವೆನಿಸುತ್ತದೆ. ಪ್ರತಿಯೊಂದು ಮೆಟ್ಟಿಲಿಗೆ ಜೋಡಿಸಿರುವ ಫೋಕಸ್‌ ಲೈಟುಗಳು ನೋಡಲು ಆಕರ್ಷಕವಾಗಿರುವುದೇ ಅಲ್ಲದೆ, ಕತ್ತಲಲ್ಲಿ ಹತ್ತುವಾಗ ದಾರಿ ತೋರಿಸುತ್ತದೆ. ಸರಳತೆಯಲ್ಲೇ ಸೌಂದರ್ಯವನ್ನು ಮೂಡಿಸಿರುವ ವಿನ್ಯಾಸಕಾರನ ಜಾಣ್ಮೆ ಮೆಚ್ಚುವಂತಹುದೇ. ಆ ಮೆಟ್ಟಿಲುಗಳ ಮೇಲೆ ಮರದ ಹಾಸನ್ನೇ ಇಡಬಹುದು ಇಲ್ಲವಾದಲ್ಲಿ ಗ್ರಾನೈಟ್‌ ಕಲ್ಲಿನ ಹಾಸನ್ನೂ ಜೋಡಿಸಬಹುದು. ಮರವನ್ನಿರಿಸಿದರೆ ಆಗಾಗ ಪಾಲಿಷ್‌ ಮಾಡಿಸಬೇಕಾಗುತ್ತದೆ. ಗ್ರಾನೈಟ್‌ ಕಲ್ಲು ಹಾಸನ್ನಿರಿಸಿದರೆ ನಿರ್ವಹಣೆಯೂ ಸುಲಭ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ