ನವ ವಧು ಆಗುವ ಕನಸು ನನಸಾಗುತ್ತಿರುವ ಈ ಘಳಿಗೆಯಲ್ಲಿ ಅವಳಿಗೆ ಮನದಲ್ಲಿ ವರ್ಣನಾತೀತ ಉತ್ಸಾಹವಿರುತ್ತದೆ. ಇಂಥ ನವ ವಧು ತನ್ನ ಮದುವೆಯ ಮುಹೂರ್ತ, ಆರತಕ್ಷತೆಗಳಿಗೆ ಉನ್ನತ ಜವಳಿ, ಮೇಕಪ್‌, ಕೇಶಾಲಂಕಾರದ ಜೊತೆ ಆಭರಣಗಳ ಬಗೆಗೂ ಅಷ್ಟೇ ಗಮನ ಕೊಡಬೇಕಲ್ಲವೇ? ನವ ವಧುವಿನ ಉಡುಗೆಯ ಶೋಭೆ ಹೆಚ್ಚುವುದೇ ಅವಳು ಧರಿಸಿರುವ ಆಭರಣಗಳಿಂದ.

ಹಾಗಾಗಿ ಈ ಕೆಳಗಿನ ಉ. ಭಾರತೀಯ ಡಿಸೈನಿನ ವಜ್ರಾಭರಣ ಹಾಗೂ ಸ್ವರ್ಣಾಭರಣಗಳು ಅವಳ ಸೌಂದರ್ಯ ಇಮ್ಮಡಿಸುವುದರಲ್ಲಿ ಎರಡು ಮಾತಿಲ್ಲ.

80 ವರ್ಷಗಳಿಗೂ ಅಧಿಕ ಕಾಲದಿಂದ ಉ. ಭಾರತೀಯ ಆಭರಣಗಳಿಗೆ ಹೆಸರಾಗಿರುವ ಸೆನ್ಕೋ ಗೋಲ್ಡ್ ಡೈಮಂಡ್‌ ಜ್ಯೂವೆಲರಿ ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವಿಶ್ವಸನೀಯವೆನಿಸಿ, ದೇಶವಿಡೀ ನೂರಾರು ಸ್ಟೋರ್ಸ್‌ ಹೊಂದಿವೆ. ಮದುವೆ, ಮುಂಜಿ, ಸೀಮಂತ ಇತ್ಯಾದಿ ಯಾವುದೇ ಶುಭ ಸಮಾರಂಭಗಳಿಗೆ ಬೇಕಾಗುವ ಯೂನಿಕ್‌ ಜ್ಯೂವೆಲರಿ ಇಲ್ಲಿ ಲಭ್ಯ. ಇದರ ಟ್ರೆಡಿಶನಲ್ ಡಿಸೈನ್ಸ್ ಆಧುನಿಕ ಫೀಚರ್ಸ್‌ ಜೊತೆ ದೊರೆಯುತ್ತವೆ, ಬಹಳ ಲೈಟ್‌ ಕೂಡ. ಇದು ನಿಮಗೆ ಬಹಳ ಅಂದದ ಗ್ಲಾಮರಸ್‌ ಮಾಡರ್ನ್‌ ಲುಕ್ಸ್ ನೀಡುತ್ತವೆ. ಇವನ್ನು ಧರಿಸಿದ ಮೇಲೆ ಏನೋ ಭಾರ ತೊಟ್ಟಿದ್ದೇವೆ ಎಂದು ಎನಿಸುವುದೇ ಇಲ್ಲ!

Sanco-Gold2

. ಭಾರತೀಯ ನವ ವಧುವಿಗಾಗಿ

ಉ. ಭಾರತೀಯ ನವ ವಧು ತನ್ನ ಮುಹೂರ್ತದ ಉಡುಗೆಗೆ ಬಹಳ ಜನಪ್ರಿಯ ಎನಿಸುತ್ತಾಳೆ. ಅಷ್ಟು ಮಾತ್ರವಲ್ಲ, ಅವಳ ಜ್ಯೂವೆಲರಿ ಸಹ ಆಕರ್ಷಣೀಯ ಕೇಂದ್ರಬಿಂದು ಆಗಿರುತ್ತದೆ. ಅವಳ ಕುತ್ತಿಗೆಯಲ್ಲಿ ವಿಶಿಷ್ಟ ಡಿಸೈನಿನ ಮಂಗಳಸೂತ್ರವಿದ್ದು ಸಾಂಪ್ರದಾಯಿಕ ಸುಮಂಗಲಿಯ ಸಂಕೇತ ಮಾತ್ರವಲ್ಲದೆ, ಅವಳ ಕುತ್ತಿಗೆಯ ಅಂದ ಹೆಚ್ಚಿಸುತ್ತದೆ, ನವ ವಿವಾಹಿತ ಜೋಡಿಯ ಮನಸ್ಸುಗಳ ಸಂಗಮದ ವಿಶ್ವಾಸಾರ್ಹ ಪ್ರತೀಕ ಎನಿಸುತ್ತದೆ. ಹಣೆಯ ಅಂದ ಹೆಚ್ಚಿಸಲು ಬೈತಲೆ ಬೊಟ್ಟು, ಬಲು ಮುಖ್ಯ. ಇದು ಕುಂದಣ, ಬಣ್ಣ ಬಣ್ಣದ ನವರತ್ನಗಳು, ಅದರಲ್ಲಿ ತೂಗುಬಿಡಲಾದ ಮುತ್ತುಗಳ ವಿನ್ಯಾಸದಿಂದ ಅವಳಿಗೆ ವಿಶಿಷ್ಟ ಲುಕ್ಸ್ ಸಿಗುತ್ತದೆ. ಜೊತೆಗೆ ಅವಳು ಬ್ಯೂಟಿಫುಲ್ ಚೋಕರ್‌ ಸೆಟ್‌ ಧರಿಸಿದಾಗ ಧರೆಗಿಳಿದ ದೇವತೆಯಾಗುತ್ತಾಳೆ. ಇದರಲ್ಲಿ ಕಲರ್‌ಫುಲ್ ಬೀಡ್ಸ್, ಸ್ಟೋನ್ಸ್, ಕುಂದಣ, ಕೈಕಡಗದ ಜೊತೆ ಮೀನಾಕಾರಿ ವರ್ಕ್‌ವುಳ್ಳ ಜುಮಕಿಗಳು ಬಲು ಮುದ್ದಾಗಿ ಕಾಣಿಸುತ್ತವೆ. ಇವೆಲ್ಲ 16 ಬಗೆಯ ಶೃಂಗಾರವಿಲ್ಲದಿದ್ದರೆ ಉ.ಭಾರತೀಯ ವಧುವಿನ ಅಲಂಕಾರ ಅಪೂರ್ಣವೆಂದೇ ಅರ್ಥ. ಜೊತೆಗೆ ಉಂಗುರ, ಬಂಗಾರದ ಬಳೆಗಳು ಸ್ಪೆಷಲ್ ಎಫೆಕ್ಟ್ ನೀಡುತ್ತವೆ.

. ಭಾರತೀಯ ನವ ವಧುವಿಗಾಗಿ

ತನ್ನ ಮದುವೆಯ ದಿನದಂದು ವಧು ಎಲಿಗೆಂಟ್‌ ಲುಕ್ಸ್ ಬಯಸುವುದರಿಂದ, ಎಲ್ಲರೂ ನೋಡಿ ಬೆರಗಾಗುವಂಥ ವಿಶಿಷ್ಟ ಆಭರಣಗಳನ್ನೇ ತೊಡಲು ಅವಳು ಇಷ್ಟಪಡುತ್ತಾಳೆ. ಇದರಿಂದಾಗಿ ಅವಳು ಬಲು ಸ್ಪೆಷಲ್ ಎನಿಸುತ್ತಾಳೆ. ಉ. ಭಾರತದಲ್ಲಿ ಅಚ್ಚಗೆಂಪಿನ ಲೆಹಂಗಾ ಜನಪ್ರಿಯಾಗಿರುವಂತೆ ನಮ್ಮಲ್ಲಿ ಮೈಸೂರು ಸಿಲ್ಕ್, ಕಾಂಜೀವರಂ ರೇಷ್ಮೆ ಸೀರೆಗಳದೇ ಮೇಲುಗೈ! ಈ ಉಡುಗೆಗಳ ಜೊತೆ ಮೇಲೆ ತಿಳಿಸಿದ ಎಲ್ಲಾ ಬಗೆಯ ಆಭರಣಗಳಿಂದ ಅವಳು ಸರ್ವಾಲಂಕಾರ ಭೂಷಿತೆಯಾಗಿ ಕಸ್ತೂರಿ ತಿಲಕದೊಡನೆ ಹೂ ಮುಡಿದು, ಸೋದರಮಾವನ ನೇತೃತ್ವದಲ್ಲಿ ಹಸೆಮಣೆ ಕಡೆ ನಡೆದು ಬಂದರೆ ಮದುವೆ ಮನೆಗೆ ಅಮೋಘ ಕಳೆ ಬರುತ್ತದೆ! ಹಣೆಗೆ ಬೈತಲೆ ಬೊಟ್ಟು ಕುಂದಣದ್ದಾದರೆ, ಮುತ್ತು ರತ್ನಗಳಿಂದ ಸುಶೋಭಿತವಾದ ನೆಕ್‌ಲೇಸ್‌, ಚಿನ್ನದ ಚೇನ್‌ಗಳನ್ನು ಧರಿಸಿದರೆ ಅವಳು ಅಷ್ಟಲಕ್ಷ್ಮಿಯರ ಅಂಶವಾದ ಗೃಹಲಕ್ಷ್ಮಿಯಾಗಿ ಶೋಭಿಸುತ್ತಾಳೆ! ಎಷ್ಟು ಒಡವೆಗಳು ಹೆಚ್ಚಿದ್ದರೆ, ಉಟ್ಟು ತೊಟ್ಟ ಪುಟ್ಟಕ್ಕನ ಗ್ರೇಸ್‌ ಅಷ್ಟು ಹೆಚ್ಚುತ್ತದೆ. ಶುಭ ಸೂಚಕ ಎನಿಸಿದ ಮಂಗಳ ದ್ರವ್ಯಗಳಿಂದ ಅಲಂಕೃತಳಾಗಿ, ಸ್ವರ್ಣಾಭರಣಗಳೊಂದಿಗೆ ವಜ್ರದ ಮೂಗುತಿ, ಕೈತುಂಬಾ ಚಿನ್ನದ/ಗಾಜಿನ ಬಳೆಗಳು, ಕಾಲಿಗೆ ಬೆಳ್ಳಿ ಗೆಜ್ಜೆ ಇತ್ಯಾದಿ ತುಂಬಿದ್ದಾಗ ಮಾತ್ರ ನವ ವಧು ಅಪೂರ್ವ ಲಾವಣ್ಯವತಿ ಎನಿಸುವಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ