ಮನೆಯ ಇಂಟೀರಿಯರ್‌ ವಿಶೇಷವಾಗಿ ಬೆಡ್‌ ರೂಮ್ ನ ಇಂಟೀರಿಯರ್‌ ಮಾಡುವಾಗ ಡ್ರೆಸಿಂಗ್‌ ಟೇಬಲ್‌ನ ಆಯ್ಕೆ ಬಹಳ ಮಹತ್ವದ್ದಾಗಿರುತ್ತದೆ. ಮಹಿಳೆಯರು ಅಲಂಕರಿಸಿಕೊಳ್ಳಲು ಡ್ರೆಸ್ಸಿಂಗ್‌ ಟೇಬಲ್ ಬೇಕೇಬೇಕು. ಮನೆಯ ಅಲಂಕರಣದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ದಿನಗಳಲ್ಲಿ ಡ್ರೆಸಿಂಗ್‌ ಟೇಬಲ್‌ನ ಬಹಳಷ್ಟು ವೆರೈಟಿಗಳು ಸಿಗುತ್ತವೆ. ಅದನ್ನು ಸರಿಯಾಗಿ ಬಳಸಿಕೊಂಡು ರಕ್ಷಿಸಬೇಕು.

ಡ್ರೆಸ್ಸಿಂಗ್‌ ಟೇಬಲ್ ವುಡ್‌ ಮೆಟೀರಿಯಲ್ ಡ್ರೆಸ್ಸಿಂಗ್‌ ಟೇಬಲ್‌ಗೆ 3 ರೀತಿಯ ಮರಗಳನ್ನು ಉಪಯೋಗಿಸಲಾಗುತ್ತದೆ. ಪೈನಲ್ ಡ್ರೆಸ್ಸಿಂಗ್‌ ಟೇಬಲ್, ಟೀಕ್‌ ಡ್ರೆಸ್ಸಿಂಗ್‌ ಟೇಬಲ್ ಮತ್ತು ಮಹಾಗನಿ ಡ್ರೆಸ್ಸಿಂಗ್‌ ಟೇಬಲ್.

ಪೈನ್ಡ್ರೆಸ್ಸಿಂಗ್ಟೇಬಲ್ : ಪೈನ್‌ ಅಥವಾ ದೇವದಾರು ಮರ ಬಹಳ ಸದೃಢವಾಗಿರುತ್ತದೆ. ಇದರ ಸಣ್ಣ ಸಣ್ಣ ತುಂಡುಗಳಿಂದ ಡ್ರೆಸ್ಸಿಂಗ್‌ ಟೇಬಲ್ ತಯಾರಿಸಲಾಗುತ್ತದೆ. ದೇವದಾರು ಮರದಿಂದ ತಯಾರಾದ ಡ್ರೆಸ್ಸಿಂಗ್‌ ಟೇಬಲ್ ಬಹಳ ಗಟ್ಟಿಯಾಗಿರುತ್ತದೆ ಹಾಗೂ ಬಹಳ ಕಾಲ ಬಾಳಿಕೆ ಬರುತ್ತದೆ. ಈ ಮರದಲ್ಲಿ ಡ್ರೆಸ್ಸಿಂಗ್‌ ಟೇಬಲ್‌ನ ಬಹಳಷ್ಟು ಡಿಸೈನ್‌ಗಳು ಸಿಗಲಿದ್ದು ಬಹಳ ಸ್ಟೈಲಿಶ್‌ಆಗಿರುತ್ತವೆ.

ಟೀಕ್ಡ್ರೆಸ್ಸಿಂಗ್ಟೇಬಲ್ :  ಟೀಕ್‌ ಅಥವಾ ತೇಗದ ಮರ ಬಹಳ ಫೈನ್‌ ಕ್ವಾಲಿಟಿಯದ್ದಾಗಿದೆ. ಇದು ಮಲ್ಟಿ ಕಲರ್‌ಗಳಲ್ಲಿ ಲಭ್ಯವಿದೆ. ಇದರಿಂದ ತಯಾರಾದ ಡ್ರೆಸ್ಸಿಂಗ್‌ ಟೇಬಲ್ ಇನ್ನೂ ಸುಂದರವಾಗಿರುತ್ತದೆ. ಮಾರುಕಟ್ಟೆಯಲ್ಲಿ ಟೀಕ್‌ ವುಡ್‌ನ ಡ್ರೆಸ್ಸಿಂಗ್ ಟೇಬಲ್‌ನ್ನು ಇಷ್ಟಪಡಲಾಗುತ್ತದೆ. ಏಕೆಂದರೆ ಈಗ ಕಲರ್‌ ಫುಲ್ ವಸ್ತುಗಳು ಹೆಚ್ಚು ಚಾಲನೆಯಲ್ಲಿದೆ.

ಮಹಾಗನಿ ಡ್ರೆಸ್ಸಿಂಗ್ಟೇಬಲ್ : ಮಹಾಗನಿ ಕೆಂಪು ಹಾಗೂ ಕಂದು ಬಣ್ಣದ ಮರವಾಗಿದೆ. ಅದನ್ನು ಫರ್ನೀಚರ್‌ ತಯಾರಿಸಲು ಉಪಯೋಗಿಸುತ್ತಾರೆ. ಈ ಮರದಲ್ಲಿ ಬಹಳ ಹೊಳಪಿದೆ. ಆದ್ದರಿಂದಲೇ ಈ ಮರದಿಂದ ತಯಾರಾದ ಡ್ರೆಸ್ಸಿಂಗ್‌ ಟೇಬಲ್ ಎಲಿಗೆಂಟ್‌ ಹಾಗೂ ಕ್ಲಾಸಿ ಲುಕ್‌ ಕೊಡುತ್ತದೆ.

ಡ್ರೆಸ್ಸಿಂಗ್ಟೇಬಲ್ ಸ್ಟೈಲ್

ಕಾಂಪ್ಯಾಕ್ಟ್ ಡ್ರೆಸ್ಸಿಂಗ್ಟೇಬಲ್ : ನಿಮ್ಮ ಮನೆಯಲ್ಲಿ ಜಾಗ ಕಡಿಮೆ ಇದ್ದರೆ ನೀವು ಕಾಂಪ್ಯಾಕ್ಟ್ ಡ್ರೆಸಿಂಗ್‌ ಟೇಬಲ್ ಖರೀದಿಸಿ. ಇದು ಕಡಿಮೆ ಜಾಗ ತೆಗೆದುಕೊಳ್ಳುತ್ತದೆ. ಇದರಲ್ಲಿ ವಸ್ತುಗಳನ್ನು ಇಡಲು 2-3 ಡ್ರಾಯರ್‌ಗಳೂ ಇರುತ್ತವೆ. ಅದರಲ್ಲಿ ನಿಮ್ಮ ಮೇಕಪ್‌ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಇದರ ಬೆಲೆ 2000 ರೂ.ಗಳಿಂದ 5000 ರೂ.ಗಳವರೆಗೆ ಇದೆ.

ಲೂಪ್‌ ಲೆಗ್‌ ಡ್ರೆಸ್ಸಿಂಗ್‌ ಟೇಬಲ್‌ನಲ್ಲಿ 2 ಡ್ರಾಯರ್‌ಗಳು ಮತ್ತು 1 ಮಿರರ್‌ ಇರುತ್ತದೆ. ಡ್ರಾಯರ್‌ಗಳಿಗೆ ಗ್ಲಾಸ್‌ ಹಾಕಿರುವುದರಿಂದ ಅವು ಸಾಕಷ್ಟು ಸ್ಟೈಲಿಶ್‌ ಹಾಗೂ  ಕ್ಲಾಸಿ ಆಗಿ ಕಂಡುಬರುತ್ತದೆ. ಮಿರರ್‌ನ ಸೈಜ್‌ ಸಾಕಷ್ಟು ದೊಡ್ಡದಾಗಿರುತ್ತದೆ. ಜೊತೆಗೆ ಇದರ ಸುತ್ತಮುತ್ತ ಸ್ಟೋನ್ಸ್ ಮತ್ತು ಮಿರರ್‌ನಿಂದ ಡಿಸೈನಿಂಗ್‌ ಬಹಳ ಸುಂದರವಾಗಿ ಕಾಣುತ್ತದೆ. ಇದು ನಿಮ್ಮ ಬೆಡ್‌ ರೂಮಿ‌ಗೆ ಯೂನಿಕ್‌ಲುಕ್‌ ಕೊಡುತ್ತದೆ. ಇದರ ಬೆಲೆ 3000 ರೂ.ಗಳಿಂದ 6,000 ರೂ.ವರೆಗೆ  ಆಗುತ್ತದೆ.

ವೈಟ್ವರ್ಟಿಕಲ್ ಡ್ರೆಸ್ಸಿಂಗ್ಟೇಬಲ್ : ಲೈಟ್‌ ಕಲರ್‌ನ ಡ್ರೆಸ್ಸಿಂಗ್‌ ಟೇಬಲ್ ಬೇರೆಯದೇ ಆದ ಲುಕ್‌ ಕೊಡುತ್ತದೆ. ಇದರಲ್ಲಿ ನಿಮಗೆ ಸಾಕಷ್ಟು ವೆರೈಟಿಯೂ ಸಿಗುತ್ತದೆ. ವರ್ಟಿಕಲ್ ಶೇಪ್‌ನ ಡ್ರೆಸ್ಸಿಂಗ್‌ ಟೇಬಲ್ ಸ್ವಲ್ಪ ಡಿಫರೆಂಟ್‌ ಆಗಿ ಕಂಡುಬರುತ್ತದೆ. ಇದರಲ್ಲಿ ಸಾಕಷ್ಟು ಡ್ರಾಯರ್‌ಗಳು ಇರುವುದರಿಂದ ನಿಮ್ಮ ವಸ್ತುಗಳನ್ನು ಇಡಲು ಯಾವುದೇ ತೊಂದರೆಯಿಲ್ಲ. ಇದರಲ್ಲಿ ರೌಂಡ್ ಮತ್ತು ಡಿಫರೆಂಟ್‌ ಶೇಪ್‌ಗಳಲ್ಲಿ ಹ್ಯಾಂಡಲ್ ಇರುವುದರಿಂದ ಇದು ಸ್ಟೈಲಿಶ್‌ ಲುಕ್‌ ಕೊಡುತ್ತದೆ. ಇದರ ಬೆಲೆ 2500 ರೂ.ಗಳಿಂದ 7000ರೂ.ಗಳವರೆಗೆ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ